ಅಂಕಣಗಳು

ದೌರ್ಜನ್ಯ ತಡೆಗೆ ಮಹಿಳಾ ಸಬಲೀಕರಣವೇ ಮದ್ದು

• ಪ್ರೊ.ಆರ್.ಎಂ.ಚಿಂತಾಮಣಿ

‘ಸ್ತ್ರೀ ಹತ್ಯೆ ಮಹಾ ಪಾಪ’ ಎಂದು ನಮ್ಮ ಪುರಾತನ ದಾರ್ಶನಿಕರು ಹೇಳಿದ್ದಾರೆ. ನಮ್ಮ ಪ್ರಧಾನಿಗಳು ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಹೇಳುತ್ತಲೇ ಇದ್ದಾರೆ. ಆದರೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮರ್ಯಾದಾ ಹತ್ಯೆ ಎಂದು ಕರೆಸಿಕೊಂಡು ಕುಟುಂಬದವರಿಂದಲೇ ಹೆಣ್ಣು ಮಕ್ಕಳ ಕೊಲೆಗಳು ವರದಿಯಾಗುತ್ತಿವೆ. ವಿಪರ್ಯಾಸವನ್ನು ತಡೆಯುವುದು ಹೇಗೆ? ಇಂತಹ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಸರ್ಕಾರ ಮತ್ತು ಸಮಾಜ ಮಾಡಬೇಕಾದ ಮೊದಲ ಕೆಲಸ. ಅದು ಎಲ್ಲ ಜನರಿಗೂ ತಿಳಿಯುವಂತೆ ಪ್ರಸಾರವಾಗಬೇಕು. ಮಾಧ್ಯಮಗಳ ಪಾತ್ರ ಇಲ್ಲಿ ಮಹತ್ವದ್ದು. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಕ್ರಮಗಳು ಪರಿಣಾಮಕಾರಿಯಾಗಿ ಮುಂದುವರಿಯಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಸಬಲಳು ಮತ್ತು ಪುರುಷರಷ್ಟೇ ಸಮರ್ಥಳೆಂಬ ಜಾಗೃತಿ ಮಹಿಳೆಯರಲ್ಲಿ ಹೆಚ್ಚಾಗಬೇಕು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ಎಲ್ಲ ರೀತಿಯ ದೌರ್ಜನ್ಯಗಳೂ ನಿಲ್ಲಬೇಕು. ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಲಿಂಗ ಸಮಾನತೆಯನ್ನು ಕಾಪಾಡಬೇಕು.

ಇಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (National Crime Record Bureau- ಎನ್.ಸಿ.ಆರ್.ಬಿ.) ಇತ್ತೀಚಿನ ವರದಿಯನ್ನು ಪ್ರಸ್ತಾಪಿಸಬೇಕು. ಅದರಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿವರಗಳನ್ನು ಗಮನಿಸಿದಾಗ 2022ರಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 4,45,236 ಅಂದರೆ ಪೊಲೀಸರ ಪ್ರಥಮ ಮಾಹಿತಿ ವರದಿಗಳ (ಎಫ್.ಐ.ಆರ್.) ಪ್ರಕಾರ ದೇಶದಲ್ಲಿ ಸರಾಸರಿ ಪ್ರತಿ ಗಂಟೆಗೆ ಐವತ್ತೊಂದು ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ದಾಖಲಾಗಿರುತ್ತವೆ. ಇದರಿಂದ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ಇದೂ ಸಹಿತ ಕಡಿಮೆ ಎಂದೇ ಹೇಳಬಹುದು. ಏಕೆಂದರೆ ಇಂದಿಗೂ ನಮ್ಮ ಮಹಿಳೆಯರಲ್ಲಿ ಹೆಚ್ಚು ಜನ ತಮ್ಮ ಮೇಲಾದ ದೌರ್ಜನ್ಯಗಳನ್ನು ಬಹಿರಂಗಪಡಿಸದೆ ಇರುವುದೇ ನಾವೆಲ್ಲ ಗಮನಿಸಬೇಕಾದ ಸತ್ಯ, ಅದಕ್ಕೆ ಕಾರಣಗಳು ಹಲವು. ಜೀವ ಭಯ, ಸಾಮಾಜಿಕ ಅವಮಾನ ಅಥವಾ ಬಹಿಷ್ಕಾರದ ಭಯ, ಮಕ್ಕಳ ಭವಿಷ್ಯ ಹಾಳಾಗಬಹುದು ಎಂಬ ಭಯ ಮುಂತಾದ ಕಾರಣಗಳಿಂದ ದುಃಖ ಸಹಿಸಿಕೊಳ್ಳುತ್ತಾರೆ.

ದಾಖಲಾದ ಪ್ರಕರಣಗಳಲ್ಲಿ ಉತ್ತರಪ್ರದೇಶದಲ್ಲಿ ಯೇ ಅತಿ ಹೆಚ್ಚು 65,000 ಇದ್ದು, ಮಹಾರಾಷ್ಟ್ರ ಮತ್ತು ರಾಜಸ್ತಾನ ನಂತರದ ಸ್ಥಾನಗಳಲ್ಲಿವೆ. ಮಹಾನಗರಗಳ ಪೈಕಿ ದೆಹಲಿಯಲ್ಲಿಯೇ ಹೆಚ್ಚು. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಕಡೆ ಗಮನ ಹರಿಸಬೇಕು. ಏಕೆಂದರೆ ದೆಹಲಿಯ ಪೊಲೀಸ್ ಇಲಾಖೆ ನೇರವಾಗಿ ಕೇಂದ್ರ ಸರ್ಕಾರದ ಕೈಯಲ್ಲಿದೆ.

ಗಂಡನಿಂದ ಹಿಂಸೆ ಸೇರಿದಂತೆ ಕೌಟುಂಬಿಕ ಕಿರುಕುಳಗಳು ಶೇ. 31.4 ರಷ್ಟಿವೆ ಎಂದು ವರದಿ ಹೇಳುತ್ತದೆ. ಇದಕ್ಕೆ ಬಹುಪಾಲು ವರದಕ್ಷಿಣೆ ಮತ್ತು ಚುಟುಕು ಮಾಹಿತಿ 1 ಹೊರಬರುವುದು ಆರ್ಥಿಕ ಕಾರಣಗಳಾಗಿವೆ ಎಂದು ನಿರ್ವಿವಾದವಾಗಿ ಹೇಳಬಹುದು. ವರದಕ್ಷಿಣೆ ನಿಷೇಧಿಸಲ್ಪಟ್ಟಿದ್ದರೂ ಬೇರೆ ರೂಪಗಳಲ್ಲಿ ಅದು ಹೆಣ್ಣು ಮಕ್ಕಳನ್ನು ಕಾಡುತ್ತಿದೆ. ಅತ್ತೆಯರು ತಾವು ಹಿಂದೆ ಅನುಭವಿಸಿದ್ದ ಹಿಂಸೆಗಳ ಸೇಡನ್ನು ಸೊಸೆಯರ ಮೇಲೆ ತೀರಿಸಿಕೊಳ್ಳಲು ಕಿರುಕುಳ ಕೊಟ್ಟಿದ್ದೂ ಉಂಟು. ಇದಕ್ಕೆ ಮನೆಯ ಗಂಡಸರ ಬೆಂಬಲವೂ ಇರಬಹುದು. ಇದನ್ನು ತಪ್ಪಿಸಬೇಕಾದರೆ ಸಾಮಾಜಿಕ ಅರಿವು ಮೂಡಿಸುವುದು ಮತ್ತು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ರಾಜಮಾರ್ಗ ಸಂಬಂಧಪಟ್ಟ ಎಲ್ಲರನ್ನೂ ಒಂದೆಡೆ ಸೇರಿಸಿ ಆಪ್ತ ಸಲಹೆ ಮತ್ತು ಕಾಯ್ದೆ ಜ್ಞಾನ ಮೂಡಿಸುವುದು ಇನ್ನೊಂದು ಮಾರ್ಗ. ಅಲ್ಲದೆ ಕಿರುಕುಳಕ್ಕೆ ಒಳಗಾಗುವ ಮಹಿಳೆಯರು ಆರ್ಥಿಕ ಸಬಲತೆ ( ವೃತ್ತಿ ಅಥವಾ ನೌಕರಿ ಹೊಂದಿದ್ದರೆ ) ಪಡೆದವಳಾಗಿದ್ದರೆ ಇಂತಹ ದೌರ್ಜನ್ಯಗಳನ್ನು ತಪ್ಪಿಸಬಹುದು. ಇದಕ್ಕೆ ಅವರ ಮಾನಸಿಕ ಧೈರ್ಯವೂ ಬೇಕಾಗುತ್ತದೆ. ಇನ್ನು ದಾಖಲಾದ ಪ್ರಕರಣಗಳಲ್ಲಿ ಹಲ್ಲೆ ಮತ್ತು ಅತ್ಯಾಚಾರ ದೂರುಗಳು ಶೇ.26 ರಷ್ಟಿರುತ್ತವೆ ಎಂದು ವರದಿ ಹೇಳುತ್ತದೆ. ಉಳಿದಂತೆ ಅಪಹರಣ, ವೇಶ್ಯಾವಾಟಿಕೆಗೆ ತಳ್ಳುವುದು, ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಸಾಮಾಜಿಕ ಅವಹೇಳನ, ಬಹಿಷ್ಕಾರ ಮುಂತಾದವುಗಳು ಇತರ ದೌರ್ಜನ್ಯ ಅಪರಾಧಗಳಾಗಿವೆ. ಇಂಥ ಅಪರಾಧಗಳನ್ನು ಕಾಯ್ದೆ ಸುವ್ಯವಸ್ಥೆ ಇನ್ನಷ್ಟು ಸಮರ್ಥಗೊಳಿಸುವುದರಿಂದ ಮತ್ತು ಸಾಮಾಜಿಕ ಜಾಗೃತಿಯಿಂದ ಕಡಿಮೆ ಮಾಡಬಹುದು.

ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ: ಸರ್ಕಾರ ಮತ್ತು ಸಮಾಜ ಹಲವು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವುದು ಗೊತ್ತಿರುವ ವಿಷಯ. ಮಹಿಳಾ ಶಿಕ್ಷಣ ಸಾಕಷ್ಟು ಯಶಸ್ವಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ಸುಧಾರಿಸಬೇಕಾಗಿದೆ. ಬಹುತೇಕ ಹೆಣ್ಣು ಮಕ್ಕಳು ಪ್ರಾಥಮಿಕ ಹಂತದವರೆಗೆ ಶಿಕ್ಷಣ ಪಡೆದಿದ್ದಾರೆ. ಉನ್ನತ ಶಿಕ್ಷಣದಲ್ಲಿಯೂ ಸಾಕಷ್ಟು ಪ್ರಗತಿಯಾಗಿದೆ. ಇನ್ನಷ್ಟು ಸಂಖ್ಯೆ ಹೆಚ್ಚಬೇಕಾಗಿದೆ.

ಸರ್ಕಾರ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಸ್ಥಾನಗಳಲ್ಲಿ ಮಹಿಳಾ ಮೀಸಲಾತಿ ನೀತಿಯನ್ನು ಅನುಷ್ಠಾನಗೊಳಿಸಿದೆ. ಮೊದಲೆಲ್ಲ ಗಂಡಸರೇ ಇರುತ್ತಿದ್ದ ಪೊಲೀಸ್, ರಕ್ಷಣೆ, ಉದ್ಯಮ ನಿರ್ವಹಣೆ, ಬಾಹ್ಯಾಕಾಶಯಾನ ಮತ್ತು ಸಂಶೋಧನೆ ಮುಂತಾದ ವಲಯಗಳಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ಸಾಧನೆಗಳನ್ನು ಮಾಡಿದ್ದಾರೆ. ಇದು ಆರ್ಥಿಕ ರಂಗದಲ್ಲಿ ಮಹಿಳೆಯ ಸ್ಥಾನಮಾನ ಹೆಚ್ಚುವಂತೆ ಮಾಡಿದೆ. ಮಹಿಳೆಯರು ತಾವು ಯಾವುದರಲ್ಲಿಯೂ ಪುರುಷರಿಗಿಂತ ಹಿಂದೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲ ರಂಗಗಳಲ್ಲೂ ಸಾಧನೆಯಲ್ಲಿ ಮುಂದಿದ್ದಾರೆ.

ಆದರೂ ಆದಾಯ ತರುವ ಉದ್ಯೋಗ ಪೇಟೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ನಮ್ಮ ದೇಶದಲ್ಲಿ ಈಗಲೂ ಕಡಿಮೆ ಇದೆ. ಅಂದರೆ ದುಡಿಯುವ ವಯಸ್ಸಿನಲ್ಲಿರುವ ಮಹಿಳೆಯರಲ್ಲಿ ಶೇ.25ರಷ್ಟು ಮಾತ್ರ ದುಡಿಯುವ ಪೇಟೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ (Labour market participation) ಇದು ಹೆಚ್ಚಿದಷ್ಟು ಮಹಿಳೆ ಆರ್ಥಿಕವಾಗಿ ಸುಭದ್ರಳಾಗುತ್ತಾಳೆ. ನಮ್ಮಲ್ಲಿ ಮೂಲಭೂತವಾಗಿ ಮೂರು ಬದಲಾವಣೆಗಳಾಗಬೇಕಾಗಿವೆ. ಮೊದಲು ಮಹಿಳೆ ತಾನು ಶತ ಶತಮಾನಗಳಿಂದ ನಂಬಿಕೊಂಡು ಬಂದಿರುವ, ‘ತಾನು ಅಬಲೆ’ ಎಂಬ ಮನಸ್ಥಿತಿಯಿಂದ ಹೊರ ಬರಬೇಕು. ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು ಮುನ್ನುಗ್ಗಬೇಕು. ಎರಡನೆಯದಾಗಿ ಗಂಡಸರು ‘ಪುರುಷ ಪ್ರಧಾನ ಸಮಾಜ’ ಎಂಬ ಅಹಂನಿಂದ ಹೊರ ಬರಬೇಕು. ಕುಟುಂಬ ಮತ್ತು ಸಮಾಜದ ಎಲ್ಲ ನಿರ್ಧಾರಗಳಲ್ಲಿಯೂ ಸ್ತ್ರೀಯರಿಗೆ ಸಮಾನ ಪಾತ್ರವಿದೆ ಎಂಬುದಕ್ಕೆ ಮನ್ನಣೆ ಕೊಟ್ಟು ಅವರ ಅಭಿಪ್ರಾಯಗಳನ್ನು ಗೌರವಿಸಬೇಕು. ಮೂರನೆಯದಾಗಿ ಸಮಾಜ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಹೀನ ದೃಷ್ಟಿಯಿಂದ ನೋಡದೇ ಅವರನ್ನು ಇತರರಂತೆ ಗೌರವದಿಂದ ಕಾಣಬೇಕು. ಅವರ ಹಕ್ಕುಗಳನ್ನು ಚಲಾಯಿಸಲು ಯಾವುದೇ ಅಡೆತಡೆಗಳಿರಬಾರದು. ಹೀಗಾದಾಗ ಮಾತ್ರ ಲಿಂಗ ಸಮಾನತೆಯೆಡೆಗೆ ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.

 

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

55 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago