ಅಂಕಣಗಳು

ಸಂಶೋಧನೆಯಲ್ಲಿ ಖಾಸಗಿ ಕಂಪೆನಿಗಳೆಲ್ಲಿವೆ?

ಪ್ರೊ.ಆರ್.ಎಂ.ಚಿಂತಾಮಣಿ

ಯಾವುದೇ ದೇಶದ ಅಭಿವೃದ್ಧಿ ಮಾನದಂಡಗಳಲ್ಲಿ ಒಂದು ಪ್ರಮುಖ ಮಾನದಂಡವೆಂದರೆ ಸಂಶೋಧನೆಯಲ್ಲಿಯ ಹೂಡಿಕೆಗಳು. ಸಂಶೋಧನೆಗಳಿಂದ ಹೊಸದನ್ನು ಕಂಡು ಹಿಡಿಯುವುದು ಮತ್ತು ಅದನ್ನು ದೇಶದ ಅಭಿವೃದ್ಧಿಗೆ ಅನ್ವಯಿಸುವುದು ಅತ್ಯವಶ್ಯ. ಇದನ್ನೇ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸುವುದು (Investment in
Research and Development ) ಎಂದು ಕರೆಯುವುದು. ಆದ್ದರಿಂದ ಸರ್ಕಾರಗಳು ತಮ್ಮ ರಾಷ್ಟ್ರೀಯ ಒಟ್ಟಾದಾಯದಲ್ಲಿ ಒಂದಿಷ್ಟು ಭಾಗವನ್ನು ಪ್ರತಿವರ್ಷ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸುತ್ತವೆ. ಇದರ ಸಕಾರಾತ್ಮಕ ಪರಿಣಾಮ ನಂತರದ ವರ್ಷಗಳಲ್ಲಿ ಕಂಡು ಬರುತ್ತವೆ.

ಸರ್ಕಾರಿ ಕಂಪೆನಿಗಳೂ ತಮ್ಮ ಆದಾಯದಲ್ಲಿ ನಿಗದಿತ ಭಾಗವನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್. & ಡಿ.ಯಲ್ಲಿ) ಹೂಡಿಕೆ ಮಾಡುತ್ತವೆ. ಇದರಿಂದ ತಾವು ಬೆಳೆಯುವುದಲ್ಲದೇ ದೇಶದ ಅಭಿವೃದ್ಧಿಗೂ ಕಾಣಿಕೆ ಸಲ್ಲಿಸಿದಂತಾಗುತ್ತದೆ. ಅದು ಅವಶ್ಯವೂ ಹೌದು.

ಖಾಸಗಿ ಕಂಪೆನಿಗಳೂ ಇವರೊಡನೆ ಕೈಜೋಡಿಸ ಬೇಕಲ್ಲವೇ ? ಖಾಸಗಿ ಕಂಪೆನಿಗಳು ಸಂಶೋಧನಾ ಹೂಡಿಕೆ ಪ್ರಮಾಣ ಹೆಚ್ಚಾಗಿರುವ ದೇಶದ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಾಗುವುದು ಸ್ವಾಭಾವಿಕ. ಇತ್ತೀಚೆಗೆ ಕೇಂದ್ರ ಕೈಗಾರಿಕೆ ಮತ್ತು ವಿದೇಶ ವ್ಯಾಪಾರ ಮಂತ್ರಿ ಪಿಯೂಷ್ ಗೋಯೆಲ್‌ರವರು ನಮ್ಮ ‘ಸ್ಟಾರ್ಟ್ ಅಪ್’ಗಳನ್ನು ತರಾಟೆಗೆ ತೆಗೆದುಕೊಂಡು ಅವುಗಳ ಗುಣಮಟ್ಟವನ್ನು ಚೀನಾದ ‘ಸ್ಟಾರ್ಟ್ ಅಪ್’ಗಳ ಗುಣಮಟ್ಟದೊಡನೆ ಹೋಲಿಸಿ ಅವರಿಂದ ನೀವು ಬಹಳಷ್ಟು ಕಲಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ. ಅಂದರೆ ತಂತ್ರಜ್ಞಾನವೇ ಆಧಾರವಾಗಿರುವ ಈ ಕಂಪೆನಿಗಳಲ್ಲಿ ಅದರಲ್ಲಿ ನಿರೀಕ್ಷಿಸಿದಷ್ಟು ಬೆಳವಣಿಗೆ ಆಗಿಲ್ಲವೆಂದೂ ಅರ್ಥವಲ್ಲವೇ. ಭಾರತದಲ್ಲಿ ಒಟ್ಟಾರೆ ಖಾಸಗಿ ವಲಯದ ಕಂಪೆನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆಗಳ ಬೆಳವಣಿಗೆ ಆಗಿಲ್ಲವೆಂಬ ಆತಂಕದ ಕೂಗು ಕೇಳಿ ಬರುತ್ತಿದೆ. ಅದರಲ್ಲಿ ಹುರುಳಿಲ್ಲವೆಂದಲ್ಲ.

ಇತ್ತೀಚೆಗೆ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೈಟೆಡ್ ನೇಷನ್ಸ್ ಕಾನರೆನ್ಸ್ ಆನ್ ಟ್ರೇಡ್ ಆಂಡ್ ಡೆವಲಪ್‌ಮೆಂಟ್ ೨೦೨೩ರಲ್ಲಿ ಅತಿ ಹೆಚ್ಚು ಹೂಡಿಕೆಗಳನ್ನು ಸಂಶೋಧನೆಯಲ್ಲಿ ಮಾಡಿರುವ ಜಗತ್ತಿನ ೨,೦೦೦ ಕಂಪೆನಿಗಳ ಪಟ್ಟಿಯನ್ನು ಹೂಡಿಕೆಯ ಮೊತ್ತವನ್ನು ಮತ್ತು ಅವುಗಳ ದೇಶದ ಹೆಸರನ್ನು ಪ್ರಕಟಿಸಿದೆ. ವಿವರಗಳನ್ನು ಇಲ್ಲಿಯ ಸಂಖ್ಯಾಪಟ್ಟಿಯಲ್ಲಿ ಗಮನಿಸಬಹುದು. ಈ ಮೇಲಿನ ಸಂಖ್ಯಾಪಟ್ಟಿಯನ್ನು ಗಮನಿಸಿದರೆ ಭಾರತ ಕೇವಲ ೧೫ ಕಂಪೆನಿಗಳೊಡನೆ ಮತ್ತು ೫.೫ ಬಿಲಿಯನ್ ಯೂರೋಗಳ ಹೂಡಿಕೆಗಳೊಂದಿಗೆ ಕೆಳಗಿನಿಂದ ಎರಡನೆಯದಾಗಿ ಗೋಚರಿಸುತ್ತದೆ. ಚೀನಾ ಮೊದಲ ಮೂರನೇ ಸ್ಥಾನದಲ್ಲಿ ಕಂಡರೂ ಅದು ಕಂಪೆನಿಗಳ ಸಂಖ್ಯೆ ಮತ್ತು ಹೂಡಿಕೆಯ ಮೊತ್ತದ ವಿಷಯದಲ್ಲಿ ಅಮೆರಿಕದ ಕೆಳಗೆ ಎರಡನೇ ಸ್ಥಾನದಲ್ಲಿರಬೇಕು. ಯಾಕೆಂದರೆ ಯೂರೋಪಿಯನ್ ಯೂನಿಯನ್‌ನಲ್ಲಿ ೨೮ ದೇಶಗಳಿವೆ.

ನಮ್ಮಲ್ಲಿ ದೊಡ್ಡ ಕಂಪೆನಿಗಳೇ ಒಂದು ಸಾವಿರವಾದರೂ ಇರಬಹುದು. ಅಂಥದ್ದರಲ್ಲಿ ಕೇವಲ ೧೫ ಕಂಪೆನಿಗಳು ಈ ಪಟ್ಟಿಯಲ್ಲಿ ಸೇರಿಕೊಂಡಿವೆ ಎಂದರೆ ಏನಿದರ ಅರ್ಥ? ಅಂದರೆ ಬಹುತೇಕ ಭಾರತೀಯ ಕಂಪೆನಿಗಳು ಸಂಶೋಧನೆಯ ಮೇಲೆ ಅತಿ ಕಡಿಮೆ ಖರ್ಚು ಮಾಡುತ್ತವೆ ಅಥವಾ ಬೇರೆಯವರ ಸಂಶೋಧನೆಗಳ -ಲಗಳನ್ನು ಉಪಯೋಗಿಸುತ್ತವೆ ಎಂದು ಹೇಳಬಹುದು. ಸಂಶೋಧನೆಗಾಗಿ ಮಾಡಿರುವ ಖರ್ಚುಗಳಿಗೆ ಆದಾಯ ತೆರಿಗೆ ವಿನಾಯಿತಿಗಳು ಇರುವಾಗಲೂ ಸಂಶೋಧನೆಯ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದಂತಾಯಿತು. ಸಂಶೋಧನೆಗಾಗಿ ಮಾಡುವ ವೆಚ್ಚಗಳು ಭವಿಷತ್ತಿನ ಬೆಳವಣಿಗೆಗೆ ಅಡಿಪಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲ ನಮ್ಮ ಕಾರ್ಪೊರೇಟ್ ವಲಯಕ್ಕೆ ತಿಳಿದಿರುವ ವಿಷಯ. ಆದರೂ ಸಂಶೋಧನೆ ವೆಚ್ಚ ಹೆಚ್ಚುತ್ತಿಲ್ಲ.

ಮೇಲಿನ ಪಟ್ಟಿಯಲ್ಲಿನ ೧೫ ಕಂಪೆನಿಗಳ ಪೈಕಿ ಟಾಟಾ ಮೋಟಾರ‍್ಸ್ ಒಂದೇ ೨.೯೫ ಬಿಲಿಯನ್ ಯೂರೋಗಳನ್ನು ಆರ್.&ಡಿ.ಯಲ್ಲಿ ಹೂಡಿಕೆ ಮಾಡಿದೆ. ಉಳಿದಂತೆ ಸನ್ -ರ್ಮಾ (೩೪೩ ಮಿ.ಯೂ.), ಡಾ.ರೆಡಿ’ಸ್ ಲ್ಯಾಬ್ (೨೯೪ ಮಿ.ಯೂ.), ಅರಬಿಂದೋ -ರ್ಮಾ (೧೮೯ ಮಿ.ಯು.), ಲುಪಿನ್ (೧೮೯ ಮಿ.ಯೂ.) ಮತ್ತು ಸಿಪ್ಲಾ (೧೬೯ ಮಿ.ಯೂ.) ಹೀಗೆ ಔಷಧಿ ಕಂಪೆನಿಗಳುಹೂಡಿಕೆ ಮಾಡಿದ್ದು ಕಂಡು ಬಂದಿದೆ. ಉಳಿದ ಕಂಪೆನಿಗಳಲ್ಲಿ ಕಡಿಮೆ ಮೊತ್ತವಿದೆ.ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳಿಂದ ಕೂಡಲೇ ಲಾಭ ಬರವುದಿಲ್ಲ ಎನ್ನುವುದು ನಿಜವಾದರೂ ನಾಳಿನ ಪೇಟೆಯಲ್ಲಿ ದೀರ್ಘ ಕಾಲದವರೆಗೆ ಸ್ಪರ್ಧೆ ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಸಮಾಜಕ್ಕೂ ಇದರಿಂದ ಒಳ್ಳೆಯದಾಗುತ್ತದೆ. ಕಂಪೆನಿಗಳ ಸುಸ್ಥಿರ ಬೆಳವಣಿಗೆಯು ಸಂಶೋಧನೆಯಿಂದ ಸಾಧ್ಯವಾಗುತ್ತದೆ.

ಎಲ್ಲ ವಲಯಗಳಲ್ಲಿನ ಕಂಪೆನಿಗಳಿಗೂ ಸಂಶೋಧನೆಯ ಅವಶ್ಯ ಇದೆ. ಅದು ಉತ್ಪನ್ನಗಳಲ್ಲಿನ ಸುಧಾರಣೆಗಾಗಿ ವೈಜ್ಞಾನಿಕ ಸಂಶೋಧನೆಯಾಗಿರಬಹುದು. ಗ್ರಾಹಕರ ನಡೆಯ ಬಗ್ಗೆ ಮಾರುಕಟ್ಟೆ ಸಂಶೋಧನೆಯಾಗಿರಬಹುದು. ಅದು ಸ್ಥಳೀಯ ಸಣ್ಣ ಸಂಶೋಧನೆಯಗಿರಬಹುದು ಅಥವಾ ವ್ಯಾಪಕವಾದ ದೀರ್ಘವಾದ ಸಂಶೋಧನೆ ಇರಬಹುದು. ಒಟ್ಟಿನಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸಂಶೋಧನೆಯು ಬೇಕೇ ಬೇಕು.

” ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳಿಂದ ಕೂಡಲೇ ಲಾಭ ಬರವುದಿಲ್ಲ ಎನ್ನುವುದು ನಿಜವಾದರೂ ನಾಳಿನ ಪೇಟೆಯಲ್ಲಿ ದೀರ್ಘ ಕಾಲದವರೆಗೆ ಸ್ಪರ್ಧೆ ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಸಮಾಜಕ್ಕೂ ಇದರಿಂದ ಒಳ್ಳೆಯದಾಗುತ್ತದೆ. ಕಂಪೆನಿಗಳ ಸುಸ್ಥಿರ ಬೆಳವಣಿಗೆಯು ಸಂಶೋಧನೆಯಿಂದ ಸಾಧ್ಯವಾಗುತ್ತದೆ.”

ಆಂದೋಲನ ಡೆಸ್ಕ್

Recent Posts

ಆಕಸ್ಮಿಕ ಬೆಂಕಿ : ಒಕ್ಕಲೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

11 mins ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

19 mins ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

27 mins ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

30 mins ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

33 mins ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

35 mins ago