ಅಂಕಣಗಳು

ಬರಲಿರುವ ಬಜೆಟ್ ಆದ್ಯತೆಗಳೇನು?

ಪ್ರೊ.ಆರ್.ಎಂ.ಚಿಂತಾಮಣಿ

ಇಂದಿಗೆ ಐದನೇ ದಿನ ಕೇಂದ್ರ ಸರ್ಕಾರದ ೨೦೨೫-೨೬ರ ಮುಂಗಡಪತ್ರ ಸಂಸತ್ತಿನಲ್ಲಿ ಮಂಡಿಸಲ್ಪಡಲಿದೆ. ಫೆಬ್ರವರಿ ಒಂದನೇ ತಾರೀಖು ಶನಿವಾರ ಇರುವುದರಿಂದ ಸಂಸತ್ತಿನ ಅಧಿವೇಶನವನ್ನು ಅಂದಿಗೆ ಮುಂದುವರಿಸಬಹುದು. ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಸತತ ೭ನೇ ಬಾರಿಗೆ ಮಂಡಿಸಲಿರುವ ಪೂರ್ಣಾವಧಿ ಬಜೆಟ್ ಇದಾಗಿದೆ. ೨೦೨೪-೨೫ರ ಮಧ್ಯಂತರ ಬಜೆಟ್ ಸೇರಿಸಿದರೆ ಎಂಟನೆಯದು.

ಈ ವರ್ಷದ ಬಜೆಟ್ ತಯಾರಿಕೆ ಅಷ್ಟು ಸರಳವಾಗಿಲ್ಲ. ಆಂತರಿಕ ಮತ್ತು ಅಂತಾರಾಷ್ಟ್ರೀಯ ಸವಾಲುಗಳನ್ನು ಸಚಿವರು ಬಜೆಟ್ ತಯಾರಿಸುವಾಗ ಎದುರಿಸಬೇಕಾಗಿದೆ. ನಮ್ಮ ರಾಷ್ಟ್ರೀಯ ಒಟ್ಟಾದಾಯ (ಜಿಡಿಪಿ) ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೇವಲ ಶೇ.೫.೪ರಷ್ಟು ಬೆಳವಣಿಗೆ ಕಂಡಿದೆ. ಇಷ್ಟು ಕಡಿಮೆ ದರದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗದ ಅವಧಿಯ ನಂತರ ಜಿಡಿಪಿ ಬೆಳವಣಿಗೆಯಾಗಿರುವುದು ಇದೇ ಮೊದಲು. ನಂತರದ ಎರಡು ತ್ರೈಮಾಸಿಕಗಳಲ್ಲೂ ಹೆಚ್ಚು ಆಶಾದಾಯಕ ಬೆಳವಣಿಗೆಗಳೇನೂ ಕಂಡು ಬರುತ್ತಿಲ್ಲ. ಆದ್ದರಿಂದ ಈ ವರ್ಷದ ಜಿಡಿಪಿ ಬೆಳವಣಿಗೆ ಅಂದಾಜುಗಳು ಶೇ.೬.೬ಕ್ಕೆ ಮಾತ್ರ ಸೀಮಿತವಾಗಿವೆ. ಇದನ್ನು ಮುಂದಿನ ವರ್ಷ ಮೇಲೆತ್ತುವ ಮಹತ್ವದ ಹೆಜ್ಜೆಗಳನ್ನು ಈ ಬಜೆಟ್ ಇಡಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರಿಯುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದರೂ ಅದು ಜಾರಿಯಾಗಿ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕಾಗಿದೆ.

ಮೂರನೆಯದಾಗಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಹಿಂದಿನ ಅಧಿಕಾರಾವಧಿಯಲ್ಲಿನ ಅನುಭವದಿಂದ ಮತ್ತು ಇತ್ತೀಚಿನ ಅವರ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತೆರಿಗೆಗಳು ಮತ್ತು ವಿದೇಶ ವ್ಯಾಪಾರದ ದಿಕ್ಕನ್ನು ನಿರೀಕ್ಷಿಸುವುದು ಕಷ್ಟವಾಗುತ್ತದೆ. ಈ ಅನಿಶ್ಚಿತತೆಯ ನೆರಳಿನಲ್ಲಿ ಬರಲಿರುವ ಮುಂಗಡಪತ್ರ ಮಂಡಿಸಲ್ಪಡುತ್ತಿದೆ.

ಬೆಳವಣಿಗೆ ಪೂರಕ ಬಜೆಟ್ ಬೇಕಾಗಿದೆ: ಬಜೆಟ್ ದೀರ್ಘಾವಧಿ ಆರ್ಥಿಕ ನೀತಿಯ ವಾರ್ಷಿಕ ರೂಪ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ರೂಪರೇಷೆಗಳನ್ನು ತಯಾರಿಸಬೇಕಾಗುತ್ತದೆ. ಆದ್ಯತೆಗಳನ್ನು ನಿರ್ಧರಿಸಬೇಕಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಮೊತ್ತಗಳಲ್ಲಿ ಹಣಕಾಸು ಒದಗಿಸುವುದರೊಂದಿಗೆ ಸರ್ಕಾರದ ಹಣಕಾಸು (ಕೋಶೀಯ) ಶಿಸ್ತು ಪಾಲನೆಗೂ ಮಹತ್ವ ಕೊಡಬೇಕಾಗುತ್ತದೆ. ಪ್ರತಿವರ್ಷ ಅರ್ಥಮಂತ್ರಿಗಳು ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿ, ಅವುಗಳಿಗಾಗಿ ಹಣಕಾಸನ್ನೂ ಒದಗಿಸುತ್ತಾರೆ. ಮುಂದಿನ ಬಜೆಟ್‌ನಲ್ಲಿ ಮೊದಲಿಗೆ ಈ ಯೋಜನೆಗಳು ಏನಾದವು? ಎಷ್ಟು ಯಶಸ್ವಿಯಾಗಿವೆ? ಎನ್ನುವ ಬಗ್ಗೆ ವಿಮರ್ಶೆ ಮಾಡ ಬೇಕು. ಪ್ರತಿ ಬಜೆಟ್ಟಿಗೂ ಇರುವಂತೆ ಈ ವರ್ಷದ ಬಜೆಟ್ಟಿಗೂ ಆದ್ಯತೆ ಗಳನ್ನು ಗುರುತಿಸಬೇಕು.

ಮೊದಲನೆಯದಾಗಿ ಜನಸಂಖ್ಯೆಯ ಶೇ.೪೫ರಷ್ಟು ಜನರು ಇಂದಿಗೂ ಅವಲಂಬಿಸಿರುವ ಕೃಷಿ ಕ್ಷೇತ್ರದತ್ತ ಅರ್ಥ ಸಚಿವರು ಹೆಚ್ಚು ಗಮನ ಹರಿಸಬೇಕು. ಇಷ್ಟೊಂದು ಜನ ದುಡಿಯುತ್ತಿದ್ದರೂ ಈ ಕ್ಷೇತ್ರ ರಾಷ್ಟ್ರೀಯ ಒಟ್ಟಾದಾಯಕ್ಕೆ ಕೇವಲ ಶೇ.೧೮ರಷ್ಟು ಕಾಣಿಕೆ ಸಲ್ಲಿಸುತ್ತದೆ. ಈ ವಲಯ ಸಮಾಜದ ಬೆನ್ನೆಲುಬು ಎಂದೂ ಹೇಳಲಾಗುತ್ತದೆ. ಇಲ್ಲಿ ಉತ್ಪಾದಕತೆ (Productivity) ಹೆಚ್ಚಾಗಿ ಕೃಷಿ ಉತ್ಪಾದನೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಬೇಕು.

ಆಗ ಗ್ರಾಮೀಣ ಆದಾಯಗಳಲ್ಲಿ ಏರಿಕೆ ಕಂಡುಕೊಳ್ಳುವ ಶಕ್ತಿ ವಿಸ್ತರಣೆಯಾಗಿ ದೇಶದಲ್ಲಿ ಬೇಡಿಕೆ ಹೆಚ್ಚುತ್ತದೆ. ಕೃಷಿ ಸಂಶೋಧನೆ ಮತ್ತು ಮಾಹಿತಿ ವಿಸ್ತರಣೆಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಪೂರಕ ಉದ್ದಿಮೆಗಳು ಹಳ್ಳಿಗಳಲ್ಲಿ ಹೆಚ್ಚಾಗಬೇಕಾಗಿದೆ. ಹೈನುಗಾರಿಕೆ, ತೋಟಗಾರಿಕೆ ಮುಂತಾದ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚಾದರೆ ಕೃಷಿಯಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿ ಉತ್ಪಾದಕತೆ ಹೆಚ್ಚುತ್ತದೆ. ಗ್ರಾಮೀಣ ಅರೆ ಉದ್ಯೋಗ ಕಡಿಮೆಯಾಗುತ್ತದೆ. ಇವೆಲ್ಲ ಕಾರಣಗಳಿಂದ ಈ ಬಜೆಟ್‌ನಲ್ಲಿ ಕೃಷಿಗೆ ಮೊದಲ ಆದ್ಯತೆ ಕೊಡಬೇಕು. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಕಳೆದ ಬಜೆಟ್‌ಗಿಂತ ಶೇ.೧೫ರಿಂದ ಶೇ.೨೦ರಷ್ಟು ಹೂಡಿಕೆಗಳು ಹೆಚ್ಚಾಗಬೇಕಾಗುತ್ತದೆ.

ಎರಡನೇ ಆದ್ಯತೆ ತೆರಿಗೆ ಸುಧಾರಣೆ ಮತ್ತು ಕೋಶೀಯ ಶಿಸ್ತು ಎಂದು ಹೇಳಬಹುದು. ವರದಿಗಳಂತೆ ನಗರಗಳಲ್ಲಿ ಉಪಭೋಗದ (Consumption) ಕಡಿಮೆಯಾಗಿದೆ. ಪೇಟೆಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಈಗ ಹಣದುಬ್ಬರ ಮತ್ತು ಬೆಲೆ ಏರಿಕೆಗಳು ಸೀಮಿತದಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ವಿಚಿತ್ರವೆಂದರೆ ಹೆಚ್ಚಿನ ಬೆಲೆಯ ವಾಹನಗಳು (ಐಶಾರಾಮಿ) ಮತ್ತು ವಿದ್ಯುನ್ಮಾನ ಸಲಕರಣೆಗಳಿಗೆ ಬೇಡಿಕೆಹೆಚ್ಚುತ್ತಲೆ ಇದ್ದು, ಕಡಿಮೆ ಬೆಲೆಯ ಉತ್ಪನ್ನಗಳಿಗೆ ಬೇಡಿಕೆ ನಿರೀಕ್ಷಿಸಿದ ಮಟ್ಟದಲ್ಲಿ ಹೆಚ್ಚುತ್ತಿಲ್ಲ. ಅಂದರೆ ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಉಳಿಯುತ್ತಿಲ್ಲ. ಅದು ಉಳಿಯು ವಂತೆ ಬಜೆಟ್‌ನಲ್ಲಿ ಕ್ರಮ ಬೇಕಾಗಿದೆ.

೧೫ ಲಕ್ಷ ರೂಪಾಯಿವರೆಗೆ ಆದಾಯವಿರುವ ಆದಾಯ ತೆರಿಗೆದಾರರಿಗೆ ಕನಿಷ್ಠ ಶೇ.೧೫ರಿಂದ ಶೇ.೨೦ರಷ್ಟಾದರೂ ತೆರಿಗೆ ಭಾರ ಕಡಿಮೆ ಮಾಡಬೇಕು. ಆಗ ಪೇಟೆಯಲ್ಲಿ ಸಂಚಲನ ಮೂಡುವಂತಾಗುತ್ತದೆ. ಯಾವ ರೀತಿಯಲ್ಲಿ ರಿಯಾಯಿತಿ ಕೊಡಬೇಕೆಂಬುದು ಅರ್ಥ ಮಂತ್ರಿಗಳ ಆಯ್ಕೆ. ಅದೇ ರೀತಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಸುಧಾರಣೆ ತಂದು ಮೂರು ದರಗಳಿಗೆ (ಶೇ.೦೫, ಶೇ.೧೫ ಅಥವಾ ಶೇ.೧೬ ಮತ್ತು ಶೇ.೨೮) ಇಳಿಸಬೇಕೆಂಬುದು ಹಳೆಯ ಬೇಡಿಕೆ. ಹಾಗಾದಲ್ಲಿ ತೆರಿಗೆ ಪಾವತಿ ಇನ್ನಷ್ಟು ಸರಳವಾಗಿ ತೆರಿಗೆ ಸಂಗ್ರಹವೂ ಇನ್ನೂ ಹೆಚ್ಚುತ್ತದೆ. ವಿಮಾ ಕಂತುಗಳ ಮೇಲಿನ ಶೇ.೧೮ರ ಜಿಎಸ್‌ಟಿಯನ್ನು ತೆಗೆದುಹಾಕಬೇಕು ಎಂಬ ಬಲವಾದ ಮೊದಲಿನಿಂದಲೂ ಇದೆ. ಹಾಗೆ ಮಾಡಿದರೆ ವಿಮ ರಕ್ಷಣೆ ಪಡೆಯುವುದು ಇನ್ನಷ್ಟು ಅಗ್ಗವಾಗಿ ಹೆಚ್ಚು ಜನ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ೨೦೪೭ರ ಹೊತ್ತಿಗೆ ಎಲ್ಲ ಅರ್ಹರಿಗೂ ವಿಮಾ ರಕ್ಷಣೆ ಒದಗಿಸುವ ಗುರಿ ಸಾಽಸಲು ಸಾಧ್ಯವಾಗುತ್ತದೆ. ಅಲ್ಲದೆ ಕೆಲವು ಉದ್ದಿಮೆಗಳಿಗೆ ಸಂಬಂಧಿಸಿದಂತೆ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ಸರಕುಗಳು, ಮಧ್ಯಮ ಸರಕುಗಳು ಮತ್ತು ಬಿಡಿ ಭಾಗಗಳಿಗೆ ಬೇರೆ ಜಿಎಸ್‌ಟಿ ದರ ಮತ್ತು ಅಂತಿಮ ಉತ್ಪಾದನೆಗಳಿಗೆ ಬೇರೆ ದರ ಇರುತ್ತವೆ. ಇದನ್ನು ಕೂಡಲೇ ತಪ್ಪಿಸಬೇಕು. ಜಿಎಸ್‌ಟಿ ಕೌನ್ಸಿಲ್ ಕೂಡಲೇ ಈ ಎಲ್ಲ ವಿಷಯಗಳಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಕೋಶೀಯ ಶಿಸ್ತಿಗೆ ಸಂಬಂಧಪಟ್ಟಂತೆ ಕೋಶೀಯ ಕೊರತೆಯನ್ನು ಜಿಡಿಪಿಯ ಶೇ.೪.೫ಕ್ಕಿಂತ ಕಡಿಮೆ ಮಟ್ಟಕ್ಕೆ ೨೦೨೫-೨೬ರ ಹೊತ್ತಿಗೆ ತರುವುದಾಗಿ ಹಣಕಾಸು ಸಚಿವರು ಹೇಳಿದ್ದರು. ಸದ್ಯದ ಸ್ಥಿತಿಯಿಂದಾಗಿ ಇದು ಸಾಧ್ಯವಾಗಲಿಕ್ಕಿಲ್ಲ. ಕಾಯ್ದೆ ಪ್ರಕಾರ ಆದರ್ಶ ಕೋಶೀಯ ಕೊರತೆ ಸ್ಥಿತಿಯನ್ನು (ಶೇ.೩.೦ರ ಮಟ್ಟವನ್ನು) ೨೦೨೯-೩೦ರ ಹೊತ್ತಿಗೆ ತಲುಪಬಹುದೆಂದೂ ಆಶಿಸಲಾಗಿತ್ತು. ಈಗ ಈ ವೇಳಾಪಟ್ಟಿಯನ್ನು ಸ್ವಲ್ಪ ಸಡಿಲಗೊಳಿಸಿ, ಮೂರು-ನಾಲ್ಕು ವರ್ಷಗಳ ಮುಂದೆ ಹಾಕಬಹುದು. ಉಳಿದಂತೆ ಉತ್ಪಾದಕ ಉದ್ಯಮಗಳಿಗೆ ಈಗಿರುವ ಉತ್ತೇಜನಗಳ ಉಪಯೋಗ ಸಮರ್ಪಕವಾಗಿ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಮೇಲ್ವಿಚಾರಣೆ ಮತ್ತು ತಪ್ಪಿದವರಿಗೆ ಕೂಡಲೇ ಸೂಕ್ತ ದಂಡ ಅಥವಾ ಕಪ್ಪು ಪಟ್ಟಿಗೆ ಸೇರಿಸುವ ವ್ಯವಸ್ಥೆಯನ್ನು ಈ ಬಜೆಟ್‌ನಲ್ಲಿ ರೂಪಿಸಬೇಕು.

ಅಲ್ಲದೆ ಕಾಲೇಜುಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ಕೆಲಸ ಪರಿಣಾಮಕಾರಿಯಾಗಿ ಮುಂದುವರಿಯಬೇಕು.

” ಮೊದಲನೆಯದಾಗಿ ಜನಸಂಖ್ಯೆಯ ಶೇ.೪೫ರಷ್ಟು ಜನರು ಇಂದಿಗೂ ಅವಲಂಬಿಸಿರುವ ಕೃಷಿ ಕ್ಷೇತ್ರದತ್ತ ಅರ್ಥ ಸಚಿವರು ಹೆಚ್ಚು ಗಮನ ಹರಿಸಬೇಕು. ಇಷ್ಟೊಂದು ಜನ ದುಡಿಯುತ್ತಿದ್ದರೂ ಈ ಕ್ಷೇತ್ರ ರಾಷ್ಟ್ರೀಯ ಒಟ್ಟಾದಾಯಕ್ಕೆ ಕೇವಲ ಶೇ.೧೮ರಷ್ಟು ಕಾಣಿಕೆ ಸಲ್ಲಿಸುತ್ತದೆ. ಈ ವಲಯ ಸಮಾಜದ ಬೆನ್ನೆಲುಬು ಎಂದೂ ಹೇಳಲಾಗುತ್ತದೆ. ಇಲ್ಲಿ ಉತ್ಪಾದಕತೆ (Pಟbಠಿಜಿqಜಿಠಿqs) ಹೆಚ್ಚಾಗಿ ಕೃಷಿ ಉತ್ಪಾದನೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಬೇಕು ಆಗ ಗ್ರಾಮೀಣ ಆದಾಯಗಳಲ್ಲಿ ಏರಿಕೆ ಕಂಡುಕೊಳ್ಳುವ ಶಕ್ತಿ ವಿಸ್ತರಣೆಯಾಗಿ ದೇಶದಲ್ಲಿ ಬೇಡಿಕೆ ಹೆಚ್ಚುತ್ತದೆ. ಕೃಷಿ ಸಂಶೋಧನೆ ಮತ್ತು ಮಾಹಿತಿ ವಿಸ್ತರಣೆಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ.”

ಆಂದೋಲನ ಡೆಸ್ಕ್

Recent Posts

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

14 hours ago

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…

15 hours ago

ಡಿಕೆಶಿ ಜೊತೆಗಿನ ಬಾಂಧ್ಯವ : ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದಿಷ್ಟು

ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…

17 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 26, ಶುಕ್ರವಾರ  

19 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಕನ್ನಡಕ್ಕೊಂದು ಒಟಿಟಿ, ʼಗರುಡ ಪುರಾಣʼ ಇತ್ಯಾದಿ

‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ…

19 hours ago

ಹಿಟಾಚಿ ಮೇಲೆ ಬಿದ್ದ ಗೋಡೆ: ಚಾಲಕ ಪಾರು

ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…

1 day ago