ಅಂಕಣಗಳು

ಬೇಸಿಗೆಯಲ್ಲಿ ಮತ್ತಷ್ಟು ಬಿಗಡಾಯಿಸಲಿದೆ ನೀರಿನ ಸಮಸ್ಯೆ

• ಜಿ.ಎಂ.ಪ್ರಸಾದ್

ಮುಂದೆ ಬೇಸಿಗೆ ಬರಲಿದೆ. ಈ ಬಾರಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಬಾರದೆ ಇದ್ದದ್ದು, ನೀರಿನ ಮಟ್ಟ ಕುಸಿಯಲು ಕಾರಣವಾಯಿತು. ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗಲೇ ಪಕ್ಕದ ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತು. ಮೊದಲೇ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತಾಯಿತು.

ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾದ ಬಳಿಕ ರೈತರು ಅಂತರ್ಜಲದ ಬಳಕೆಯ ಮೊರೆಹೋದರು. ಹೆಚ್ಚು ಹೆಚ್ಚು ಅಂತರ್ಜಲದ ಬಳಕೆಯಿಂದಾಗಿ ಅಂತರ್ಜಲದ ಮಟ್ಟವೂ ಕುಸಿಯಿತು. ಪರಿಣಾಮ ಬೇಸಿಗೆ ಆರಂಭಕ್ಕೂ ಮುನ್ನವೇ ಗ್ರಾಮೀಣ ಭಾಗಗಳಲ್ಲಿ ಕೆರೆಕಟ್ಟೆಗಳು ನೀರಿಲ್ಲದೆ ಬತ್ತಿಹೋದವು. ಜನ ಸಾಮಾನ್ಯರು, ಜಾನುವಾರುಗಳಿಗೂ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಯಿತು.

ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಪರಿಸ್ಥಿತಿ ಹೀಗಾದರೆ ಬೇಸಿಗೆಯಲ್ಲಿ ತಾಪಮಾನಮತ್ತಷ್ಟು ಹೆಚ್ಚಾಗಿ ಬರಮತ್ತಷ್ಟು ಬಿಗಡಾಯಿಸಲಿದೆ. ಇದು ಜನರನ್ನು ಮತ್ತಷ್ಟು ಶೋಚನೀಯ ಸ್ಥಿತಿಗೆ ದೂಡಬಹುದು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ರಾಜ್ಯದ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುವತ್ತ ಯೋಜನೆಗಳನ್ನು ರೂಪಿಸಬೇಕು.

ಪರಿಸರ ವಿಜ್ಞಾನಿಗಳ ಪ್ರಕಾರ 2023ನೇ ವರ್ಷವು ವಿಶ್ವ ಕಂಡ ಅತ್ಯಂತ ಹೆಚ್ಚು ತಾಪಮಾನದ ವರ್ಷವಾಗಿದ್ದು, ಇದರ ಪರಿಣಾಮವನ್ನು 2024ರ ಬೇಸಿಗೆಯಲ್ಲಿಯೂ ಅನುಭವಿಸಬೇಕಾಗುತ್ತದೆ. ತಾಪಮಾನದ ಏರಿಕೆಗೆ ಅಕಾಲಿಕ ಮಳೆ ಸೇರಿದಂತೆ ನೂರಾರು ಕಾರಣಗಳಿವೆ. ಪ್ರಕೃತಿಯಲ್ಲಿ ಈ ಬದಲಾವಣೆಗಳಿಗೆ ಮಾನವನೇ ಸೂತ್ರಧಾರ. ಹಲವು ನದಿಗಳ ಉಗಮ ಸ್ಥಾನವಾಗಿರುವ ಸಮೃದ್ಧವಾಗಿದ್ದ ಪಶ್ಚಿಮಘಟ್ಟಗಳಲ್ಲಿ ಮಾನವನ ಹಸ್ತಕ್ಷೇಪದಿಂದಾಗಿ ಅತಿಯಾದ ಅಭಿವೃದ್ಧಿ ಕೆಲಸಗಳು ನಡೆದು, ಅಲ್ಲಿನ ಪರಿಸರಕ್ಕೆ ಧಕ್ಕೆ ಒದಗಿದೆ. ಹೀಗೆ ಕಾಡನ್ನು ನಾಶ ಮಾಡಿದ ಪರಿಣಾಮವಾಗಿ ಜಾಗತಿಕ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ; ಜಲಕ್ಷಾಮ ಪಶ್ಚಿಮಘಟ್ಟಗಳಲ್ಲಿ ಹೆಚ್ಚಾದ ಅಭಿವೃದ್ಧಿ ಕೆಲಸಗಳಿಂದಾಗಿ ಅಲ್ಲಿನ ನದಿಗಳು ಎದುರಾಗಿದೆ. ಈ ಮಧ್ಯೆ ಈಗ ಬಂಡೀಪುರ ಅರಣ್ಯ ಪ್ರದೇಶದ ನಡುವೆ ರೈಲು ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುತ್ತಿವೆ. ಮಾನ್ಸೂನ್ ಹಳಿ ಸ್ಥಾಪಿಸಿ ಪಕ್ಕದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ಪ್ರಾಸ್ತಾವನೆ ಬಂದಿದ್ದು,

ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇದು ಜಾರಿಯಾದರೆ ಮುಂದಿನ ದಿನಗಳಲ್ಲಿ ನಾವು ದೊಡ್ಡ ಮಟ್ಟದ ಅಪಾಯವನ್ನು ಎದುರಿಸಬೇಕಾಗುತ್ತದೆ.

ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾದ ಅಭಿವೃದ್ಧಿ ಕೆಲಸಗಳಿಂದಾಗಿ ಅಲ್ಲಿನ ನದಿಗಳು ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುತ್ತಿವೆ. ಮಾನ್ಸೂನ್ ಮಾರುತಗಳನ್ನು ತಡೆದು ಮಳೆ ತರುವಲ್ಲಿ ಪಶ್ಚಿಮ ಘಟ್ಟಗಳ ಪಾತ್ರ ಹೆಚ್ಚಾಗಿದೆ. ಆದರೆ ಪ್ರತಿ ವರ್ಷ ಒಂದಲ್ಲ ಒಂದು ಕಾರಣ ನೀಡಿ ಪಶ್ಚಿಮ ಘಟ್ಟಗಳನ್ನು ನಾಶ ಮಾಡುತ್ತಿರುವುದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ.

ಪರಿಸರ ಸಂರಕ್ಷಣೆಯ ಜಾಗೃತಿ ಮೂಡದ ಹೊರತು ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದೊಂದು ದಿನ ಕರಾವಳಿ, ಪಶ್ಚಿಮಘಟ್ಟಗಳು ಮಾತ್ರವಲ್ಲದೆ ಇಡೀ ರಾಜ್ಯವೇ ಬೇಸಿಗೆಯ ಬೇಗೆಯಲ್ಲಿ ಬೇಯಬೇಕಾದ ಪರಿಸ್ಥಿತಿ ಬಂದೊದಗಲಿದೆ.

ಸರ್ಕಾರ ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಪಶ್ಚಿಮಘಟ್ಟಗಳಲ್ಲಿ ಅನವಶ್ಯಕವಾದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕು. ಇರುವ ಮರಗಳನ್ನಾದರೂ ಉಳಿಸಿಕೊಂಡು ಕಾಡನ್ನು ಸಂರಕ್ಷಿಸಿದರೆ ಅದು ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾದೀತು.

ಬೇಸಿಗೆಯಲ್ಲಿ ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಕಾಡಿಚ್ಚುಗಳು. ಬೇಸಿಗೆಯ ಬೇಗೆ ಹೆಚ್ಚಾದಷ್ಟು ಪೆಟ್ರೋಲ್ ನಂತಾಗುವ ಕಾಡುಗಳು ಒಂದು ಕಿಡಿ ಬಿದ್ದರೂ ನೂರಾರು ಎಕರೆ ಕಾಡನ್ನು ನುಂಗಿಬಿಡುತ್ತದೆ. ಈ ಕಾಡಿಚ್ಚು ನೈಸರ್ಗಿಕ ಕಾರಣಗಳಿಗಿಂತ ಮಾನವನಿಂದಲೂ ಉಂಟಾಗುವುದೇ ಹೆಚ್ಚು.

ಕಾಡಂಚಿನ ಜನರಲ್ಲಿ ಕಾಡಿಚ್ಚಿನ ಬಗ್ಗೆ ಜಾಗೃತಿ ಮೂಡಿಸುವುದು, ಗ್ರಾಮಸ್ಥರನ್ನೇ ಸ್ವಯಂಸೇವಕರನ್ನಾಗಿ ಬಳಸಿಕೊಳ್ಳುವ ಮೂಲಕ ಸ್ಥಳೀಯರನ್ನು ಅರಣ್ಯದ ಸಂರಕ್ಷಣೆಗೆ ಬಳಸಿಕೊಳ್ಳುವುದು, ಅಗ್ನಿಶಾಮಕದಳದ ನೆರವು ಪಡೆಯುವ ಮೂಲಕ ಕಾಡನ್ನು ರಕ್ಷಿಸಬೇಕು.

ಸಂವಿಧಾನದ 4ಎ ಭಾಗ, 51ಎ ವಿಧಿಯು ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು ಹೇಳಿದೆ. ಆದರೆ ಮನುಷ್ಯನ ದುರಾಸೆಯಿಂದ ಇಂದು ಸಮೃದ್ಧ ಕಾಡುಗಳು ಕಣ್ಮರೆಯಾಗುತ್ತಿರುವುದು ನೀರಿನ ಅಭಾವವನ್ನು ಸೃಷ್ಟಿಸಲು ಪ್ರಮುಖ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಭೂಮಿ ಮೇಲಿನ ತಾಪಮಾನ ಹೆಚ್ಚಾಗುತ್ತಿದೆ. ಮಳೆಯಿಲ್ಲದೆ ಕೃಷಿವಲಯತೀರಾಸಂಕಷ್ಟಕ್ಕೆ ಸಿಲುಕಿದೆ.ಈ ಎಲ್ಲ ಸಮಸ್ಯೆಗಳಿಗೂ ಇರುವ ಪರಿಹಾರವೆಂದರೆ ಕಾಡುಗಳನ್ನು ಉಳಿಸಿಕೊಳ್ಳಬೇಕು. ಮರಗಳ ಹನನ ಮಾಡದೆ ಕಾಡನ್ನು ರಕ್ಷಿಸಿದರೆ ಮಾತ್ರ ಹವಾಮಾನ ವೈಪರೀತ್ಯವನ್ನು ತಗ್ಗಿಸಲು ಸಾಧ್ಯ.

ಪರಿಸರ ಸಂರಕ್ಷಣೆಯ ವಿಚಾರವಾಗಿ ಸರ್ಕಾರ ಹಾಗೂ ಜನರ ಧೋರಣೆಗಳು ಬದಲಾಗಬೇಕು. ಬೇಸಿಗೆ ಸಮೀಪಿಸುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಈಗಿನಿಂದಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಸಾಕಷ್ಟು ಮೇವಿನ ದಾಸ್ತಾನು ಮಾಡಿಕೊಳ್ಳಬೇಕು. ಜನಸಾಮಾನ್ಯರೂ ನೀರನ್ನು ಮಿತವಾಗಿ ಬಳಸಬೇಕು.

andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

7 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

7 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

8 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

8 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

8 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

8 hours ago