ಪಂಜುಗಂಗೊಳ್ಳಿ ೧೯೮೧ರಲ್ಲಿ ‘ಉಳುವವನ ಮುಕ್ತಿಗೆ ಭೂಮಿ’ ಎಂಬ ವಿನೂತನ ಮಾದರಿಯ ಚಳವಳಿಯೊಂದನ್ನು ಹುಟ್ಟು ಹಾಕಿದರು
ಶ್ರೀಮಂತ ಕುಟುಂಬದಿಂದ ಬಂದ ಜಗನ್ನಾಥನ್ ಗಾಂಧೀಜಿಯ ಕರೆಗೆ ಓಗೊಟ್ಟು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ಅವರ ಅಸಹಕಾರ ಚಳವಳಿಗೆ ಸೇರಿಕೊಂಡವರು. ಅಲ್ಲಿ ಕೃಷ್ಣಮ್ಮಾಳ್- ಜಗನ್ನಾಥನ್ ನಡುವೆ ಪ್ರೇಮಾಂಕುರವಾದರೂ ದೇಶ ಸ್ವತಂತ್ರವಾಗುವ ತನಕ ಮದುವೆಯಾಗಬಾರದೆಂದು ನಿಶ್ಚಯಿಸಿದರು. ೧೯೪೨ರಲ್ಲಿ ಜಗನ್ನಾಥನ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ವರ್ಷಗಟ್ಟಳೆ ಜೈಲುವಾಸಿಯಾದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ೧೯೫೦ರಲ್ಲಿ ಇಬ್ಬರೂ ಮದುವೆಯಾದರು.
ದಲಿತರು ಕೆಲವು ರಸ್ತೆಗಳಲ್ಲಿ ಕಾಲಿಡುವಂತಿಲ್ಲ. ಪಾದರಕ್ಷೆಗಳನ್ನು ಧರಿಸುವಂತಿಲ್ಲ. ಧೋತಿಯನ್ನು ಮಂಡಿಗಿಂತ ಕೆಳಕ್ಕೆ ಬಿಡುವಂತಿಲ್ಲ. ಅವರ ನೆರಳು ಭೂಮಾಲೀಕರ ಮನೆಯ ಮೇಲೆಬಿದ್ದರೂ ಸಾಕು, ಒದೆತ ಬೀಳುತ್ತಿತ್ತು. ಯಾವತ್ತೂ ಅರೆಹೊಟ್ಟೆ. ಬಸವನ ಹುಳ, ಅಪರೂಪಕ್ಕೆ ಇಲಿಗಳನ್ನೂ ತಿಂದು ಜೀವಿಸುತ್ತಿದ್ದರು. ಯಾರಿಗೂ ಭೂಮಿ ಇರಲಿಲ್ಲ…
ಇದು ೧೯೭೭ರಲ್ಲಿ ಟೈಮ್ಸ್ ಪತ್ರಿಕೆಯ ಅಂಕಣಕಾರ ಡೇವಿಡ್ ಆಲ್ಬರ್ಟ್ ಎನ್ನುವವರು ತಮಿಳುನಾಡಿನ ನಾಗಪಟ್ಟಿನಮ್, ತಿರುವಾರ್ ಜಿಲ್ಲೆಗಳ ಕಲವು ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಆತ ಕಂಡ ಕೆಲವು ದೃಶ್ಯಗಳು! ಈಗ ಅದೇ ಹಳ್ಳಿಗಳಿಗೆ ಹೋಗಿ ನೋಡಿದರೆ ನಿಮಗೆ ಎಲ್ಲಿಯೂ ಇಂತಹ ಅಮಾನವೀಯವಾದ ದೃಶ್ಯಗಳು ಕಾಣಸಿಗವು. ದಲಿತರ ಚಲನವಲನದ ಮೇಲೆ ಯಾವ ನಿರ್ಭಂಧನೆಗಳಿಲ್ಲ. ಅವರ ಮಕ್ಕಳು ಇತರ ಮಕ್ಕಳಂತೆ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಹೊಟ್ಟಗೆ ಉಣ್ಣಲು ಆಹಾರದ ಕೊರತೆ ಇಲ್ಲ. ನೂರಾರು ವರ್ಷಗಳಿಂದ ಭೂರಹಿತರಾಗಿದ್ದ ಸುಮಾರು ಹದಿನೇಳು ಸಾವಿರಕ್ಕೂ ಹೆಚ್ಚಿನ ದಲಿತ ಕುಟುಂಬಗಳು ಜಮೀನು ಹೊಂದಿ, ಭೂಮಾಲೀಕರ ಹಂಗಿಲ್ಲದೆ ಗೌರವದ ಬದುಕು ಬದುಕುತ್ತಿದ್ದಾರೆ. ಈ ಬದಲಾವಣೆಯಾದುದು ಈಗ ಅಲ್ಲ, ೨೦೦೭ರ ಹೊತ್ತಿಗೇ ಈ ಬದಲಾವಣೆಗಳಾಗಿದ್ದವು. ಈ ಬದಲಾವಣೆ ಹೇಗೆ ಸಾಧ್ಯವಾಯಿತು? ಅದಕ್ಕೂ ಮುಖ್ಯವಾಗಿ, ಯಾರು ಈ ಬದಲಾವಣೆಯನ್ನು ಸಾಧ್ಯವಾಗಿಸಿದರು?
ಕೃಷ್ಣಮ್ಮಾಳ್ ಜಗನ್ನಾಥನ್ ಎಂಬ ಒಬ್ಬ ಭೂರಹಿತ ದಲಿತ ಮಹಿಳೆ ಈ ಬದಲಾವಣೆಗೆ ಕಾರಣವೆಂದರೆ ಯಾರಿಗಾದರೂ ಆಶ್ಚರ್ಯವಾಗದಿರದು! ೧೯೨೬ರಲ್ಲಿ ಒಂದು ಬಡ ದಲಿತ ಕುಟುಂಬದಲ್ಲಿ ಜನಿಸಿದ ಕೃಷ್ಣಮ್ಮಾಳ್ ಸ್ವತಃ ಜಾತಿ ವ್ಯವಸ್ಥೆಯ ಸಾಮಾಜಿಕ ಶೊಷಣೆಯ ಎಲ್ಲಾ ನೋವನ್ನುಂಡು ಬೆಳೆದರೂ ಕಾಲೇಜು ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅದೇ ಅವರನ್ನು ಮಹಾತ್ಮ ಗಾಂಧೀಜಿಯ ಸರ್ವೋದಯ ಚಳವಳಿಗೆ ಧುಮುಕುವಂತೆ ಪ್ರೇರೇಪಿಸಿತು. ಅಲ್ಲಿ ಅವರಿಗೆ ಶಂಕರಲಿಂಗಮ್ ಜಗನ್ನಾಥನ್ ಎಂಬವರ ಪರಿಚಯವಾಯಿತು. ಶ್ರೀಮಂತ ಕುಟುಂಬದಿಂದ ಬಂದ ಜಗನ್ನಾಥನ್ ಗಾಂಧೀಜಿಯ ಕರೆಗೆ ಓಗೊಟ್ಟು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ಅವರ ಅಸಹಕಾರ ಚಳವಳಿಗೆ ಸೇರಿಕೊಂಡವರು. ಇಬ್ಬರ ನಡುವೆ ಪ್ರೇಮಾಂಕುರವಾದರೂ ದೇಶ ಸ್ವತಂತ್ರವಾಗುವ ತನಕ ಮದುವೆಯಾಗಬಾರದೆಂದು ನಿಶ್ಚಯಿಸಿದರು. ೧೯೪೨ರಲ್ಲಿ ಜಗನ್ನಾಥನ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ವರ್ಷಗಟ್ಟಳೆ ಜೈಲುವಾಸಿಯಾದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ೧೯೫೦ರಲ್ಲಿ ಇಬ್ಬರೂ ಮದುವೆಯಾದರು.
೧೯೫೦ರಿಂದ ೧೯೫೨ರ ವರೆಗೆ ಶಂಕರಲಿಂಗಮ್ ವಿನೋಬಾ ಭಾವೆಯೊಂದಿಗೆ ಉತ್ತರ ಭಾರತದಲ್ಲಿ ಭೂದಾನ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಇದೇ ಹೊತ್ತಲ್ಲಿ ಕೃಷ್ಣಮ್ಮಾಳ್ ಮದ್ರಾಸಿನಲ್ಲಿ ಟೀಚ ತರಬೇತಿಯನ್ನು ಮುಗಿಸಿದರು. ಶಂಕರಲಿಂಗಮ್ ತಮಿಳುನಾಡಿಗೆ ಬಂದು, ದಂಪತಿಗಳು ೧೯೫೩ರಿಂದ ೧೯೬೭ರ ವರೆಗೆ ತಮಿಳುನಾಡಿನಲ್ಲಿ ಭೂದಾನ ಚಳವಳಿಯನ್ನು ನಡೆಸಿ, ನೂರಾರು ಭೂರಹಿತ ಕುಟುಂಬಗಳಿಗೆ ನೆಲೆದ ಒಡೆತನ ಸಿಗುವಂತೆ ಮಾಡಿದರು. ಈ ನಿಟ್ಟಿನಲ್ಲಿ ಅವರಿಗೆ ಜೀವಬೆದರಿಕೆಗಳು ಬಂದರೂ ಜಗ್ಗದೆ, ಗಂಡಹೆಂಡಿರು ಸಾವಿರಾರು ಭೂರಹಿತ ದಲಿತ ಕುಟುಂಬಗಳನ್ನು ಭೂಮಾಲೀಕರ ಜೀತದಿಂದ ಪಾರು ಮಾಡಿದರು.
೧೯೬೮ರಲ್ಲಿ ತಂಜಾವೂರಿನ ಕಿಝ್ವನ್ಮಣಿ ಎಂಬ ಹಳ್ಳಿಯಲ್ಲಿ ದಲಿತ ಕೂಲಿಕಾರರು ಹೆಚ್ಚಿನ ಕೂಲಿಗಾಗಿ ಬೇಡಿಕೆ ಇಟ್ಟಾಗ ಭೂ ಮಾಲೀಕರು ದಲಿತರ ಮನೆಗಳಿಗೆ ಬೆಂಕಿಯಿಟ್ಟು ೪೦ ಜನ ಹೆಂಗಸರು, ಮಕ್ಕಳನ್ನು ಜೀವಂತ ಸುಟ್ಟು ಹಾಕಿದರು. ಈ ಹಿನ್ನೆಲೆಯಲ್ಲಿ ಕೃಷ್ಣಮ್ಮಾಳ್ ಮತ್ತು ಜಗನ್ನಾಥನ್ ೧೯೮೧ರಲ್ಲಿ ‘ಉಳುವವನ ಮುಕ್ತಿಗೆ ಭೂಮಿ’ ಎಂಬ ತಮ್ಮದೇ ಆದ ವಿನೂತನ ಮಾದರಿಯ ಚಳವಳಿಯೊಂದನ್ನು ಹುಟ್ಟು ಹಾಕಿದರು. ಇದು ವಿನೋಬಾ ಭಾವೆಯವರ ಭೂದಾನ ಚಳವಳಿಗಿಂತ ಬಹಳ ಭಿನ್ನವಾದುದು. ಈ ಯೋಜನೆಯಡಿ ಭೂಮಾಲೀಕರಿಂದ ನೆಲವನ್ನು ಬೇಡುವುದಿಲ್ಲ. ಬದಲಿಗೆ, ಅವರಿಂದ ಜಮೀನನ್ನು ಕ್ರಯ ಕೊಟ್ಟು ನೇರವಾಗಿ ಖರೀದಿಸಲಾಗುತ್ತದೆ!
ಯೋಜನೆಯ ಮೊದಲ ಹಂತವಾಗಿ, ತಮ್ಮಲ್ಲಿರುವ ಹೆಚ್ಚುವರಿ ಜಮೀನನ್ನು ಮಾರುವಂತೆ ಭೂಮಾಲೀಕರನ್ನು ಒಲಿಸುವುದು. ನಂತರದ ಹಂತದಲ್ಲಿ, ಜಮೀನು ಖರೀದಿಗೆ ಬೇಕಾದ ಹಣವನ್ನು ಹೊಂದಿಸುವುದು. ಇದಕ್ಕಾಗಿ ದಲಿತ ಜನಾಂಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ‘ದಿ ನೇಷನಲ್ ಶೆಡ್ಯೂಲ್ಡ್ ಕಾಸ್ಟ್ ಫೈನಾನ್ಸ್ ಆಂಡ್ ಡೆವಲಪ್ಮೆಂಟ್ ಕಾರ್ಪೋರೇಷನ್’ ಮೊದಲಾದ ಸಂಸ್ಥೆಗಳ ಸಹಾಯ ಪಡೆಯುವುದು. ಪ್ರಾರಂಭದಲ್ಲಿ ಈ ಕಾರ್ಯಕ್ಕೆ ಬ್ಯಾಂಕುಗಳನ್ನು ಒಪ್ಪಿಸುವುದೇ ಬಹುದೊಡ್ಡ ತೊಡಕಾಗಿತ್ತು. ಅದರ ಜೊತೆಯಲ್ಲಿ ರಾಜಕೀಯ, ಸರ್ಕಾರಿ ನೌಕರಿಶಾಹಿ ವಿರೋಧವೂ ತೀವ್ರವಾಗಿತ್ತು. ಆದರೂ ಕೃಷ್ಣಮ್ಮಾಳ್ ಇವೆಲ್ಲ ಅಡೆತಡೆಗಳನ್ನು ದಾಟಿ, ‘ಉಳುವವನ ಮುಕ್ತಿಗೆ ಭೂಮಿ’ ಯೋಜನೆಯಡಿ ಸಾವಿರಾರು ಭೂ ರಹಿತ ದಲಿತ ಕುಟುಂಬಗಳು ಸ್ವಂತ ಜಮೀನು ಪಡೆದು, ಭೂಮಾಲೀಕರ ಹಂಗಿನಿಂದ ಪಾರಾಗಿಸುವಲ್ಲಿ ಸಫಲರಾದರು. ಈ ಯೋಜನೆ ದಲಿತರಿಗೆ ಭೂಮಿ ಒಡೆತನ ಕೊಡಿಸುವುದು ಮಾತ್ರವಲ್ಲದೆ ಹಲವು ರೀತಿ ಔದ್ಯೋಗಿಕ ತರಬೇತಿಗಳನ್ನು ನೀಡಿ, ಅವರಿಗೆ ಸ್ವಾವಲಂಬಿಗಳಾಗಿ ಬದುಕಲು ದಾರಿಯನ್ನೂ ಕಲ್ಪಿಸಿದೆ.
ಕೃಷ್ಣಮ್ಮಾಳ್ ಮತ್ತು ಜಗನ್ನಾಥನ್ ಸಾಮಾಜಿಕ ಕಾರ್ಯಗಳಿಗಾಗಿ ಏಳು ಸರ್ಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಹಲವು ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳನ್ನು ಸಕ್ರಿಯ ಸದಸ್ಯರಾಗಿ ದುಡಿದಿದ್ದಾರೆ. ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಪರ್ಯಾಯ ನೊಬೆಲ್ ಎಂದು ಪ್ರಖ್ಯಾತವಾದ ರೈಟ್ ಲೈವ್ಲಿಹುಡ್ ಪ್ರಶಸ್ತಿ, ಪದ್ಮಶ್ರೀ ಮೊದಲಾದ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಶಂಕರಲಿಂಗಮ್ ಜಗನ್ನಾಥನ್ ೨೦೧೩ರಲ್ಲಿ ತೀರಿಕೊಂಡಾಗ ಅವರಿಗೆ ಸರಿಯಾಗಿ ನೂರು ವರ್ಷ ಪ್ರಾಯವಾಗಿತ್ತು. ಕೃಷ್ಣಮ್ಮಾಳ್‌ರಿಗೆ ಈಗ ೯೬ರ ಇಳಿಪ್ರಾಯ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…