ಅಂಕಣಗಳು

ಹೊಸ ಸುಂಕ ಘೋಷಣೆ, ನೆಮ್ಮದಿ ಹಾಳು ಮಾಡಿದ ಟ್ರಂಪ್

ಡಿ.ವಿ.ರಾಜಶೇಖರ 

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದ್ದು, ಅವರ ನೆಮ್ಮದಿ ಹಾಳಾಗಿದೆ. ಮುಖ್ಯವಾಗಿ ಭಾರತದ ಸಾವಿರಾರು ಇಂಜಿನಿಯರುಗಳು ಮತ್ತಿತರ ಲಕ್ಷಾಂತರ ಮಂದಿ ಅಲ್ಲಿ ಉದ್ಯೋಗ ಮಾಡುತ್ತ ನೆಮ್ಮದಿ ಕಂಡುಕೊಂಡಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದ ನಂತರ ಭಾರತೀಯ ತಂತ್ರಜ್ಞರ ನೆಮ್ಮದಿ ಹಾಳಾಗಿದೆ.

ಅಮೆರಿಕದ ಪ್ರಜೆಯಾಗಲು ರಹದಾರಿಯಾದ ಗ್ರೀನ್ ಕಾರ್ಡ್ ಕೊಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಈ ಹಿಂದೆ ಲಕ್ಷಾಂತರ ಮಂದಿ ಗ್ರೀನ್ ಕಾರ್ಡ್ ಪಡೆದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರೀನ್ ಕಾರ್ಡ್ ಕೊಡುವ ಪ್ರಕ್ರಿಯೆ ವಿಳಂಬಕ್ಕೆ ಗುರಿಯಾಗಿ ನೂರು ವರ್ಷಗಳಾದರೂ ಸಿಗದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ ಗ್ರೀನ್ ಕಾರ್ಡ್ ಕೊಡುವ ಪದ್ಧತಿಯನ್ನು ಮರುಪರಿಶೀಲನೆ ಮಾಡಲು ಟ್ರಂಪ್ ಸರ್ಕಾರ ನಿರ್ಧರಿಸಿದೆ. ಟ್ರಂಪ್ ಅಽಕಾರಕ್ಕೆ ಬಂದ ನಂತರವಂತೂ ಅಮೆರಿಕ, ಅಮೆರಿಕದವರಿಗೆ, ಅಮೆರಿಕ ಮೊದಲು ಎಂಬ ಘೋಷಣೆಯೊಂದಿಗೆ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗುತ್ತಿದೆ. ಗ್ರೀನ್ ಕಾರ್ಡ್ ಇದ್ದರೆ ಸಾಕು ತಾವು ಅಮೆರಿಕದ ಪ್ರಜೆಯಾಗುವುದು ಖಚಿತ ಎಂದು ಯಾರೂ ತಿಳಿಯಬಾರದು ಎಂದು ಇತ್ತೀಚೆಗೆ ಅಲ್ಲಿನ ವಿದೇಶಾಂಗ ಸಚಿವರು ಬಹಿರಂಗವಾಗಿ ಹೇಳಿದ ನಂತರ ಭಾರತೀಯರಲ್ಲಿ ತಳಮಳ ಆರಂಭವಾಗಿದೆ. ಅದರ ಜೊತೆಗೆ ಈಗಾಗಲೇ ಅಮೆರಿಕದ ಪ್ರಜೆಯಾಗಲು ಅನುಸರಿಸುತ್ತ ಬಂದ ನಿಯಮಗಳಿಗೆ ಟ್ರಂಪ್ ಸರ್ಕಾರ ಬೇರೆ ಅರ್ಥ ಕೊಟ್ಟು ವಿವಾದ ಎಬ್ಬಿಸಿದೆ. ಅಮೆರಿಕದಲ್ಲಿ ಹುಟ್ಟಿದವರೆಲ್ಲಾ ಅಮೆರಿಕದ ಪ್ರಜೆಯಾಗಲು ಸಾಧ್ಯವಿಲ್ಲ, ತಂದೆ, ತಾಯಿಯರಲ್ಲಿ ಒಬ್ಬರಾದರೂ ಅಮೆರಿಕದ ಪ್ರಜೆಯಾಗಿದ್ದರೆ ಮಾತ್ರ ಹುಟ್ಟಿದ ಮಗು ೧೮ ವರ್ಷಗಳ ನಂತರ ಅಮೆರಿಕದ ಪ್ರಜೆಯಾಗಬಹುದು ಎಂಬುದು ಟ್ರಂಪ್ ಆಡಳಿತದ ವಾದ. ಅಕ್ರಮವಾಗಿಯೋ ಅಥವಾ ಕೆಲಸದ ಮೇಲೆಯೋ ತಾತ್ಕಾಲಿಕವಾಗಿ ವಲಸೆ ಬಂದಿದ್ದರೆ ಅವರ ಮಕ್ಕಳು ಅಮೆರಿಕದ ಪ್ರಜೆಯಾಗಲು ಅನರ್ಹರು ಎಂಬುದು ಟ್ರಂಪ್ ಸರ್ಕಾರದ ವಾದ. ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆನೀಡಿದ್ದು, ವಿಚಾರಣೆ ನಡೆಯುತ್ತಿದೆ. ಸರ್ಕಾರದ ಹೊಸ ನೀತಿಯಿಂದ ಭಾರತೀಯರ ಸಾವಿರಾರು ಮಕ್ಕಳು ಅಮೆರಿಕದ ಪ್ರಜೆಯಾಗಬಹುದಾದ ಸಾಧ್ಯತೆಗಳು ಇಲ್ಲವಾಗಿವೆ.

ಅಮೆರಿಕದಲ್ಲಿ ಈಗ ಕೆಲಸ ಮಾಡಬಯಸುವವರು ಅಷ್ಟು ಸುಲಭವಾಗಿ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಅವರು ಮಾಡಬಹುದಾದಂಥ ಕೆಲಸವನ್ನು ಮಾಡುವಂಥ ಅಮೆರಿಕದ ಕೆಲಸಗಾರ ಇಲ್ಲ ಎಂದು ಅವರನ್ನು ನೇಮಿಸಿಕೊಳ್ಳಬಯಸುವ ಕಂಪೆನಿ ಪುರಾವೆ ಸಹಿತ ಸಾಧಿಸಿ ತೋರಿಸಿದರೆ ಮಾತ್ರ ಅನ್ಯ ದೇಶೀಯರಿಗೆ ಅವಕಾಶ ಎಂಬ ಕಾನೂನು ಈಗ ಜಾರಿಯಲ್ಲಿದೆ. ಹೀಗಾಗಿ ಭಾರತೀಯ ತಂತ್ರಜ್ಞರಿಗೆ ಅಲ್ಲಿ ಅವಕಾಶ ಕಡಿಮೆಯಾಗಿದೆ. ಈಗಾಗಲೆ ಕೆಲಸದ ಲೈಸೆನ್ಸ್ ಪಡೆದು ಅಲ್ಲಿ ಕೆಲಸ ಮಾಡುತ್ತಿರುವವರ ವೈಯಕ್ತಿಕ ಮಾಹಿತಿಯನ್ನು ಜಾಲಾಡಲಾಗುತ್ತಿದೆ. ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ಈಗ ಸಂಗ್ರಹಿಸಲಾಗುತ್ತಿದೆ. ಗಾಜಾ ಯುದ್ಧದ ಹಿನ್ನೆಲೆಯಲ್ಲಿ ಪ್ಯಾಲೆಸ್ಟೇನ್ ಪರ ಅಥವಾ ಇಸ್ರೇಲ್ ವಿರೋಧಿ ಪ್ರತಿಭಟನಾ ಪ್ರದರ್ಶನಗಳಲ್ಲಿ ಭಾಗವಹಿಸಿದವರ ಹೆಸರುಗಳನ್ನು ನೀಡಬೇಕೆಂದು ವಿಶ್ವವಿದ್ಯಾನಿಲಯಗಳ ಆಡಳಿತಗಾರರಿಗೆ ತಿಳಿಸಲಾಗಿದೆ. ಅವರ ವಿಸಾವನ್ನು ರದ್ದು ಮಾಡಲಾಗುತ್ತಿದೆ. ಈಗಾಗಲೇ ಒಬ್ಬರು ಭಾರತೀಯರನ್ನು ಬಂಧಿಸಲಾಗಿದೆ. ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸ್ವ ಇಚ್ಛೆಯಿಂದ ಬೇರೆ ದೇಶಕ್ಕೆ ರಾತ್ರೋ ರಾತ್ರಿ ಹೋಗಿದ್ದಾರೆ. ಅಮೆರಿಕ ಮುಕ್ತ ವೈಚಾರಿಕ ಸ್ವಾತಂತ್ರ್ತ್ಯ್ಯ ಮತ್ತು ವಾಕ್ ಸ್ವಾತಂತ್ರ್ಯ ಇರುವ ದೇಶವೆಂದು ವಿದ್ಯಾರ್ಥಿಗಳು ಕೆಲವು ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದರು. ಅದು ಈಗ ಅವರಿಗೆ ಕುತ್ತಾಗಿ ಪರಿಣಮಿಸಿದೆ. ಪ್ಯಾಲೆಸ್ಟೇನೀಯರ ಹಮಾಸ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ಅಥವಾ ಪ್ಯಾಲೆಸ್ಟೇನ್ ಪರ ನಡೆಯುವ ಯಾವುದೇ ಚಟುವಟಿಕೆ ಕಾನೂನು ಬಾಹಿರ ಎಂದು ಅಮೆರಿಕ ಭಾವಿಸುತ್ತದೆ. ಅಮೆರಿಕಕ್ಕೆ ಇಸ್ರೇಲ್ ಮಿತ್ರ ದೇಶ. ಯಹೂದಿಗಳು ಆಪ್ತರು. ಹೀಗಾಗಿ ಯಹೂದಿಗಳ ವಿರುದ್ಧದ ಯಾವುದೇ ಚಟುವಟಿಕೆಯನ್ನು ಅಮೆರಿಕದ ಆಡಳಿತ ಸಹಿಸುವುದಿಲ್ಲ.

ಇನ್ನು ಅಕ್ರಮವಾಗಿ ವಲಸೆ ಹೋದ ಭಾರತೀಯರಿಗೆ ಯಾವ ಗತಿ ಒದಗಿತೆಂಬುದು ಎಲ್ಲರಿಗೆ ತಿಳಿದೇ ಇದೆ. ಅವರನ್ನು ಬಂಽಸಿ ಕೈ ಕಾಲುಗಳಿಗೆ ಚೈನು ಕಟ್ಟಿ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ತಂದು ಬಿಡಲಾಗಿದೆ. ಬೇರೆ ದೇಶಗಳ ಲಕ್ಷಾಂತರ ಮಂದಿ ಅಕ್ರಮ ವಲಸಿಗರು ಅಮೆರಿಕದಲ್ಲಿದ್ದು ಅವರನ್ನೆಲ್ಲಾ ಬಂಽಸಿ ಹೊರಗಟ್ಟುವ ಕೆಲಸ ನಡೆಯುತ್ತಲೇ ಇದೆ.

ಈ ಸಮಸ್ಯೆಗಳು ಸಾಲದೆಂಬಂತೆ ಟ್ರಂಪ್ ಸರಿಸಮ ತೆರಿಗೆ ಹಾಕುವ ಕಾನೂನು ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ. ತೆರಿಗೆ ಅಥವಾ ಸುಂಕದ ವಿಚಾರದಲ್ಲಿ ಅಮೆರಿಕವನ್ನು ಬೇರೆ ದೇಶಗಳು ಶೋಷಣೆ ಮಾಡುತ್ತಿವೆ. ಅಮೆರಿಕದಿಂದ ರಫ್ತಾಗುವ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಅಮೆರಿಕಕ್ಕೆ ಬರುವ ವಸ್ತುಗಳ ಮೇಲಿನ ತೆರಿಗೆ ಕನಿಷ್ಠ ಮಟ್ಟದಲ್ಲಿ ಇದೆ. ಉದಾಹರಣೆಗೆ ಅಮೆರಿಕದಿಂದ ಒಂದು ಕಾರನ್ನು ಭಾರತಕ್ಕೆ ರಫ್ತು ಮಾಡಿದರೆ ಅದರ ಮೇಲೆ ಶೇ.೧೫೦ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದೇ ರೀತಿ ಭಾರತದಿಂದ ಅಮೆರಿಕಕ್ಕೆ ಯಾವುದಾದರೂ ವಸ್ತು ರಫ್ತಾದರೆ ಅದರ ಮೇಲೆ ಅಮೆರಿಕ ವಿಧಿಸಬಹುದಾದ ಸುಂಕ ಶೇ.೩.೫ ಮೀರುವುದಿಲ್ಲ. ಅಮೆರಿಕಕ್ಕೆ ಅಪಾರ ನಷ್ಟ ಉಂಟು ಮಾಡುವ ಈ ದೋಷಪೂರ್ಣ ವ್ಯವಸ್ಥೆ ಕೊನೆಗಾಣಿಸುವ ದಿಸೆಯಲ್ಲಿ ಮುಂದಿನ ಏಪ್ರಿಲ್ ಎರಡರಿಂದ ಸಮಾನ ತೆರಿಗೆ ನಿಯಮವನ್ನು ಟ್ರಂಪ್ ಜಾರಿಗೆ ತಂದಿದ್ದಾರೆ.

ಭಾರತದ ಮೇಲೆ ಅಷ್ಟೇನೂ ಕೆಟ್ಟ ಪರಿಣಾಮವನ್ನು ಈ ನಿಯಮ ತರುವುದಿಲ್ಲವೆಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಭಾರತ ಮತ್ತು ಅಮೆರಿಕದ ನಡುವಣ ವಾರ್ಷಿಕ ವಾಣಿಜ್ಯ ವಹಿವಾಟು ೧೧೯ ಬಿಲಿಯನ್ ಡಾಲರ್ ಇದ್ದು (೨೦೨೪) ಸುಮಾರು ಏಳು ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಈ ನಷ್ಟವನ್ನು ಬೇರೆ ದೇಶಗಳ ರಫ್ತು ವಹಿವಾಟಿನಲ್ಲಿ ಸರಿದೂಗಿಸಿಕೊಳ್ಳಬಹುದೆಂಬುದು ತಜ್ಞರ ಅಭಿಪ್ರಾಯ. ಸಮಾನಾಂತರ ತೆರಿಗೆ ಜಾರಿಗೆ ಬರಲು ಇನ್ನು ಕೆಲವೇ ದಿನಗಳಿರುವಂತೆ ಟ್ರಂಪ್ ಸಾರಿಗೆ ವಾಹನ ರಫ್ತು-ಆಮದು ಕುರಿತಂತೆ ಮತ್ತೊಂದು ಆದೇಶ ಹೊರಡಿಸಿ ಆಘಾತ ಉಂಟುಮಾಡಿದ್ದಾರೆ. ಬೇರೆ ದೇಶಗಳಿಂದ ಆಮದಾಗುವ ಕಾರು ಮತ್ತಿತರ ವಾಹನಗಳ ಮೇಲೆ ಶೇ.೨೫ರಷ್ಟು ಸುಂಕವನ್ನು ಏಪ್ರಿಲ್ ಎರಡರಿಂದ ಹಾಕಲಾಗುವುದು. ಬಿಡಿಭಾಗಗಳ ಮೇಲೂ ಅಷ್ಟೇ ಪ್ರಮಾಣದ ಸುಂಕ ವಿಧಿಸಲಾಗುವುದು. ಈ ಆದೇಶ ಸ್ವಲ್ಪಮಟ್ಟಿಗೆ ಭಾರತದ ವಾಹನ ಮತ್ತು ಬಿಡಿಭಾಗಗಳ ತಯಾರಕರ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂದು ಅಂದಾಜು ಮಾಡಲಾಗಿದೆ. ಟಾಟಾ ಸಂಸ್ಥೆ ಜಾಗ್ವಾರ್ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಬಿಡಿಭಾಗಗಳನ್ನೂ ಇಲ್ಲಿಯೇ ಉತ್ಪಾದಿಸಲಾಗುತ್ತದೆ. ಈ ಕಾರಿಗೆ ಸಂಬಂಽಸಿದಂತೆ ಸಮಸ್ಯೆ ತಲೆದೋರಬಹುದು. ಇದಲ್ಲದೆ ಜಪಾನ್, ಫ್ರಾನ್ಸ್, ದಕ್ಷಿಣ ಕೊರಿಯಾದ ಕಂಪೆನಿಗಳು ಭಾರತದಲ್ಲಿ ಕಾರುಗಳನ್ನು ಉತ್ಪಾದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತವೆ. ಅವುಗಳ ಪ್ರಮಾಣ ಕಡಿಮೆ ಇದ್ದರೂ ಕೆಟ್ಟ ಪರಿಣಾಮವಂತೂ ಗ್ಯಾರಂಟಿ. ಟ್ರಂಪ್ ಅವರ ಈ ನಿರ್ಧಾರ ವಾಹನ ಉತ್ಪಾದನಾ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ. ಈ ನಿಯಮದಿಂದ ಅಮೆರಿಕದಲ್ಲಿ ಉತ್ಪಾದನೆಯಾದ ಕಾರುಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ ಎಂಬುದು ಟ್ರಂಪ್ ಲೆಕ್ಕಾಚಾರ. ಈ ಹೊಸ ನಿಯಮದಿಂದಾಗಿ ಜಪಾನ್, ಮೆಕ್ಸಿಕೊ, ಕೊರಿಯಾ, ಫ್ರಾನ್, ಜರ್ಮನಿಯ ಕಂಪೆನಿಗಳು ಅಮೆರಿಕದಲ್ಲಿಯೇ ಬಂಡವಾಳ ಹೂಡಿ ಕಾರು ಮತ್ತು ಇತರ ವಾಹನಗಳನ್ನು ತಯಾರಿಸಿ ಮಾರಾಟ ಮಾಡಬೇಕಾಗಿದೆ. ಹೀಗೆ ಮಾಡಲು ಸಾಕಷ್ಟು ಸಮಯ ಹಿಡಿಯಬಹುದು. ಹೀಗಾಗಿ ಈ ಕಂಪೆನಿಗಳು ಅಮೆರಿಕದ ಮಾರುಕಟ್ಟೆಯನ್ನು ನಿರ್ಲಕ್ಷಿಸಿ ಬೇರೆ ದೇಶಗಳ ಕಡೆಗೆ ಗಮನಕೊಡಬಹುದು. ಈ ಬೆಳವಣಿಗೆಯಾದರೆ ನಷ್ಟ ಆಗುವುದು ಅಮೆರಿಕಕ್ಕೆ. ಅದೇ ರೀತಿ ಚೀನಾದಲ್ಲಿ ಉತ್ಪಾದನೆಯಾದ ವಸ್ತುಗಳ ಮೇಲೆ ಹಾಕುವ ತೆರಿಗೆಯಿಂದ ಆಗಬಹುದಾದ ಪರಿಣಾಮವೂ ಇಂಥದೇ ಆಗಬಹುದು.

ಅಮೆರಿಕದ ಬದಲಾದ ವಾಣಿಜ್ಯ ನೀತಿಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕದ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಈ ವಾಣಿಜ್ಯ ಮಾತುಕತೆಗಳು ಏಪ್ರಿಲ್ ಎರಡರ ಒಳಗೆ ಮುಗಿಯಲಿವೆ. ಸಮಾನ ಸುಂಕ ನಿಯಮದ ವ್ಯಾಪ್ತಿಗೆ ಬರದಂಥ ತೆರಿಗೆ ನೀತಿಯನ್ನು ರೂಪಿಸುವುದು ಭಾರತದ ಉದ್ದೇಶ. ಭಾರತ ತನ್ನ ಈ ವರ್ಷದ ಬಜೆಟ್‌ನಲ್ಲಿ ಅಮೆರಿಕಕ್ಕೆ ರಫ್ತಾಗುವ ಅನೇಕ ವಸ್ತುಗಳ ಮೇಲಿನ ಸುಂಕವನ್ನು ತಗ್ಗಿಸಿದೆ. ಆದರೆ ಅದು ಅಮೆರಿಕಕ್ಕೆ ತೃಪ್ತಿ ತಂದಿಲ್ಲ. ಎರಡೂ ದೇಶಗಳಿಗೆ ಒಪ್ಪಿತವಾದ ತೆರಿಗೆ ನಿಗದಿ ಮಾಡುವ ದಿಕ್ಕಿನಲ್ಲಿ ಮಾತುಕತೆಗಳು ನಡೆಯುತ್ತಿವೆ.  ಟ್ರಂಪ್ ಅಧಿಕಾರಕ್ಕೆ ಬಂದನಂತರ ತೆರಿಗೆ ವಿಚಾರದಲ್ಲಿ ವಿಶ್ವದಲ್ಲಿ ಮುಸುಕಿನ ಯುದ್ಧವೇ ನಡೆಯುತ್ತಿದೆ. ಒಂದು ರೀತಿಯಲ್ಲಿ ಮೇಲುಗೈ ಸಾಧಿಸಲು ಸುಂಕದ ಹೆಸರಿನಲ್ಲಿ ನಡೆಯುತ್ತಿರುವ ಯುದ್ಧ ಇದು. ಹೆಚ್ಚು ಸುಂಕ ಹೇರಿ ಮಾತುಕತೆಗೆ ಬರುವಂತೆ ಮಾಡುವುದು ಮತ್ತು ಆ ಮೂಲಕ ತೆರಿಗೆ ಹೆಚ್ಚಿಸಿ ಅಮೆರಿಕ್ಕೆ ಲಾಭ ತಂದುಕೊಡುವುದು ಟ್ರಂಪ್ ಅನುಸರಿಸುತ್ತಿರುವ ಮಾರ್ಗ. ತಮ್ಮ ಹೊಸ ತೆರಿಗೆ ನೀತಿಯಿಂದ ಅಮೆರಿಕಕ್ಕೆ ವಾರ್ಷಿಕವಾಗಿ ನೂರು ಬಿಲಿಯನ್ ಡಾಲರ್ ಹೆಚ್ಚು ಲಾಭ ಬರಲಿದೆ ಎಂದು ಟ್ರಂಪ್ ಹೇಳುತ್ತಾರೆ. ಆದರೆ ಈ ಯುದ್ಧದ ಪರಿಣಾಮ ಹೀಗೇ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಮೆಕ್ಸಿಕೋ, ಕೆನಡಾ, ಚೀನಾ ಮತ್ತು ಯೂರೋಪ್ ಮೇಲೆಯೂ ಹೆಚ್ಚು ಸುಂಕ ವಿಧಿಸಲಾಗಿದೆ. ಟ್ರಂಪ್ ವಿರುದ್ಧ ಈ ದೇಶಗಳ ನಾಯಕರು ತಿರುಗಿಬಿದ್ದಿದ್ದು ಅವರೂ ಪ್ರತಿಯಾಗಿ ಸುಂಕ ಹಾಕಿದ್ದಾರೆ. ಇದರಿಂದ ಆಗಬಹುದಾದ ದುಷ್ಪರಿಣಾಮ ಬೆಲೆ ಏರಿಕೆ, ಹಣದುಬ್ಬರ. ಆದರೆ ಅದೆಲ್ಲಾ ತಾತ್ಕಾಲಿಕವಾದುದು. ಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಕಾದು ನೋಡಬೇಕು.

” ಟ್ರಂಪ್ ಸರಿಸಮ ತೆರಿಗೆ ಹಾಕುವ ಕಾನೂನು ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ. ತೆರಿಗೆ ಅಥವಾ ಸುಂಕದ ವಿಚಾರದಲ್ಲಿ ಅಮೆರಿಕವನ್ನು ಬೇರೆ ದೇಶಗಳು ಶೋಷಣೆ ಮಾಡುತ್ತಿವೆ. ಅಮೆರಿಕದಿಂದ ರಫ್ತಾಗುವ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಅಮೆರಿಕಕ್ಕೆ ಬರುವ ವಸ್ತುಗಳ ಮೇಲಿನ ತೆರಿಗೆ ಕನಿಷ್ಠ ಮಟ್ಟದಲ್ಲಿ ಇವೆ. ಉದಾಹರಣೆಗೆ ಅಮೆರಿಕದಿಂದ ಒಂದು ಕಾರನ್ನು ಭಾರತಕ್ಕೆ ರಫ್ತು ಮಾಡಿದರೆ ಅದರ ಮೇಲೆ ಶೇ.೧೫೦ರಷ್ಟು ಸುಂಕ ವಿಽಸಲಾಗುತ್ತಿದೆ. ಇದೇ ರೀತಿ ಭಾರತದಿಂದ ಅಮೆರಿಕಕ್ಕೆ ಯಾವುದಾದರೂ ವಸ್ತು ರಫ್ತಾದರೆ ಅದರ ಮೇಲೆ ಅಮೆರಿಕ ವಿಽಸಬಹುದಾದ ಸುಂಕ ಶೇ.೩.೫ ಮೀರುವುದಿಲ್ಲ.”

ಆಂದೋಲನ ಡೆಸ್ಕ್

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

5 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

6 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

6 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

6 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

6 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

7 hours ago