ಅಂಬೇಡ್ಕರ್- ನೆಹರೂ ಇಲ್ಲದೆ ಹೋಗಿದ್ದರೆ ಶೂದ್ರಸಮುದಾಯ ಅಕ್ಷರವಂಚಿತವಾಗುತ್ತಿತ್ತು

ನೆಹರೂ ವ್ಯಕ್ತಿತ್ವವ ಕುಬ್ಜವಾಗಿಸುವುದು ಕುಬ್ಜ ಕೃತ್ಯ!

ಕನಸೊಂದು ಒಡೆದು ಚೂರಾಯಿತು, ಹಾಡೊಂದು ದನಿ ಕಳೆದುಕೊಂಡಿತು, ಬೆಳಕೊಂದು ಅನಂತದಲ್ಲಿ ಲೀನವಾಯಿತು ಎಂದಿದ್ದರು ವಾಜಪೇಯಿ.
ಇತಿಹಾಸವನ್ನು ತಿರುಚಿ ಬರೆಯಲು ಹೊರಟವರು ದೇಶದ ಎತ್ತರದ ನಾಯಕರಲ್ಲೊಬ್ಬರಾದ ಜವಾಹರಲಾಲ್ ನೆಹರೂ ಹೆಸರಿಗೆ ಮಸಿ ಬಳಿಯುವ ಅವರನ್ನು ಚರಿತ್ರೆಯ ಪುಟಗಳಿಂದ ಅಳಿಸಿ ಹಾಕುವ ಕೃತ್ಯದಲ್ಲಿ ಹಗಲಿರುಳು ತೊಡಗಿದ್ದಾರೆ. ಅವರನ್ನು ಕುಬ್ಜರನ್ನಾಗಿ ತೋರಿದರೆ ತಾವು ಎತ್ತರದವರೆಂದು ಕಾಣಬಹುದು ಎಂಬ ಭ್ರಮೆ ಅವರದು.

ಸಾಮಾಜಿಕ ಅಂತರ್ಜಾಲ ತಾಣಗಳ ಆವರಣಗಳಲ್ಲಿ ನೆಹರೂ ಅವರನ್ನು ಖಳರನ್ನಾಗಿ ಚಿತ್ರಿಸುವ ಬೃಹತ್ ಉದ್ಯಮವೇ ತಲೆೆುಂತ್ತಿದೆ.
ಗಾಂಧೀಜಿ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಿಕೆ, ಜಾತ್ಯತೀತತೆಯ ಪ್ರತಿಪಾದನೆ ಹಾಗೂ ಹಿಂದೂ ಸಂಹಿತೆಯ ವಿಧೇಯಕಗಳನ್ನು ಬೆಂಬಲಿಸಿ ಅವುಗಳನ್ನು ಜಾರಿ ಮಾಡಿದ ನೆಹರೂ ಅವರನ್ನು ಆರೆಸ್ಸೆಸ್ ಎಂದಿಗೂ ಕ್ಷಮಿಸದು. ಹಿಂದೂ ಸಂಹಿತೆಯ ಪ್ರಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರೇ. ಆದರೆ ಅದನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ದೊರಕಿಸುವಲ್ಲಿ ನೆಹರೂ ಪಾತ್ರ ನಿರ್ಣಾಯಕ. ಹಿಂದೂ ಸಮಾಜದ ಅತ್ಯಂತ ದಮನಕಾರಿ ಆಯಾಮಗಳನ್ನು ಕಿತ್ತು ಹಾಕುವ ಈ ವಿಧೇಯಕಗಳನ್ನು ಸಂಘ ಪರಿವಾರ ತೀವ್ರವಾಗಿ ವಿರೋಧಿಸಿತ್ತು. ಬಹುಪತ್ನಿತ್ವವನ್ನು ನಿಷೇಧಿಸುವ, ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುವ, ವಿವಾಹ ವಿಚ್ಛೇದನದ ಪ್ರಕ್ರಿಯೆಯನ್ನು ಸರಳಗೊಳಿಸುವ, ಕುಟುಂಬದಲ್ಲಿ ಅನುವಂಶಿಕ ಆಸ್ತಿಯ ಹಂಚಿಕೆಯ ಹೊತ್ತಿನಲ್ಲಿ ಹೆಣ್ಣುಮಕ್ಕಳನ್ನು ಗಂಡುಮಕ್ಕಳಿಗೆ ಸರಿಸಮಾನವಾಗಿ ಪರಿಗಣಿಸುವ ಕ್ರಾಂತಿಕಾರಿ ಸುಧಾರಣೆಗಳಿಗೆ ಈ ವಿಧೇಯಕಗಳು ದಾರಿ ಮಾಡಿದ್ದವು.

ನೆಹರೂ ಅವರ ಅಪಾರ ಕೊಡುಗೆಯನ್ನು ಅಳಿಸಿ ಹಾಕುವ ದುಷ್ಟ ಪ್ರಯತ್ನಗಳು ಫಲ ನೀಡುವುದಿಲ್ಲ. ಹಂಗಾಮಿ ಪ್ರಧಾನಿ ಮತ್ತು ಪೂರ್ಣಪ್ರಮಾಣದ ಪ್ರಧಾನಿಯಾಗಿ 18 ವರ್ಷಗಳ ಅವಧಿ ಭಾರತದ ಪ್ರಗತಿಯ ಪರ್ವ. ತಮ್ಮನ್ನು ದೇಶದ ಪ್ರಧಾನ ಸೇವಕ (prime servant of the nation) ಎಂದು ಕರೆದುಕೊಂಡ ಮೊದಲ ಪ್ರಧಾನಿ ನೆಹರು.

ನೆಹರೂ ಅವರನ್ನು ಟೀಕಿಸಿದವರ ಮೇಲೆ ದೇಶದ್ರೋಹದ ಎಫ್.ಐ.ಆರ್.ಗಳು ದಾಖಲಾಗುತ್ತಿರಲಿಲ್ಲ. ಸ್ವವಿಮರ್ಶೇ ಮತ್ತು ಟೀಕೆಯನ್ನು ಸ್ವಾಗತಿಸುತ್ತಿದ್ದ ಪ್ರಧಾನಿ ಅವರಾಗಿದ್ದರು. ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವಂತಹ ನಾಲ್ಕು ಸಾವಿರ ವ್ಯಂಗ್ಯಚಿತ್ರಗಳನ್ನು
ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ಶಂಕರ್ಸ್ ವೀಕ್ಲಿಯಲ್ಲಿ ಪ್ರಕಟಿಸಿದ್ದರು. ವಿಡಂಬನೆ-ವಿನೋದ ತಮ್ಮನ್ನು ತಿವಿದರೂ ಸಹಿಸಿ ಸವಿದು ನಗುವ ಉದಾತ್ತ ಗುಣ ನೆಹರೂಗಿತ್ತು.

ಪ್ರಜೆಗಳಿಗೆ ನಗೆಯಾಡುವ ಅವಕಾಶಗಳನ್ನು ನಿರಾಕರಿಸುವುದು ಸರ್ವಾಧಿಕಾರಿ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸರ್ವಾಧಿಕಾರಿಯನ್ನು ಸದಾ ಸರ್ವದಾ ಕಾಡುತ್ತಿರುತ್ತದೆ. ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವನ್ನು ಜರ್ಮನರು ನೋಡಲಿಲ್ಲ ಎನ್ನುತ್ತಾರೆ ಶಂಕರಪಿಳ್ಳೆ.

ಭಾರತ ಉಸಿರಾಡಿರುವುದು ತನ್ನ ಹಳ್ಳಿಗಳಲ್ಲಿ ಎಂಬ ಗಾಂಧೀಜಿ ಮಾತನ್ನು ನೆಹರೂ ಗಂಭೀರವಾಗಿ ಪರಿಗಣಿಸಿದ್ದರು. ಭಾಕ್ರಾನಂಗಲ್, ಹಿರಾಕುಡ್, ನಾಗಾರ್ಜುನಸಾಗರದಂತಹ ಭಾರಿ ಜಲಾಶಯಗಳನ್ನು ನಿರ್ಮಿಸಿ ವ್ಯವಸಾಯಕ್ಕೆ ಉಸಿರು ತುಂಬಿದರು. ಭಾರಿ ಕೈಗಾರಿಕೆಗಳ ಸ್ಥಾಪಿಸಿದರು. ವಿಶ್ವವಿದ್ಯಾಲಯಗಳು, ಐಐಟಿ, ಐಐಎಂಗಳು ಮಾತ್ರವಲ್ಲದೆ ಶಾಲಾ ಶಿಕ್ಷಣದ ಗಟ್ಟಿ ತಳಪಾಯ ಹಾಕಿದರು. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸ್ಥಾಪಿಸಿದರು. ಗಾಂಧೀಜಿಯ ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪಂಚಾಯಿತಿ ರಾಜ್ಯ ಸಂಸ್ಥೆಗಳನ್ನು ನೆಟ್ಟರು. ದೇಶ ವಿಭಜನೆ, ಗಾಂಧಿ ಹತ್ಯೆಯ ತಳಮಳಗಳಲ್ಲಿ ತಮ್ಮ ಸಮರ್ಥ ಸಂಗಾತಿಗಳ ಸಹಕಾರದೊಂದಿಗೆ ದಿಕ್ಕು ತಪ್ಪದಂತೆ ದೇಶವನ್ನು ಮುನ್ನಡೆಸಿದರು. ಕೋಮುವಾದ ಮತ್ತು ಧಾರ್ಮಿಕ ಧೃವೀಕರಣವನ್ನು ದೂರ ಇರಿಸಿ ಲೋಕಸಭಾ ಚುನಾವಣೆಗಳ ಜರುಗಿಸಿದರು. ಎಲ್ಲಿಯವರೆಗೆ ನಾನು ಪ್ರಧಾನಮಂತ್ರಿಯಾಗಿರುತ್ತೇನೋ, ಅಲ್ಲಿಯತನಕ ನಮ್ಮ ನೀತಿ ನಿರ್ಧಾರಗಳನ್ನು ಕೋಮುವಾದದ ಸೋಂಕಿನಿಂದ ಕಾಪಾಡುತ್ತೇನೆ. ಬರ್ಬರ ಮತ್ತು ಅನಾಗರಿಕ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಸಾರಿದ್ದರು. ಪಾಕಿಸ್ತಾನವು ಮುಸ್ಲಿಮ್ ಪಾಕಿಸ್ತಾನ ಆದ ಮಾದರಿಯಲ್ಲೇ ಭಾರತ ಹಿಂದು ಪಾಕಿಸ್ತಾನ ಆಗುವ ಅಪಾಯವಿತ್ತು. ಇದೀಗ ಸನ್ನಿಹಿತವಾಗಿರುವ ಈ ಅನಾಹುತವನ್ನು ಅಂದು ಹತ್ತಿರ ಸುಳಿಯಲೂ ಬಿಡಲಿಲ್ಲ.

ಜನತಂತ್ರವನ್ನು ಭದ್ರವಾಗಿ ತಳವೂರಿಸಿದರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕನಸು ಕಂಡ ಅವರು ಸಮಾಜವಾದಿ ಸಮಾಜ ನಿರ್ಮಿತಿಯ ದಾರಿಯಲ್ಲಿ ನಡೆದರು. ಏಕತೆ ಸಮಗ್ರತೆಯಲ್ಲಿ ದೇಶವನ್ನು ಗಟ್ಟಿಯಾಗಿ ಹಿಡಿದಿಡಲು ಜಾತ್ಯತೀತ ತತ್ವವನ್ನು ಅನುಸರಿಸಿದರು. ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಲು ಶ್ರಮಿಸಿದರು. ವಿಜ್ಞಾನ-ತಂತ್ರಜ್ಞಾನದ ನೆರವಿನೊಂದಿಗೆ ಆಧುನಿಕ ದೇಶವೊಂದನ್ನು ಕಟ್ಟಲು ಮುಂದಾದರು. ಬಾಹ್ಯಾಕಾಶ ಸಂಶೋಧನೆ ಮತ್ತು ಪರಮಾಣು ಜನೆಗಳಿಗೆ ಓನಾಮ ಹಾಕಿದರು.
ನೆಹರೂ ಹಾಕಿದ ಈ ಆಡಿಪಾಯಗಳನ್ನು ಕದಲಿಸಿ ಕೆಡವುವ ಮನೆಹಾಳ ಕೃತ್ಯ ಜರುಗಿದೆ.

ಪ್ರಧಾನಿಯ ಮುಖ್ಯ ಸುರಕ್ಷತಾ ಅಧಿಕಾರಿಯಾಗಿ ಎಂಟು ವರ್ಷಗಳ ಕಾಲ ನೆಹರೂ ಅವರ ನೆರಳಿನಂತೆ ಜೀವಿಸಿದ ಹಿರಿಯ ಅಧಿಕಾರಿ ಕೆ.ಎಫ್ ರುಸ್ತಮ್ ಜೀ ಬರೆದಿಟ್ಟಿರುವ ಸಾವಿರಾರು ಪುಟಗಳ ದಿನಚರಿಯ ಹಸ್ತಪ್ರತಿಗಳು ನೆಹರೂ ಅವರ ಕುರಿತು ಕಂಡು ಕೇಳಿ ಅರಿಯದ ಹಲವು ಹತ್ತು ಹೊಸ ವಿಷಯಗಳ ಕುರಿತು ಬೆಳಕು ಚೆಲ್ಲುತ್ತವೆ. ಪಿ.ವಿ.ರಾಜಗೋಪಾಲ್ ಎಂಬ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಈ ದಿನಚರಿಗಳಿಗೆ ನಿರ್ದಿಷ್ಟ ರೂಪ ಕೊಟ್ಟು ‘ನಾನು ನೆಹರೂ ನೆರಳಾಗಿದ್ದೆ’ ಎಂಬ ಹೆಸರಿನ ಜೀವನಚರಿತ್ರೆಯನ್ನು ಪ್ರಕಟಿಸಿದ್ದಾರೆ.

ಒಂದು ದೇಶದ ಮಾನವ ಸಂಪನ್ಮೂಲವನ್ನು, ಅಲ್ಲಿನ ಅರಿವಿನ ಸಮಾಜವನ್ನು, ಸಮ ಸಮಾಜವನ್ನು ರೂಪಿಸಿ ಬೆಳೆಸುವ ಅಡಿಪಾಯ ಶಿಕ್ಷಣ. ಭಾರತದಲ್ಲಿ ಈ ಅಡಿಪಾಯಕ್ಕೇ ಗೆದ್ದಲು ಹಿಡಿದಿದೆ. ಮುಕ್ತಚಿಂತನೆ, ಸ್ವಾಯತ್ತತೆ, ಗುಣಮಟ್ಟವನ್ನು ರಾಜಕೀಯ ಹಸ್ತಕ್ಷೇಪ ಹಾಳುಗೆಡವಿದೆ. ಗೆದ್ದಲನ್ನು ಕೊಡವಿ ಕಟ್ಟುವ ಕೆಲಸ ನಡೆಯುತ್ತಿಲ್ಲ. ಬದಲಿಗೆ ಇನ್ನಷ್ಟು ಗೆದ್ದಲು ಹಿಡಿಸುವ ಕೆಲಸ ಬಿಡುವಿಲ್ಲದೆ ಸಾಗಿದೆ.

ಒಂದೆಡೆ ಉನ್ನತ ಶಿಕ್ಷಣ ವ್ಯವಸ್ಥೆಯ ಅಧೋಗತಿಯನ್ನು ನೋಡುತ್ತಿದ್ದೇವೆ. ಇನ್ನೊಂದೆಡೆ ಸಮಾಜದ ಅತ್ಯಂತ ಕೆಳವರ್ಗಗಳ ಜನರ ಜೇಬುಗಳಿಗೂ ಎಟುಕುವಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹೆಸರಾಂತ ಸರ್ಕಾರಿ ವಿಶ್ವವಿದ್ಯಾಲಯಗಳ ಹೆಸರಿಗೆ ಮಸಿ ಬಳಿದು ಅವುಗಳಿಗೆ ಬೀಗ ಜಡಿಯುವ ಹುನ್ನಾರ ನಡೆಯುತ್ತಿದೆ. ಮುಕ್ತ ಸಂವಾದಕ್ಕೆ ಮತ್ತು ಪ್ರಶ್ನಿಸುವುದಕ್ಕೆ ಅವಕಾಶವಿರುವ ಈ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಕೆಡವಲಾಗುತ್ತಿದೆ. ಫೇಕ್ ನ್ಯೂಸ್ ಹಬ್ಬಿಸುವ ‘ವಾಟ್ಸ್ಯಾಪ್ ಯೂನಿವರ್ಸಿಟಿ’ಗಳನ್ನು ದೇಶದ ಉದ್ದಗಲಕ್ಕೆ ವ್ಯವಸ್ಥಿತವಾಗಿ ನಾಯಿ ಕೊಡೆಗಳಂತೆ ಎಬ್ಬಿಸಲಾಗುತ್ತಿದೆ.

ಅಂಬೇಡ್ಕರ್-ನೆಹರೂ ಇಲ್ಲದೆ ಹೋಗಿದ್ದರೆ ಆ ದೇಶದ ಶೂದ್ರಸಮುದಾಯ ಅಕ್ಷರವಂಚಿತವಾಗಿೆುೀಂ ಉಳಿಯಬೇಕಾಗಿರುತ್ತಿತ್ತು. ಭಾರತದ ಕುರಿತು ಅಪಾರ ಹೆಮ್ಮೆ ಅಭಿಮಾನವನ್ನು ಹೊಂದಿದ್ದ ಅಪ್ಪಟ ದೇಶಪ್ರೇಮಿ ಅವರು. ಸ್ವಾತಂತ್ರತ್ಯೃ ಚಳವಳಿಯ ಮುಂಚೂಣಿಯಲ್ಲಿದ್ದ ನೆಹರೂ ಆ ಕಾರಣಕ್ಕಾಗಿ ಒಟ್ಟು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಲ್ಲಿದ್ದು ಅಪಾರ ಓದಿನ ಮೂಲಕ ಆಳದ ತಿಳಿವಳಿಕೆ ಸಂಪಾದಿಸಿದರು.
‘ಮಹಾನ್ ದೇಶವೊಂದರ ಹೆಮ್ಮೆಯ ನಾಗರಿಕರು ನಾವು. ನಮ್ಮ ಸಂಸ್ಕ ೃತಿ, ಪರಂಪರೆಗಳು ನಮ್ಮ ಎದೆ ಉಬ್ಬಿಸುತ್ತವೆ. ಆದರೆ ಈ ಹೆಮ್ಮೆ ಹಮ್ಮುಗಳು ನಮ್ಮ ಹಲವು ದೌರ್ಬಲ್ಯಗಳು ವೈಫಲ್ಯಗಳನ್ನು ಮರೆಮಾಚಕೂಡದು. ಅವುಗಳನ್ನು ನಿವಾರಿಸಿಕೊಳ್ಳುವ ನಮ್ಮ ಆಶಯದ ಮೇಲೆ ಪರದೆ ಎಳೆಯಕೂಡದು. ಬಾರತದಂಥ ದೇಶದಲ್ಲಿ ಹಲವು ನಂಬುಗೆಗಳು – ಧರ್ಮಗಳು ಇವೆ. ಜಾತ್ಯತೀಯತೆಯಿರದೇ ಯಾವ ರಾಷ್ಟ್ರೀಯತೆಯನ್ನು ಕಟ್ಟಲು ಸಾಧ್ಯವಿಲ್ಲ’ ಎಂದಿದ್ದರು. ಹೋಗಿ ಬರ್ತೇನಜ್ಜ ಹೋಗಿ ಬರ್ತೇನೆ, ನಿನ್ನ ಪಾದದ ಧೂಳಿ ನನ್ನ ಹಣೆ ಮೇಲಿರಲಿ, ಕಣ್ಣೊಳಗೆ ಮಾತ್ರ ಅದು ಬೀಳದಿರಲಿ ಎಂಬ ಚಂದ್ರಶೇಖರ ಪಾಟೀಲರ ಕವಿತೆೊಂಂದರ ಸಾಲುಗಳು ನೆನಪಿಗೆ ತಂದು ಕೊಡುವ ನಿಲುವಿದು.

‘ನಾನು ನೆಹರೂ ನೆರಳಾಗಿದ್ದೆ’ (i was nehru’s shadow) ಎಂಬ ಆತ್ಮಚರಿತ್ರೆಯೊಂದರ ಪ್ರಕಾರ ಒಂದು ಹಂತದಲ್ಲಿ ರಾಜೀನಾಮೆಗೆ ಮುಂದಾಗಿದ್ದರಂತೆ ನೆಹರೂ.

ಕಾಂಗ್ರೆಸ್ಸಿಗರ ಅಧಿಕಾರದ ಹಪಾಹಪಿ, ಭ್ರಷ್ಚಾಚಾರ, ಅಂತಃಕಲಹ, ಗುಂಪುಗಾರಿಕೆಯಿಂದ ಅವರು ರೋಸಿ ಹೋಗಿದ್ದರು. ಒಂದೆಡೆ ಭ್ರಷ್ಟ ಕಾಂಗ್ರೆಸ್ಸಿಗರ ಮೇಲೆ ದೊಣ್ಣೆ ಬೀಸಿ ನಿಷ್ಠುರ ಕಟ್ಟಿಕೊಳ್ಳಲು ಹಿಂಜರಿಕೆ. ಮತ್ತೊಂದೆಡೆ ಹಿಂದು ಮಹಾಸಭಾ ತಮ್ಮ ಮೇಲೆ ನಡೆಸಿದ್ದ ಅಪಪ್ರಚಾರ. ಕೋಮುವಾದಿ ಪಕ್ಷಗಳು ಗಳಿಸಿಕೊಳ್ಳತೊಡಗಿದ್ದ ಜನಪ್ರಿಯತೆ, ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆಯುವ ಕುರಿತು ಜನಸಂಘ ಎತ್ತಿದ ತಕರಾರು ನೆಹರೂ ಮನಸ್ಸನ್ನು ಘಾಸಿಗೊಳಿಸಿತ್ತು. ಇಷ್ಟೇ ಸಾಕಿತ್ತು ಅವರ ಶಸ್ತ್ರಸನ್ಯಾಸಕ್ಕೆ.

ದಿಲ್ಲಿ ಮಹಾನಗರಪಾಲಿಕೆಯ ಚುನಾವಣೆಗಳಲ್ಲಿ ಜನಸಂಘ ಅತಿಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದಾಗಲೇ ಗೋಡ್ಸೆ ಗುಂಡಿಗೆ ಬಲಿಯಾಗಿದ್ದ ಗಾಂಧೀಜಿಗೆ ದೇಶದ ತಂದೆ ಎಂಬ ಬಿರುದು ತಗುಲಿಸುವುದು ತರವಲ್ಲ ಎಂದು ಸಂಗತಿಯನ್ನು ವಿವಾದದ ಮಸೆತಕ್ಕೆ ಒಡ್ಡಿತ್ತು ಜನ ಸಂಘ. ಬಂಗಾಳದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ್ದರು. ಖಾಸಗಿ ವಿಮಾ ಕಂಪನಿಗಳನ್ನು ರಾಷ್ಟ್ರೀಕರಿಸಿ ತಲೆ ಎತ್ತಿದ ಭಾರತೀಯ ಜೀವ ವಿಮಾ ನಿಗಮ ಹಗರಣವನ್ನು ಹುಟ್ಟಿ ಹಾಕಿ ಅರ್ಥಮಂತ್ರಿ ರಾಜೀನಾಮೆ ನೀಡಿದ್ದರು. ಪಂಜಾಬ್?, ರಾಜಸ್ತಾನ, ಮೈಸೂರು ರಾಜ್ಯಗಳ ಕಾಂಗ್ರೆಸ್ ಒಳಜಗಳಗಳು ಪಕ್ಷದ ಪ್ರತಿಷ್ಠೆಗೆ ಮಸಿ ಬಳಿದಿದ್ದವು. ಎಐಸಿಸಿಯ ಮನೆೊಂಳಕ್ಕೆ ಅಶಿಸ್ತು, ಅಧಿಕಾರ ಲಾಲಸೆ, ಆಲಸ್ಯ, ನಿಷ್ಕ್ರಿಯತೆ ತೂರಿಕೊಂಡಿದ್ದವು. ಕಾಂಗ್ರೆಸ್ಸಿಗರ ವಿರುದ್ಧ ಕಾಂಗ್ರೆಸ್ಸಿಗರೇ ಆಪಾದನೆಗಳನ್ನು ಹೊರಿಸತೊಡಗಿದ್ದರು. ಈ ಆಪಾದನೆಗಳಿಗೆ ಸಮರ್ಥನೆ ಇರಲಿಲ್ಲ ಎಂಬುದು ನೆಹರು ಅನಿಸಿಕೆ ಆಗಿತ್ತು.

ಪ್ರಧಾನಿಯ ಮುಖ್ಯ ಸುರಕ್ಷತಾ ಅಧಿಕಾರಿಯಾಗಿ ಎಂಟು ವರ್ಷಗಳ ಕಾಲ ನೆಹರೂ ಅವರ ನೆರಳಿನಂತೆ ಜೀವಿಸಿದ ಹಿರಿಯ ಅಧಿಕಾರಿ ಕೆ.ಎಫ್ ರುಸ್ತಮ್ ಜೀ ಬರೆದಿಟ್ಟಿರುವ ಸಾವಿರಾರು ಪುಟಗಳ ದಿನಚರಿಯ ಹಸ್ತಪ್ರತಿಗಳು ನೆಹರೂ ಅವರ ಕುರಿತು ಕಂಡು ಕೇಳಿ ಅರಿಯದ ಹಲವು ಹತ್ತು ಹೊಸ ವಿಷಯಗಳ ಕುರಿತು ಬೆಳಕು ಚೆಲ್ಲುತ್ತವೆ. ಪಿ.ವಿ.ರಾಜಗೋಪಾಲ್ ಎಂಬ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಈ ದಿನಚರಿಗಳಿಗೆ ನಿರ್ದಿಷ್ಟ ರೂಪ ಕೊಟ್ಟು ‘ನಾನು ನೆಹರೂ ನೆರಳಾಗಿದ್ದೆ’ ಎಂಬ ಹೆಸರಿನ ಜೀವನಚರಿತ್ರೆಯನ್ನು ಪ್ರಕಟಿಸಿದ್ದಾರೆ.

ನೆಹರೂ ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರವೇ ಅವರ ಕೆಲವು ಸಣ್ಣತನಗಳು, ಒರಟು ಬುದ್ಧಿ ದುರಹಂಕಾರ ಹಾಗೂ ಸ್ವಾರ್ಥದ ಪರಿಚಯ ಇದ್ದೀತು. ನನ್ನ ಬಗ್ಗೆ ಮಾತ್ರವೇ ಅಲ್ಲ, ತಮ್ಮ ಇತರೆ ಅತಿ ನಂಬಿಕಸ್ಥ ಸಹಾಯಕರನ್ನೂ ಅವರು ಹಲವು ಬಾರಿ ಹೀಗೆ ನಡೆಸಿಕೊಂಡಿ ದ್ದಾರೆ ಎಂದು ರುಸ್ತಮ್ ಜೀ ದಾಖಲಿಸುತ್ತಾರೆ. ತಮ್ಮನ್ನು ನೆಹರೂ ಅವರ ಚೇಲಾ ಎಂದೇ ಬಣ್ಣಿಸಿಕೊಂಡು ಹೊಗಳಿ ಅಟ್ಟಕ್ಕೇರಿಸುವ ಈ ಅಧಿಕಾರಿ ಅಗತ್ಯ ಬಿದ್ದಾಗ ವಸ್ತುನಿಷ್ಠ ಟೀಕೆಗೂ ಇಳಿಯುವುದು ಆಪ್ಯಾಯ ಅಚ್ಚರಿ.

ನೆಹರೂ ತಮ್ಮ ವರ್ಚಸ್ಸನ್ನು ಜಾಣತನದಿಂದ ಕಟ್ಟಿಕೊಂಡಿದ್ದರು. ಆರು ವರ್ಷಗಳ ಕಾಲ ಬಲು ಹತ್ತಿರದಿಂದ ಅವರನ್ನು ಬಲ್ಲೆನಾದರೂ, ನೆಹರೂ ಅವರ ಅಸಲಿ ಚಹರೆ ಯಾವುದು, ನಕಲಿ ವ್ಯಕ್ತಿತ್ವ ಯಾವುದಿದ್ದೀತು ಎಂಬ ನಿಷ್ಕರ್ಷೆಗೆ ಬರಲಾಗಲಿಲ್ಲ ಎಂದಿದ್ದಾರೆ ರುಸ್ತಮ್ ಜೀ.
ನೆಹರೂ ಕುಡೀತಾರೆೆುೀಂ ಎಂಬ ಪ್ರಶ್ನೆಯನ್ನು ಬಹಳ ಮಂದಿ ಕೇಳಿದ್ದಾರೆ. ಆದರೆ ಅವರು ಮದ್ಯ ಕುಡಿದದ್ದನ್ನು ಆರು ವರ್ಷಗಳ ಸಾಂಗತ್ಯದಲ್ಲಿ ನಾನು ಒಮ್ಮೆಯೂ ಕಂಡಿಲ್ಲ. ಸಿಗರೇಟು ಸೇದುತ್ತಿದ್ದರು. ಅದು ಅಂದಿನ ದಿನಗಳ ದುಬಾರಿ ಸಿಗರೇಟು ಸ್ಟೇಟ್ ಎಕ್ಸ್‌ಪ್ರೆಸ್ 555. ಪೋಲು ಮಾಡುವುದು, ವಿಶೇಷವಾಗಿ ಊಟ ತಿಂಡಿಯನ್ನು ಎಸೆಯುವುದು ಅವರಿಗೆ ಸೇರುತ್ತಿರಲಿಲ್ಲ. ಪ್ರವಾಸದಲ್ಲಿದ್ದಾಗ ರಸ್ತೆ ಪಕ್ಕದ ನಲ್ಲಿಯಲ್ಲಿ ನೀರು ಸುರಿಯುತ್ತಿದ್ದರೆ ಕಾರು ನಿಲ್ಲಿಸಿ ಇಳಿದು ಹೋಗಿ ಬಂದ್ ಮಾಡಿದ ಉದಾಹರಣೆಗಳೂ ಉಂಟು.

ಮಿತವ್ಯಯದಲ್ಲಿ ನಂಬಿಕೆ ಇಟ್ಟಿದ್ದ ನೆಹರೂ ಪ್ರವಾಸ ಹೊರಟರೆ ಅವರ ಜೊತೆಗೆ ಇರುತ್ತಿದ್ದ ಸಿಬ್ಬಂದಿ ಒಬ್ಬ ಸ್ಟೆನೋಗ್ರ್ಯಾಫರ್, ಸುರಕ್ಷತಾ ಅಧಿಕಾರಿ ಹಾಗೂ ಸೇವಕ ಹರಿ ಮೂವರೇ. ಒಮ್ಮೆ ಅಸ್ಸಾಮಿನ ದಿಬ್ರೂಗಡದಲ್ಲಿ ತಂಗಿದ್ದಾಗ ಅಚಾನಕ್ಕಾಗಿ ಅವರ ಕೋಣೆ ಹೊಕ್ಕಾಗ ಸೇವಕ ಹರಿ ನೆಹರೂ ಅವರ ಕಾಲುಚೀಲಗಳ ತೂತುಗಳನ್ನು ಹೊಲಿಯುತ್ತಿದ್ದ. ಈ ದೃಶ್ಯವನ್ನು ಆನಂತರ ಹಲವು ಬಾರಿ ಕಂಡಿದ್ದೇನೆ ಎಂದಿದ್ದಾರೆ ರುಸ್ತಮ್ ಜೀ…
ನೆಹರೂ ಚಾಚಿದ್ದ ಪಂಚಶೀಲ ತತ್ವದ ಸ್ನೇಹ ಹಸ್ತವನ್ನು ತಿರುಚಿ 1962ರಲ್ಲಿ ದಂಡೆತ್ತಿ ಬಂದು ಹೇರಿದ ಪರಾಭವದ ಅವಹೇಳನ ಭಾರತ ಸುಲಭವಾಗಿ ಮರೆಯುವಂತಹುದಲ್ಲ. ಈ ಸೋಲು ನೆಹರೂ ಅವರನ್ನು ಪ್ರಕ್ಷುಬ್ಧಗೊಳಿಸಿತ್ತು. ಆರೋಗ್ಯವನ್ನೂ ಬಾಧಿಸಿತ್ತು. ಎರಡೇ ವರ್ಷಗಳಲ್ಲಿ ಸಾವಿಗೂ ನೂಕಿತು ಎನ್ನುತ್ತಾರೆ ಇತಿಹಾಸಕಾರರು.
-ಡಿ.ಉಮಾಪತಿ

× Chat with us