ಅಂಕಣಗಳು

ಹೊಸಮಠದ ಬೆಳಕು: ಶ್ರೀ ಚಿದಾನಂದ ಸ್ವಾಮೀಜಿ

“ಎತ್ತ ನೋಡಿದರತ್ತ ಬಸವನೆಂಬ ಬಳ್ಳಿ, ಲಿಂಗವೆಂಬ ಗೊಂಚಲು ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವಯ್ಯ” ಎಂಬ ಮಡಿವಾಳ ಮಾಚಿದೇವರ ವಚನ ಒಂದಿದೆ. ಬಸವಣ್ಣನವರ ಜೀವಿತಾವಧಿಯಲ್ಲಿ ಮಾತ್ರವಲ್ಲ; ೧೫ನೇ ಶತಮಾನದವರೆಗೂ (ಇಂದು ಕೂಡ) ಈ ಮಾತು ನಿಜವೆನ್ನುವಂತಿದೆ. ಉತ್ತರ ಕರ್ನಾಟಕದ ಕಲ್ಯಾಣ ಮಾತ್ರವಲ್ಲ; ಕರ್ನಾಟಕದ ದಕ್ಷಿಣ ತುದಿಯ ಚಾಮರಾಜನಗರ ದವರೆಗೂ ಬಸವಣ್ಣನವರ ವರ್ಚಸ್ಸು ಹರಡಿತ್ತು. ಅಷ್ಟು ಮಾತ್ರವಲ್ಲ ಕರ್ನಾಟಕದ ಗಡಿಗಳಾಚೆ ಅಂದರೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳು ನಾಡುಗಳಲ್ಲೂ ಅದು ತನ್ನ ಕುಡಿ ಜಾಚಿತ್ತು.

೧೫ನೇ ಶತಮಾನ ವೀರಶೈವ ಧರ್ಮದ ಇತಿಹಾಸದಲ್ಲಿ ಅತಿ ಮಹತ್ವದ ಸಂದರ್ಭ. ಶ್ರೀ ಗೋಸಲ ಚೆನ್ನಬಸವೇಶ್ವರ ಪರಂಪರೆಗೆ ಸೇರಿದ ಶ್ರೀ ಯಡಿಯೂರ ಸಿದ್ಧಲಿಂಗೇಶ್ವರರು, ಏಳುನೂರು ವಿರಕ್ತರು ಸಹಿತವಾಗಿ ಈ ಧರ್ಮದ ಪುನರುಜ್ಜೀವನ ಮಹಾಕಾರ್ಯವನ್ನು ಕೈಗೊಂಡ ಅಮೃತ ವೇಳೆಯ ಕಾಲವದು. ಈ ಏಳುನೂರು ವಿರಕ್ತರಲ್ಲಿ ಒಬ್ಬರಾದ ಶ್ರೀ ಸಂಗನಬಸವ ಸ್ವಾಮೀಜಿ ಅವರು ಲೋಕಕಲ್ಯಾಣಾರ್ಥವಾಗಿ ಸಂಚಾರ ಕೈಗೊಂಡು ಒಮ್ಮೆ ಮೈಸೂರಿನ ದೊಡ್ಡ ಕೆರೆಯ ಪೂರ್ವ ಭಾಗದಲ್ಲಿ ಕೆಲಕಾಲ ನೆಲೆ ನಿಂತು ತಪೋಮಗ್ನರಾಗಿದ್ದರು.

ಈ ಶರಣರನ್ನು ಕಂಡ ಜನತೆ ಇಲ್ಲಿಯೇ ನೆಲೆ ನಿಲ್ಲಲು ಅವರನ್ನು ಪ್ರಾರ್ಥಿಸಿಕೊಳ್ಳಲಾಗಿ ಅವರು ನೆಲೆ ನಿಂತ ಮಠವೇ ಮುಂದೆ ಮೈಸೂರಿನ “ಹೊಸಮಠ” ಎಂದು ಪ್ರಸಿದ್ಧವಾಯಿತು. ೧೯೮೨ರಲ್ಲಿ ಗುರುಗಳಾದ ಶ್ರೀ ಗುರುಶಾಂತ ಸ್ವಾಮೀಜಿ ಅವರ ಪಟ್ಟದ ಶಿಷ್ಯರಾಗಿ ಹೊಸಮಠದ ಉತ್ತರಾಧಿಕಾರಿ ಗಳಾಗಿ ಬಂದ ಶ್ರೀ ಚಿದಾನಂದ ಸ್ವಾಮೀಜಿಯವರು ತಮ್ಮ ಪೂಜೆ, ಅನುಷ್ಠಾನ, ಧ್ಯಾನ ಮತ್ತು ತಪಸ್ಸಿನ ಶಕ್ತಿಯಿಂದ ಮಠದ ಚಟುವಟಿಕೆಗಳನ್ನು ಉತ್ತರೋತ್ತರ ವೃದ್ಧಿಸುವುದರಲ್ಲಿ ಯಶಸ್ವಿಯಾದರು ಮತ್ತು ೧೯೮೪ರಲ್ಲಿ ತಮ್ಮ ಗುರುಗಳ ಪ್ರೇರಣೆಯಂತೆ ಶ್ರೀ ನಟರಾಜ ಪ್ರತಿಷ್ಠಾನ ಸ್ಥಾಪಿಸಿ; ಅದರ ಮೂಲಕ ಮಠದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನು ಓದಿ:ಜಟಿಲವಾದ ಉಕ್ರೇನ್ ಬಿಕ್ಕಟ್ಟು, ಭಾರತ-ಚೀನಾ ಸ್ನೇಹ

ಸ್ತ್ರೀ ಸಬಲೀಕರಣ ಸಮಕಾಲೀನ ತುರ್ತು ಎಂದು ಭಾವಿಸಿದ ಶ್ರೀಗಳು ದೂರ ದೂರದ ಗ್ರಾಮಾಂತರ ಪ್ರದೇಶಗಳಿಂದ ಬರುವ ಬಡ, ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಪದವಿ ಶಿಕ್ಷಣ (ಕಲೆ ಮತ್ತು ವಾಣಿಜ್ಯ), ನರ್ಸಿಂಗ್ ಶಿಕ್ಷಣವನ್ನು ಮಹಿಳೆಯರಿಗೆ ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ನೀಡುವ ಸಂಕಲ್ಪ ಮಾಡಿದೆ ಶ್ರೀ ನಟರಾಜ ಪ್ರತಿಷ್ಠಾನ.

“ಮಹಾಪುರುಷರ ಉಪದೇಶಗಳನ್ನು ಬೇಕಾದಷ್ಟು ಕೇಳಿಯಾಗಿದೆ ಮತ್ತು ಹೇಳಿಯೂ ಆಗಿದೆ. ಈಗ ಅದರ ಅನುಷ್ಠಾನ ಮಾತ್ರ ಉಳಿದಿದೆ” ಎಂಬ ಮಾತೊಂದಿದೆ. ಈ ಮಾತನ್ನು ಮನದಾಳದಲ್ಲಿ ಧಾರಣೆ ಮಾಡಿಕೊಂಡು ಅದರಂತೆ ನಡೆಯುತ್ತಿರುವ ಅಪೂರ್ವ ಸಾಧಕರು ಚಿದಾನಂದ ಶ್ರೀಗಳು.

ಸಾಮಾನ್ಯವಾಗಿ ಇಂದು ಸ್ವಾಮೀಜಿಗಳೆಂದರೆ ಪಾದಪೂಜೆ, ಅಡ್ಡ ಪಲ್ಲಕ್ಕಿ, ರಜತ-ಸುವರ್ಣ ಕಿರೀಟ ಧಾರಣೆ ಇತ್ಯಾದಿ ಆಡಂಬರದ ಆಚರಣೆಗಳಲ್ಲಿ ಕರಗಿ ಹೋಗುವುದೇ ಹೆಚ್ಚು. ಆದರೆ ಚಿದಾನಂದ ಶ್ರೀಗಳು ಇದಕ್ಕೆ ಹೊರತಾಗಿದ್ದಾರೆ. ೭೫ರ ಈ ಇಳಿ ವಯಸ್ಸಿನಲ್ಲಂತೂ ಅವರು ಸಾಕಷ್ಟು ಮಾಗಿದ್ದಾರೆ ಮತ್ತು ಪ್ರಬುದ್ಧರಾಗಿದ್ದಾರೆ. ಮಾತಿಗಿಂತಲೂ ಕೃತಿಯತ್ತ ಅವರ ಮನಸ್ಸು ಹೆಚ್ಚು ತುಡಿಯುತ್ತಿದೆ; ಹೆಚ್ಚು ಹೆಚ್ಚು ಅಂತರ್ಮುಖಿಗಳಾಗಿದ್ದಾರೆ. ಬಸವಣ್ಣನವರ ತತ್ವಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವತ್ತ ಅವರು ವಿಶೇಷ ಗಮನ ಹರಿಸಿದ್ದಾರೆ. ಧನ ಮೋಹ, ಪ್ರಚಾರ ಮೋಹ, ಭಾಷಣ ಮೋಹಗಳು ಇಂದು ಮಹತ್ವದ ವ್ಯಕ್ತಿಗ ಳನ್ನು ಕಾಡುತ್ತಿರುವ ದೌರ್ಬಲ್ಯಗಳು. ಅವನ್ನು ಮೀರಿದ ಅಪೂರ್ವ ಸಾಧನೆಯು ಶ್ರೀ ಚಿದಾನಂದ ಸ್ವಾಮೀಜಿ ಅವರದ್ದಾಗಿದೆ.

ಇದನ್ನು ಓದಿ:ಸ್ವಾತಂತ್ರ್ಯ ಸಂಭ್ರಮ : ಕಾವೇರಿ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಹಿತಮಿತ ಮೃದುಭಾಷಿಯಾಗಿರುವ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರ ಬಗ್ಗೆ ಸಕಾರಾತ್ಮಕ ದೃಷ್ಟಿ ಹೊಂದಿದ್ದಾರೆ. ಸಾಮಾನ್ಯವಾಗಿ ಸಂಸ್ಥೆ ಬೆಳೆದಂತೆ ಮುಖ್ಯಸ್ಥರು ಚಾಡಿ ಮಾತುಗಳಿಗೆ ಕಿವಿ ಕೊಡುವುದು ಹೆಚ್ಚಾಗುತ್ತದೆ. ಈ ದೌರ್ಬಲ್ಯದಿಂದಲೂ ಚಿದಾನಂದ ಶ್ರೀಗಳು ಮುಕ್ತರಾಗಿರುವುದು ಅವರ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಆದರೆ, ಯಾವುದೇ ಉದ್ಯೋಗಿ ಗಂಭೀರ ತಪ್ಪು ಮಾಡಿದಾಗ ಅವರ ಮೇಲೆ ಅಷ್ಟೇ ಕಠಿಣವಾದ ಕ್ರಮಗಳನ್ನು ಅವರು ಕೈಗೊಳ್ಳಬಲ್ಲರು.

ತಮ್ಮ ಬದುಕು ತೆರೆದ ಪುಸ್ತಕದಂತಿರಬೇಕು ಎನ್ನುವುದರಲ್ಲಿ ಅವರು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಪ್ರಾಮಾಣಿಕತೆ, ಸಮಾನತೆ, ವೈಚಾರಿಕತೆಗಳು ಅವರ ಸಾಧನಮಾರ್ಗದ ಮುಖ್ಯ ಗುರಿಗಳಾಗಿರುವುದು ಮತ್ತು ಆ ಮಾರ್ಗದಲ್ಲಿ ನಡೆಯಲು ಅವರು ಅಹರ್ನಿಶಿ ಸಾಧನೆ ಮಾಡುತ್ತಿರುವುದು, ಅವರ ಸಂತ ತನವನ್ನು ಮತ್ತಷ್ಟು ಹಿಗ್ಗಿಸಲಿದೆ ಎಂದೇ ಹೇಳಬಹುದು. ಮಠದ ಕಾರಣದಿಂದಾಗಿ ಮತ್ತು ಭಕ್ತರ ಒತ್ತಡ ದಿಂದಾಗಿ ಸಾಮಾನ್ಯವಾಗಿ ಬಹುತೇಕ ಸ್ವಾಮೀಜಿ ಮೂಲ ಭೂತವಾದಿಗಳಾಗುವ ಅಪಾಯವಿರುತ್ತದೆ. ಚಿದಾನಂದ ಶ್ರೀಗಳು ಇಂತಹ ದೌರ್ಬಲ್ಯದಿಂದಲೂ ಮುಕ್ತರಾಗಿದ್ದಾರೆ. ಎಲ್ಲ ಜಾತಿಯ ಮಹಿಳೆಯರಿಗೂ ಅವರ ಸಂಸ್ಥೆಯಲ್ಲಿ ಮುಕ್ತವಾದ ಪ್ರವೇಶವಿದೆ ಮತ್ತು ಎಲ್ಲ ಸಮುದಾಯಗಳವರನ್ನೂ ತಮ್ಮ ಸಂಸ್ಥೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಂಡಿರುವುದು ಅವರ ಜಾತ್ಯತೀತ ನಿಲುವಿಗೆ ಒಂದು ದೊಡ್ಡ ನಿದರ್ಶನವಾಗಿದೆ.

ಬಸವ ತತ್ವ ಅನುಷ್ಥಾನಕ್ಕೆ ಆದ್ಯತೆ; ಶೈಕ್ಷಣಿಕ ಸೇವಾ ಕೈಂಕರ್ಯ:  ಬಸವಣ್ಣನವರ ತತ್ವಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವತ್ತ ಅವರು ವಿಶೇಷ ಗಮನ ಹರಿಸಿದ್ದಾರೆ. ಧನ ಮೋಹ, ಪ್ರಚಾರ ಮೋಹ, ಭಾಷಣ ಮೋಹಗಳು ಇಂದು ಮಹತ್ವದ ವ್ಯಕ್ತಿಗಳನ್ನು ಕಾಡುತ್ತಿರುವ ದೌರ್ಬಲ್ಯಗಳು. ಅವನ್ನು ಮೀರಿದ ಅಪೂರ್ವ ಸಾಧನೆಯು ಶ್ರೀ ಚಿದಾನಂದ ಸ್ವಾಮೀಜಿ ಅವರದ್ದಾಗಿದೆ. ಹಿತ ಮಿತ ಮೃದುಭಾಷಿಯಾಗಿರುವ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರ ಬಗ್ಗೆ ಸಕಾರಾತ್ಮಕ ದೃಷ್ಟಿ ಹೊಂದಿದ್ದಾರೆ.

-ಪ್ರೊ.ಎನ್.ಎಂ. ತಳವಾರ, ಮೈಸೂರು

ಆಂದೋಲನ ಡೆಸ್ಕ್

Recent Posts

ಮಧ್ಯಪ್ರಾಚ್ಯ ಸಂಘರ್ಷ | ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ಇಂಡಿಗೊ ವಿಮಾನ ಯು-ಟರ್ನ್‌

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…

1 hour ago

ಎಂಡಿಎ ಬಜೆಟ್‌ | ಮೈಸೂರು ಅಭಿವೃದ್ಧಿಗೆ ಒತ್ತು ; 799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…

2 hours ago

ಮೈಸೂರು | 24 ಅಪರಾಧ ಪ್ರಕರಣ ಭೇಧಿಸಿದ ಪೊಲೀಸರು ; 20ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ

ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…

3 hours ago

ʻಪಂಚ ಗ್ಯಾರಂಟಿʼಯಿಂದ ಮಹಿಳಾ ಸಬಲೀಕರಣ ಸಾಧ್ಯ : ಅರುಣ್ ಕುಮಾರ್

ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…

3 hours ago

ಬೆಟ್ಟಳ್ಳಿ ಮಾರಮ್ಮನ ಜಾತ್ರೆ ; ಹನೂರಲ್ಲಿ 2 ದಿನ ಮದ್ಯ ಮಾರಾಟ ನಿಷೇಧ

ಹನೂರು : ಪಟ್ಟಣದಲ್ಲಿ ನಡೆಯಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಹನೂರು…

3 hours ago

ಕೆ.ಆರ್.ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ICU ಘಟಕ ಸ್ಥಾಪಿಸಿ : ಎಂಎಲ್‌ಸಿ ಕೆ.ಶಿವಕುಮಾರ್ ಮನವಿ

ಬೆಂಗಳೂರು : ಮಂಡ್ಯ, ಚಾಮರಾಜನಗರ, ಹೊಳೆನರಸೀಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತುರ್ತು ಸೇವೆಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ…

4 hours ago