ಅಂಕಣಗಳು

ಚಳವಳಿಗಳ ಮಹಾಗುರು ಪ್ರೊ.ಎಂಡಿಎನ್‌

ರೈತ ಚಳುವಳಿ ಕಟ್ಟಿದ ಮಹಾನಾಯಕ 

ಬಡಗಲಪುರ ನಾಗೇಂದ್ರ

ಈ ನಾಡಿನ ಎಲ್ಲಾ ಜನಪರ ಚಳವಳಿಗಳ ಮೇಲೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ (ಎಂಡಿಎನ್)ಯವರ ದಟ್ಟ ಪ್ರಭಾವ ಇದೆ ಎಂದರೆ ತಪ್ಪಾಗಲಾರದು. ಅದು ರೈತ ಚಳವಳಿಯೇ ಆಗಿರಬಹುದು, ದಲಿತ ಚಳವಳಿಯೇ ಆಗಬಹುದು, ಭಾಷಾ ಚಳವಳಿ ಅಥವಾ ಯಾವುದೇ ವೈಚಾರಿಕ ಚಳವಳಿಗಳು ಒಂದಲ್ಲಾ ಒಂದು ರೀತಿ ಪ್ರೊ.ಎಂಡಿಎನ್ ರವರ ಸೈದ್ಧಾಂತಿಕ ನಿಲುವನ್ನು ಅನುಸರಿಸುತ್ತಿವೆ. ನಂಜುಂಡಸ್ವಾಮಿ ಎಂದರೆ ಅವರದೇ ಒಂದು ಸ್ಟೈಲ್. ಅವರು ಇಂದಿಗೂ ದಂತಕತೆಯಾಗಿ ಉಳಿದಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗಲೇ ಹೋರಾಟ ಮನೋಭಾವನೆ ಹೊಂದಿದ್ದ ನಂಜುಂಡಸ್ವಾಮಿಯವರು ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋಗಿದ್ದರು. ಹೇಳಿ ಕೇಳಿ ಹಿಟ್ಲರ್ ಆಡಳಿತ ನಡೆಸುತ್ತಿದ್ದ ದೇಶವದು. ಸರ್ವಾಧಿಕಾರಿ ಮತ್ತು ವಸಾಹತುಶಾಹಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದ, ಆ ದೇಶ ಭಾರತವನ್ನು ನಿಕೃಷ್ಟವಾಗಿ ಕಾಣುತ್ತಿದ್ದುದನ್ನು ಪ್ರತಿಭಟಿಸಿದ ನಂಜುಂಡಸ್ವಾಮಿ ಅವರು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿ ತಾಯಿನಾಡಿಗೆ ವಾಪಸ್ ಬಂದುಬಿಟ್ಟರು. ಇಲ್ಲಿ ಅವರು ಆಯ್ಕೆ ಮಾಡಿಕೊಂಡಿದ್ದು, ಕೃಷಿ ಕಸುಬನ್ನು. ಅವರೇ ಹಲವಾರು ಬಾರಿ ಹೇಳುತ್ತಿದ್ದಂತೆ, ಒಂಟಿಧ್ವನಿಯಾಗಿ ಲೆವಿ ಪದ್ಧತಿಯನ್ನು ಧಿಕ್ಕರಿಸುವ ಮೂಲಕ ದೊಡ್ಡ ಹೋರಾಟವನ್ನೇ ಹುಟ್ಟುಹಾಕಿದರು.

೧೯೬೭ ರಲ್ಲಿ ಸಮಾಜವಾದಿಗಳ ಒಡನಾಟಕ್ಕೆ ಬಂದ ಎಂಡಿಎನ್ ಅವರು ಡಾ.ರಾಮಮನೋಹರ ಲೋಹಿಯಾ ಅವರ ವಿಚಾರಗಳಿಂದ ಪ್ರಭಾವಿತರಾಗಿ ಸಮಾಜವಾದಿ ಸಿದ್ಧಾಂತವನ್ನು ತಮ್ಮದೇ ಆದ ರೀತಿಯಲ್ಲಿ ತರ್ಕಬದ್ಧವಾಗಿ ಪ್ರತಿಪಾದನೆ ಮಾಡುತ್ತಿದ್ದರು. ಅಪ್ರತಿಮ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಸಖ್ಯವನ್ನು ಬೆಳೆಸಿಕೊಂಡಿದ್ದರು. ಚರ್ಚೆಯ ವೇಳೆ ಎಷ್ಟೋ ಬಾರಿ ಗೋಪಾಲಗೌಡರನ್ನೇ ಪ್ರಶ್ನಿಸುತ್ತಿದ್ದ ಎಂಡಿಎನ್, ಸಮಾಜವಾದಿ ಚಳವಳಿಗೆ ಹೊಸ ರೂಪವನ್ನೇ ನೀಡಿದರು. ಆ ಕಾಲಘಟ್ಟದಲ್ಲಿ ಸಮಾಜವಾದಿ ಯುವಜನ ಸಭಾದ ಕಾರ್ಯದರ್ಶಿಯಾಗಿದ್ದ ಎಂಡಿಎನ್ ಅವರು, ಯುವ ಮುಂದಾಳುಗಳಾಗಿದ್ದ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಪ.ಮಲ್ಲೇಶ್, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ, ರಮೇಶ್ ಬಂದಗದ್ದೆ ಮತ್ತಿತರರ ಜೊತೆಗೂಡಿ ರಾಜ್ಯಾದ್ಯಂತ ಯುವಕರನ್ನು ಸಂಘಟಿಸಿದರು. ಅಲ್ಲದೆ, ಸಾವಿರಾರು ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರಿ, ಒಂದು ಹೋರಾಟದ ಸಂತತಿಯನ್ನೇ ಬೆಳೆಸುವ ಮೂಲಕ ಸಮಾಜವಾದಿ ಚಳವಳಿಗೆ ಒಂದು ಹೊಸ ಆಯಾಮವನ್ನೇ ನಂಜುಂಡಸ್ವಾಮಿಯವರು ಕಟ್ಟಿಕೊಟ್ಟಿರು ವುದು ಹೋರಾಟದ ಇತಿಹಾಸದಲ್ಲಿ ದಾಖಲಾಗಿದೆ.

ಯುವಜನರ ಮೇಲೆ ನಂಜುಂಡಸ್ವಾಮಿಯವರ ಪ್ರಭಾವ ಎಷ್ಟಿತ್ತೆಂದರೆ, ಬಹಳಷ್ಟು ಯುವಕರು ಎಂಡಿಎನ್ ಅವರಂತೆಯೇ ಜುಬ್ಬಾ ಮತ್ತು ಕುರ್ತಾ ಧರಿಸುವುದನ್ನು ರೂಢಿಸಿಕೊಂಡಿದ್ದಲ್ಲದೆ, ಅವರಂತೆಯೇ ಗಡ್ಡ ಬಿಡುತ್ತಿದ್ದರು, ಕೆಲ ಯುವಕರು ನಂಜುಂಡಸ್ವಾಮಿ ಅವರ ಸ್ಟೈಲಿನಲ್ಲೇ ಸಿಗರೇಟು ಸೇದುವ ಅಭ್ಯಾಸ ಮಾಡಿಕೊಂಡಿದ್ದರು. ಇಷ್ಟೇ ಅಲ್ಲ ಇಂದು ರೈತ ಚಳವಳಿಯಲ್ಲಿರುವ ಅನೇಕರು ಎಂಡಿಎನ್ ಅವರಂತೆಯೇ ಹಾವ-ಭಾವ, ಮಾತಿನ ಶೈಲಿಯನ್ನು ಮೈಗೂಡಿಸಿಕೊಂಡಿದ್ದರು.

ನಂಜುಂಡಸ್ವಾಮಿ ಅವರು ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಲೇ ವಿಚಾರವಾದಿ ಸಂಘ, ಬರಹಗಾರರ ಒಕ್ಕೂಟ ಸ್ಥಾಪಿಸಿಕೊಂಡು ಮೌಢ್ಯದ ವಿರುದ್ಧ ನಿರಂತರ ಜಾಗೃತಿ ಮೂಡಿಸುವ ಮೂಲಕ ಜಾತಿವಿನಾಶ ಚಳವಳಿಗಳನ್ನು ರೂಪಿಸಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೆ.ಪಿ. ಚಳವಳಿಯಲ್ಲೂ ಸಕ್ರಿಯವಾಗಿದ್ದರು. ಇವರ ಹೋರಾಟದ ಗರಡಿಯಲ್ಲಿ ಪಳಗಿದ ಅನೇಕರು ರಾಜಕೀಯ, ಸಾಹಿತ್ಯ, ಕಲೆ, ಆಡಳಿತ ಕ್ಷೇತ್ರಗಳಲ್ಲಿ ಬಹು ಎತ್ತರಕ್ಕೆ ಬೆಳದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಹೇಳಿಕೊಂಡಿರುವಂತೆ, ‘ನಂಜುಂಡಸ್ವಾಮಿಯವರ ಸಹವಾಸ ಇಲ್ಲವಾಗಿದ್ದರೆ ಬಹುಶಃ ನಾನು ರಾಜಕಾರಣಕ್ಕೆ ಬರುತ್ತಿರಲಿಲ್ಲ. ಅವರ ಪ್ರಭಾವ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ನಾನು ಕೆಲವು ದಾರಿತಪ್ಪಿದ ಐಎಎಸ್ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ. ಹಾಗಾಗಿ ನನ್ನನ್ನು ಒರಟ ಎನ್ನುತ್ತಾರೆ; ಈ ಒರಟನನ್ನು ಹುಟ್ಟು ಹಾಕಿದವರು ನಂಜುಂಡಸ್ವಾಮಿ’ ಎಂದು ಹೇಳಿಕೊಂಡಿದ್ದಾರೆ. ವೈದಿಕ ಶಾಹಿ ವಿರುದ್ಧದ ಹೋರಾಟವನ್ನು ಕಟ್ಟುವ ಮೂಲಕ ಕೋಮುವಾದಿಗಳಿಗೆ ಆಗಲೇ ದುಸ್ವಪ್ನವಾಗಿದ್ದರು. ಪುರೋಹಿತ ಶಾಹಿಯ ಸಂಸ್ಕ ತ ಮಂತ್ರದ ಕಪಟವನ್ನು ಬಹಿರಂಗಪಡಿಸಿ ರಾಜ್ಯದಲ್ಲಿ ಯುವಕ, ಯುವತಿಯರು ಕುವೆಂಪು ಮಂತ್ರ ಮಾಂಗಲ್ಯ, ಬಸವಣ್ಣನವರ ವಚನ ಮಾಂಗಲ್ಯದ ಅನುಸಾರ ವಿವಾಹವಾಗಲು ಪ್ರೇರಣೆ ನೀಡಿದ್ದಾರೆ. ಇವರ ಗರಡಿಯಲ್ಲೇ ಬೆಳೆದ ಪ್ರೊ.ರವಿವರ್ಮಕುಮಾರ್, ಮಂಜುನಾಥ ದತ್ತ, ವೆಂಕಟೇಶಮೂತಿ, ಅಮಾವಾಸ್ಯೆ ದಿನ ಮದುವೆಯಾಗಿ ಮಾದರಿಯಾಗಿದ್ದಾರೆ. ಬಹಳಷ್ಟು ಅಂತರ್ಜಾತಿ ವಿವಾಹಗಳಿಗೆ ನಂಜುಂಡಸ್ವಾಮಿಯವರ ವಿಚಾರ ಪ್ರೇರಕ ಶಕ್ತಿಯಾಗಿದೆ.

ಬಸವಲಿಂಗಪ್ಪನವರ ಬೂಸಾ ಚಳವಳಿಯ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆ ಮಾಡಿದವರಲ್ಲಿ ನಂಜುಂಡಸ್ವಾಮಿ ಕೂಡ ಒಬ್ಬರು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಸ್ಥಾಪನೆಗೂ ಕೂಡ ನಂಜುಂಡಸ್ವಾಮಿಯವರು ಒತ್ತಾಸೆಯಾಗಿ ನಿಂತಿದ್ದರು. ದೇವರಾಜ ಅರಸು ಅವರ ಕಾಲದಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಎಲ್.ಜಿ. ಹಾವನೂರ ಅವರು ನಂಜುಂಡಸ್ವಾಮಿ ಅವರ ಸಹಪಾಠಿಯಾಗಿದ್ದರು.ಹಾವನೂರ ಅವರು ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸುವ ವರದಿ ಮತ್ತು ಅದರ ಜಾರಿಯಲ್ಲಿ ನಂಜುಂಡಸ್ವಾಮಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ.

೧೯೭೦-೮೦ರ ದಶಕ ಕರ್ನಾಟಕದಲ್ಲಿ ಚಳವಳಿಗಳ ಕಾಲ. ಅದೇ ಸಂದರ್ಭದಲ್ಲಿ ದಲಿತ ಚಳವಳಿಯೂ ಕೂಡ ಜನ್ಮ ತಾಳಿ ರಾಜ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕ ತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಗೋಕಾಕ್ ವರದಿಯ ಜಾರಿಗಾಗಿ ಭಾಷಾ ಚಳವಳಿಯು ಕೂಡ ದೊಡ್ಡದಾಗಿ ನಡೆದಿದೆ. ಅದೇ ಅವಧಿಯಲ್ಲಿ ನಡೆದ ನರಗುಂದ ನವಲಗುಂದ ರೈತ ಬಂಡಾಯದ ನಂತರ ಸ್ಥಾಪನೆಯಾದ ಕರ್ನಾಟಕ ರಾಜ್ಯ ರೈತ ಸಂಘವು ತಾತ್ವಿಕ ನೆಲೆ, ರಾಜಕೀಯ ಸ್ಪಷ್ಟತೆಯೊಂದಿಗೆ ಶಿಸ್ತುಬದ್ಧ ಸಂಘಟನೆ ಮತ್ತು ಚಳವಳಿಯಾಗಿ ವೈಚಾರಿಕ ತಳಹದಿಯ ಮೇಲೆ ಬೆಳೆಯಲು ನಂಜುಂಡಸ್ವಾಮಿಯವರ ಆಲೋಚನೆ, ನಡೆಸಿದ ಹೋರಾಟಗಳು ಪ್ರಮುಖ ಕಾರಣಗಳಾಗಿವೆ. ರೈತ ಚಳವಳಿಯ ಪ್ರಾರಂಭದಲ್ಲಿ ಪೂರ್ಣಚಂದ್ರ ತೇಜಸ್ವಿ ಮತ್ತು ಎನ್.ಡಿ.ಸುಂದರೇಶ್ ಇತರೆ ಅನೇಕರು ರಾಜ್ಯಾದ್ಯಂತ ಸುತ್ತಿ ರೈತ ಸಮುದಾಯದ ಸಮಸ್ಯೆಗಳಿಗೆ ಸಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ಬುನಾದಿ ಹಾಕಿದ್ದಾರೆ.

ಸಮಾಜವಾದಿ ಸಿದ್ಧಾಂತವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದ ಎಂಡಿಎನ್ ಅವರು ಸಮಾಜವಾದಿ ವಿಚಾರಗಳನ್ನು ಅನಕ್ಷರಸ್ಥ ಸಮುದಾಯವೇ ಹೆಚ್ಚು ಇದ್ದ ಹಳ್ಳಿ-ಹಳ್ಳಿಗಳಿಗೂ ಕಾರ್ಯಕ್ರಮಗಳ ಮೂಲಕ ಪರಿಚಯಿಸಿ ಜಡ್ಡುಗಟ್ಟಿದ ಜಾತಿ ವ್ಯವಸ್ಥೆ ವಿರುದ್ಧ ಸಮೂಹ ಹೋರಾಟವನ್ನು ರೂಪಿಸಿದ್ದವರಲ್ಲಿ ನಂಜುಂಡಸ್ವಾಮಿಯವರ ಪಾತ್ರ ಬಹಳ ದೊಡ್ಡದಿದೆ. ರೈತ ಚಳವಳಿ ಬಹಳ ಉತ್ತುಂಗಕ್ಕೇರಿ ಪ್ರಭುತ್ವದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಕೂಡ ನಂಜುಂಡಸ್ವಾಮಿಯವರ ಪಾತ್ರ ಹಿರಿದಾಗಿದೆ.

ರೈತ ಚಳವಳಿಯನ್ನು ಹತ್ತಿಕ್ಕಲು ರೈತರ ಮೇಲೆ ಗುಂಡಿನ ಸುರಿಮಳೆ ಸುರಿಸಿದ ಗುಂಡೂರಾವ್ ಸರ್ಕಾರ ಪತನವಾಗಿ ಕಾಂಗ್ರೆಸ್ಸೇತರ ಸರ್ಕಾರ ರಾಜ್ಯದಲ್ಲಿ ಸ್ಥಾಪನೆಯಾಗಲು ರೈತ ಚಳವಳಿ ಪ್ರಮುಖ ಕಾರಣವಾಯಿತು.

ಚಳವಳಿಗೆ ಈ ಶಕ್ತಿ ತುಂಬಲು ನಂಜುಂಡಸ್ವಾಮಿ ಮತ್ತು ಎನ್.ಡಿ.ಸುಂದರೇಶ್ ಅವರ ನೇರ ನಿಷ್ಠೂರ ತೀರ್ಮಾನಗಳು ಕಾರಣವಾಗಿವೆ. ತೇಜಸ್ವಿಯವರು ಲಂಕೇಶ್ ಪತ್ರಿಕೆಯಲ್ಲಿ ರೈತ ಚಳವಳಿಯ ಬಗ್ಗೆ ಬರೆಯುತ್ತಾ ‘ಸ್ವಾತಂತ್ರ್ಯ ಸಂಗ್ರಾಮದ ನಂತರ ನಮ್ಮ ಗ್ರಾಮಗಳವರೆಗೂ ವಿಸ್ತರಿಸಿದ ಏಕಮಾತ್ರ ರಾಜಕೀಯ ಚಳವಳಿ ಎಂದರೆ ಅದು ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿ. ಅಲ್ಲಿಯವರೆಗೂ ಅಽಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿ-ಬಗ್ಗಿ ಗೂನು ಬೆನ್ನಾಗಿದ್ದ ರೈತರನ್ನು ನೆಟ್ಟಗೆ ನಿಲ್ಲಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ ದರ್ಪ ದಮನಗಳ ಎದುರು ಸೆಟೆದು ನಿಲ್ಲಲು ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ, ಆ ನಂತರ ಸುಂದರೇಶ್’ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

೨ನೇ ಮಹಾಯುದ್ಧದ ನಂತರ ಪ್ರಪಂಚದಲ್ಲಿ ಬದಲಾಗುತ್ತಿರುವ ನೀತಿಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದ ಪ್ರೊ ಎಂ.ಡಿ.ಎನ್ ರವರು ೧೯೯೦ರ ನಂತರ ಪ್ರಪಂಚದಲ್ಲಿ ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ, ಮುಕ್ತ ಮಾರುಕಟ್ಟೆ ನೀತಿಗಳನ್ನು ತರಲು ಮುನ್ನೆಲೆಗೆ ಬಂದ ಡಂಕಲ್ ಪ್ರಸ್ತಾಪದ ಅಪಾಯಗಳನ್ನು ಪ್ರಾರಂಭದಲ್ಲೇ ಗುರುತಿಸಿದ ಎಂಡಿಎನ್‌ರವರು ಇದರ ವಿರುದ್ಧ ದೇಶದಲ್ಲಿ ದೊಡ್ಡ ಧ್ವನಿಯನ್ನು ಎತ್ತಿದ್ದರು. ವಿಶ್ವ ವಾಣಿಜ್ಯ ಒಪ್ಪಂದದಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಹಳ್ಳಿಯಿಂದ ಪ್ರಪಂಚದ ನಾನಾ ಮೂಲೆಗಳಲ್ಲೂ ಜಾಗೃತಿ ಮೂಡಿಸಿ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಹೋರಾಟವನ್ನೇ ಕಟ್ಟಿದರು. ಇದರಿಂದ ಡಬ್ಲ್ಯುಟಿಒ (ವಿಶ್ವ ವ್ಯಾಪಾರ ಸಂಸ್ಥೆ) ಗೆ ಸಿಂಹಸ್ವಪ್ನ ಆಗಿದ್ದರು. ನಂಜುಂಡಸ್ವಾಮಿಯವರು ಜನೀವಾಕ್ಕೆ ಹೋದ ದಿನ ಡಬ್ಲ್ಯುಟಿಸಿ ತನ್ನ ಆಡಳಿತ ಕಚೇರಿಗೆ ಬೀಗ ಹಾಕಿ ರಜೆ ಘೋಷಿಸಿದ್ದು, ಹೋರಾಟದ ಮೈಲಿಗಲ್ಲು.

(ಲೇಖಕರು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಹಾಗೂ ವಕೀಲರು)

” ರೈತಾಪಿ ಕೃಷಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಿ ಕಾರ್ಪೊರೇಟೀಕರಣ ಮಾಡಲು ಹೊರಟಿರುವ ಈ ಸಂಕ್ರಮಣ ಸ್ಥಿತಿಯಲ್ಲಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚಳವಳಿಯನ್ನು ಮುಂದುವರಿಸುವುದು ಅತ್ಯವಶ್ಯವಾಗಿದೆ. ಹಸಿರು ರುಮಾಲು ಹಾಕಿರುವ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಚಳವಳಿಯನ್ನು ಕಟ್ಟಬೇಕಾಗಿದೆ. ಇದುವೆ ಪ್ರೊ. ಎಂಡಿಎನ್‌ರವರಿಗೆ ಸಲ್ಲಿಸುವ ದೊಡ್ಡ ಗೌರವ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕಳೆದ ಅಕ್ಟೋಬರ್ ೨೬ ರಂದು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಪೂರ್ಣ ರಾಜ್ಯ ಸಮಿತಿ ಸಭೆಯಲ್ಲಿ ಹಲವಾರು ಘೋಷಣೆಗಳನ್ನು ಮಾಡಿ ಕಾರ್ಯಕ್ರಮಗಳನ್ನು ರೂಪಿಸಿದೆ. ಆ ಕಾರ್ಯಕ್ರಮಗಳಿಗೆ ಈ ಸಮಾವೇಶದಲ್ಲಿ ಚಾಲನೆ ನೀಡುತ್ತದೆ.”

” ಇಂದು (ಫೆ.೧೩) ಪೊ.ಎಂಡಿಎನ್ ಅವರ ಹುಟ್ಟಿದ ದಿನ. ಈ ದಿನವನ್ನು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿ ವರ್ಷ ವಿಶೇಷವಾಗಿ ಆಚರಿಸುತ್ತಿದೆ. ಈ ವರ್ಷ ಇವರ ೮೯ನೇ ಜನ್ಮ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶವನ್ನು ಮೈಸೂರಿನ ಟೌನ್‌ಹಾಲ್ ಮೈದಾನದಲ್ಲಿ ಆಯೋಜಿಸಲಾಗಿದೆ”

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

42 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

1 hour ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

2 hours ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

2 hours ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

3 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

3 hours ago