ಅಂಕಣಗಳು

ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು ಮುಖ್ಯವೆನಿಸಬಲ್ಲದೇ? ಇವು, ಯಾವುದೇ ಹಕ್ಕುಗಳ ಬಗ್ಗೆ ಚರ್ಚಿಸುವಾಗ ಏಳುವ ಪ್ರಮುಖ ಪ್ರಶ್ನೆಗಳು.

ಎಲ್ಲಾ ಮೂಲಭೂತ ಹಕ್ಕುಗಳನ್ನು ಒಟ್ಟಿಗೆ ಇಟ್ಟೇ ನೋಡಬೇಕು. ಯಾವುದನ್ನೂ ಇನ್ನೊಂದರಿಂದ ಹೆಚ್ಚಾಗಿಯೋ, ಬೇರೆ ಬೇರೆಯಾಗಿಯೋ ನೋಡಲು ಬರುವುದಿಲ್ಲ. ಒಂದು ಹಕ್ಕನ್ನು ಪೋಷಿಸಿದರೆ ಅದು ಪರೋಕ್ಷವಾಗಿ ಇನ್ನೊಂದು ಹಕ್ಕಿನ ಬೆಳವಣಿಗೆಗೂ ಕಾರಣವಾಗುತ್ತದೆ, ಒಂದು ಹಕ್ಕಿಗೆ ಚ್ಯುತಿಯಾದರೆ ಇನ್ನೊಂದು ಹಕ್ಕಿಗೂ ಏಟು ಬೀಳುವುದು. ಎಲ್ಲ ನಾಗರಿಕ ಹಕ್ಕುಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಕ್ಕುಗಳು ಒಂದಕ್ಕೊಂದು ಬೆಸೆದಿರುತ್ತವೆ. ಹೀಗಿದ್ದರೂ, ಎಷ್ಟೋ ಸಂದರ್ಭದಲ್ಲಿ ಒಂದು ಹಕ್ಕಿಗೆ ಇನ್ನೊಂದು ಎದುರಾಳಿಯಾಗಿ ಕಾಣುವುದಿದೆ. ಉದಾಹರಣೆಗೆ, ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಜನರೆಲ್ಲ ಮನೆಯೊಳಗೇ ಇರಬೇಕು ಎಂಬ ನಿರ್ಬಂಧ ಹೇರಿದಾಗ, ಜನರ ಓಡಾಟದ ಸ್ವಾತಂತ್ರ್ಯಕ್ಕೆ ಅಡ್ಡಿಯಾದರೂ, ಎಲ್ಲರ ಸುರಕ್ಷೆಗೆ ಹೆಚ್ಚು ಆದ್ಯತೆ ನೀಡಲಾಗಿರುತ್ತದೆ. ಇಂತಹ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿದರೆ ಬೇರೆ ಎಂದೂ ಯಾವುದೇ ಮೂಲಭೂತ ಹಕ್ಕುಗಳನ್ನೂ ಒಂದರ ಹೊರತಾಗಿ ಇನ್ನೊಂದನ್ನು ನೋಡಲಾಗದು.

ಈ ಎಲ್ಲ ಮೂಲಭೂತ ಹಕ್ಕುಗಳ ಅಡಿಪಾಯದಲ್ಲಿರುವುದು ಮಾನವ ಹಕ್ಕುಗಳು. ಪ್ರತಿಯೊಬ್ಬರ ಸುರಕ್ಷೆಯಂತೆ, ಹಿಂಸಾಚಾರ, ದಾಸ್ಯ, ನರಮೇಧಗಳ ನಿರ್ಬಂಧ, ನಿರ್ಮೂಲನಗಳು ಅತೀ ಮುಖ್ಯವಾದ, ಬಿಟ್ಟುಕೊಡಲಾಗದ ಮಾನವ ಹಕ್ಕುಗಳು. ಇವಾದ ನಂತರವೇ ಬರುವ ಅತಿಮುಖ್ಯ ಮಾನವಹಕ್ಕು ಸಮಾನತೆಯ ಹಕ್ಕು ನ್ಯಾಯವ್ಯವಸ್ಥೆಯ ಎದುರು ಸರ್ವರೂ ಸಮಾನರು, ನ್ಯಾಯ ವ್ಯವಸ್ಥೆಯ ಸುರಕ್ಷೆಗೆ ಸರ್ವರೂ ಸಮಾನವಾಗಿ ಭಾಜನರು, ಎನ್ನುವುದು. ಸಂವಿಧಾನವಾಗಲೀ, ವಿಶ್ವಸಂಸ್ಥೆಯ ಯಾವುದೇ ಒಡಂಬಡಿಕೆ ಗಳಾಗಲಿ, ಸಮಾನತೆಯ ಈ ಹಕ್ಕಿನ ಮೇಲೆಯೇ ಆಧಾರಿತವಾಗಿವೆ.  ಹೀಗಿದ್ದಾಗಲೂ ಕಾನೂನು ವ್ಯವಸ್ಥೆಯಡಿಯ ಕೆಲವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬರುವ ಅಸಮತೋಲನದಲ್ಲಿ ಒಂದು, ನಗರವಾಸಿ ಬಡವರ ಬದುಕುವ ಹಕ್ಕುಗಳಿಗೆ ಸಂಬಂಽಸಿದ ವ್ಯವಸ್ಥೆ, ಕಾಯಿದೆ.

ಇದನ್ನು ಓದಿ: ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ 

ಬದುಕುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು (ರೈಟ್ ಟು ಲೈಫ್-ಪರ್ಸನಲ್ ಲಿಬರ್ಟಿ), ವಸತಿ ಹಕ್ಕನ್ನು ಕೂಡಿಯೇ ಇರಬೇಕಷ್ಟೆ. ಆದರೂ ನಗರ ನಿವಾಸಿ ಬಡಜನರಿಗೆ ಊಟ, ಬಟ್ಟೆ, ವಸತಿಗಳು ಎಟುಕುತ್ತವೆಯೇ? ಶಿಕ್ಷಣ, ಆರೋಗ್ಯ ವ್ಯವಸ್ಥೆಗಳು ಸಿಗುತ್ತವೆಯೇ? ಈ ಮೂಲಭೂತ ಸೌಲಭ್ಯ, ಹಕ್ಕುಗಳು ಅವರ ಮಾನವ ಹಕ್ಕುಗಳಲ್ಲವೇ? ಹಾಗೂ ಇವುಗಳನ್ನು ಪ್ರತಿ ಪ್ರಜೆಗೆ ಒದಗಿಸುವ ಕರ್ತವ್ಯ ರಾಜ್ಯದ್ದಲ್ಲವೇ? ಸಾಮಾಜಿಕ ನ್ಯಾಯಕ್ಕೆ ಬದ್ಧರಾದ ಪ್ರತೀ ಪ್ರಜೆಗೂ, ಜನಪ್ರತಿನಿಽಗೂ ಕಾಡಬೇಕಾದ ಪ್ರಶ್ನೆ ಇದು. ನಗರ ನಿವಾಸಿ ಬಡಜನರ ವಸತಿ ಹಕ್ಕುಗಳ ಬಗ್ಗೆ ಇರುವ ಕಾನೂನಿನ ಬಗ್ಗೆ ಒಂದಷ್ಟು ವಿಚಾರಗಳು ಇಲ್ಲಿವೆ.

೧೯೫೬ರಲ್ಲಿ ಕೊಳೆಗೇರಿ (ಸುಧಾರಣೆ ಮತು ತೆರವು) ಅಧಿನಿಯಮವನ್ನು ತಂದ ಕಾಲದಲ್ಲಿ, ಕೊಳೆಗೇರಿಗಳನ್ನು ಸಮಾಜದ ಆರೋಗ್ಯಕ್ಕೆ ಹಾನಿಕರವಾದ ಜಾಗವೆನ್ನುವಂತೆ ನೋಡಲಾಯಿತು. ಸಾಮಾಜಿಕ, ಆರ್ಥಿಕ ಕಾರಣಗಳಿಂದ, ಜಾತಿ -ಧಾರ್ಮಿಕ ಕ್ರೌರ್ಯಗಳಿಂದ ಜನರು ವಲಸೆ ಹೋಗುವ, ನಗರಗಳಲ್ಲಿ ಬಂದು ನೆಲೆಸಬೇಕಾಗಿ ಬರುವ ಸಂದರ್ಭಗಳನ್ನು ಈ ಕಾನೂನು ಗಣನೆಗೆ ತೆಗೆದುಕೊಳ್ಳಲಿಲ್ಲ. ಈಗಲೂ ಈ ಕಾನೂನಿನ ಪ್ರಕಾರ ಕೊಳೆಗೇರಿಯೆಂದರೆ ಜನರು ವಾಸಿಸಲು ಯೋಗ್ಯವಾಗಿರದಂತಹ ಜಾಗ. ಇಂತಹ ಜಾಗವನ್ನು ಸರ್ಕಾರ ಕೊಳೆಗೇರಿ ಎಂದು ಗುರುತಿಸಿ, ಘೋಷಿಸಿದ ಮೇಲೆ, ಕೊಳೆಗೇರಿ ಪ್ರಾಧಿಕಾರದವರು ಆ ಜಾಗವನ್ನು ಸುಧಾರಣೆ ಮಾಡಲು ಅಥವಾ ತೆರವುಗೊಳಿಸಲು ಕೆಲಸ ಮಾಡಬೇಕು ಎಂದು ಈ ಕಾನೂನು ಹೇಳಿತು. ಇದರ ಮೂಲದಲ್ಲಿ ಇರುವ ಉದ್ದೇಶ, ಈ ನಗರ ವಾಸಿಗರ ಜೀವನದ ಹಕ್ಕುಗಳು ಅಂದರೆ ನಗರದ ಬಡಜನರನ್ನು ಹೊರತುಪಡಿಸಿದ ನಾಗರಿಕರ ಜೀವನದ ಹಕ್ಕುಗಳು! ಅಂದರೆ, ಈ ಕೊಳೆಗೇರಿಗಳು ಇರುವುದರಿಂದ ನಗರ ವಾಸಿಗರ ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತದೆ, ನಗರದ ಸೌಂದರ್ಯಕ್ಕೆ ಯಾವ ತೊಂದರೆಯಿದೆ ಎನ್ನುವುದೇ ಆಗಿದೆ.

ಆ ನಂತರ ಸಂಸತ್ತಿನ ಒಂದಷ್ಟು ಚರ್ಚೆಗಳನ್ನು ಆಧರಿಸಿ ಸ್ವಲ್ಪಮಟ್ಟಿಗೆ ಕಾನೂನಿನ ತಿದ್ದುಪಡಿಯಾದರೂ, ಇನ್ನೂ ಈ ಕಾನೂನು ನಗರದ ಬಡಜನರ ಮಾನವ ಹಕ್ಕುಗಳನ್ನು, ಮೂಲಭೂತ ಹಕ್ಕುಗಳನ್ನು ಗುರುತಿಸಿಯೇ ಇಲ್ಲ. ಮಾತಿನಲ್ಲಿ ಗುರುತಿಸಿದರೂ ಕಾರ್ಯದಲ್ಲಿ ಅದನ್ನು ಜಾರಿಗೆ ತರುವ ದಾರಿ ಈ ಕಾನೂನಿನಲ್ಲಿಲ್ಲ. ಸಂಸಾರ ಸಮೇತರಾದ ಒಂದಷ್ಟು ಜನರು ಒಂದು ಜಾಗದಲ್ಲಿ ಬಂದು ನೆಲೆಸಿ ಎರಡು-ಮೂರು ತಲೆಮಾರುಗಳೇ ಆಗಿದ್ದರೂ, ಆ ಜಾಗದ ಮೇಲೆ ಯಾವುದೇ ಹಕ್ಕು ಆ ಜನರಿಗೆ ಇಲ್ಲದಿರುವಂತಹ ಪರಿಸ್ಥಿತಿ ಈಗಲೂ ಇದೆ. ಈ ಕಾನೂನಿನ ಪ್ರಕಾರ, ಇಂತಹ ಒಂದು ಜಾಗವನ್ನು ಕೊಳೆಗೇರಿ ಎಂದು ಘೋಷಿಸಿದ ನಂತರ, ಕೊಳೆಗೇರಿ ಪ್ರಾಧಿಕಾರದವರು ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಒಂದಷ್ಟು ಕೆಲಸ ಮಾಡುತ್ತಾರೆ, ಅಷ್ಟೇ. ವಿನಾ, ರಾಜ್ಯದ ಅಧಿಕಾರಿಗಳು ಯಾವುದೇ ಕಾರಣಕ್ಕೆ ಆ ಜಾಗ ಇನ್ಯಾವುದೋ ಉದ್ದೇಶಕ್ಕೆ ಬಳಸಬೇಕೆಂಬ ನಿರ್ಧಾರಕ್ಕೆ ಬಂದರೆ ಆ ಜನರನ್ನು ಆ ಜಾಗದಿಂದ ತೆರವುಗೊಳಿಸುವ ಅಧಿಕಾರ ಹೊಂದಿದ್ದಾರೆ. ಅಂದರೆ, ಇನ್ಯಾವುದೇ ಈ ಕಾರಣ, ಈ ನಗರ ನಿವಾಸೀ ಬಡಜನರ ಬದುಕುವ ಹಕ್ಕಿನಿಂದ ಮುಖ್ಯವಾದದ್ದು ಎಂದು ಈ ಕಾನೂನೇ ಹೇಳಿದಂತಾಯಿತು.

ಇದನ್ನು ಓದಿ : ‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಹಲವು ಕ್ಲಿಷ್ಟ ಸಾಮಾಜಿಕ, ರಾಜಕೀಯ ಕಾರಣಗಳಿಂದ ಈ ಜನರು ತಮ್ಮ ಊರುಗಳನ್ನು ಬಿಟ್ಟು ನಗರಗಳಲ್ಲಿ ನೆಲೆಸಿ ಜೀವನ ಕಟ್ಟುವ ಪ್ರಯತ್ನ ಮಾಡುತ್ತಾರೆ. ಇರಲು ಒಂದು ಸೂರು ಬಿಡಿ, ಒಂದು ಹೊತ್ತಿನ ಸರಿಯಾದ ಊಟವೂ ಸಿಗದಂತಹ ಪರಿಸ್ಥಿತಿಗಳಲ್ಲಿ ವರ್ಷಗಳನ್ನೇ ಕಳೆದು, ಅದ್ಹೇಗೋ ಜೀವನ ಕಟ್ಟಿಕೊಂಡರೂ, ಅವರ ಹಲವು ತಲೆಮಾರುಗಳೇ ಸರಿಯಾದ ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುತ್ತಾರೆ. ಅವೆಷ್ಟೋ ಸಂದರ್ಭಗಳಲ್ಲಿ ಇಂತಹ ಜನರು, ಸರ್ಕಾರದ ಯಾವುದೋ ನೀತಿ, ನಿರ್ಧಾರದಿಂದಲೋ, ಉಳಿದ ನಗರವಾಸಿಗಳ ಸೌಕರ್ಯಕ್ಕಾಗಿಯೋ, ನಗರ ಚಂದ ಕಾಣಬೇಕೆಂಬ ಕಾರಣಕ್ಕೋ ಬಲಿಯಾಗಿ, ರಾತ್ರೋರಾತ್ರಿ ಹೊರಹಾಕಲ್ಪಡುತ್ತಾರೆ. ಇವರಿಗೆ ಬದಲೀ ವಸತಿ ವ್ಯವಸ್ಥೆ ಮಾಡಬೇಕೆಂಬ ನೀತಿ ಕಾನೂನಲ್ಲಿ ಇದೆಯಾದರೂ, ಅದಕ್ಕೂ ಹೋರಾಟ ಮಾಡಬೇಕಾಗುತ್ತದೆ ಈ ಜನ. ಮಾತ್ರವಲ್ಲ, ಬೇರೆ ವಸತಿ ಕೊಟ್ಟರೂ ಅಲ್ಲಿಯೂ ಯಾವುದೇ ಮೂಲಸೌಕರ್ಯವಿರುವುದಿಲ್ಲ.

ಮಾತ್ರವಲ್ಲ, ನಗರದಿಂದ ದೂರದ ಯಾವುದೋ ಮೂಲೆಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಅವರಿಗೆ ಅಷ್ಟಾದರೂ ಸೂರಿನ ವ್ಯವಸ್ಥೆ ಬೇಕಾದರೆ ಅವರು ಹಲವು ತಲೆಮಾರುಗಳಿಂದ ಬದುಕಿದ ಜಾಗಬಿಟ್ಟು ನಗರದಿಂದ ದೂರ ಕಟ್ಟಿದ ಮನೆಗಳಿಗೆ ಹೋಗಬೇಕು. ಅದೂ ಎಲ್ಲರಿಗೂ ಆ ವ್ಯವಸ್ಥೆ ಇರುವುದಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಸುಮಾರು ೪೪೦ ಘೋಷಿತ ಕೊಳೆಗೇರಿಗಳಿವೆ ಎನ್ನಲಾಗುತ್ತದೆ. ಆದರೆ, ಗುರುತಿಸದೇ ಇರುವವು ಇದರ ನಾಕುಪಟ್ಟದರೂ ಸುಮಾರು ೨,೫೦೦ ಇವೆ. ೨೦೧೫ರಲ್ಲಿಯೇ ಬೆಂಗಳೂರಿನ ಶೇ.೩೦ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. (Nair, J. The Promise of the Metropolis: Bangalore’s Twentieth Century (Oxford University Press, 2005)  ನಗರ ನಿವಾಸಿ ಬಡಜನರ ಈ ಪರಿಸ್ಥಿತಿಗೆ ಕಾನೂನು ಒಂದೇ ಕಾರಣವಲ್ಲ. ನ್ಯಾಯಾಂಗವೇ ಹೆಚ್ಚಿನ ಸಂದರ್ಭಗಳಲ್ಲಿ ಜನರ ವಸತಿ ಹಕ್ಕು, ಬದುಕುವ ಹಕ್ಕಿಗೂ ಮಿಗಿಲಾಗಿ, ಆ ಜನರನ್ನು ಅಕ್ರಮ ನಿವಾಸಿಗಳಾಗಿ, ಅಪರಾಧಿಗಳಾಗಿ ಕಾಣುತ್ತದೆ. ಜನರೂ ಸಹ ಈ ವಲಸಿಗರನ್ನು, ನಗರ ನಿವಾಸಿ ಬಡಜನರನ್ನು ಒಂದು ಹೊಣೆಯಾಗಿ, ಹೊರೆಯಾಗಿಯೇ ಕಾಣುತ್ತಾರೆ.

ಇದು ಬದಲಾಗಬೇಕಾದರೆ, ನಗರ ನಿವಾಸಿ ಬಡಜನರ ಬದುಕುವ ಹಕ್ಕನ್ನು, ಮಾನವ ಹಕ್ಕನ್ನು ಗೌರವಿಸಬೇಕಾಗಿದೆ. ನ್ಯಾಯಾಂಗವೂ ಸೇರಿದ ಕಾನೂನು ವ್ಯವಸ್ಥೆಯ ಕಾಯ್ದೆ, ನೀತಿ, ರೀತಿಗಳು ಬದಲಾಗಬೇಕಾಗಿದೆ. ಬಡತನಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ ಕಾರಣಗಳೇ ಪ್ರಮುಖ ಕಾರಣಗಳು ಎಂಬುದನ್ನು ಮನಗಾಣಬೇಕು. ಬಡತನದ ನಿರ್ಮೂಲನೆಯು ಸಮಾಜದ, ಸರ್ಕಾರದ ಜವಾಬ್ದಾರಿಯಾಗಬೇಕು. ಹೀಗಾಗಬೇಕಾದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ತಳಹದಿ ಬಹುಮುಖ್ಯ. ನಗರ ನಿವಾಸಿಗಳ ಕಲ್ಪನೆಯಲ್ಲಿ ನಗರದ ಬಡವರೂ, ಎಲ್ಲರೂ ಸೇರಿರಬೇಕು. ಪ್ರಜೆಗಳ ಮೂಲಭೂತ ಹಕ್ಕುಗಳ ಪ್ರತಿಪಾದನೆಯಲ್ಲಿ ಪ್ರತಿಯೊಬ್ಬರ ಬದುಕುವ ಹಕ್ಕೂ ಪ್ರಮುಖವಾಗಬೇಕು, ಸಮಾನವಾಗಬೇಕು.

” ನ್ಯಾಯವ್ಯವಸ್ಥೆಯ ಎದುರು ಸರ್ವರೂ ಸಮಾನರು, ನ್ಯಾಯ ವ್ಯವಸ್ಥೆಯ ಸುರಕ್ಷೆಗೆ ಸರ್ವರೂ ಸಮಾನವಾಗಿ ಭಾಜನರು. ಸಂವಿಧಾನವಾಗಲೀ, ವಿಶ್ವಸಂಸ್ಥೆಯ ಯಾವುದೇ ಒಡಂಬಡಿಕೆಗಳಾಗಲಿ, ಸಮಾನತೆಯ ಈ ಹಕ್ಕಿನ ಮೇಲೆಯೇ ಆಧಾರಿತವಾಗಿವೆ.”

ಸೌಮ್ಯಲಕ್ಷ್ಮೀ ಭಟ್, ನ್ಯಾಯವಾದಿ, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಪೊಲೀಸ್‌ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪರಮೇಶ್ವರ್‌

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…

5 seconds ago

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್‌…

50 mins ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಮುಚ್ಚುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…

55 mins ago

ಮೈಸೂರು ಅರಮನೆ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿತ

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…

1 hour ago

ದ್ವೇಷ ಭಾಷಣ ಮಾಡುವುದರಲ್ಲಿ ಬಿಜೆಪಿಯವರು ಪಿತಾಮಹರು: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…

2 hours ago

ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿ ಬಂಧನ

ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…

2 hours ago