Categories: ಅಂಕಣಗಳು

ಸಹಜ ಉಸಿರಾಟಕ್ಕೆ ಕೆಲವು ಸೂತ್ರಗಳು

* ಡಾ.ದುಷ್ಯಂತ್ ಪಿ.

ವೃದ್ಧರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಅದು ಉಸಿರಾಟದ ಸಮಸ್ಯೆ, ಹಲವಾರು ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಉಸಿರಾಟದ ಸಮಸ್ಯೆಯಿಂದಾಗಿ ವಯೋವೃದ್ಧರ ಜೀವನದ ಗುಣಮಟ್ಟ (Quality of Life) ಕುಸಿಯುತ್ತದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ವಯೋಸಹಜವಾಗಿ ರೋಗನಿರೋಧಕ ಶಕ್ತಿ ಕುಂದಿ ಹೋಗಿರುತ್ತದೆ. ಇದರಿಂದ
ಅವರಲ್ಲಿ ಬಹುಬೇಗನ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ವೈರಸ್ ಮತ್ತು ಬ್ಯಾಕ್ಟಿರಿಯಾಗಳಿಂದಲೂ ತೀವ್ರವಾದ ಉಸಿರಾಟದ ಸಮಸ್ಯೆ ಎದುರಾಗಬಹುದು.

ಹಿರಿಯ ನಾಗರಿಕರೇನಾದರೂ ಹಲವು ರೀತಿಯ ದೀರ್ಘಾವಧಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರಂತೂ ಉಸಿರಾಟದ ಸೋಂಕಿನಿಂದ ಗುಣಮುಖರಾಗಲು ಸಾಧ್ಯವಾಗುವುದಿಲ್ಲ. ಕಾರಣ ಅವರ ಎದೆಯ ಕವಾಟದಲ್ಲಿನ ಸ್ನಾಯುಗಳಲ್ಲಿ ಬಲ ಕಡಿಮೆಯಾಗಿರುತ್ತದೆ. ಇದರಿಂದ ಶ್ವಾಸಕೋಶಗಳು ಕೆಲಸ ನಿರ್ವಹಿಸಲು ಪೂರ್ಣ ಸಾಮರ್ಥ್ಯ ಇರುವುದಿಲ್ಲ. ಇದು ಅವರಿಗೆ ಉಸಿರಾಟದ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗಬಹುದು. ಹಾಗಾಗಿ ವಯೋವೃದ್ಧರಿರುವ ಕಡೆ ಶುದ್ಧವಾದ ವಾತಾವರಣವಿರಬೇಕು. ಅಲ್ಲಿ ಹೊಗೆ, ಅಶುದ್ಧ ಗಾಳಿಯಿಂದಾಗಿ ವಾಯುಮಾಲಿನ್ಯವಿದ್ದರೆ ಅದು ಹಿರಿಯನಾಗರಿಕರಿಗೆ ತೊಂದರೆಯನ್ನುಂಟು ಮಾಡುತ್ತದೆ. ಗಾಳಿಯಲ್ಲಿ ಆಲರ್ಜಿ ಉಂಟುಮಾಡುವ ಅಂಶಗಳಿದ್ದರೂ ಅದು ಹಿರಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಕೆಲವೊಮ್ಮೆ ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿಲ್ಲದಿದ್ದಾಗಲೂ ಅವರ ಶ್ವಾಸಕೋಶದ ಒಟ್ಟು ಕ್ಷಮತೆ ಕಡಿಮೆಯಾಗಿ, ಬಹಳ ಬೇಗನೆ ಉಸಿರಾಟದ ಸಮಸ್ಯೆಗೆ ತುತ್ತಾಗುವ ಸಾಧ್ಯತೆಗಳಿರುತ್ತದೆ.

ಇಂತಹ ಉಸಿರಾಟದ ಸಮಸ್ಯೆ ಅವರ ಜೀವಿತಾವಧಿಯನ್ನು ಕ್ಷೀಣಿಸಬಹುದು. ಆದ್ದರಿಂದ ವಯೋವೃದ್ಧರು ಉಸಿರಾಟ ಸಮಸ್ಯೆ ಬಾರದಂತೆ ತಡೆಗಟ್ಟುವುದು ಅತ್ಯಗತ್ಯ, ಅದಕ್ಕಾಗಿ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ವೃದ್ಧಾಪ್ಯದಲ್ಲಿ ಕಂಡುಬರುವ ಉಸಿರಾಟದ ತೊಂದರೆಗಳನ್ನು ನಿರ್ಲಕ್ಷಿಸದೇ ಅದಕ್ಕೆ ಸೂಕ್ತ ಕ್ರಮ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಹಿರಿಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಲಹೆಗಳು:
1. ನಿಯದಿಂದ ದೈಹಿಕ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆ ಮಾಡಬೇಕು. ಇದರಿಂದಾಗಿ ಹಿರಿಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶ್ವಾಸಕೋಶಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

2. ಧೂಮದಾನ ಮಾಡಬಾರದು. ಧೂಮಪಾನ ಮಾಡುವುದರಿಂದ ಶ್ವಾಸಕೋಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಇದು ಉಸಿರಾಟದ ತೊಂದರೆ ಉಲ್ಬಣಿಸುವಂತೆ ಮಾಡುತ್ತದೆ. ಹಾಗಾಗಿ ಧೂಮಪಾನ ಮಾಡುವುದನ್ನು ತ್ಯಜಿಸಬೇಕು.

3. ಧೂಳು, ಹೊಗೆ, ರಾಸಾಯನಿಕಗಳಿಲ್ಲದ ಗಾಳಿ ಸೇವನೆ ಮಾಡಬೇಕು. ವಾಯುಮಾಲಿನ್ಯ ಹೆಚ್ಚಾದರೆ ಉಸಿರಾಟದ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಮಾನಸಿಕ ತೊಂದರೆಗಳೂ ಸಂಭವಿಸುವ ಸಾಧನೆಗಳಿರುತ್ತವೆ. ಮನೆಯಲ್ಲಿಯೂ ಹೆಚ್ಚಿನ ಗಾಳಿ ಬೆಳಕು ಸಂಚರಿಸುವಂತೆ ನೋಡಿಕೊಳ್ಳಬೇಕು.

4. ರೋಗನಿರೋಧಕ ಲಸಿಕೆ ಹಾಕಿಸಿಕೊಳ್ಳಬೇಕು. ಕೇವಲ ಮಕ್ಕಳಿಗೆ ಮಾತ್ರವಲ್ಲದೇ ವೃದ್ಧರಲ್ಲಿಯೂ ಕಾಣಿಸಿಕೊಳ್ಳುವ ಸೋಂಕುಗಳಿಗೆ ಲಸಿಗೆ ನೀಡಲಾಗುತ್ತದೆ ನ್ಯುಮೋನಿಯಾ ಮತ್ತು ಈ ಪ್ಲ್ಯೂ ಸೋಂಕಿಗೆ ಲಸಿಕೆ ತೆಗೆದುಕೊಳ್ಳುವುದರಿಂದ, ಸೋಂಕಿನ ಸಾಧ್ಯತೆ ಕಡಿಮೆಯಾಗುತ್ತದೆ.

5. ವೈದ್ಯರು ನೀಡುವ ಔಷಧಿಗಳನ್ನು ಕೆಲವೊಂದು ದೀರ್ಘಾವಧಿ ಶ್ವಾಸಕೋಶದ ತೊಂದರೆಗಳಿಗೆ (Chronic Pulmonary Obstructive disease- COPD) ನಿರಂತರವಾಗಿ ಚಿಕಿತ್ಸೆ ಅಗತ್ಯ ಈ ಕಾಯಿಲೆ ಇರುವವರಿಗೆ ಚಳಿಗಾಲದಲ್ಲಿ ರೋಗದ ಲಕ್ಷಣಗಳು ಉಲ್ಬಣಿಸುತ್ತವೆ. ಆಗ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯ.

6. ಶ್ವಾಸಕೋಶಕ್ಕೆ ಹೆಚ್ಚಾಗಿ ಹಾನಿಯಾಗಿ ಅದು ತನ್ನ ಕೆಲಸವನ್ನು ಮಾಡಲು ವಿಫಲವಾದರೆ ಕೃತಕವಾಗಿ ಆಮ್ಲಜನಕವನ್ನು ನೀಡಬೇಕು. ಈ ಪ್ರಕ್ರಿಯೆಯನ್ನು ಕೇವಲ ಆಸ್ಪತ್ರೆಯಲ್ಲಿದ್ದಾಗ ಮಾತ್ರವಲ್ಲದೆ ಮನೆಯಲ್ಲಿಯೂ ಮುಂದುವರಿಸಬೇಕಾಗುತ್ತದೆ. ಹಾಗಾಗಿ ವೃದ್ಧರ ಕುಟುಂಬದವರು ಆಕ್ಸಿಜನ್ ಯಂತ್ರ ಬಳಸುವ ರೀತಿ ಮತ್ತು ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.‌

7. ಶ್ವಾಸಕೋಶದ ಕ್ಷಮತೆ ಹೆಚ್ಚಿಸಲು ಪ್ರಾಣಾಯಾಮ ಮತ್ತು ಯೋಗ ಮಾಡಬೇಕು. ಈ ಅಭ್ಯಾಸವು ಶ್ವಾಸಕೋಶದ ಶಕ್ತಿ ಹೆಚ್ಚು ಮಾಡುತ್ತವೆ.

ಆಂದೋಲನ ಡೆಸ್ಕ್

Recent Posts

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ

13 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…

5 mins ago

ಕುವೈತ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ: ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ

ಕುವೈತ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್‌ ಮಿಶಾಲ್‌…

11 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

30 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

41 mins ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

52 mins ago

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

1 hour ago