ಈದ್ಗಾಕ್ಕೆ ಭೂಮಿ ನೀಡಿ ತಂದೆ ಆಸೆ ಪೂರೈಸಿದ ಸೋದರಿಯರು

ಈ ಜೀವ- ಈ ಜೀವನ ಪಂಜುಗಂಗೊಳ್ಳಿ ಅನಿತ, ಸರೋಜ ದಾನ ನೀಡಿದ ೨.೧ ಎಕರೆ ಭೂಮಿಯ ಈಗಿನ ಮಾರುಕಟ್ಟೆ ಬೆಲೆ ಕನಿಷ್ಟವೆಂದರೂ ೧.೨ ಕೋಟಿ ರೂಪಾಯಿ!

 

ಇತ್ತ ದೇಶದ ಹಲವೆಡೆ ಮಂದಿರ ಮಸೀದಿಗಳ ಹೆಸರಲ್ಲಿ ಜನರನ್ನು ಒಡೆಯುವ ಕೃತ್ಯಗಳು ನಡೆಯುತ್ತಿದ್ದರೆ, ಅದಕ್ಕೆ ಪ್ರತಿರೋಧವೋ ಎಂಬಂತೆ ಇದೇ ಮಂದಿರ ಮಸೀದಿಗಳ ಮೂಲಕ ಜಾತಿಧರ್ಮಗಳನ್ನು ಮೀರಿ ಜನರನ್ನು ಬೆಸೆಯುವ ಪ್ರಯತ್ನಗಳೂ ನಡೆಯುತ್ತಿವೆ. ಇದು ಅಂತಹ ಎರಡು ಉದಾಹರಣೆಗಳು.

ಡೆಹ್ರಾಡೂನ್‌ನ ಕಾಶೀಪುರದ ಲಾಲಾ ಭೃಜನಂದನ್ ರಸ್ತೋಗಿ ತನ್ನ ಜೀವಿತಾವಧಿಯುದ್ದಕ್ಕೂ ಕೋಮು ಸೌಹಾರ್ದದತೆಯನ್ನು ಬದುಕಿದ್ದ ಒಬ್ಬ ಸಾಧಾರಣ ರೈತ. ಗ್ರಾಮದ ಮುಸ್ಲಿಮರ ಯಾವುದೇ ಹಬ್ಬ, ವಿಶೇಷ ದಿನಗಳು ಬರಲಿ, ಅವರಿಗೆ ಪ್ರಪ್ರಥಮ ದೇಣಿಗೆ ಬರುತ್ತಿದ್ದುದು ಲಾಲಾ ಭೃಜನಂದನ್ ರಸ್ತೋಗಿಯವರಿಂದ. ಹಬ್ಬಹರಿದಿನಗಳಂದು ಮುಸ್ಲಿಂ ಶೃದ್ಧಾಳುಗಳಿಗೆ ಸಿಹಿ ತಿಂಡಿ ಹಾಗೂ ಹಣ್ಣುಗಳನ್ನು ಹಂಚುತ್ತಿದ್ದರು. ಕಾಶೀಪುರದ ಮುಸ್ಲಿಮರೆಲ್ಲರಿಗೂ ಲಾಲಾ ಭೃಜನಂದನ್ ಗೌರವದ ವ್ಯಕ್ತಿಯಾಗಿದ್ದರು.

೨೦೦೩ರಲ್ಲಿ ಅವರು ತೀರಿಕೊಂಡಾಗ ಅವರಿಗೆ ತೊಂಭತ್ತರ ಹತ್ತಿರದ ಪ್ರಾಯವಾಗಿತ್ತು. ಭೃಜನಂದನ್ ತೀರಿಕೊಂಡ ನಂತರ ಅವರ ಮಗ ರಾಕೇಶ್ ಕೂಡಾ ತಂದೆಯ ಕೋಮುಸೌಹಾರ್ದ ಜೀವನಕ್ರಮವನ್ನು ಮುಂದುವರಿಸಿದ್ದಾರೆ.

ಲಾಲಾ ಭೃಜನಂದನ್‌ಗೆ ಹೊಲಗದ್ದೆಗಳ ರೂಪದಲ್ಲಿ ಕೆಲವು ಎಕರೆ ಜಮೀನಿತ್ತು. ಅವರ ಮರಣಾನಂತರ ಅದು ಸಹಜವಾಗೇ ಮಗ ರಾಕೇಶ್ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಅನಿತಾ ಮತ್ತು ಸರೋಜರ ಪಾಲಿಗೆ ಬಂದಿತು. ಇತ್ತೀಚೆಗೆ ಒಂದು ದಿನ ಅನಿತಾ ಮತ್ತು ಸರೋಜ ಮನೆಯಲ್ಲಿ ಯಾರೋ ಸಂಬಂಧಿಕರೊಂದಿಗೆ ಮಾತಾಡುತ್ತಿರುವಾಗ, ಭೃಜನಂದನ್ ತನ್ನ ಜಮೀನಿನ ಚಿಕ್ಕದೊಂದು ಭಾಗವನ್ನು ಈದ್ ಸಮಯದಲ್ಲಿ ನಮಾಜು ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲದ ತನ್ನೂರಿನ ಮುಸ್ಲಿಂ ಬಾಂಧವರಿಗೆ ಕೊಡಬೇಕು ಅಂತ ಆಸೆ ಪಟ್ಟಿದ್ದರು, ಆದರೆ, ಅದನ್ನು ತನ್ನ ಮಕ್ಕಳ ಎದುರು ಹೇಳಲು ಧೈರ್ಯವಾಗದೆ ಅವರಾಸೆ ಹಾಗೆಯೇ ಉಳಿಯಿತು ಎಂಬ ವಿಷಯ ಅವರಿಗೆ ತಿಳಿಯುತ್ತದೆ.

೬೨ ವರ್ಷ ಪ್ರಾಯದ ಅನಿತಾ ತನ್ನ ಸಂಸಾರದೊಂದಿಗೆ ದೆಹಲಿಯಲ್ಲಿ ನೆಲಸಿದ್ದರೆ, ೫೭ ವರ್ಷದ ಸರೋಜ ತನ್ನ ಗಂಡ ಮಕ್ಕಳೊಂದಿಗೆ ಮೀರತ್‌ನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ಆ ವಿಚಾರವನ್ನು ಕೂಲಂಕಷವಾಗಿ ಚರ್ಚಿಸಿ, ಮುಂದೇನು ಮಾಡಬೇಕೆಂಬುದನ್ನು ತೀರ್ಮಾನಿಸುತ್ತಾರೆ. ಅದರಂತೆ, ಮೇ ತಿಂಗಳ ೪ರಂದು ಕಾಶೀಪುರಕ್ಕೆ ಬಂದು, ತಮ್ಮ ಸಹೋದರ ರಾಕೇಶ್‌ನ ನೆರವು ಪಡೆದು, ಈದುಲ್ ಫಿತ್‌ರ್‌ಗೆ ಎರಡು ದಿನಗಳಿರುವಾಗ ೨.೧ ಎಕರೆ ಜಮೀನನ್ನು ಸ್ಥಳೀಯ ಈದ್ಗಾಕ್ಕೆ ದಾನ ನೀಡಿ, ತಂದೆಯ ಕೊನೇ ಆಸೆಯನ್ನು ಪೂರೈಸುತ್ತಾರೆ! ಆ ಜಮೀನಿನ ಈಗಿನ ಮಾರುಕಟ್ಟೆ ಬೆಲೆ ಕನಿಷ್ಟವೆಂದರೆ ೧.೨ ಕೋಟಿ ರೂಪಾಯಿ!

 

ಕಾಶೀಪುರದ ಈದ್ಗಾದ ಅಕ್ಕಪಕ್ಕದಲ್ಲಿ ಒಂದು ಗುರುದ್ವಾರ ಮತ್ತು ಮತ್ತೊಂದು ಹನುಮಾನ್ ಮಂದಿರವಿದೆ. ಯಾವತ್ತೂ ಇಲ್ಲಿ ಕೋಮು ಸಂಘರ್ಷ ನಡೆದುದಿಲ್ಲ. ಬದಲಿಗೆ, ಒಬ್ಬರಿಗೊಬ್ಬರಿಗೆ ಹೊಂದಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೂರೂ ಧರ್ಮಗಳ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದ್ದ ದಿನ ಅದರ ಬಗ್ಗೆ ಪರಸ್ಪರ ತಿಳಿದುಕೊಂಡು ಒಬ್ಬರಿಗೊಬ್ಬರು ಸಹಕಾರ ನೀಡಿ ಆ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಉದಾಹರಣೆಗೆ, ಈದ್ಗಾ, ಗುರುದ್ವಾರ ಮತ್ತು ಹನುಮಾನ್ ಮಂದಿರದಲ್ಲಿ ಏಕಕಾಲಕ್ಕೆ ಲೌಡ್ ಸ್ಪೀಕರುಗಳನ್ನು ಬಳಸುವ ಪ್ರಸಂಗ ಬಂದರೆ ಆಗ ವಾಲ್ಯೂಮ್ ಕಡಿಮೆ ಮಾಡಿ, ಒಬ್ಬರಿಂದೊಬ್ಬರಿಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ.

ಕಾಶೀಪುರದ ಈದ್ಗಾದ ಅಕ್ಕಪಕ್ಕದಲ್ಲಿ ಒಂದು ಗುರುದ್ವಾರ ಮತ್ತು ಮತ್ತೊಂದು ಹನುಮಾನ್ ಮಂದಿರವಿದೆ. ಯಾವತ್ತೂ ಇಲ್ಲಿ ಕೋಮುಸಂಘರ್ಷ ನಡೆದುದಿಲ್ಲ. ಬದಲಿಗೆ, ಒಬ್ಬರಿಗೊಬ್ಬರಿಗೆ ಹೊಂದಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೂರೂ ಧರ್ಮಗಳ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದ್ದ ದಿನ ಅದರ ಬಗ್ಗೆ ಪರಸ್ಪರ ತಿಳಿದುಕೊಂಡು ಒಬ್ಬರಿಗೊಬ್ಬರು ಸಹಕಾರ ನೀಡಿ ಆ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಉದಾಹರಣೆಗೆ, ಈದ್ಗಾ, ಗುರುದ್ವಾರ ಮತ್ತು ಹನುಮಾನ್ ಮಂದಿರದಲ್ಲಿ ಏಕಕಾಲಕ್ಕೆ ಲೌಡ್ ಸ್ಪೀಕರುಗಳನ್ನು ಬಳಸುವ ಪ್ರಸಂಗ ಬಂದರೆ ಆಗ ವಾಲ್ಯೂಮ್ ಕಡಿಮೆ ಮಾಡಿ, ಒಬ್ಬರಿಂದೊಬ್ಬರಿಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ.

ಕೇರಳದ ಅರನ್ಮುಲ ಎಂಬಲ್ಲಿನ ಹನೀಫ್ ಮತ್ತು ಜಾಸ್ಮಿನ್ ಎಂಬ ದಂಪತಿಗಳು ಬಹಳ ವರ್ಷಗಳಿಂದ ಹಜ್ ಯಾತ್ರೆ ಮಾಡುವ ಕನಸು ಕಾಣುತ್ತಿದ್ದರು. ಈ ಬಾರಿ ಹಜ್ ಯಾತ್ರೆಗೆ ಹೋಗಿಯೇ ಬಿಡಬೇಕು ಎಂದು ನಿರ್ಧರಿಸಿ, ಬೇಕಾಗುವ ಹಣಕ್ಕಾಗಿ ತಮ್ಮ ಜಮೀನು ಮಾರಾಟ ಮಾಡುವ ತೀರ್ಮಾನ ಮಾಡುತ್ತಾರೆ. ಆದರೆ, ಕೊನೇಯ ಗಳಿಗೆಯಲ್ಲಿ ತಮ್ಮ ನಿರ್ಧಾರ ಬದಲಾಯಿಸಿ, ಹಜ್ ಯಾತ್ರೆ ಮಾಡಲು ತಾವು ಮಾರಬೇಕೆಂದಿದ್ದ ೨೮ ಸೆಂಟ್ಸ್ ಜಮೀನನ್ನು ಕೇರಳ ಸರ್ಕಾರಕ್ಕೆ ದಾನ ನೀಡುತ್ತಾರೆ!

ಹನೀಫ್ ಮತ್ತು ಜಾಸ್ಮಿನ್ ದಂಪತಿಗಳು ಹಾಗೆ ತೀರ್ಮಾನ ಮಾಡಲು ಮಾನವೀಯವಾದ ಒಂದು ಕಾರಣವಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರ ನೆರೆಮನೆಯವರೊಬ್ಬರು ತಮ್ಮ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಾಗ, ಅವರಿಗೆ ಸ್ವಂತ ಜಾಗವಿಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲು ಬಹಳ ಪರದಾಡಬೇಕಾಯಿತು. ಆಗ, ಅವರ ನೆರೆಮನೆಯಲ್ಲಿ ವಾಸಿಸುತ್ತಿದ್ದ ಅವರದೇ ಸಮುದಾಯದವರೊಬ್ಬರು ನಾಲ್ಕು ಸೆಂಟ್ಸ್ ಜಾಗ ಕೊಟ್ಟಾಗ ಅದರಲ್ಲಿ ಅವರು ಮೃತರ ಸಂತ್ಯಸಂಸ್ಕಾರ ನಡೆಸಿದರು. ಅದನ್ನು ನೋಡಿದ ಹನೀಫ್ ಮತ್ತು ಜಾಸ್ಮಿನ್ ದಂಪತಿಗಳು ಜಾಗ ಮಾರಿ ಆ ದುಡ್ಡಿನಿಂದ ಹಜ್ ಯಾತ್ರೆಗೆ ಹೋಗುವ ಬದಲು ಆ ಜಾಗವನ್ನು ಸ್ವಂತ ನೆಲೆಯಿಲ್ಲದವರಿಗಾಗಿ ಕೇರಳ ಸರ್ಕಾರ ಜಾರಿಗೆ ತಂದಿರುವ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಗೆ ದಾನ ನೀಡಿದರು.

ಕೇರಳ ಸರ್ಕಾರ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಗೆ ಈವರೆಗೆ ೧೩ ಕಡೆಗಳಲ್ಲಿ ಸುಮಾರು ೯೨೬ ಸೆಂಟ್ಸ್ ಜಾಗವನ್ನು ಪಡೆದುಕೊಂಡಿದೆ. ಮತ್ತು, ಬೇರೆ ೩೦ ಕಡೆ ೮೦೦ ಸೆಂಟ್ಸ್ ಜಾಗ ಸಿಗುವ ಭರವಸೆ ಸಿಕ್ಕಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಈವರೆಗೆ ೨,೯೫,೦೦೦ ಮನೆಗಳನ್ನು ನಿರ್ಮಿಸಿ ಸ್ವಂತ ಮನೆಯಿಲ್ಲದ ಬಡಬಗ್ಗರಿಗೆ ಹಸ್ತಾಂತರಿಸಿದೆ. ಇನ್ನು ೩೫,೦೦೦ ಮನೆಗಳು ನಿರ್ಮಾಣ ಹಂತದಲ್ಲಿದೆ. ಮೂರು ವರ್ಷಗಳಲ್ಲಿ ರಾಜ್ಯದ ಸುಮಾರು ೨.೫ ಲಕ್ಷ ಭೂರಹಿತರಿಗೆ ಮನೆ ನಿರ್ಮಿಸಿ ಕೊಡುವುದು ಸರ್ಕಾರ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಯ ಗುರಿಯಾಗಿದೆ.

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

6 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

6 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago