ಅಂಕಣಗಳು

ಸುವರ್ಣ ಸಂಭ್ರಮದಲ್ಲಿ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ

ಕೆ.ವಿ.ಶಂಕರಗೌಡರ ಹೆಸರು ಮಂಡ್ಯದಲ್ಲಿ ಚಿರಸ್ಥಾಯಿಯಾಗಿದ್ದು ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯಸಚಿವ ಎನಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾದವರು. ಶಿಕ್ಷಣ, ಸಹಕಾರ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬಹುಮುಖಿ ಸೇವೆಗಳನ್ನು ಸಲ್ಲಿಸಿ, ಮಂಡ್ಯ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾದರು. ನಾಡಿನ ಶಿಕ್ಷಣ ಮಂತ್ರಿಯಾಗಿ ಶ್ರೀಯುತರು ಶಿಕ್ಷಣ ಇಲಾಖೆಯಲ್ಲಿ ತಂದ ಸುಧಾರಣೆಗಳು ಅಪಾರ. ಇಡೀ ಕರ್ನಾಟಕದ ಅಂದಿನ ಎಲ್ಲ ಬೋಧಕರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡದ್ದು ಮಹತ್ವದ ಸಂಗತಿ.

ವರ್ತಮಾನದಲ್ಲೂ ಮಂಡ್ಯ ಎಂದರೆ ಕೆ.ವಿ.ಶಂಕರಗೌಡರ ಊರಲ್ಲವೇ ಎಂದು ನಾಡಿನಲ್ಲಿ ಸ್ಮರಿಸಿಕೊಳ್ಳುವುದಿದೆ. ಕೆ.ವಿ.ಶಂಕರಗೌಡರ ಷಷ್ಟ್ಯಾಬ್ದಿಯನ್ನು ೧೯೭೪ರಲ್ಲಿ ಆಚರಿ ಸುವ ಸುಸಂದರ್ಭ ದಲ್ಲಿ ‘ಕಬ್ಬಿನ ಹಾಲು’ ಎಂಬ ಅಭಿನಂದನಾ ಗ್ರಂಥವನ್ನು ಶ್ರೀಯುತರಿಗೆ ಅರ್ಪಿಸುವುದರ ಜೊತೆಗೆ ಅವರ ಒಂದು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ಕಾಲೇಜು ಈಗ ಚಿನ್ನದ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಕಾಲೇಜಿನ ಸ್ಥಾಪನೆಗೆ ಕಾರಣರಾದ ಇಬ್ಬರು ಮಹನೀ ಯರನ್ನು ಸ್ಮರಿಸಿಕೊಳ್ಳಬೇಕು.

ಮೈಸೂರು ವಿಶ್ವ ವಿದ್ಯಾನಿಲ ಯದ ಅಂದಿನ ಕುಲಪತಿಗಳಾಗಿದ್ದ ದೇಜಗೌ ಹಾಗೂ ಕರ್ನಾಟಕದ ರಾಜ್ಯದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಎಸ್.ಮಂಚಯ್ಯನವರ  ದೂರದೃಷ್ಟಿಯ ಫಲವಾಗಿ ಪ್ರಾರಂಭವಾದ ಕಾಲೇಜು ಇಂದು ಬೃಹತ್ ಆಗಿ ಬೆಳೆದು ಮಹತ್ವದ ಕೊಡುಗೆಗಳನ್ನು ನೀಡಿದೆ. ಬಿ.ಇಡಿ. ಎಂದರೆ ಏನು ಎಂದು ತಿಳಿದಿರದ ಅಂದಿನ ಕಾಲಘಟ್ಟದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬದುಕು ರೂಪಿಸಿಕೊಳ್ಳಲು ಈ ಕಾಲೇಜು ನೆರವಾಯಿತು. ಇಡೀ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದಲೂ ವಿದಾರ್ಥಿ, ವಿದ್ಯಾರ್ಥಿನಿಯರು ಇಲ್ಲಿ ಬಿ.ಇಡಿ. ತರಬೇತಿ ಪಡೆಯಲು ಬರುತ್ತಿದ್ದು, ಕಾಲೇಜಿನ ಹೆಸರು ವ್ಯಾಪಕವಾಗಿ ಹಬ್ಬಿದೆ. ವಿಶೇಷವಾಗಿ ಮಂಡ್ಯ ಜಿಲ್ಲೆಗೆ ಕಾಲೇಜಿನ ಕೊಡುಗೆ ಅನನ್ಯವಾದುದು.

೧೯೭೪ರಿಂದ ಈವರೆಗೆ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ, ಉಪನಿರ್ದೇಶಕರಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಪ್ರೌಢಶಾಲಾ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಮಾತ್ರವಲ್ಲದೆ, ಸರ್ಕಾರದ ಹಲವು ಸೇವಾ ವಲಯಗಳಲ್ಲಿ ಉನ್ನತ ಅಧಿಕಾರಿಗಳಾಗಿ, ನೌಕರರಾಗಿ ಸೇವೆಸಲ್ಲಿಸುತ್ತಿರುವುದು ಗೌರವದ ಸಂಗತಿಯಾಗಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲೂ ಕನಿಷ್ಠ ಇಬ್ಬರಾದರೂ ಈ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರೌಢಶಾಲೆಯ ಅಧ್ಯಾಪಕರ ಕೊರತೆಯನ್ನು ನೀಗಿಸಿದ ಕೀರ್ತಿ ಈ ಕಾಲೇಜಿಗಿದೆ.

ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ಕೇರಳ ರಾಜ್ಯದಲ್ಲಿ ಹೆಚ್ಚಾಗಿದ್ದು, ಅಲ್ಲಿಯೂ ಪ್ರೌಢ ಶಾಲೆಯ ಅಧ್ಯಾಪಕರ ಕೊರತೆಯನ್ನು ನೀಗಿಸಿರುವುದು ದಾಖಲಾರ್ಹ ಸಂಗತಿಯಾಗಿದೆ. ಹೀಗಾಗಿ ಶಂಕರ ಗೌಡ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ರಾಜ್ಯದಲ್ಲೇ ವಿಶಿಷ್ಟ ಸ್ಥಾನವಿದೆ.

ಡಾ.ಎಚ್.ಡಿ.ಚೌಡಯ್ಯನವರು ಜನತಾ ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾದ ಅವಧಿಯಲ್ಲಿ ಕಾಲೇಜು ತನ್ನ ಔನ್ನತ್ಯದ ಕ್ಷಿತಿಜ ಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಯಿತು. ೧೯೯೩ರಲ್ಲಿ ಸರ್ಕಾರದ ಅನುದಾನಕ್ಕೆ ಒಳಪಡಿಸುವಲ್ಲಿ ಸಾಫಲ್ಯವಾದುದು ಒಂದು ಪ್ರಮುಖ ಮೈಲಿಗಲ್ಲು. ಇದರಿಂದಾಗಿ ಕಾಲೇಜಿನ ಎಲ್ಲ ಸಿಬ್ಬಂದಿಗೆ ಭದ್ರತೆ ದೊರಕಲು ಅಡಿಪಾಯವಾಯಿತು.

ಕೇವಲ ನೂರು ಜನ ಓದುವ ಕಾಲೇಜಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದೆ. ನಾಲ್ಕು ವಿಶ್ವಕೋಶಗಳಿವೆ. ಎಲ್ಲವೂ ಸಾಧ್ಯವಾದದ್ದು ಕೆ.ವಿ.ಶಂಕರಗೌಡರ ದೂರದೃಷ್ಟಿಯ ಫಲದಿಂದ ಕೆ.ವಿ.ಶಂಕರಗೌಡ ಅವರು ಹಾಕಿದ ಬುನಾದಿ ಹಾಗೂ ಎಚ್.ಡಿ.ಚೌಡಯ್ಯನವರ ಆಡಳಿತದಲ್ಲಿ ಕಾಲೇಜು ಹೆಚ್ಚು ವಿಸ್ತಾರಗೊಂಡಿತು.

ಗ್ರಂಥಾಲಯದ ಜೊತೆಗೆ, ಕಂಪ್ಯೂಟರ್ ಲ್ಯಾಬ್, ಭಾಷಾ ಪ್ರಯೋಗಾಲಯ, ಎಲ್ಲ ಆಧುನಿಕ ಸೌಲಭ್ಯಗಳನ್ನೂ ಒಳಗೊಂಡು ತಂತ್ರಜಾ  ನಕ್ಕೆ ಒಗ್ಗಿಕೊಂಡಿದೆ. ಪ್ರಜಾಸತಾತ್ಮಕ ಆಶಯಗಳಿಗೆ ಅನುಗುಣವಾಗಿ ಮುನ್ನಡೆಯುತ್ತಿರುವುದು ವಿಶೇಷ. ಈ ಬಗೆಗಿನ ಘನತೆಯನ್ನು ಕಾಲೇಜಿಗೆ ತಂದುಕೊಡುವಲ್ಲಿ ಕೆ.ನಂಜಯ್ಯನವರು ೨೫ ವರ್ಷಗಳ ಕಾಲ ಪ್ರಾಂಶು ಪಾಲರಾಗಿ ಕಾಲೇಜನ್ನು ಮುನ್ನಡೆಸಿದ್ದಾರೆ. ಪ್ರೊ.ಸಿ.ಡಿ. ಸಿದ್ದಯ್ಯನವರು ನಿವೃತ್ತಿಯ ನಂತರವು ಇಂಗ್ಲಿಷ್ ಪ್ರಾಧ್ಯಾಪಕರಾಗಿ ವಿಶೇಷವಾದ ಸೇವೆ ಸಲ್ಲಿಸಿದ್ದಾರೆ.

” ಚಿನ್ನದ ಹಬ್ಬದ ಸಂಭ್ರಮದಲ್ಲಿದ್ದು, ಮಾಗಿದ ಶೈಕ್ಷಣಿಕ ಕಾರ್ಯನುಭವದಿಂದ ಕಾಲೇಜು ಮುಂದಡಿಯಿಡುತ್ತಿದೆ. ಶಿಕ್ಷಣ ಇಂದು ಸ್ಥಿತ್ಯಂತರಗೊಳ್ಳುತ್ತಿರುವ ಕಾಲಘಟ್ಟದಲ್ಲಿದೆ. ಜಾಗತಿಕ ಬದಲಾವಣೆಗೆ ಒಗ್ಗಿಕೊಳ್ಳುತ್ತಾ ತನ್ನ ಪರಂಪರೆಯನ್ನು ಬಿಟ್ಟುಕೊಡದೆ  ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯ ಸ್ಥಿತಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಿವೆ. ಇದನ್ನು ಸಾಧ್ಯ ಮಾಡಿಕೊಳ್ಳುತ್ತಾ ಶಿಕ್ಷಣದ ಫಲಾನುಭವದ ನಿರೀಕ್ಷೆಗಳನ್ನು ಈಡೇರಿಸುತ್ತಾ ಇನ್ನಷ್ಟು ಮಹತ್ವದ ಕೊಡುಗೆಗಳನ್ನು ಕೊಡುವಂತಾಗಲಿ.”

ಇಂದು ಕಾರ್ಯಕ್ರಮ: ಆ.೨೪ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಆವರಣದಲ್ಲಿ ಸುವರ್ಣ ಸಂಭ್ರಮದ ಕಾರ್ಯಕ್ರಮ ಆಯೋಜಿಸಲಾಗಿದೆ. ತುಮಕೂರು ರಾಮೃಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಧಾನ ಭಾಷಣ ಮಾಡುವರು.

-ಡಾ.ಅನಿತ ಮಂಗಲ, ಉಪನ್ಯಾಸಕರು, ಪಿಇಎಸ್ ಪ.ಪೂ.ಕಾಲೇಜು, ಮಂಡ್ಯ

ಆಂದೋಲನ ಡೆಸ್ಕ್

Recent Posts

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 10 ಮಂದಿ ನಕ್ಸಲರ ಹತ್ಯೆ

ಜಾರ್ಖಂಡ್:‌ ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…

20 mins ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…

48 mins ago

ಸದನದಲ್ಲಿ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮ ಆಗಲಿ: ಆರ್.‌ಅಶೋಕ್‌

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ಕಿಡಿಕಾರಿದ್ದಾರೆ.…

56 mins ago

ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ…

1 hour ago

ರಾಜ್ಯಪಾಲರು ಮಾಡಿದ 3 ವಾಕ್ಯಗಳ ಭಾಷಣದ ಅಂಶಗಳಿವು.!

ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್‌ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…

2 hours ago

ದಾವಣಗೆರೆ| ಕಿರು ಮೃಗಾಲಯದಲ್ಲಿ ನಾಲ್ಕು ಜಿಂಕೆಗಳ ಸಾವಿಗೆ ಕಾರಣ ಬಹಿರಂಗ

ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…

3 hours ago