ಅಂಕಣಗಳು

ಅರೆ ಘನಸ್ಥಿತಿಯ ಜೀವಾಮೃತ

• ಜಯಶಂಕರ್ ಬದನಗುಪ್ಪೆ

ಅರೆ ಘನಸ್ಥಿತಿಯ ಜೀವಾಮೃತ ಪರಿಸರ ಸ್ನೇಹಿ ಹಾಗೂ ಬಹುಪಯೋಗಿಯೂ ಹೌದು, ಸಸ್ಯಮಿತ್ರ ಜತೆಗೆ ರೈತ ಮಿತ್ರನೂ ಹೌದು.

ಅರೆ ಘನಸ್ಥಿತಿಯ ಜೀವಾಮೃತವನ್ನು ಹೆಚ್ಚಿನ ಪ್ರಮಾಣದ ಹಸುವಿನ ಸಗಣಿ (100 ಕೆ.ಜಿ.) ಮತ್ತು ಜೈವಿಕ ಪದಾರ್ಥ ಗಳಾದ 1 ಕೆ.ಜಿ. ಬೆಲ್ಲ, 1 ಕೆ.ಜಿ. ಬೇಳೆಕಾಳು ಹಿಟ್ಟು, ಕೈ ಬೆರಳೆಣಿಕೆಯಷ್ಟು ಫಲವತ್ತಾದ ಮಣ್ಣನ್ನು ಕಡಿಮೆ ಪ್ರವಾಣದ ನೀರಿನಲ್ಲಿ ಬೆರೆಸಿ ತಯಾರಿಸಲಾಗುತ್ತದೆ. ನಂತರ ಈ ಎಲ್ಲ ಪದಾರ್ಥಗಳ ಮಿಶ್ರಣದ ಸಣ್ಣ ಚೆಂಡುಗಳನ್ನು ತಯಾರಿಸಿ ಒಣಗಿಸಲಾಗುತ್ತದೆ. ನಂತರ ಅವುಗಳನ್ನು ಸಿಂಕ್ಲರ್ (ತುಂತುರು ನೀರಾವರಿ) ಅಥವಾ ಡ್ರಿಪ್ಟರ್‌ನ (ಹನಿ ನೀರಾವರಿ) ಬಾಯಿಯ ಬಳಿ ಇಡಲಾಗುತ್ತದೆ. ಈ ಅರೆ ಘನ ಜೀವಾಮೃತದ ಉಂಡೆಯ ಮೇಲೆ ನೀರು ಬಿದ್ದು ಸ್ಪರ್ಶಿಸಲ್ಪಟ್ಟಾಗಲೆಲ್ಲಾ ಸೂಕ್ಷ್ಮ ಜೀವಿಗಳು ಸಕ್ರಿಯಗೊಳ್ಳುತ್ತವೆ.

ಘನಸ್ಥಿತಿ ಜೀವಾಮೃತ ತಯಾರಿ ಹೇಗೆ?: ನೀರಿನ ಲಭ್ಯತೆ ಕಡಿಮೆ ಇದ್ದಾಗ ಇದನ್ನು ತಯಾರಿಸಲಾಗುತ್ತದೆ. ಕಾರ್ಮಿಕರ ಕೊರತೆಯ ಸಂಭವವಿದ್ದಾಗ ನಂತರದ ಬಳಕೆಗಾಗಿ ಈ ಘನ ಸ್ಥಿತಿಯ ಜೀವಾ ಮೃತ ಜೈವಿಕ ಗೊಬ್ಬರ)ವನ್ನು ಸಂಗ್ರಹಿಸಿಡಬಹುದು. ಇದಕ್ಕೆ 200 ಕೆಜಿ ಹಸುವಿನ ಸಗಣಿ ಬೇಕಾಗುತ್ತದೆ. ಅದನ್ನು ನೆಲದ ಮೇಲೆ ಏಕ ರೂಪವಾಗಿ ಹರಡಲಾಗುತ್ತದೆ ನಂತರ 20 ಲೀಟರ್ ನೀರನ್ನು ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಲಾಗುತ್ತದೆ. ಈ ಮಿಶ್ರಣವನ್ನು ರಾಶಿಯಾಗಿ (ಗುಡ್ಡೆಯ ರೂಪದಲ್ಲಿ) ಪರಿವರ್ತಿಸ ಲಾಗುತ್ತದೆ. 2 ದಿನಗಳು ಸೆಣಬಿನ ಚೀಲದಿಂದ ಮುಚ್ಚಿ ಹುದುಗಲು ಹಾಗೆಯೇ ಬಿಡಲಾಗುತ್ತದೆ. ನಂತರ ನೆಲದ ಮೇಲೆ ಹರಡಿ ಸಂಪೂರ್ಣವಾಗಿ ಒಣಗಿಸಲಾಗುತ್ತದೆ. ಬಳಿಕ ಅದನ್ನು ಕೋಣೆಯಲ್ಲಿ ಸೆಣಬಿನ ಚೀಲಗಳಲ್ಲಿ (ಜೀವಾಮೃತವನ್ನು) 6 ತಿಂಗಳುಗಳ ಕಾಲ ಸಂಗ್ರಹಿಸಿಡಬಹುದು. ಮಳೆಗಾಲದಲ್ಲಿ ಅಥವಾ ಯಾವುದೇ ನೀರಿನ ಲಭ್ಯತೆ ಇರುವ ಸಂದರ್ಭಗಳಲ್ಲಿ ಇದನ್ನು ಭೂಮಿಗೆ ಸೇರಿಸಬಹುದು. ಫಸಲು ಫಲವತ್ತಾಗಿ ಬೆಳೆಯುತ್ತದೆ. ಜೈವಿಕ ಕ್ರಿಯೆಗಳು ನಡೆಯಲು ಇದು ಉತ್ತೇಜಿಸುವುದರಿಂದ ಮಣ್ಣು ಕೂಡ ಆರೋಗ್ಯವಾಗಿರಲು ಸಹಾಯವಾಗುತ್ತದೆ.

200 ಕೆ.ಜಿ. ಘನಸ್ಥಿತಿ ಜೀವಾಮೃತವನ್ನು 1 ಎಕರೆ ಭೂಮಿಗೆ ಬಳಸಬಹುದು. ಬಿತ್ತನೆ ಅವಧಿಯಲ್ಲಿ, ಫಸಲು ಹೂ ಬಿಡುವ ಅವಧಿ ಯಲ್ಲಿ ಪ್ರತಿ ಎಕರೆ ಭೂಮಿಯಲ್ಲಿ ಎರಡು ಬೆಳೆ ರೇಖೆಗಳ ನಡುವೆ 50 ಕೆ.ಜಿ. ಅರೆ ಘನಸ್ಥಿತಿಯ ಗೊಬ್ಬರವನ್ನು ಸೇರಿಸಿದರೆ ಅದ್ಭುತ ಇಳುವರಿ ಯನ್ನು ನಿರೀಕ್ಷಿಸಬಹುದು.

ಅರೆ ಘನಸ್ಥಿತಿ ಜೀವಾಮೃತವನ್ನು 3 ವಿಧಾನಗಳಲ್ಲಿ ಬಳಸಬಹುದು: ನೀರಾವರಿ ನೀರಿನ ಕಾಲುವೆ, ಸ್ಪ್ರಿಂಕ್ಲರ್‌, ಹನಿ‌ ನೀರಾವರಿ ಜೀವಾಮೃತವನ್ನು 1 ಎಕರೆಗೆ 200 ಲೀಟರ್ ಗಿಂತ ಕಡಿಮೆಯಿಲ್ಲದ ನೀರಿನಲ್ಲಿ ತಯಾರಿಸ ಬೇಕು ಮತ್ತು ಮಿಶ್ರಣವನ್ನು ಸಿಂಪಡಣಾ ಅಥವಾ ಡ್ರಿಪ್ ಮೂಲಕ ಬಳಸುವ ಮೊದಲು ಅದನ್ನು ಫಿಲ್ಟರ್ ಮಾಡಬೇಕು. ಬಳಿಕ ಬೆಳೆಗಳ ಬೇರುಗಳಿಗೆ ಸುರಿಯಬಹುದು. ಈ ಬಗೆಯ ಜೀವಾಮೃತವನ್ನು ಬೆಳೆಗಳಿಗೆ ಅಥವಾ ಹಣ್ಣಿನ ಗಿಡಗಳಿಗೆ ಬೆಳವಣಿಗೆಯ ಹಾರ್ಮೋನ್ ಅಥವಾ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟಿರಿಯಲ್ ಸ್ಟೇ ಆಗಿಯೂ ಸಿಂಪಡಿಸಬಹುದು.

ಈ ಜೀವಾಮೃತವನ್ನು ನೇರವಾಗಿ ಬೇರಿನ ಮೇಲೆ ಅಥವಾ ಗದ್ದೆಯಲ್ಲಿನ ಸಾಲುಗಳಲ್ಲಿ ಇತರ ವಿಧದ ಸಸ್ಯಗಳಿಗೆ ಸಿಂಪಡಿಸಬಹುದು. ಜೀವಾಮೃತವನ್ನು ಕೈಯಿಂದಲೂ ನೀಡಬಹುದು. ಎರಡು ಮುಖ್ಯ ತರಕಾರಿ ಸಸ್ಯಗಳ ನಡುವೆ ಜೀವಾಮೃತವನ್ನು (50 ಮಿಲಿ) ಸೇರಿಸಲಾಗುತ್ತದೆ. ಈ ಪ್ರಕ್ರಿಯನ್ನು ಪ್ರತಿ ತಿಂಗಳು ಮೂರು ಬಾರಿ ಮಾಡಬೇಕು. ಕೊಯಿಲು ಪೂರ್ಣಗೊಳ್ಳುವವರೆಗೆ ಸತತ 4 ತಿಂಗಳ ವರೆಗೆ ಇದನ್ನು ಅನುಸರಿಸಬೇಕು.

ವೇಳಾಪಟ್ಟಿ: ಜೀವಾಮೃತದ ಮೊದಲ ಸಿಂಪಡಣೆಯನ್ನು ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಮಾಡಬೇಕು. 5 ಲೀಟರ್ ಜೀವಾಮೃತವನ್ನು 100ಲೀ. ನೀರಿಗೆ ಬೆರೆಸಿ 1 ಎಕರೆ ತರಕಾರಿ ಬೆಳೆಗಳಿಗೆ ಸಿಂಪಡಿಸಬಹುದು. ಬೇಸಿಗೆಯ ಋತುವಿನಲ್ಲಿ, ಮುಂಜಾನೆ ಅಥವಾ ಸಂಜೆ ಇದನ್ನು ಸಿಂಪಡಿಸುವುದು ಸೂಕ್ತ. ಚಳಿಗಾಲದಲ್ಲಿ ಯಾವುದೇ ಸಮಯದಲ್ಲಾದರೂ ಇದನ್ನು ಸಿಂಪಡಿಸಬಹುದು. ಮೊದಲ ಸಿಂಪಡಣೆಯ 21 ದಿನಗಳ ನಂತರ 2ನೇ ಸಿಂಪಡಣೆ ಮಾಡಬೇಕು. 10 ಲೀಟರ್ ಫಿಲ್ಟರ್ ಮಾಡಿದ ಜೀವಾಮೃತಕ್ಕೆ 150 ಲೀಟರ್ ನೀರನ್ನು ಸೇರಿಸಿ ಮಿಶ್ರಣ ಮಾಡಿ ನೀಡುವುದು ಉತ್ತಮ. 2ನೇ ಸಿಂಪಡಣೆಯ 21 ದಿನಗಳ ನಂತರ 3ನೇ ಸಿಂಪಡಣೆ ಮಾಡಬೇಕು. ಇಲ್ಲಿ 20 ಲೀಟರ್ ಫಿಲ್ಟರ್ ಮಾಡಿದ ಜೀವಾಮೃತದಲ್ಲಿ 200 ಲೀಟರ್ ನೀರನ್ನು ಸೇರಿಸಿ ಮಿಶ್ರಣವನ್ನು ಬೆಳೆಗಳಿಗೆ ಉಣಿಸಲಾಗುತ್ತದೆ.
(jshnkrm@gmail.com)

andolanait

Recent Posts

ಎಚ್‌ಡಿಕೆಯನ್ನು ಸಿಎಂ ಮಾಡ್ತೀವಿ ಎಂದು ವಿಜಯೇಂದ್ರ, ಅಶೋಕ್‌ ಹೇಳಲಿ: ದಿನೇಶ್‌ ಗುಂಡೂರಾವ್‌ ಸವಾಲು

ಬೆಂಗಳೂರು: ನಾವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಜಯೇಂದ್ರ ಹಾಗೂ ಆರ್.‌ಅಶೋಕ್‌ ಹೇಳಲಿ…

3 hours ago

ಮನರೇಗಾ ಹೆಸರು ಬದಲಾವಣೆ ಖಂಡಿಸಿ ನಾಳೆ ಬೃಹತ್‌ ಧರಣಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮನರೇಗಾ ಯೋಜನೆಯ ಹೆಸರನ್ನು ವಿಬಿ ಜೀ ರಾಮ್‌ ಜೀ ಎಂದು ಬದಲಾವಣೆ ಮಾಡಿದ ಕೇಂದ್ರ ಸರ್ಕಾರದ ನಡೆ ವಿರುದ್ಧ…

3 hours ago

ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರ ನಡೆದುಕೊಂಡ ಕ್ರಮ ಸರಿಯಲ್ಲ: ಮಾಜಿ ಮೇಯರ್‌ ಶಿವಕುಮಾರ್‌

ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದ ದಿನದಂದು ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆದುಕೊಂಡ ಕ್ರಮ ಕರ್ನಾಟಕದ ಇತಿಹಾಸದಲ್ಲೇ ನಡೆದ…

3 hours ago

ಮ್ಯಾನ್ಮಾರ್‌ನಲ್ಲಿ ಶೌರ್ಯ ಘರ್ಜನೆ: 9 ಮಂದಿ ಉಗ್ರರ ಸಂಹಾರ

ಮ್ಯಾನ್ಮಾರ್‌ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ಕೋವರ್ಟ್‌ ಆಪರೇಷನ್‌ ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ…

3 hours ago

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಸಜೀವ ದಹನ

ಡಾಕಾ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಕುಟುಂಬವು ಇದನ್ನು ಯೋಜಿತ ಕೊಲೆ ಎಂದು ಆರೋಪಿಸಿದೆ. ಬಾಂಗ್ಲಾದೇಶದ…

3 hours ago

ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತಾಯಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು…

3 hours ago