ಅಂಕಣಗಳು

ಮರದ ಮೆಟ್ಟಿಲುಗಳ ಲಯ ವಿನ್ಯಾಸ

• ಸಿರಿ ಮೈಸೂರು

‘ಬದುಕಿದ್ದಾಗ ಮರವಾಗಿ ಭೂಮಿಗೂ ಗಗನಕ್ಕೂ ಮಧ್ಯೆ ತಲೆಯೆತ್ತಿ ನಿಲ್ಲುತ್ತಿದ್ದ ಮರಗಳು ತಮ್ಮ ಕಾಲಾನಂತರ ಮನೆಯ ಎರಡು ಮಹಡಿಗಳ ಮಧ್ಯದ ಕೊಂಡಿಯಾಗಿ ವಿರಾಜಮಾನವಾಗಿರುತ್ತವೆ.

ಮರದ ಮೆಟ್ಟಿಗಳೆಂದರೆ ನನಗಂತೂ ಅದೇನೋ ಕೊನೆಯಿಲ್ಲದ ಸೆಳೆತ, ಪುರಾತನ ಮಹಲುಗಳ ಅಂದಕ್ಕೆ ಮುಕುಟವಿಟ್ಟಂತೆ ಕಾಣುವ ಈ ಮೆಟ್ಟಿಲುಗಳು ನೋಡಲು ಚೆಂದ. ವೈಭವೋಪೇತವಾಗಿ ಕಾಣುವ ಈ ಬೃಹತ್ ಮೆಟ್ಟಿಲುಗಳು, ವಿವಿಧ ವಿನ್ಯಾಸದ ಕಟಾಂಜನಗಳು, ಹಿಡಿಯಲ್ಲಿ ನಾಜೂಕಾಗಿ ಮೂಡಿಬಂದ ಚಿತ್ತಾರಗಳು, ಎಲ್ಲಕ್ಕೂ ಮೀರಿ ಮನಸ್ಸಿಗೆ ಅದೆಂತಹದ್ದೋ ಖುಷಿ ನೀಡುವ ಆ ಕಡು ಕಂದು ಮರದ ಬಣ್ಣ. ಆಹಾ! ಮರದ ಮೆಟ್ಟಿಲುಗಳ ಅಂದ ವರ್ಣಿಸಲಸದಳ.

ಮೈಸೂರು ಪಾರಂಪರಿಕ ಕಟ್ಟಡಗಳ ಆಗರ. ಇಲ್ಲಿನ ಸಾಕಷ್ಟು ಹಳೆಯ ಮನೆಗಳು, ಕಟ್ಟಡಗಳು, ಕಚೇರಿಗಳ ವಯಸ್ಸು ನೂರು ದಾಟಿದೆ. ಶತಮಾನಗಳಿಂದಲೂ ಗತವೈಭವದ ಕುರುಹಾಗಿ ನಮ್ಮ ನಡುವೆಯೇ ಇರುವ ಬೃಹದಾಕಾರದ ಎಲ್ಲ ಕಟ್ಟಡಗಳು, ಅರಮನೆಗಳಲ್ಲಿಯೂ ಮರದ ಮಟ್ಟಿಲುಗಳದ್ದೇ ರಾಜ್ಯಭಾರ. ಮರದ ಮೆಟ್ಟಿಲು ನೋಡಿದಾಗಲೇ ಅರ್ಥವಾಗಬೇಕು ಅದು ಅದೆಷ್ಟು ಹಳೆಯ ಕಟ್ಟಡವೆಂದು ಮೈಸೂರಿನ ಅತ್ಯಂತ ಪ್ರಸಿದ್ಧ ಅಂಬಾವಿಲಾಸ ಅರಮನೆ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಕಟ್ಟಡಗಳಲ್ಲಿ ಅತ್ಯಾಕರ್ಷಕ ಮರದ ಮೆಟ್ಟಿಲುಗಳನ್ನು ಕಾಣಬಹುದು. ಆಗಿನ ಕಾಲದಲ್ಲೆಲ್ಲಾ ರಾಜ-ಮಹಾರಾಜರು ರಾಜಪೋಷಾಕಿನಲ್ಲಿ, ರಾಜಪಾದುಕೆಗಳನ್ನು ತೊಟ್ಟು ಬರುವಾಗ ಉಂಟಾಗುತ್ತಿದ್ದ ‘ಟಕ್ ಟಕ್ ಟಕ್’ ಸದ್ದು ಸಹ ಈ ಮರದ ಮೆಟ್ಟಿಲುಗಳದ್ದೇ ಕೊಡುಗೆ!

ಈ ಮರದ ಮೆಟ್ಟಿಲುಗಳು ಅದೆಷ್ಟೋ ದಶಕಗಳ ಕಾಲ ಲೆಕ್ಕವಿರದದಷ್ಟು ಜನರ ಹೆಜ್ಜೆಗುರುತುಗಳಿಗೆ ಮೈಯೊಡ್ಡಿವೆ. ದುಃಖದಿಂದ ಕೂಡಿದ ಭಾರದ ಹೆಜ್ಜೆ, ಶೃಂಗಾರದ ಛಾಯೆಯಿರುವ ನಾಚಿಕೆಯ ಹೆಜ್ಜೆ, ಸಂತಸದಿಂದ ಕೂಡಿದ ಹೂವಿನಂತಹ ಹಗುರ ಹೆಜ್ಜೆ, ರೋಷಾವೇಶದ ಬಿರುಸಿನ ಹೆಜ್ಜೆ, ತುಂಟತನ ತುಂಬಿದ ಮಗುವಿನ ನಲಿವಿನ ಹೆಜ್ಜೆ, ನವಿರಾದ ಭಾವವುಳ್ಳ ನಾರಿಯ ನಾಜೂಕಿನ ಹೆಜ್ಜೆ, ಬದುಕಿನ ಆಳ-ಅಗಲ ಕಂಡ ಮುಪ್ಪಿನವರ ಅನುಭವದ ಹೆಜ್ಜೆ..ಅಬ್ಬಬ್ಬಾ! “ಅದೆಷ್ಟೆಲ್ಲಾ ಹೆಜ್ಜೆಗಳಿಗೆ ಇಷ್ಟೇ ಮೆಟ್ಟಿಲುಗಳಾ’ ಅನಿಸುತ್ತದೆ. ಇವೆಲ್ಲದರೊಂದಿಗೆ ಈ ಮರದ ಮೆಟ್ಟಿಲುಗಳು ಬದಲಾಗುತ್ತಿರುವ ಕಾಲದ ಹೆಜ್ಜೆಯ ಜಾಡನ್ನೂ ತನ್ನೊಡಲಿನಲ್ಲಿ ಭದ್ರವಾಗಿ ಇರಿಸಿಕೊಂಡಿವೆ. ರಾಜತಂತ್ರದಿಂದ ಪ್ರಜಾತಂತ್ರದವರೆಗೆ, ಪಾರಂಪರಿಕತೆಯಿಂದ ಆಧುನಿಕತೆಯವರೆಗೆ, ವೈಭವದ ದಿನಗಳಿಂದ ಸರಳತೆಯ ದಿನಗಳವರೆಗೆ ಬದಲಾಗುತ್ತಿರುವ ಕಾಲಮಾನದ ಕುರುಹಾಗಿ ನಿಂತಿವೆ.

ಉತ್ತಮ ಗುಣಮಟ್ಟದಲ್ಲಿ ತಯಾರಾದ ಮರದ ಮೆಟ್ಟಿಲುಗಳು ಆರೋಗ್ಯಕ್ಕೆ ಉತ್ತಮ, ಸ್ವಚ್ಛಗೊಳಿಸಲು ಸುಲಭ, ಹೆಚ್ಚು ಬಾಳಿಕೆ ಬರುತ್ತವೆ ಎಂಬೆಲ್ಲಾ ಲೌಕಿಕ ಕಾರಣಗಳೊಂದಿಗೆ ಮನೆಗೊಂದು ವೈಭವ ತಂದುಕೊಡುತ್ತದೆ ಎಂಬುದು ಮುಖ್ಯ ವಿಷಯ. ಅದೇನೇ ಇರಲಿ, ಮರದ ಮೆಟ್ಟಿಲುಗಳ ಮೇಲೆ ನನಗಿರುವ ವ್ಯಾಮೋಹವಂತೂ ಅನಾದಿಕಾಲದ ಆ ಮೆಟ್ಟಿಲುಗಳಂತೆಯೇ ಶತಮಾನಗಳ ಕಾಲವೂ ಗಟ್ಟಿಯಾಗೇ ಉಳಿಯುತ್ತದೆ.

ಅಂದ ಹಾಗೆ ಹೇಳಲು ಮರೆತೇ ಬಿಟ್ಟೆ. ಇಲ್ಲಿರುವುದು ಈಗ ಹೋಟೆಲಾಗಿ ಪರಿವರ್ತನೆಯಾಗಿರುವ ಮೈಸೂರಿನ ಒಂದು ಕಾಲದ ಬೇಸಿಗೆ ಅರಮನೆಯ ಮರದ ಮೆಟ್ಟಿಲುಗಳ ಫೋಟೋ.

sirimysuru18@gmail.com

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

11 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

15 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

15 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

15 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

15 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

16 hours ago