ಅಂಕಣಗಳು

ಮರದ ಮೆಟ್ಟಿಲುಗಳ ಲಯ ವಿನ್ಯಾಸ

• ಸಿರಿ ಮೈಸೂರು

‘ಬದುಕಿದ್ದಾಗ ಮರವಾಗಿ ಭೂಮಿಗೂ ಗಗನಕ್ಕೂ ಮಧ್ಯೆ ತಲೆಯೆತ್ತಿ ನಿಲ್ಲುತ್ತಿದ್ದ ಮರಗಳು ತಮ್ಮ ಕಾಲಾನಂತರ ಮನೆಯ ಎರಡು ಮಹಡಿಗಳ ಮಧ್ಯದ ಕೊಂಡಿಯಾಗಿ ವಿರಾಜಮಾನವಾಗಿರುತ್ತವೆ.

ಮರದ ಮೆಟ್ಟಿಗಳೆಂದರೆ ನನಗಂತೂ ಅದೇನೋ ಕೊನೆಯಿಲ್ಲದ ಸೆಳೆತ, ಪುರಾತನ ಮಹಲುಗಳ ಅಂದಕ್ಕೆ ಮುಕುಟವಿಟ್ಟಂತೆ ಕಾಣುವ ಈ ಮೆಟ್ಟಿಲುಗಳು ನೋಡಲು ಚೆಂದ. ವೈಭವೋಪೇತವಾಗಿ ಕಾಣುವ ಈ ಬೃಹತ್ ಮೆಟ್ಟಿಲುಗಳು, ವಿವಿಧ ವಿನ್ಯಾಸದ ಕಟಾಂಜನಗಳು, ಹಿಡಿಯಲ್ಲಿ ನಾಜೂಕಾಗಿ ಮೂಡಿಬಂದ ಚಿತ್ತಾರಗಳು, ಎಲ್ಲಕ್ಕೂ ಮೀರಿ ಮನಸ್ಸಿಗೆ ಅದೆಂತಹದ್ದೋ ಖುಷಿ ನೀಡುವ ಆ ಕಡು ಕಂದು ಮರದ ಬಣ್ಣ. ಆಹಾ! ಮರದ ಮೆಟ್ಟಿಲುಗಳ ಅಂದ ವರ್ಣಿಸಲಸದಳ.

ಮೈಸೂರು ಪಾರಂಪರಿಕ ಕಟ್ಟಡಗಳ ಆಗರ. ಇಲ್ಲಿನ ಸಾಕಷ್ಟು ಹಳೆಯ ಮನೆಗಳು, ಕಟ್ಟಡಗಳು, ಕಚೇರಿಗಳ ವಯಸ್ಸು ನೂರು ದಾಟಿದೆ. ಶತಮಾನಗಳಿಂದಲೂ ಗತವೈಭವದ ಕುರುಹಾಗಿ ನಮ್ಮ ನಡುವೆಯೇ ಇರುವ ಬೃಹದಾಕಾರದ ಎಲ್ಲ ಕಟ್ಟಡಗಳು, ಅರಮನೆಗಳಲ್ಲಿಯೂ ಮರದ ಮಟ್ಟಿಲುಗಳದ್ದೇ ರಾಜ್ಯಭಾರ. ಮರದ ಮೆಟ್ಟಿಲು ನೋಡಿದಾಗಲೇ ಅರ್ಥವಾಗಬೇಕು ಅದು ಅದೆಷ್ಟು ಹಳೆಯ ಕಟ್ಟಡವೆಂದು ಮೈಸೂರಿನ ಅತ್ಯಂತ ಪ್ರಸಿದ್ಧ ಅಂಬಾವಿಲಾಸ ಅರಮನೆ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಕಟ್ಟಡಗಳಲ್ಲಿ ಅತ್ಯಾಕರ್ಷಕ ಮರದ ಮೆಟ್ಟಿಲುಗಳನ್ನು ಕಾಣಬಹುದು. ಆಗಿನ ಕಾಲದಲ್ಲೆಲ್ಲಾ ರಾಜ-ಮಹಾರಾಜರು ರಾಜಪೋಷಾಕಿನಲ್ಲಿ, ರಾಜಪಾದುಕೆಗಳನ್ನು ತೊಟ್ಟು ಬರುವಾಗ ಉಂಟಾಗುತ್ತಿದ್ದ ‘ಟಕ್ ಟಕ್ ಟಕ್’ ಸದ್ದು ಸಹ ಈ ಮರದ ಮೆಟ್ಟಿಲುಗಳದ್ದೇ ಕೊಡುಗೆ!

ಈ ಮರದ ಮೆಟ್ಟಿಲುಗಳು ಅದೆಷ್ಟೋ ದಶಕಗಳ ಕಾಲ ಲೆಕ್ಕವಿರದದಷ್ಟು ಜನರ ಹೆಜ್ಜೆಗುರುತುಗಳಿಗೆ ಮೈಯೊಡ್ಡಿವೆ. ದುಃಖದಿಂದ ಕೂಡಿದ ಭಾರದ ಹೆಜ್ಜೆ, ಶೃಂಗಾರದ ಛಾಯೆಯಿರುವ ನಾಚಿಕೆಯ ಹೆಜ್ಜೆ, ಸಂತಸದಿಂದ ಕೂಡಿದ ಹೂವಿನಂತಹ ಹಗುರ ಹೆಜ್ಜೆ, ರೋಷಾವೇಶದ ಬಿರುಸಿನ ಹೆಜ್ಜೆ, ತುಂಟತನ ತುಂಬಿದ ಮಗುವಿನ ನಲಿವಿನ ಹೆಜ್ಜೆ, ನವಿರಾದ ಭಾವವುಳ್ಳ ನಾರಿಯ ನಾಜೂಕಿನ ಹೆಜ್ಜೆ, ಬದುಕಿನ ಆಳ-ಅಗಲ ಕಂಡ ಮುಪ್ಪಿನವರ ಅನುಭವದ ಹೆಜ್ಜೆ..ಅಬ್ಬಬ್ಬಾ! “ಅದೆಷ್ಟೆಲ್ಲಾ ಹೆಜ್ಜೆಗಳಿಗೆ ಇಷ್ಟೇ ಮೆಟ್ಟಿಲುಗಳಾ’ ಅನಿಸುತ್ತದೆ. ಇವೆಲ್ಲದರೊಂದಿಗೆ ಈ ಮರದ ಮೆಟ್ಟಿಲುಗಳು ಬದಲಾಗುತ್ತಿರುವ ಕಾಲದ ಹೆಜ್ಜೆಯ ಜಾಡನ್ನೂ ತನ್ನೊಡಲಿನಲ್ಲಿ ಭದ್ರವಾಗಿ ಇರಿಸಿಕೊಂಡಿವೆ. ರಾಜತಂತ್ರದಿಂದ ಪ್ರಜಾತಂತ್ರದವರೆಗೆ, ಪಾರಂಪರಿಕತೆಯಿಂದ ಆಧುನಿಕತೆಯವರೆಗೆ, ವೈಭವದ ದಿನಗಳಿಂದ ಸರಳತೆಯ ದಿನಗಳವರೆಗೆ ಬದಲಾಗುತ್ತಿರುವ ಕಾಲಮಾನದ ಕುರುಹಾಗಿ ನಿಂತಿವೆ.

ಉತ್ತಮ ಗುಣಮಟ್ಟದಲ್ಲಿ ತಯಾರಾದ ಮರದ ಮೆಟ್ಟಿಲುಗಳು ಆರೋಗ್ಯಕ್ಕೆ ಉತ್ತಮ, ಸ್ವಚ್ಛಗೊಳಿಸಲು ಸುಲಭ, ಹೆಚ್ಚು ಬಾಳಿಕೆ ಬರುತ್ತವೆ ಎಂಬೆಲ್ಲಾ ಲೌಕಿಕ ಕಾರಣಗಳೊಂದಿಗೆ ಮನೆಗೊಂದು ವೈಭವ ತಂದುಕೊಡುತ್ತದೆ ಎಂಬುದು ಮುಖ್ಯ ವಿಷಯ. ಅದೇನೇ ಇರಲಿ, ಮರದ ಮೆಟ್ಟಿಲುಗಳ ಮೇಲೆ ನನಗಿರುವ ವ್ಯಾಮೋಹವಂತೂ ಅನಾದಿಕಾಲದ ಆ ಮೆಟ್ಟಿಲುಗಳಂತೆಯೇ ಶತಮಾನಗಳ ಕಾಲವೂ ಗಟ್ಟಿಯಾಗೇ ಉಳಿಯುತ್ತದೆ.

ಅಂದ ಹಾಗೆ ಹೇಳಲು ಮರೆತೇ ಬಿಟ್ಟೆ. ಇಲ್ಲಿರುವುದು ಈಗ ಹೋಟೆಲಾಗಿ ಪರಿವರ್ತನೆಯಾಗಿರುವ ಮೈಸೂರಿನ ಒಂದು ಕಾಲದ ಬೇಸಿಗೆ ಅರಮನೆಯ ಮರದ ಮೆಟ್ಟಿಲುಗಳ ಫೋಟೋ.

sirimysuru18@gmail.com

andolanait

Recent Posts

ನಕ್ಸಲರ ಶರಣಾಗತಿ: ದಿಢೀರ್‌ ಬೆಂಗಳೂರಿಗೆ ಸ್ಥಳಾಂತರ

ಬೆಂಗಳೂರು: ರಾಜ್ಯದ ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಇಂದು ಶಸ್ತ್ರಸ್ತ್ರ ತ್ಯಜಿಸಿ ಶರಣಾಗುತ್ತಿದ್ದಾರೆ. ಇದಕ್ಕಾಗಿ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ…

27 mins ago

ಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಅಜೆಂಡಾ: ಬಿಜೆಪಿ ಕಿಡಿ

ಬೆಂಗಳೂರು: ಸಿಎಂ ಕುರ್ಚಿ ಉಳಿಸಿಕೊಳ್ಳುವ ಮತ್ತು ಒಲಿಸಿಕೊಳ್ಳುವ ಆಟವೇ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಅಜೆಂಡಾವಾಗಿದೆ ಎಂದು ಬಿಜೆಪಿ ಕಿಡಿಕಾರಿದ್ದಾರೆ. ಈ…

34 mins ago

ನಕ್ಸಲರ ಶರಣಾಗತಿ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದ ಬಿಜೆಪಿಯ ಸುನೀಲ್‌

ಬೆಂಗಳೂರು: ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿಯ ಪ್ರಧಾನ…

43 mins ago

ಡಾ. ಬಾಂಗ್ ದಂಪತಿಗಳೆಂಬ ಬುಡಕಟ್ಟು ಸಮುದಾಯದ ಡಾಕ್ಟರ್ ಜೋಡಿ ‌

೪೦ ವರ್ಷಗಳ ಹಿಂದೆ ಡಾ. ಅಭಯ್ ಬಾಂಗ್ ಮತ್ತು ಡಾ. ರಾಣಿ ಬಾಂಗ್ ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವೈದ್ಯಕೀಯ ಸಂಸ್ಥೆಯಲ್ಲಿ…

1 hour ago

ರಾಜ್ಯಾದ್ಯಾಂತ ಲೋಕಾಯುಕ್ತ ದಾಳಿ: ಎಂಟು ಕಡೆ ವ್ಯಾಪಕ ತಪಾಸಣೆ

ಬೆಂಗಳೂರು: ರಾಜ್ಯಾದ್ಯಾಂತ ಇಂದು ಬೆಳಿಗ್ಗೆ ಎಂಟು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ವ್ಯಾಪಕ ತಪಾಸಣೆ…

1 hour ago

ಬಹುನಿರಿಕ್ಷೀತ ಕ್ರಿಕೆಟ್‌ ಸ್ಟೇಡಿಯಂ ಕಾಮಗಾರಿ ಚುರುಕು

ಹೊದ್ದೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಮೈದಾನ; 11.70 ಎಕರೆ ಜಾಗದಲ್ಲಿ ನಿರ್ಮಾಣ ನವೀನ್ ಡಿಸೋಜ ಮಡಿಕೇರಿ: ಕರ್ನಾಟಕ ರಾಜ್ಯ…

2 hours ago