ಅಂಕಣಗಳು

ಅಪರೂಪದ ಶಿಲ್ಪಿ ಅಪ್ಪನೆರವೆಂಡ ಕಿರಣ್ ಸುಬ್ಬಯ್ಯ

ನಂದಿನಿ ಎನ್.

‘ಪ್ರಶಸ್ತಿಗಾಗಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಬೆಣ್ಣೆ ಹಚ್ಚಬೇಕೇ? ಹಚ್ಚು ವುದಾದರೆ ಎಷ್ಟು? ತಿಳಿದವರು ಸಲಹೆ ನೀಡಿ’ ಎಂಬ ಆಂಗ್ಲ ಬರಹದ ಕೆಂಪು ಬಣ್ಣದ ಫಲಕ, ಯಾದವಗಿರಿ ಕಡೆಗೆ ಹೊರಟವಳಿಗೆ, ಹೈವೇ ವೃತ್ತದ ಬಳಿ ಕಣ್ಣಿಗೆ ಬಿತ್ತು.

ಇದೆಂಥ ಮಜ ಎಂದು ತಕ್ಷಣಕ್ಕೆ ಅನ್ನಿಸಿದರೂ, ಅತಿರೇಕದ ಬರಹ ಅನ್ನಿಸಿದ್ದು ಸುಳ್ಳಲ್ಲ ! ಯಾರಿದು ಬರೆದವರು ಎಂದು ಹುಡುಕುತ್ತಿದ್ದ ಕಣ್ಣಿಗೆ ಬಿದ್ದದ್ದು ‘KS Museum of Sculptures ಮತ್ತು ‘A ಕಿರಣ್ ಸುಬ್ಬಯ್ಯ’ ಎಂಬ ಹೆಸರು. ಕುತೂಹಲದಿಂದ ‘ಶಿಲ್ಪನಿಕೇತನ’ ದ ಆ ಬರಹದ ಕೆಳಗಿದ್ದ ಮೊಬೈಲ್ ಗೆ ಫೋನಾಯಿಸಿದೆ. ಫೋನಿನಲ್ಲಿ ನಿರ್ಧರಿಸಿದಂತೆ ಮಧ್ಯಾಹ್ನ ಎರಡರ ಹೊತ್ತಿಗೆ ಶಿಲ್ಪನಿಕೇತನಕ್ಕೆ ಹೋದವಳನ್ನು ಸ್ವಾಗತಿಸಿದ್ದು ಕೈಯಲ್ಲಿ ಸುಡುತ್ತಿದ್ದ ಸಿಗರೇಟ್ ಹಿಡಿದಿದ್ದ, 73 ರ ತುಂಬು ಹರೆಯದ, ಸುರದ್ರೂಪಿ, ಅಪರೂಪದ ಶಿಲ್ಪಿ, ಶ್ರೀಯುತ ಅಪ್ಪನೆರವೆಂಡ ಕಿರಣ್ ಸುಬ್ಬಯ್ಯರವರು . ಅವರೊಡನೆ ಉಭಯ ಕುಶಲೋಪರಿಯೊಂದಿಗೆ ಗೇಟು ದಾಟುತ್ತಿದ್ದಂತೆ ಕಂಡಿದ್ದೊಂದು ಸುಂದರ ಗಣಪ ! ಕುಳಿತು ಮಾತನಾಡೋಣ ಎನ್ನುವ ಅವರ ಸಲಹೆಗೆ ತದನಂತರ ಎಂದು ಹೇಳಿ ಶಿಲ್ಪಗಳನ್ನು ನೋಡಲು ಮೊದಲು ಮಾಡಿದೆ. ಗಣಪನ ಹಿಂದೆ ಕುಳಿತಿದ್ದ 135 ಹೆಡೆಯ ಶೇಷ ತುಂಬಾ ಆಕರ್ಷಕನಾಗಿದ್ದ. ಆದರೆ ನನಗೋ ಅಲ್ಲಿಗೆ ಹೋಗುವ ಮುನ್ನ ಜಾಲತಾಣದಲ್ಲಿ ನೋಡಿದ್ದ ಅವರ ಅಪರೂಪದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಬಹುಮುಖ ಶಿಲ್ಪಗಳನ್ನು ನೋಡಲು ಮನಸ್ಸು ಹಾತೊರೆಯುತ್ತಿತ್ತು.

ದ್ವಿಮುಖ ಶಿಲ್ಪದಿಂದ ಹಿಡಿದು ಪಂಚಮುಖಿ ಶಿಲ್ಪಗಳನ್ನು ಕೆತ್ತಿರುವ ಹೆಗ್ಗಳಿಕೆ ಕಿರಣ್‌ ಅವರದ್ದು ! ಒಂದೇ ಶಿಲ್ಪದಲ್ಲಿ ರಾಜ, ರಾಣಿ, ಅರ್ಧನಾರೀಶ್ವರ ಹೀಗೆ ಅನೇಕ ಮುಖಗಳನ್ನು ನೋಡಬಹುದು. ಈ ರೀತಿಯ ಶಿಲ್ಪಗಳು ಪ್ರಪಂಚದ ಬೇರೆಲ್ಲೂ ಕಾಣಸಿಗದು ಎಂಬುದು ಸುಬ್ಬಯ್ಯರ ಅಂಬೋಣ! ಚಿತ್ರಕಲೆಯಿಂದ ಪ್ರಾರಂಭಗೊಂಡ ಇವರ ಕಲಾಪಯಣ, ಕೃಷ್ಣ ಶಿಲೆಯಲ್ಲಿ ನುಣುಪಾಗಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ಶಿಲ್ಪಗಳನ್ನು ಕೆತ್ತುವುದಲ್ಲದೇ, ಕಾಷ್ಠ ಶಿಲ್ಪಗಳನ್ನೂ ಕೆತ್ತನೆ ಮಾಡುವ ತನಕ ಮುಟ್ಟಿದೆ. ಇದಲ್ಲದೇ ಕೊಡವ ಭಾಷೆಗೆ ಲಿಪಿಯನ್ನು ಅಭಿವೃದ್ಧಿಗೊಳಿಸಿರುವ ಇವರ ಸಾಮರ್ಥ್ಯ ಮತ್ತು ಬದ್ದತೆಗೆ ನಾವು ತಲೆದೂಗಲೇಬೇಕು.

ಕೊಡಗಿನ ಪಾರಣೆ ಗ್ರಾಮ ಇವರ ಮೂಲ ಸ್ಥಾನ. ಕೊಡವ ಮನೆತನದವರಾದ ಇವರು ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಹಾಗೂ ನೆಲೆಸಿದ್ದು ಮೈಸೂರು. ಅನಾಸಕ್ತಿ ಆಧುನಿಕ ಶಿಕ್ಷಣವನ್ನು ಮೊಟುಕುಗೊಳಿಸಿದರೂ, ಆಸಕ್ತಿ ಕಲೆಯ ರೂಪದಲ್ಲಿ ವಿದ್ಯೆಯ ಕೈಹಿಡಿಯಿತು. ಒಬ್ಬನೇ ಮಗ ಎಲ್ಲ ರಂತಿರದೆ ಭಿನ್ನ ಹಾದಿಯಲ್ಲಿ ಬದುಕಬಲ್ಲನೇ ಎಂಬ ಪೋಷಕರ ಆತಂಕ, ಪ್ರತಿಭಾವಂತ ವಿದ್ಯಾರ್ಥಿಯಾ ದರೂ ಗುರುಗಳಿಂದಲೇ ಶೋಷಣೆಗೆ ಒಳಗಾದ ಅವಮಾನ, ಬೆಂಬಲಿಸಬೇಕಾಗಿದ್ದ ಸಮಾಜದಲ್ಲಿನ ಇತರ ಗಣ್ಯ ಶಿಲ್ಪಿಗಳಿಂದ ದೊರೆತ ಅಸೂಯೆ, ಇವೆಲ್ಲವನ್ನು ಮೀರಿ ನಿಂತು, ಏಕಲವ್ಯನಂತೆ ಸಾಧನೆಯೊಂದರಿಂದಲೇ ಅಪ್ರತಿಮ ಶಿಲ್ಪಿಯಾದ ಕಿರಣ್ ಸುಬ್ಬಯ್ಯರ ಜೀವನ ಗಾಥೆ ನಿಜಕ್ಕೂ ರೋಚಕ!

ಶ್ರೀಮತಿ ಸ್ವಾತಿ ಅಕ್ಕಮ್ಮರನ್ನು ವಿವಾಹವಾಗಿ ಮೂವರು ಪುತ್ರಿಯರನ್ನು ಪಡೆದು, ಜೀವನೋಪಾಯಕ್ಕಾಗಿ ಶಾಸ್ತ್ರೀಯ ಶಿಲ್ಪಗಳನ್ನು ಕೆತ್ತಿ ಮಾರಬೇಕಾಯ್ತು, ಕಟ್ಟಡ ಕಟ್ಟಿ ಬಾಡಿಗೆಗೆ ಕೊಡುವುದಲ್ಲದೇ, ಕೊನೆಗೆ ಅದನ್ನೂ ಮಾರಬೇಕಾಯ್ತು. ಆದರೂ ಯಾವುದಕ್ಕೂ ವಿಚಲಿತರಾಗದೆ ಬಹುಮುಖ ಶಿಲ್ಪ ಕೆತ್ತನೆಯನ್ನು ತಪಸ್ಸಿನಂತೆ ಮುಂದುವರಿಸಿಕೊಂಡು ಬಂದದ್ದು ಸಾಮಾನ್ಯ ಸಂಗತಿಯಂತೂ ಅಲ್ಲ ! ಕಾರಣ, ಈ ವಿಭಿನ್ನ ಶಿಲ್ಪಕಲಾ ಪ್ರಾಕಾರಕ್ಕೆ ಭಾರತದಲ್ಲಿ ಹೆಚ್ಚಿನ ಅರಿವಾಗಲಿ, ಬೇಡಿಕೆಯಾಗಲಿ ಇಲ್ಲ . ಅಂತರ ರಾಷ್ಟ್ರೀಯ ಮತ್ತು ಪಶ್ಚಿಮ ದೇಶಗಳು ಇಂತಹ ವಿಭಿನ್ನ ಕಲೆಗಳಿಗೆ ಹೆಚ್ಚಿನ ಮಾರುಕಟ್ಟೆಗಳನ್ನು ಒದಗಿಸುತ್ತವೆ. ಆದ್ದರಿಂದ ಇಂತಹ ಕಲಾವಿದರಿಗೆ ಸರ್ಕಾರ ಮಾನ್ಯತೆ ಮತ್ತು ಪ್ರಚಾರ ಕೊಡಬೇಕಾಗು ಇದೆ. ಆದರೆ ಸರ್ಕಾರ ಬೆಂಬಲಿಸುವುದು ಒತ್ತಟ್ಟಿಗಿರಲಿ, ವಾಸ ಸ್ಥಳದಲ್ಲಿ ಶಿಲ್ಪ ಸಂಗ್ರಹಾಲಯ ದಂತಹ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ಹೆಚ್ಚಿನ ಸುಂಕ ವಸೂಲಿ ಮಾಡಲಾಗು ತ್ತಿದೆ ಎಂದು ಬೇಸರಿಸುತ್ತಾರೆ ಸುಬ್ಬಯ್ಯ. ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಬಂದು ಶಿಲ್ಪಗಳನ್ನು, ಸುಬ್ಬಯ್ಯರನ್ನು ಹೊಗಳಿ, ಸಾಕಷ್ಟು ಆಶ್ವಾಸನೆಗಳನ್ನು ಕೊಟ್ಟಿದ್ದಾರೆ ಆದರೆ ಯಾವುದೂ ನೆರವೇರಿಲ್ಲ ಅಷ್ಟೇ ! ಸಂಗ್ರಹಾಲಯದ ಮುಂದಿದ್ದ ಫಲಕವನ್ನು ವಿಲಕ್ಷಣ ಎಂದೆಣಿಸಿದ ನನಗೆ ಅವರ ಕಥೆಯನ್ನು ಕೇಳಿ ಉತ್ತರ ಸಿಕ್ಕಂತಾಯಿತು!!
nandininagacharya@gmail.com

andolanait

Recent Posts

ಶಿವಮೊಗ್ಗ ಜೈಲಿನಿಂದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಬಿಡುಗಡೆ

ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿ ಬಂಧಿತನಾಗಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಚಿನ್ನಯ್ಯನಿಗೆ…

7 mins ago

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

ರಾಮನಗರ: ರಾಮನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕಾಸ್‌, ಪ್ರಶಾಂತ್‌, ಚೇತನ್‌…

35 mins ago

ಚಾಮರಾಜನಗರ| ಕಾಡಾನೆ ದಾಳಿ: ವ್ಯಕ್ತಿ ಸಾವು

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಜಲ್ಲಿಪಾಳ್ಯ ಹತ್ತಿರ ಬೈಕ್‌ನಲ್ಲಿ…

1 hour ago

ಸಿದ್ದರಾಮಯ್ಯ ಔಟ್‌ ಗೋಯಿಂಗ್‌ ಸಿಎಂ: ಬಿ.ವೈ.ವಿಜಯೇಂದ್ರ ಲೇವಡಿ

ಬೆಳಗಾವಿ: ಸಿದ್ದರಾಮಯ್ಯ ಔಟ್‌ ಗೋಯಿಂಗ್‌ ಸಿಎಂ. ಇದು ಅವರ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ ಮಾಡಿದ್ದಾರೆ.…

1 hour ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…

2 hours ago

ಓದುಗರ ಪತ್ರ: ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಿ

ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)…

2 hours ago