• ಪ್ರಶಾಂತ್ ಎಸ್.
ರಂಗಭೂಮಿ ಕಲಾವಿದೆಯಾಗಿ ‘ಪುಟ್ಟಗೌರಿ ಮದುವೆ’ ಎಂಬ ಕಿರುತೆರೆ ಧಾರಾವಾಹಿಯ ಮೂಲ ಗೌರಿಯಾಗಿ ಕರುನಾಡಿನ ಮನೆ ಮಾತಾಗಿದ್ದ ರಂಜನಿ ರಾಘವನ್ ತಮ್ಮ ನಟನೆಯ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡ ಬೆಡಗಿ. ಇತ್ತೀಚೆಗೆ ತೆರೆಕಂಡ ‘ಕನ್ನಡತಿ’ ಧಾರಾವಾಹಿಯ ಭುವಿ ಅಲಿಯಾಸ್ ಸೌಪರ್ಣಿಕಾ ಪಾತ್ರದಲ್ಲಿ ರಂಜನಿ ರಾಘವನ್ ಮಿಂಚಿದ್ದಾರೆ.
ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ನಟಿಸಬೇಕು ಎಂಬುದು ರಂಜನಿ ರಾಘವನ್ ರವರ ಮನದ ಆಶಯ. ಅದರಂತೆ ಈಗ ಅವರ ನಟನಾ ಪ್ರತಿಭೆಗೆ ಪ್ರತಿಫಲವೆಂಬಂತೆ ಇದೀಗ ಅವರ ಅಭಿನಯದ ಮೂರು ಸಿನಿಮಾಗಳು ಸೆಟ್ಟೇರಲು ಸಿದ್ದವಾಗುತ್ತಿವೆ. ‘ಸತ್ಯಂ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಅವರು ತಮ್ಮ ಅನುಭವದ ಬಗ್ಗೆ ‘ಆಂದೋಲನ’ ಪತ್ರಿಕೆಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಂತೋಷ್ ಬಾಲರಾಜ್ ನಾಯಕನಾಗಿ ಅಭಿನಯಿಸುತ್ತಿರುವ ‘ಸತ್ಯಂ’ ಒಂದು ಫ್ಯಾಮಿಲಿ ಎಂಟರ್ ಟೇನರ್ ಹಾಗೂ ಮಾಸ್ ಮತ್ತು ಕ್ಲಾಸ್ ಸಿನಿಮಾ ಆಗಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಗೀತಾ ಎಂಬ ಮಲೆನಾಡಿನ ಹುಡುಗಿಯ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಬಹಳ ಆಸಕ್ತಿದಾಯಕ ಕಥೆ ಹೊಂದಿರುವ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡುವ ಹಾಗೆ ಮೂಡಿಬಂದಿದ್ದು, ಇದರ ಹಾಡುಗಳೂ ಸುಮಧುರವಾಗಿ ಮೂಡಿಬಂದಿವೆ ಎನ್ನುತ್ತಾರೆ ರಂಜನಿ ರಾಘವನ್.
ನನಗೆ ಕಥೆಯೇ ಮುಖ್ಯ: ಜನ ನನ್ನನ್ನು ತಮ್ಮ ಮನೆ ಮಗಳಾಗಿ ನೋಡುತ್ತಿದ್ದಾರೆ. ಹಾಗಾಗಿ ನನ್ನ ಪಾತ್ರಗಳ ಆಯ್ಕೆ ಮುಖ್ಯವಾಗಿರುತ್ತದೆ. ನಾನು ಕಥೆಗೆ ಪ್ರಾಮುಖ್ಯತೆ ಕೊಡುತ್ತೇನೆ. ನನ್ನ ಪಾತ್ರ ಮಲಯಾಳಂನಲ್ಲಿ ಸಾಯಿ ಪಲ್ಲವಿ ಒಪ್ಪಿಕೊಳ್ಳುವ ಸಿನಿಮಾದ ರೀತಿ ಇರುತ್ತದೆ. ಈಗ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿನ ನನ್ನ ಪಾತ್ರಗಳೂ ಹಾಗೆಯೇ ಇವೆ. ಪಕ್ಕದ ಮನೆಯ ಹುಡುಗಿ ಎನ್ನುವ ಭಾವನೆ ಮೂಡಿಸುವ ಆಪ್ತವಾಗುವಂಥ ಪಾತ್ರಗಳು ನನ್ನ ಹೆಚ್ಚಿನ ಆಯ್ಕೆಯಾಗಿರುತ್ತವೆ.
ಸಿನಿಮಾದತ್ತ ಗಮನ: ಕನ್ನಡತಿ ಧಾರಾವಾಹಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಂಜನಿ ಅವರು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದವರು. ಆದರೆ ಸಿನಿಮಾ ಬಗ್ಗೆ ಒಂದಷ್ಟು ಕನಸುಗಳನ್ನು ಹೊಂದಿರುವ ಅವರು ಸಿನಿಮಾಗಳಲ್ಲಿಯೂ ಸಾಕಷ್ಟು ಉತ್ತಮ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ.
‘ಸತ್ಯಂ’ ಸಿನಿಮಾ ಒಂದು ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾವಾಗಿದ್ದು, ಇದರಲ್ಲಿ ಮಾಸ್ ಮತ್ತು ಕ್ಲಾಸ್ ಎಲ್ಲವೂ ಇದೆ. ಗೀತಾ ಎಂಬ ಮಲೆನಾಡಿನ ಹುಡುಗಿಯ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ಸಿನಿಮಾದ ಗೀತಾ ಎನ್ನುವ ಪಾತ್ರ ನನಗೆ ಬಹಳ ಖುಷಿ ಕೊಟ್ಟಿದೆ. ಬಹಳ ಆಸಕ್ತಿದಾಯಕ ಕಥೆ ಹೊಂದಿರುವ ಈ ಸಿನಿಮಾ ಸುಂದರವಾಗಿ ಮೂಡಿಬಂದಿದೆ. ಅಲ್ಲದೆ ಇದರ ಹಾಡುಗಳು ಸಹ ಬಹಳ ಚೆನ್ನಾಗಿವೆ
-ರಂಜನಿ ರಾಘವನ್
Prashanthsmysore5@gmail.com
ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…
ಕುವೈತ್/ನವದೆಹಲಿ: 26ನೇ ಅರೇಬಿಯನ್ ಗಲ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್ ದೊರೆ ಶೇಖ್ ಮಿಶಾಲ್…
371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…
‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…
ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…