ಅಂಕಣಗಳು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಸ್ಟಿಂಗ್‌ ಬಲೆಯಲ್ಲಿ ಸಿಲುಕಿದೆ ರಾಜ್ಯ ರಾಜಕಾರಣ

ಸ್ಟಿಂಗ್ ಆಪರೇಷನ್ ಸ್ವರೂಪ ಬದಲಾಗಿದ್ದು ರಾಜ್ಯದ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ

ಅಂದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಬಲೆಯಲ್ಲಿ ಸಿಲುಕಿಸಿ ಮುಖ್ಯಮಂತ್ರಿ ಹುzಯಿಂದ ಕೆಳ ಗಿಳಿಸಲಾಯಿತು ಎಂದು ಜಾ.ದಳ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ ನಂತರ ಭುಗಿಲೆದ್ದ ಸ್ಟಿಂಗ್ ಆಪರೇಷನ್ ವಿವಾದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಗಮನಿಸಬೇಕಾದ ಸಂಗತಿ ಎಂದರೆ, ಸ್ಟಿಂಗ್ ಆಪರೇಷನ್ ಎಂಬುದು ಕರ್ನಾಟಕದ ರಾಜಕಾರಣಕ್ಕೆ ಹೊಸ ಪದವಲ್ಲ, ಅದೇ ರೀತಿ ಇದು ಹೆಣ್ಣನ್ನು ಬಳಸಿಯಷ್ಟೇ ಮಾಡುವ ಕೆಲಸಕ್ಕೆ ಸೀಮಿತವಾಗಿಲ್ಲ. ಶುರುವಿನಲ್ಲಿ ಅಕ್ರಮವನ್ನು ಬಯಲಿಗೆಳೆಯುವ ಸಾಧನವಾಗಿ ಬಳಕೆಯಾಗುತ್ತಿದ್ದ ಸ್ಟಿಂಗ್ ಆಪರೇಷನ್ ಎಂಬುದು ಕಾಲ ಕ್ರಮೇಣ ಎದುರಾಳಿಗಳನ್ನು ಹಣಿಯುವ ಮತ್ತು ತೇಜೋವಧೆ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.

೧೯೮೩ ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತಲ್ಲ ಆ ಸರ್ಕಾರದ ನೇತೃತ್ವ ವಹಿಸಿದವರು ರಾಮಕೃಷ್ಣ ಹೆಗಡೆ. ಅವರು ಮುಖ್ಯಮಂತ್ರಿಯಾದ ಕೆಲವೇ ಕಾಲದಲ್ಲಿ ಒಂದು ಸ್ಟಿಂಗ್ ಆಪರೇಷನ್ ಇಡೀ ದೇಶದ ಗಮನ ಸೆಳೆಯಿತು. ಅದೆಂದರೆ, ಮೊಯ್ಲಿ ಟೇಪ್ ಹಗರಣ. ಅವತ್ತು ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ನ ನೇತಾರರಾದ ವೀರಪ್ಪ ಮೊಯ್ಲಿಯವರು ಹೆಗಡೆ ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಿ.ಭೈರೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಪುಸಲಾಯಿಸಿದರು ಮತ್ತು ಇದಕ್ಕಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಭೈರೇಗೌಡರಿಗೆ ಕೊಟ್ಟರು ಎಂಬುದು ಆರೋಪ.

ಅವತ್ತು ಇಂತಹ ಆರೋಪಕ್ಕೆ ಪೂರಕವಾಗಿ ಆಡಿಯೋ ಕ್ಯಾಸೆಟ್‌ನ್ನು ಇಟ್ಟುಕೊಂಡ ಸರ್ಕಾರದ ಪ್ರಮುಖರು, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿದರು.ಹೆಚ್.ಡಿ.ದೇವೇಗೌಡರೂ ಸೇರಿದಂತೆ ಅವತ್ತು ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಹಲವು ನಾಯಕರು ಈ ಪತ್ರಿಕಾಗೋಷ್ಠಿಯಲ್ಲಿದ್ದರು. ಹೀಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿಯವರು ತಮ್ಮ ಪಕ್ಷದದವರಾದ ಸಿ.ಭೈರೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಯತ್ನ ಮಾಡಿದರು ಮತ್ತು ಅದಕ್ಕಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಕೊಟ್ಟರು ಎಂದು ಈ ನಾಯಕರು ಆಪಾದನೆ ಮಾಡಿದರು. ಹೀಗೆ ಜನತಾ ಸರ್ಕಾರದ ನಾಯಕರು ಮಾಡಿದ ಈ ಆಪಾದನೆ ಅವತ್ತು ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ಸದ್ದು ಮಾಡಿತು. ಇದಾದ ನಂತರ ದೊಡ್ಡ ಮಟ್ಟದ ಸದ್ದು ಮಾಡಿದ್ದು ಟೆಲಿಫೋನ್ ಕದ್ದಾಲಿಕೆ ಪ್ರಕರಣ. ಆ ಸಂದರ್ಭದಲ್ಲಿ ಜನತಾ ಪಕ್ಷದ ನಾಯಕರಾದ ಚಂದ್ರಶೇಖರ್ ಮತ್ತು ಹೆಚ್.ಡಿ.ದೇವೇಗೌಡರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುತ್ತಾರೆ. ಆದರೆ ಈ ಸಂಭಾಷಣೆಯ ಮಕ್ಕಿ ಕಾ ಮಕ್ಕಿ ವಿವರ ಸಂವಾದದ ರೂಪದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ.

ಅಂದ ಹಾಗೆ ದೂರವಾಣಿಯಲ್ಲಿ ತಾವು ಚಂದ್ರಶೇಖರ್ ಅವರ ಜತೆ ನಡೆಸಿದ ಮಾತುಕತೆಯ ವಿವರ ಹೀಗೆ ಬಹಿರಂಗವಾಗಲು ಹೇಗೆ ಸಾಧ್ಯ? ದೂರವಾಣಿಯನ್ನು ಕzಲಿಸದೆ ಇದು ಬಹಿರಂಗವಾಗಲು ಸಾಧ್ಯವೇ ಇಲ್ಲ. ಅಂದ ಹಾಗೆ ಸಮಾಜಘಾತುಕ ಶಕ್ತಿಗಳ ಮಧ್ಯೆ ನಡೆಯುವ ಸಂಭಾಷಣೆಯನ್ನು ಕzಲಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಹೊರತು ಸಾಮಾನ್ಯ ವ್ಯಕ್ತಿಗಳದ್ದಲ್ಲ ಎಂದು ದೇವೇಗೌಡರು ತಕರಾರು ಎತ್ತಿ ಕುಳಿತರು.

ಅರ್ಥಾತ್, ಇದು ತಮ್ಮನ್ನು ಮಟ್ಟ ಹಾಕಲು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಹೂಡಿದ ತಂತ್ರ ಎಂದು ದೇವೇಗೌಡರು ತಕರಾರು ಎತ್ತಿ ಕುಳಿತಾಗ ವಿಷಯ ದೆಹಲಿಯ ಸಂಸತ್ತಿನಲ್ಲೂ ಅನುರಣಿಸಿತು ಮತ್ತು ಟೆಲಿಫೋನ್ ಕದ್ದಾಲಿಕೆಯ ಆರೋಪದ ಮೇಲೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಸ್ಥಾನದಿಂದಲೇ ಕೆಳಗಿಳಿಯುವ ಪರಿಸ್ಥಿತಿ ಬಂತು. ಮುಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಣ್ಣನ್ನು ಮುಂದಿಟ್ಟುಕೊಂಡು ನಾಯಕರೊಬ್ಬರನ್ನು ಖೆಡ್ಡಾಗೆ ಬೀಳಿಸುವ ಕೆಲಸ ಅವರದೇ ಜಿಯ ನಾಯಕರಿಂದ ನಡೆಯಿತು. ಪರಿಣಾಮ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ ಆ ನಾಯಕರು ತಮ್ಮ ಪವರ್ಫುಲ್ ಹುದ್ದೆಯಿಂದ ಕೆಳಗಿಳಿದರು ಮತ್ತು ರಾಜಕೀಯವಾಗಿ ನೇಪಥ್ಯಕ್ಕೆ ಸರಿದರು.

ಇದಾದ ನಂತರ ಸ್ಟಿಂಗ್ ಆಪರೇಷನ್ ಸ್ವರೂಪ ದೊಡ್ಡ ಮಟ್ಟದಲ್ಲಿ ಬದಲಾಗಿದ್ದು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ನಂತರ. ೨೦೦೬ರಲ್ಲಿ ಜಾ.ದಳ-ಬಿಜೆಪಿ ಸರ್ಕಾರದ ನೇತೃತ್ವ ವಹಿಸಿದ್ದ ಹೆಚ್. ಡಿ.ಕುಮಾರಸ್ವಾಮಿ ಅವರನ್ನು ಸ್ಟಿಂಗ್ ಆಪರೇಷನ್ ಬಲೆಯಲ್ಲಿ ಕೆಡಹುವ ಪ್ರಯತ್ನ ನಡೆಯಿತು. ಆದರೆ ಗಣಿ ವ್ಯವಹಾರದಲ್ಲಿ ಕುಮಾರಸ್ವಾಮಿ ನೂರೈವತ್ತು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪದೊಂದಿಗೆ ಬಿಡುಗಡೆಯಾದ ವಿಡಿಯೋ ಕ್ಯಾಸೆಟ್ ನಂಬುವಂತೆ ಇರಲಿಲ್ಲ. ಪರಿಣಾಮ ಅವತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ತಂತ್ರ ವಿಫಲವಾಯಿತು.

ಮುಂದೆ ೨೦೦೮ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತಲ್ಲ, ಆ ಸಂದರ್ಭದಲ್ಲಿ ಯಡಿಯೂರಪ್ಪನವರ ಆಪ್ತರಾಗಿದ್ದ, ಆಹಾರ ಖಾತೆ ಸಚಿವ ಹಾಲಪ್ಪ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಜಾಲ ಕೆಲಸ ಮಾಡಿತು.

ತಮ್ಮ ಸ್ನೇಹಿತನ ಪತ್ನಿಯ ಮೇಲೆ ಹಾಲಪ್ಪ ಅತ್ಯಾಚಾರ ಎಸಗಿದರು ಎಂದು ಆರೋಪಿಸಿ ಬಹಿರಂಗಪಡಿಸಲಾದ ವಿಡಿಯೋ ಕ್ಯಾಸೆಟ್ ದೊಡ್ಡ ಮಟ್ಟದ ಪುರಾವೆ ಒದಗಿಸದಿದ್ದರೂ ಸನ್ನಿವೇಶದ ಸಾಕ್ಷ್ಯಾಧಾರಗಳ ಮೇಲೆ ಹಾಲಪ್ಪ ಅವರನ್ನು ಮಂತ್ರಿಗಿರಿಯಿಂದ ಕೆಳಗಿಳಿಸಲಾಯಿತು. ಮುಂದೆ ಈ ಪ್ರಕರಣದ ತನಿಖೆ ನಡೆದು ನ್ಯಾಯಾಲಯ ಹಾಲಪ್ಪನವರನ್ನು ನಿರ್ದೋಷಿ ಎಂದು ತೀರ್ಪಿತ್ತಿತಾದರೂ ಅಷ್ಟರಗಲೇ ಕಾಲ ಮಿಂಚಿತ್ತು.ಅರ್ಥಾತ್, ಹಾಲಪ್ಪನವರು ಇಡೀ ಪ್ರಕರಣದ ಬಲಿಪಶುವಾದರು. ಇಷ್ಟಾದರೂ ಅವತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಬಂದ ವಿಷಯವೆಂದರೆ, ಹಾಲಪ್ಪನವರು ಶಿವಮೊಗ್ಗ ಜಿಯಲ್ಲಿ ಯಡಿಯೂರಪ್ಪನವರ ಜತೆ ಸೇರಿ ಬಿಜೆಪಿಯ ಕೈ ಬಲಪಡಿಸಿದ್ದರಲ್ಲದೆ, ಈಡಿಗ ಸಮುದಾಯದ ಮತಗಳು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ದಕ್ಕುವಂತೆ ಮಾಡಿದ್ದರು.

ಯಾವಾಗ ಅವರು ಈ ಸಾಧನೆ ಮಾಡಿದರೋ ಆಗ ಜಿಲ್ಲೆಯ ರಾಜಕಾರಣದಲ್ಲಿ ಈಡಿಗ ಮತಗಳ ಮೇಲೆ ಹಿಡಿತ ಹೊಂದಿದ್ದ ಕೆಲ ನಾಯಕರಿಗೆ ಅಸಾಧ್ಯ ಕೋಪ ಬಂತಲ್ಲದೆ, ಹಾಲಪ್ಪನವರ ರಾಜಕೀಯ ಬದುಕನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈಹಾಕುವಂತೆ ಮಾಡಿತು. ಇದರ ಪ್ರತಿಫಲವೇ ಹಾಲಪ್ಪನವರ ಮೇಲಿನ ಅತ್ಯಾಚಾರದ ಆರೋಪ. ಮುಂದೆ ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಸ್ಟಿಂಗ್ ಆಪರೇಷನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಆ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಜಲಕ್ಕೆ ಬಿದ್ದು ಮಂತ್ರಿಗಿರಿ ಕಳೆದುಕೊಂಡವರು ಹೆಚ್.ವೈ.ಮೇಟಿ. ಹೆಣ್ಣೊಬ್ಬಳ ಜತೆ ಹೆಚ್.ವೈ.ಮೇಟಿ ಅವರು ಕಳೆದ ಖಾಸಗಿ ಕ್ಷಣಗಳ ಆ ವಿಡಿಯೋ ಬಹಿರಂಗವಾದಾಗ ಅವರ ರಾಜೀನಾಮೆ ಪಡೆಯದೆ ಸಿದ್ದರಾಮಯ್ಯನವರಿಗೆ ಬೇರೆ ದಾರಿ ಇರಲಿಲ್ಲ. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹದೇ ಸ್ಟಿಂಗ್ ಆಪರೇಷನ್ ಜಾಲಕ್ಕೆ ಬಲಿಯಾದವರು ಕಳಕಪ್ಪ ಬಂಡಿ. ಅವರೂ ಹೆಣ್ಣೊಬ್ಬಳ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಬಹಿರಂಗವಾದಾಗ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆದರು.

ಇದೇ ರೀತಿ ಅವತ್ತು ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಕಾರಕಿಹೊಳಿ ಅವರು ಸ್ಟಿಂಗ್ ಆಪರೇಷನ್ ಬಲೆಯಲ್ಲಿ ಸಿಲುಕಿಕೊಂಡರು. ತಮ್ಮ ಬಳಿ ಕೆಲಸ ಕೇಳಿ ಬಂದದ್ದ ಹೆಣ್ಣೊಬ್ಬಳ ಜತೆ ಅವರು ಖಾಸಗಿ ಕ್ಷಣಗಳನ್ನು ಕಳೆದರು ಎಂಬ ಆರೋಪ ಹೊತ್ತ ವಿಡಿಯೋ ಕ್ಯಾಸೆಟ್ ಹೊರ ಬಂದಾಗ ರಾಜದ್ಯಂತ ಭಾರಿ ಸಂಚಲನವಾಯಿತು ಮತ್ತು ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದ ಹಾಗೆ ಈ ಮಧ್ಯೆ ಸರ್ಕಾರದ ಪ್ರಮುಖರೊಬ್ಬರು ಇಲ್ಲಿನ ಮತ್ತು ನೆರೆ ರಾಜ್ಯದ ಚಿತ್ರನಟಿಯೊಬ್ಬರ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಕ್ಯಾಸೆಟ್ ಬಹಿರಂಗವಾಗುವ ಘಳಿಗೆ ಹತ್ತಿರವಾಗಿದೆ ಎಂಬ ಮಾತು ಕೇಳಿ ಬಂತಾದರೂ ಅದು ಬಹಿರಂಗ ವಾಗಲಿಲ್ಲ. ಮೂಲಗಳ ಪ್ರಕಾರ, ಆರೋಪ ಹೊತ್ತ ನಾಯಕ ಸ್ಟಿಂಗ್ ಆಪರೇಷನ್ ನಡೆಸಿದವರ ಮಾತಿಗೆ ಮಣಿದ ಪರಿಣಾಮವಾಗಿ ಇದು ಬಹಿರಂಗವಾಗಲಿಲ್ಲ.

ಮುಂದೆ ೨೦೨೩ ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಟಿಂಗ್ ಆಪರೇಷನ್ ಸದ್ದು ನಿರಂತರವಾಗಿ ಕೇಳುತ್ತಲೇ ಬಂತು. ಮಾಜಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ತುಂಬಿದ ವಿಧಾನಸಭೆಯಲ್ಲಿ ನಿಂತು,ನಲವತ್ತೆಂಟು ಮಂದಿಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಆರೋಪ ಮಾಡಿದ್ದರು.

ಅವತ್ತು ಕೆ.ಎನ್.ರಾಜಣ್ಣನವರು ಮಾಡಿದ ಆರೋಪ ದೊಡ್ಡ ಸಂಚಲಕ್ಕೆ ಕಾರಣವಾಯಿತಾದರೂ ಸ್ಟಿಂಗ್ ಆಪರೇಷನ್ ನಡೆದಿದೆ ಎನ್ನಲು ಸಾಕ್ಷ್ಯಾಧಾರಗಳು ಸಿಗಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ಆಪರೇಷನ್ ನಡೆದ ಸುದ್ದಿ ಸುನಾಮಿಯಂತೆ ಹಬ್ಬಿದೆ. ಇಂತಹ ಆರೋಪಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲವಾದರೂ ಇಂತಹ ಆರೋಪ ಅನುಮಾನದ ಹುತ್ತವನ್ನು ಸೃಷ್ಟಿಸಿದೆ ಮತ್ತು ಇದನ್ನೇ ಎತ್ತಿ ಹಿಡಿದ ಜಾ.ದಳ ರಾಜಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಜಲದ ಬಗ್ಗೆ ಹಲವು ಆರೋಪಗಳನ್ನು ಮಾಡುತ್ತಾ ರಾಜ್ಯ ರಾಜಕಾರಣ ತಲ್ಲಣಗೊಳ್ಳುವಂತೆ ಮಾಡಿzರೆ. ಇದು ಮುಂದೆ ಯಾವ ಸ್ವರೂಪ ಪಡೆಯಲಿದೆಯೋ ಕಾದು ನೋಡಬೇಕು.

” ಈ ಮಧ್ಯೆ ಸರ್ಕಾರದ ಪ್ರಮುಖರೊಬ್ಬರು ಇಲ್ಲಿನ ಮತ್ತು ನೆರೆ ರಾಜ್ಯದ ಚಿತ್ರನಟಿಯೊಬ್ಬರ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಕ್ಯಾಸೆಟ್ ಬಹಿರಂಗವಾಗುವ ಘಳಿಗೆ ಹತ್ತಿರವಾಗಿದೆ ಎಂಬ ಮಾತು ಕೇಳಿ ಬಂತಾದರೂ ಅದು ಬಹಿರಂಗವಾಗಲಿಲ್ಲ. ಮೂಲಗಳ ಪ್ರಕಾರ, ಆರೋಪ ಹೊತ್ತ ನಾಯಕ ಸ್ಟಿಂಗ್ ಆಪರೇಷನ್ ನಡೆಸಿದವರ ಮಾತಿಗೆ ಮಣಿದ ಪರಿಣಾಮವಾಗಿ ಇದು ಬಹಿರಂಗವಾಗಲಿಲ್ಲ.”

 

 

ಆಂದೋಲನ ಡೆಸ್ಕ್

Recent Posts

ಸ್ಟಿಂಗ್ ಆಪರೇಷನ್: ತನಿಖೆಗಿಂತ ಹೇಳಿಕೆಗಳ ಭರಾಟೆ

ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟಿಂಗ್ ಆಪರೇಷನ್ ಎಂಬುದು ಕಳಂಕ ತಂದಿದೆ. ರಾಜಕಾರಣ ತಲುಪಿರುವ ಅಧೋಗತಿಗೂ ಇದು ಕನ್ನಡಿ ಹಿಡಿದಿದೆ.…

39 mins ago

ಅಂದು ಪಾರ್ಟಿ ಮೂಡ್‌ನಲ್ಲಿ ಪಬ್‌ಗೆ ಎಂಟ್ರಿ; ಇಂದು…?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ Stoney Brook ಹೋಟೆಲ್‌ನ D-Boss Safari ಜಾಗದಲ್ಲಿ ಪಾರ್ಟಿಯ ಮರು ಚಿತ್ರಣ ರೇಣುಕಾಸ್ವಾಮಿಗೆ ಹಲ್ಲೆ…

54 mins ago

ಕಲೆಗಾಗಿ ಸರ್ಕಾರಿ ಕೆಲಸ ಬಿಟ್ಟ ಕಲಾವಿದೆ!

ಕೇಶವ ಎಂ. ವರ್ಲಿ ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಅನಸೂಯ; ಬುಡಕಟ್ಟು ಜನರ ಜೀವನ, ಸಂಸ್ಕೃತಿ ಅನಾವರಣ ಮೈಸೂರು: ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಚಾತಕ…

1 hour ago

ಗಿರಿಜನರಿಗೆ ಸಿಗುತ್ತಿಲ್ಲ ಪೌಷ್ಟಿಕ ಆಹಾರ ಕಿಟ್

ಕೃಷ್ಣ ಸಿದ್ದಾಪುರ ಟೆಂಡರ್ ವಿಳಂಬದಿಂದ ೯,೫೦೦ ಕುಟುಂಬಗಳಿಗೆ ಸಂಕಷ್ಟ; ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ  ಸಿದ್ದಾಪುರ: ಕೊಡಗು ಜಿಲ್ಲೆಯ ಹಾಡಿ…

1 hour ago

ಜಿಪಂ ಮೀಸಲಾತಿ; ಎಲ್ಲ ಸಮುದಾಯದವರಿಗೂ ಅವಕಾಶ

ಮಂಜುಕೋಟೆ ಕೋಟೆ: ಪ್ರಥಮ ಬಾರಿಗೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ತಲಾ ೨ ಸ್ಥಾನಗಳು ಹಂಚಿಕೆ  ಎಚ್.ಡಿ.ಕೋಟೆ: ಏಳು ವರ್ಷಗಳ…

1 hour ago

ದಸರಾ ಪಾಸ್ ಹಂಚಿಕೆಯೇ ತಲೆನೋವು

ಕೆ.ಬಿ.ರಮೇಶನಾಯಕ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳ ಸ್ಥಳೀಯರಿಗೆ ಶೇ.೭೦, ಹೊರಗಿನವರಿಗೆ ಶೇ.೩೦ರಷ್ಟು ಪ್ರಮಾಣದಲ್ಲೇ ಅದಲು ಬದಲು…

1 hour ago