ಅಂಕಣಗಳು

ಆನೆಗಳ ಸಂರಕ್ಷಣೆ ಎಲ್ಲರ ನೈತಿಕ ಹೊಣೆಗಾರಿಕೆ

ಸಹಜ ಸೌಂದರ್ಯದ ಸಂಕೇತವಾಗಿರುವ ಆನೆ, ನಮ್ಮ ಕಾಡುಗಳ ಗರಿಮೆ ಮತ್ತು ಪರಿಸರದ ಸಮತೋಲನದ ಪ್ರಮುಖ ಕೊಂಡಿಯಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಆನೆಯ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದ್ದು, ಇದು ಮಾನವ ಜೀವಕ್ಕೂ, ಆನೆಗಳ ಬದುಕಿಗೂ ಅಪಾಯಕಾರಿಯಾಗಿದೆ. ಮನುಷ್ಯನ ಅತಿಯಾದ ಅರಣ್ಯ ನಾಶ, ಕೃಷಿಭೂಮಿಗಳ ವಿಸ್ತರಣೆ, ರಸ್ತೆ-ರೈಲು ಮಾರ್ಗಗಳ ನಿರ್ಮಾಣ, ಗಣಿಗಾರಿಕೆ, ಹಳ್ಳಿಗಳ ವಿಸ್ತರಣೆ ಇತ್ಯಾದಿ ಕಾರಣಗಳಿಂದ ಆನೆಗಳ ವಾಸಸ್ಥಳದ ಪ್ರದೇಶ ವ್ಯಾಪ್ತಿ ಕಡಿಮೆಯಾಗುತ್ತಿದೆ. ತಮ್ಮ ಸಂಪ್ರದಾಯಬದ್ಧ ದಾರಿಗಳನ್ನು ಕಳೆದುಕೊಂಡ ಆನೆಗಳು, ಆಹಾರ ಮತ್ತು ನೀರಿಗಾಗಿ ಗ್ರಾಮಾಂತರ ಪ್ರದೇಶಗಳಿಗೆ ಅನಿವಾರ್ಯವಾಗಿ ಬಂದು ಬೆಳೆಗಳನ್ನು ಹಾನಿಗೊಳಿಸುತ್ತವೆ. ಈ ವೇಳೆ ಮಾನವ-ಆನೆ ಸಂಘರ್ಷ ತೀವ್ರವಾಗಿ ಉಂಟಾಗುವ ಸಾಧ್ಯತೆ ಹೇರಳವಾಗಿರುತ್ತದೆ.

ಆನೆಗಳ ಅಜ್ಞಾತ ಸ್ವಭಾವ ಕೂಡ ಈ ಸಂಘರ್ಷವನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಸಾಮಾನ್ಯವಾಗಿ ಆನೆಗಳು ಶಾಂತ ಸ್ವಭಾವದ ಪ್ರಾಣಿಗಳು, ಆದರೆ ತೀವ್ರ ಹಸಿವು, ಮರಿಗಳನ್ನು ರಕ್ಷಿಸುವ ಪರಿಸ್ಥಿತಿ ಅಥವಾ ದೀರ್ಘ ಪ್ರಯಾಣದ ದಣಿವು… ಇಂತಹ ಸಂದರ್ಭಗಳಲ್ಲಿ ಅವು ಆಕ್ರಮಣಕಾರಿ ಸ್ವಭಾವ ತೋರಬಹುದು. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಶಬ್ದ ಅಥವಾ ಬೆಳಕಿನಿಂದಲೂ ಅವು ತೀವ್ರ ಕಸಿವಿಸಿಗೆ ಒಳಗಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮನುಷ್ಯರು ಆನೆಗಳ ಹಾದಿಯಲ್ಲಿ ಎದುರಾದರೆ ಅನಿವಾರ್ಯವಾಗಿ ಸಂಘರ್ಷ ಸಂಭವಿಸುತ್ತದೆ.

ಈ ಸಮಸ್ಯೆಯನ್ನು ತಗ್ಗಿಸಲು ಆನೆ ಮಾರ್ಗಗಳು “ಆನೆ ಕಾರಿಡಾರ್‌ಗಳು” ಬಹಳ ಮುಖ್ಯ. ಇವು ಆನೆಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲೇ ಸಂಚಾರ ಮಾಡಲು ಬಳಸುವಸಹಜ ದಾರಿಗಳಾಗಿವೆ. ಕಾಡುಗಳನ್ನು ಸಂಪರ್ಕಿಸುವ ಈ ದಾರಿಗಳನ್ನು ಕಾಪಾಡುವುದು, ಆನೆಗಳಿಗೆ ಅಡ್ಡಿಯಾದ ರಸ್ತೆ, ರೈಲು ಮಾರ್ಗ, ಗೋಡೆಗಳಂತಹ ಅಡೆತಡೆಗಳನ್ನು ತಪ್ಪಿಸುವುದು ಅವುಗಳ ಸ್ವಾಭಾವಿಕ ಸಂಚಾರಕ್ಕೆ ಸಹಕಾರಿ. ಆದರೆ ಇತ್ತೀಚೆಗೆ ಈ ಕಾರಿಡಾರ್‌ಗಳ ಮೇಲೆ ಮಾನವ ವಸತಿ, ಬೆಳೆಗಾರಿಕೆ ಮತ್ತು ಕೈಗಾರಿಕಾ ವಿಸ್ತರಣೆಯಂತಹ ಬೆಳವಣಿಗೆಗಳು ಹೆಚ್ಚುತ್ತಿರುವುದರಿಂದ ಆನೆಗಳ ಸಂಚಾ ರಕ್ಕೆ ಅಡ್ಡಿ ಉಂಟಾಗಿದೆ.

ಮಾನವ-ಆನೆ ಸಂಘರ್ಷ ಕಡಿಮೆ ಮಾಡಲು ಹಲವು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ. ರೈಲುಮಾರ್ಗಗಳಲ್ಲಿ ಆನೆಗಳ ಅಪಘಾತ ತಡೆಗೆ ರೈಲು ಬಾರಿಕೇಡ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇವು ಆನೆಗಳನ್ನು ರೈಲು ಹಳಿ ದಾಟದಂತೆ ತಡೆಯುತ್ತವೆ. ಕೃಷಿ ಪ್ರದೇಶಗಳ ಸುತ್ತ ಸೌರಶಕ್ತಿ ಬೇಲಿಗಳನ್ನು ಹಾಕುವುದರಿಂದ ಆನೆಗಳು ಹೊಲಗಳಿಗೆ ಪ್ರವೇಶಿಸುವುದನ್ನು ತಡೆಯಬಹುದು. ಅರಣ್ಯ ಗಡಿಭಾಗಗಳಲ್ಲಿ ತೋಡುವ ಆಳವಾದ ಕಂದಕಗಳು (ಟ್ರೆಂಚುಗಳು) ಕೂಡ ಆನೆಗಳ ಪ್ರವೇಶವನ್ನು ತಡೆಯುವಲ್ಲಿ ಸಹಾಯಕ. ಇವೆಲ್ಲವೂ ಕಾಡು ಮತ್ತು ಗ್ರಾಮಗಳ ನಡುವಿನ ಗಡಿಯನ್ನು ಸ್ಪಷ್ಟಪಡಿಸಿ, ಸಂಘರ್ಷ ತಗ್ಗಿಸಲು ನೆರವಾಗುತ್ತವೆ.

ಕೆಲವು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದರಿಂದ ಅವುಗಳ ಸಂಚಾರವನ್ನು ನಿರಂತರವಾಗಿ ಹತ್ತಿರದಿಂದ ಗಮನಿಸಬಹುದು. ಉಪಗ್ರಹದ ಮೂಲಕ ಸಂಗ್ರಹವಾಗುವ ಈ ಮಾಹಿತಿಯಿಂದ ಆನೆಗಳ ಚಲನವಲನಗಳನ್ನು ಮುಂಚಿತವಾಗಿ ತಿಳಿದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬಹುದು. ಈ ತಂತ್ರಜ್ಞಾನವು ಕಾಡು ಅಧಿಕಾರಿಗಳಿಗೆ ಆನೆಗಳ ಸಂಚಾರ ಮಾರ್ಗಗಳನ್ನು ಗುರುತಿಸಲು, ಸಂಘರ್ಷ ಪ್ರದೇಶಗಳನ್ನು ನಿರ್ಧರಿಸಲು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ.

ಆನೆಗಳು ಮತ್ತು ಕಾಡಿನ ಸಂರಕ್ಷಣೆ ಪರಸ್ಪರ ಪೂರಕವಾಗಿದೆ . ಆನೆಗಳು ಅರಣ್ಯದ ಬೀಜಗಳನ್ನು ದೂರದೂರಿಗೆ ಹರಡುವುದರಿಂದ ಹೊಸ ಗಿಡಗಳ ಬೆಳವಣಿಗೆಗೆ ಸಹಕಾರಿಯಾ ಗುತ್ತವೆ. ಹೀಗಾಗಿ, ಕಾಡು ಉಳಿದರೆ ಆನೆಗಳು ಉಳಿಯುತ್ತವೆ; ಆನೆಗಳು ಉಳಿದರೆ ಕಾಡುಗಳ ಜೀವನಚಕ್ರ ಸರಾಗವಾಗಿ ನಡೆಯುತ್ತದೆ. ಇಂದಿನ ಸ್ಥಿತಿಯಲ್ಲಿ ಕಾಡು ಪ್ರದೇಶ ದಿನೇ ದಿನೇ ಕಡಿಮೆಯಾಗುತ್ತಿದ್ದು, ಜಲಸಂಪನ್ಮೂಲಗಳ ಕೊರತೆ, ಗಿಡ ಮರಗಳ ನಾಶ, ಮತ್ತು ಬೇಟೆಗಾರಿಕೆ ಆನೆಗಳ ಜೀವನಕ್ಕೆ ಗಂಭೀರ ಸವಾಲುಗಳಾಗಿವೆ.

ಆದ್ದರಿಂದ, ಮಾನವ-ಆನೆ ಸಂಘರ್ಷವನ್ನು ತಗ್ಗಿಸಲು, ಆನೆಗಳ ನೈಸರ್ಗಿಕ ವಾಸಸ್ಥಳಗಳನ್ನು ಸಂರಕ್ಷಿಸುವುದು, ಆನೆ ಕಾರಿಡಾರ್‌ಗಳನ್ನು ಅಡ್ಡಿಮುಕ್ತವಾಗಿಡುವುದು, ತಂತ್ರಜ್ಞಾನ ಆಧಾರಿತ ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸುವುದು ಮತ್ತು ಗ್ರಾಮಸ್ಥರಲ್ಲಿ ಜಾಗೃತಿಮೂಡಿಸುವುದು ಅತ್ಯಗತ್ಯ. ಆನೆಗಳು ಕೇವಲ ಕಾಡಿನ ಭಾಗವಲ್ಲ, ನಮ್ಮ ಸಂಸ್ಕ ತಿ ಮತ್ತು ಪರಿಸರ ಸಮತೋಲನದ ಜೀವಂತ ಚಿಹ್ನೆಗಳು. ಹಾಗಾಗಿ ಆನೆಗಳ ಸಂರಕ್ಷಣೆ ನಮ್ಮೆಲ್ಲರ ನೈತಿಕ ಹೊಣೆಗಾರಿಕೆ.

” ಆನೆಗಳು ಮತ್ತು ಕಾಡಿನ ಸಂರಕ್ಷಣೆ ಪರಸ್ಪರ ಅವಿಭಾಜ್ಯ. ಆನೆಗಳು ಅರಣ್ಯದ ಬೀಜಗಳನ್ನು ದೂರದೂರಿಗೆ ಹರಡುವುದರಿಂದ ಹೊಸ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಹೀಗಾಗಿ, ಕಾಡು ಉಳಿದರೆ ಆನೆಗಳು ಉಳಿಯುತ್ತವೆ; ಆನೆಗಳು ಉಳಿದರೆ ಕಾಡುಗಳ ಜೀವನಚಕ್ರ ಸರಾಗವಾಗಿ ನಡೆಯುತ್ತದೆ.”

-ಶ್ರೇಯಸ್ ದೇವನೂರು, ಮೈಸೂರು

ಆಂದೋಲನ ಡೆಸ್ಕ್

Recent Posts

ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದರೆ, ಹೊರ್ಮುಜ್‌ ಸಂಪೂರ್ಣ ಮುಚ್ಚುತ್ತೇವೆ : ಅಮೆರಿಕಗೆ ಇರಾನ್‌ ಎಚ್ಚರಿಕೆ

ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಶೀಘ್ರವೇ ಅಂತ್ಯ ಹಾಡುವುದಾಗಿ ಶನಿವಾರವಷ್ಟೆ ಹೇಳಿದ್ದ ಟ್ರಂಪ್‌, ಈಗ ಇರಾನ್‌ ಮೇಲಿನ ದಾಳಿಗಳನ್ನು…

5 mins ago

ಇರಾನ್‌ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ : ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಗಲ್ಫ್ ದೇಶಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು, ಇರಾನ್‌ನ ಎರಡು ಕ್ಷೀಪಣಿಗಳನ್ನು ಹೊಡೆದುರುಳಿಸಿರುವುದಾಗಿ…

58 mins ago

ಬಾಗಲಕೋಟೆ ಉಪಚುನಾವಣೆ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ

ಬಾಗಲಕೋಟೆ : ಬಾಗಲಕೋಟೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು (ಮಾ.23)…

1 hour ago

ಆಕ್ರಮಣ ತಡೆಯಲು ಸಿದ್ದ : ಅಮೆರಿಕಗೆ ಕ್ಯೂಬಾ ಎಚ್ಚರಿಕೆ

ಹವಾನಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಕ್ಯೂಬಾ ದೇಶದ ವಿದೇಶಾಂಗ…

2 hours ago

ಹನೂರು | ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿದ ಶಾಸಕ ಮಂಜುನಾಥ್‌

ಹನೂರು : ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಗ್ರಾಹಕರಿಗೆ ತಯಾರಿಸಿದ್ದ ಅನ್ನ ಸಾಂಬಾರ್…

2 hours ago

ನ್ಯೂಯಾರ್ಕ್‌ | ಲ್ಯಾಂಡಿಂಗ್‌ ವೇಳೆ ಟ್ರಕ್‌ಗೆ ವಿಮಾನ ಡಿಕ್ಕಿ : ಇಬ್ಬರು ಸಾವು

ನ್ಯೂಯಾರ್ಕ್‌ : ಲ್ಯಾಂಡಿಂಗ್‌ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಫೈರ್ ಟ್ರಕ್‌ಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ…

2 hours ago