ಪಂಜು ಗಂಗೊಳ್ಳಿ
ಜೈಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಲು ಮಹತ್ವದ ಯೋಜನೆ
ರಾಜೇಶ್ ಕುಮಾರ್ ಯಾವತ್ತೂ ಶಾಲೆಯ ಮಟ್ಟಿಲು ಹತ್ತಿದವನಲ್ಲ. ಹಾಗಾಗಿ, ಓದು, ಬರಹ ಎಂಬುದು ಅವನ ಹತ್ತಿರಕ್ಕೂ ಸುಳಿಯಲಿಲ್ಲ. ಅಂತಹ ರಾಜೇಶ್ ಕುಮಾರ್ ೨೦೨೨ರಲ್ಲಿ ತನ್ನ ೪ನೇ ವರ್ಷದ ಪ್ರಾಯದಲ್ಲಿ ತರಗತಿಗೆ ಸೇರಿ ಕಲಿಯಲಾರಂಭಿಸಿದ್ದಾನೆ. ಅವನಿಗೆ ಗುರುವಾಗಿ ಪಾಠ ಕಲಿಸುತ್ತಿರುವ ಆಶೀಶ್ ಕುಮಾರ್ ಅವನಿಗಿಂತ ಎಷ್ಟೋ ವರ್ಷ ಚಿಕ್ಕವನು. ಇದರಲ್ಲೇನೂ ಅಂತಹ ವಿಶೇಷವಿಲ್ಲ. ಆದರೆ, ರಾಜೇಶ್ ಕುಮಾರ್ ಓದು ಬರಹ ಕಲಿಯಲು ಶುರು ಮಾಡಿದ್ದು ಒಂದು ವಿಶೇಷ ಜಾಗದಲ್ಲಿ-ಪ್ರಯಾಗ್ ರಾಜ್‌ನ ನೈನಿ ಸೆಂಟ್ರಲ್ ಜೈಲಲ್ಲಿ! ಅವನಿಗೆ ಗುರುವಾಗಿ ಅಕ್ಷರ ಕಲಿಸುತ್ತಿರುವ ಆಶೀಶ್ ಕುಮಾರ್ ಸಾಮಾನ್ಯ ಶಿಕ್ಷಕನಲ್ಲ. ಅವನೊಬ್ಬ ಕೊಲೆ ಆರೋಪದಲ್ಲಿ ಆ ಜೈಲಲ್ಲಿರುವ ಕೈದಿ. ಅಷ್ಟೇ ಅಲ್ಲ, ಸ್ವತಃ ರಾಜೇಶ್ ಕುಮಾರ್ ಕೂಡಾ ಒಬ್ಬ ಕೈದಿಯೇ! ಆಶೀಶ್ ಕುಮಾರ್ ಕೊಲೆ ಆರೋಪಿಯಾಗಿದ್ದರೆ, ರಾಜೇಶ್ ಕುಮಾರ್ ಕೊಲೆ ಮತ್ತು ಅತ್ಯಾಚಾರದ ಆರೋಪಿ. ಆಶೀಶ್‌ನಂತೆಯೇ ಇತರ ಎಂಟು ಜನ ಕೊಲೆ ಆರೋಪಿಗಳು ತಮ್ಮಂತಹ ಇತರ ಜೈಲುವಾಸಿಗಳಿಗೆ ಓದು ಬರಹ ಕಲಿಸಲು ಶ್ರಮಿಸುತ್ತಿದ್ದಾರೆ.
ಬ್ರಿಟಿಷರು ಕಟ್ಟಿದ ಈ ನೈನಿ ಸೆಂಟ್ರಲ್ ಜೈಲು ಒಂದು ವಿಶೇಷ ಜೈಲು. ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಜಿ.ಬಿ.ಪಂತ್ ಮತ್ತು ನರೇಂದ್ರ ದೇವ್ ರಂತಹ ಮಹಾನ್ ಸ್ವಾತಂತ್ರ ಹೋರಾಟಗಾರರು ಇದ್ದ ಜೈಲು. ಈಗ ಅಲ್ಲಿರುವ ೪,೬೦೦ ಕೈದಿಗಳಲ್ಲಿ ೮೪೧ ಕೈದಿಗಳು ಓದು ಬರಹ ಕಲಿಯಲು ಮುಂದಾಗಿದ್ದಾರೆ. ಈ ೮೪೧ ಕೈದಿಗಳಲ್ಲಿ ೧೨೪ ಕೈದಿಗಳು ಸಂಪೂರ್ಣ ಅನಕ್ಷರಸ್ಥರು. ೮೯ ಕೈದಿಗಳು ೫ರಿಂದ ೮ನೇ ತರಗತಿವರೆಗೆ ಕಲಿಯುತ್ತಿದ್ದಾರೆ. ೬೨೮ ಕೈದಿಗಳು ಗ್ರ್ಯಾಜ್ಯುಯೇಷನ್ , ಪೋಸ್ಟ್ ಗ್ರ್ಯಾಜ್ಯುಯೇಷನ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಜೈಲೊಳಗಿರುವ ಈ ವಿಶೇಷ ತರಗತಿಗಳ ಹಿಂದಿನ ಪ್ರೇರಕ ಶಕ್ತಿ ಜೈರಾಜ್ ಸಿಂಗ್. ಅವನೂ ಒಬ್ಬ ಕೊಲೆ ಆರೋಪಿ! ೩೫ ವರ್ಷ ಪ್ರಾಯದ ಜೈರಾಜ್ ಸಿಂಗ್ ಡಬಲ್ ಪಿಜಿ-ಮಾಸ್ಟರ್ ಆಫ್ ಕಂಪ್ಯುಟರ್ ಎಪ್ಲಿಕೇಷನ್ಸ್ ಮತ್ತು ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್. ಹತ್ತು ವರ್ಷಗಳ ಹಿಂದೆ ಅವನು ತನ್ನ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಗ ಜಮೀನು ಗಲಾಟೆಗೆ ಸಂಬಂಽಸಿ ನೆರೆಮನೆಯವನನ್ನು ಕೊಲೆ ಮಾಡಿದ ಆರೋಪದ ಮೇಲೆ ನೈನಿ ಸೆಂಟ್ರಲ್ ಜೈಲು ಪಾಲಾದವನು.
ಆದರೆ ಜೈರಾಜ್ ಸಿಂಗ್ ತಾನು ನಿರಪರಾಧಿಯಾಗಿದ್ದು ತನ್ನನ್ನು ಆ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲಾಗಿದೆ ಎನ್ನುತ್ತಾನೆ. ಅವನು ನೈನಿ ಸೆಂಟ್ರಲ್ ಜೈಲೊಳಕ್ಕೆ ಬಂದಾಗ ಅಲ್ಲಿದ್ದ ಹೆಚ್ಚಿನ ಕೈದಿಗಳು ತಮ್ಮ ಗ್ರ್ಯಾಜ್ಯುಯೇಷನ್, ಪೋಸ್ಟ್ ಗ್ರ್ಯಾಜ್ಯುಯೇಷನ್ ಮೊದಲಾದ ಕಲಿಕೆಗಳನ್ನು ಅರ್ಧಂಬರ್ಧ ಮಾಡಿದ್ದವರು ಎಂದು ತಿಳಿದಾಗ ಅವರಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ತರಗತಿಗಳನ್ನು ಪ್ರಾರಂಭಿಸಲು ಆಲೋಚಿಸಿದನು. ಜೈಲಿನ ಅಧಿಕಾರಿಗಳಿಗೆ ಅವನು ತನ್ನ ಆಲೋಚನೆಯನ್ನು ತಿಳಿಸಿದಾಗ, ಅವರು ತಕ್ಷಣವೇ ಅದಕ್ಕೊಪ್ಪಿ, ಈ ವಿಶೇಷ ತರಗತಿಗಳು ಪ್ರಾರಂಭಗೊಂಡವು. ಜೈರಾಜ್ ಸಿಂಗ್‌ನ ವಿಶೇಷ ತರಗತಿಗಳು ಪ್ರಾರಂಭಗೊಳ್ಳುವ ಮೊದಲೇ ನೈನಿ ಸೆಂಟ್ರಲ್ ಜೈಲಲ್ಲಿ ಅದಾಗಲೇ ಮೂವರು ಶಿಕ್ಷಕರನ್ನುಳ್ಳ ಒಂದು ಶಾಲೆ ಕಾರ್ಯ ನಿರ್ವಹಿಸುತ್ತಿತ್ತು.
ಜೈರಾಜ್ ಜೊತೆ ಇನ್ನೂ ಎಂಟು ಜನ ಕೊಲೆ ಆರೋಪಿಗಳು ಸೇರಿಕೊಂಡರು. ಅವರಲ್ಲಿ ಕಾನ್ಪುರದ ೪೦ ವರ್ಷ ಪ್ರಾಯದ ಅಜಯ್ ತಿವಾರಿ ಒಬ್ಬ. ತನ್ನ ನೆರೆಮನೆಯವನೊಬ್ಬನನ್ನು ಕೊಲೆ ಮಾಡಿದ ಅಪರಾಧಕ್ಕೆ ಜೈಲಲ್ಲಿರುವ ಈತ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಡಬಲ್ ಎಂಎ ಮಾಡಿದ್ದಾನೆ. ಐಎಎಸ್ ಪರೀಕ್ಷೆಗೆ ಕುಳಿತುಕೊಳ್ಳಬೇಕಂತಿದ್ದ ಇವನು ಆ ಕೊಲೆ ಪ್ರಕರಣದಲ್ಲಿ ಜೈಲು ಸೇರಬೇಕಾಯಿತು. ಇವನು ಜೈರಾಜ್ ಸಿಂಗ್ ವಿಶೇಷ ತರಗತಿಗಳನ್ನು ನಡೆಸುವ ಆಲೋಚನೆಯನ್ನು ಮುಂದಿಡುವ ಹಿಂದಿನ ಐದು ವರ್ಷಗಳಿಂದ ನೈನಿ ಸೆಂಟ್ರಲ್ ಜೈಲಿನ ಶಾಲೆಯಲ್ಲಿ ಕೈದಿಗಳಿಗೆ ಭಾಷೆಗಳನ್ನು ಕಲಿಸುತ್ತಿದ್ದನು. ಅದರ ಜೊತೆಯಲ್ಲಿ, ಶಿಕ್ಷಣದ ಮಹತ್ವವನ್ನು ಅರಿತ್ತಿದ್ದ ಅಜಯ್ ತಿವಾರಿ ಇತರ ಆಸಕ್ತ ಕೈದಿಗಳಿಗೆ ‘ಡಿಸ್ಟೆನ್ಸ್ ಲರ್ನಿಂಗ್’ ಮೂಲಕ ಗ್ರ್ಯಾಜ್ಯುಯೇಷನ್ , ಪೋಸ್ಟ್ ಗ್ರ್ಯಾಜ್ಯುಯೇಷನ್ ಹಾಗೂ ಡಿಪ್ಲೊಮಾ ಕಲಿಯಲು ಸಹಕರಿಸುತ್ತಿದ್ದನು.
ಇದನ್ನೂ ಓದಿ:-ನಾಳೆ ಶ್ರೀ ಅಯ್ಯಪ್ಪ ಕ್ಷೇತ್ರದ ಮುಖಮಂಟಪ ಲೋಕಾರ್ಪಣೆ
ಅಜಯ್ ತಿವಾರಿ ಜೊತೆಯಲ್ಲಿ ರವಿ ದುಬೇ ಮತ್ತು ಧರ್ಮೇಂದ್ರ ಶರ್ಮಾ ಎಂಬ ಇತರ ಇಬ್ಬರು ಕೈದಿಗಳೂ ಇತರ ಕೈದಿಗಳಿಗೆ ಗ್ರ್ಯಾಜುಯೇಷನ್, ಪೋಸ್ಟ್ ಗ್ರ್ಯಾಜ್ಯುಯೇಷನ್ ಹಾಗೂ ಡಿಪ್ಲೊಮಾ ಕಲಿಯಲು ಸಹಕರಿಸುತ್ತಿರುವವರು. ಈಗ ಅವರೆಲ್ಲ ಜೈರಾಜ್ ಸಿಂಗ್ ಜೊತೆ ಸೇರಿ ಹೆಚ್ಚು ವ್ಯವಸ್ಥಿತವಾಗಿ ನೈನಿ ಸೆಂಟ್ರಲ್ ಜೈಲಿನ ಕೈದಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಕೊಡಿಸುವುದಲ್ಲದೆ, ಪಾರ್ಮುಗಳನ್ನು ತುಂಬಲು ಹಾಗೂ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (ಐಜಿಎನ್‌ಒಯು) ಯಿಂದ ಕೋರ್ಸ್ ಮಟಿರಿಯಲ್ಗಳನ್ನು ತರಿಸಿಕೊಳ್ಳಲು ಸಹಕರಿಸುತ್ತಿದ್ದಾರೆ. ಮೊಹಮ್ಮದ್ ಒಮರ್, ರೋಷನ್ ರಾಜ್, ಹರಿ ಓಂ ಶುಕ್ಲಾ, ಆಶೀಶ್ ಕುಮಾರ್ ಮತ್ತು ರಾಜಾ ಭಯ್ಯಾ ಎಂಬ ಇತರ ಐವರು ಕೊಲೆ ಆರೋಪಿಗಳು ಜೈಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಲು ಶ್ರಮಿಸುತ್ತಿದ್ದಾರೆ.
ಆಶೀಶ್ ಕುಮಾರ್ ಕೊಲೆ ಪ್ರಕರಣದ ಕೇಸಲ್ಲಿ ೨೦೦೬ರಿಂದ ನೈನಿ ಸೆಂಟ್ರಲ್ ಜೈಲಲ್ಲಿದ್ದಾನೆ. ಅವನು ಜೈಲಲ್ಲೇ ೨೦೧೩ರಲ್ಲಿ ತನ್ನ ಗ್ರ್ಯಾಜುಯೇಷನ್ ಕಲಿಕೆ ಶುರು ಮಾಡಿದಾಗ ಅದರ ಜೊತೆಯಲ್ಲಿ ಅವನು ಇತರ ಕೈದಿಗಳಿಗೂ ಕಲಿಸಲು ಶುರು ಮಾಡಿದನು. ೨೦೨೦ರಲ್ಲಿ ಅವನು ತನ್ನ ಗ್ರ್ತ್ಯಾಜುಎಷನ್ ಮುಗಿಸಿದನು. ಅವನೀಗ ಇತರ ಅನಕ್ಷರಸ್ಥ ಕೈದಿಗಳು ತಮ್ಮ ಪ್ರಾಥಮಿಕ ಕಲಿಕೆಯ ಪೂರ್ಣಗೊಳಿಸಿದ ನಂತರ ಉನ್ನತ ಕಲಿಕೆಯನ್ನು ಹೇಳಿಕೊಡುತ್ತಿದ್ದಾನೆ.
ಇವರೊಂದಿಗೆ, ಈಗಾಗಲೇ ನೈನಿ ಸೆಂಟ್ರಲ್ ಜೈಲಲ್ಲಿ ಕಲಿಸುತ್ತಿರುವ ಮೂವರು ಸರ್ಕಾರೀ ಶಿಕ್ಷಕರು ೫ರಿಂದ ೮ನೇ ತರಗತಿಗಳಲ್ಲಿ ಕಲಿಯುತ್ತಿರುವ ೮೯ ಕೈದಿ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಮೂರು ಸರ್ಕಾರಿ ಶಿಕ್ಷಕರಲ್ಲಿ ಇಬ್ಬರು ಮಹಿಳೆಯರು. ಜೈಲು ಅಧಿಕಾರಿಗಳೂ ಕೈದಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಪ್ರತಿ ದಿನ ತರಗತಿಗಳು ಬೆಳಿಗ್ಗೆ ಒಂಬತ್ತರಿಂದ ಹನ್ನೊಂದರ ವರೆಗೆ ಹಾಗೂ ಮಧ್ಯಾಹ್ನ ಎರಡರಿಂದ ನಾಲ್ಕರವರೆಗೆ ನಡೆಯುತ್ತವೆ.
ಮಂಡ್ಯದ ಜಿಲ್ಲಾ ಕಾರಾಗೃಹದಲ್ಲೂ ಅಲ್ಲಿನ ಕೈದಿಗಳಿಗಾಗಿ ‘ಕಲಿಕೆಯ ಮೂಲಕ ಬದಲಾವಣೆ’ ಎಂಬ ಕಾರ್ಯಕ್ರಮದ ಮೂಲಕ ಅಲ್ಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನನಾಗಿಸುವ ಪ್ರಯತ್ನ ನಡೆಯುತ್ತಿದೆ. ಇದರ ಪ್ರೇರಕ ಶಕ್ತಿಯಾಗಿರುವವರು ಜಿಲ್ಲಾ ಪರಿಷತ್ ಸಿಇಒ ಕೆ.ಆರ್.ನಂದಿನಿ. ಅವರ ನಾಯಕತ್ವದಲ್ಲಿ ಶಿವಲಿಂಗಯ್ಯ ಎಂಬ ಶಿಕ್ಷಕರು ತರಗತಿಗಳನ್ನು ನಡೆಸುತ್ತ ಈ ಅಕ್ಷರ ವಂಚಿತರನ್ನು ಶಿಕ್ಷಿತರನ್ನಾಗಿಸುವ ಹೊಣೆ ನಿಭಾಯಿಸುತ್ತಿದ್ದಾರೆ. ಅವರ ಈ ಪ್ರಯತ್ನದಿಂದಾಗಿ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿನ ೧೨೬ಕ್ಕೂ ಕೈದಿಗಳು ಓದು ಬರಹ ಕಲಿಯುವ ಮೂಲಕ ತಮ್ಮ ಬದುಕನ್ನು ಹೊಸ ಬೆಳಕಿಗೆ ತೆರೆದುಕೊಳ್ಳುತ್ತಿದ್ದಾರೆ.
” ಜೈಲು ಅಧಿಕಾರಿಗಳೂ ಕೈದಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಪ್ರತಿ ದಿನ ತರಗತಿಗಳು ಬೆಳಿಗ್ಗೆ ಒಂಬತ್ತರಿಂದ ಹನ್ನೊಂದರವರೆಗೆ ಹಾಗೂ ಮಧ್ಯಾಹ್ನ ಎರಡರಿಂದ ನಾಲ್ಕರವರೆಗೆ ನಡೆಯುತ್ತವೆ.”
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…