• ದೇವಿಕಾ ನಾಗೇಶ್
ಬುಡಕಟ್ಟು ಸಮುದಾಯದ ಸಾಕ್ಷಿಪ್ರಜ್ಞೆಯಂತಿರುವ ಸಿ.ಸೋಮಣ್ಣ ಒಂದು ರೀತಿಯಲ್ಲಿ ಆದಿವಾಸಿ ಪಾರಂಪರಿಕ ಜ್ಞಾನದ ನಡೆದಾಡುವ ವಿಶ್ವಕೋಶ. ನಮ್ಮ ಹಿರಿಯರು ಬಾಳಿ ಬದುಕುವ ಮನೆಯನ್ನು ಕಟ್ಟುವಾಗ ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತೆಯ ಕ್ರಮವನ್ನು ವಿವರಿಸುವ ಇವರು ಮನೆ ಕಟ್ಟುವ ಜಾಗದಲ್ಲಿ ಪಾಯ ತೋಡಿ ನೀರು ತುಂಬಿಸಿ ಅದು ಒಣಗಲು ಬಿಟ್ಟ ನಂತರ ಅಲ್ಲಿ ಯಾವುದೇ ಬಿರುಕು ಕಾಣಿಸಿಕೊಳ್ಳದೇ ಇದ್ದರೆ ಆ ಜಾಗದಲ್ಲಿ ಮನೆ ಕಟ್ಟುವುದು ಸೂಕ್ತವೇ ಎಂದು ನಿರ್ಧರಿಸುವ ಮೊದಲು ಒಂದರ ಮೇಲೆ ಒಂದು ಹೀಗೆ ಮೂರು ಕಲ್ಲುಗಳನ್ನು ಇಟ್ಟು ಕಾಯುತ್ತಾರೆ .ಆ ಕಲ್ಲು ಯಥಾ ಸ್ಥಿತಿಯಲ್ಲಿ ಇದೆ ಎಂದಾದರೆ ಜಾಗ ಮನೆ ಕಟ್ಟಲು ಸೂಕ್ತ ಎಂದು ನಿರ್ಧರಿಸುತ್ತಾರೆ. ಬಾಳಿ ಬದುಕುವ ಮನೆಯಲ್ಲಿ ನೆಮ್ಮದಿಯು ನೆಲೆ ಬೇಕು ಎನ್ನುವ ಕಾರಣಕ್ಕೆ ಈ ರೀತಿ ಪೂರ್ವ ತಯಾರಿಗಳು ಇರುತ್ತದೆ ಎನ್ನುವ ಸೋಮಣ್ಣ ಕಾಡಿನ ಒಳಗೆ ಕಟ್ಟಿಕೊಳ್ಳುವ ಈ ಮನೆಗಳು ಆಯಕಟ್ಟಿನ ಜಾಗದಲ್ಲಿ ಇದ್ದು ಕಾಡಿನಲ್ಲಿರುವ ಇತರೆ ಜೀವಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಇರುತ್ತಿತ್ತು ಎನ್ನುತ್ತಾರೆ. ವೃತ್ತಾಕಾರದಲ್ಲಿ ನಿರ್ಮಾಣವಾಗುತ್ತಿದ್ದ ಇಂತಹ ಮನೆಗಳಲ್ಲಿ ನಡುವೆ ಹಾಡಿಯ ಜನ ಆರಾಧಿಸುವ ಗುಡಿಗಳಿದ್ದು ಎಲ್ಲ ಮನೆಗಳೂ ಕಾಣುವಂತೆ ಹಾಡಿಯ ಯಜಮಾನನ ಮನೆ ಇರುತ್ತಿತ್ತು. ಸಾಮೂಹಿಕ ವಾಗಿ ಬದುಕುತ್ತಿದ್ದ ಈ ಜನರ ಹಾಡಿಗಳನ್ನು ಜಮ್ಮಾ ಎಂದು ಕರೆಯುತ್ತಿದ್ದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಮೊತ್ತ ಬುಡ ಕಟ್ಟು ಜನರ ಹಾಡಿಯಲ್ಲಿ ಸೋಮಣ್ಣ 1957ರಲ್ಲಿ ಜನಿಸಿದರು. ಕುಪ್ಪಯ್ಯ ಮತ್ತು ಬಸಮ್ಮ ಇವರ ಹೆತ್ತವರು. ಅದ್ಭುತ ಪಾರಂಪರಿಕ ಜ್ಞಾನವನ್ನು ಹೊಂದಿರುವ ಇವರು ನಾವು ಕುಡಿಯುವ ನೀರು, ಒಡ ನಾಡುವ ಪರಿಸರ, ನಡೆದಾಡುವ ಭೂಮಿ, ಹಗಲು ಬೆಳಗುವ ಸೂರ್ಯ, ರಾತ್ರಿ ಮಿನುಗುವ ನಕ್ಷತ್ರ ಇದು ಯಾರೊಬ್ಬರ ಸೊತ್ತಲ್ಲ. ಇರು ವಷ್ಟು ಕಾಲ ಇದನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನಮ್ಮ ನಂತರದವರಿಗೆ ಇವನ್ನು ಬಳಸಲು ಯೋಗ್ಯವಾಗಿರುವಂತೆ ಬಿಟ್ಟು ಹೋಗುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಬದುಕಿದವರು. ಬಹುಶಃ ಕಾಡಿನ ಒಡನಾಡಿ ಯಾಗಿದ್ದ ಅವರಿಗೆ ಕಾಡು ಕಲಿಸಿದ ಪಾಠ ಇದು. ನಾನು, ನನ್ನದು, ನನಗೆ ಮಾತ್ರ ಇದು ಎನ್ನುವ ಸ್ವಾರ್ಥ ತುಂಬಿದ ನಾಗರಿಕ ಪ್ರಪಂಚದ ಸೋಗಿಗೆ ತಾನು ಉತ್ತರಿಸಬೇಕು ಎಂಬ ಕಾರಣಕ್ಕೆ ಸಂಘಟನೆಯ ಕನಸು ಕಂಡರು, ಕಟ್ಟಿದರು. ನಾಲ್ಕು ದಶಕಗಳಿಂದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ
ಸಂವೇದನೆಗಳಿಗೆ ಧ್ವನಿಯಾಗಿರುವ ಸಿ.ಸೋಮಣ್ಣ ಮೈಸೂರು ಜಿಲ್ಲೆಯ ಆದಿವಾಸಿ ಬುಡಕಟ್ಟು ಜನರ ಸಂಘಟಿತ ಹೋರಾಟದ ಮುಂದಾಳತ್ವ ವಹಿಸಿ 6,000 ಎಕರೆ ಜಮೀನು ಆದಿವಾಸಿಗಳಿಗೆ ದೊರೆಯುವುದಕ್ಕೆ ಶ್ರಮಿಸಿದರು. ಅರಣ್ಯ ರಕ್ಷಣೆಯ ನೆಪ ಹೇಳಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಕಾಯ್ದೆ ಮತ್ತು ಅಣೆಕಟ್ಟೆಗಳ ನಿರ್ಮಾಣದಿಂದ ನೆಲೆ ಕಳೆದುಕೊಂಡ ಸಾವಿರಾರು ಬುಡಕಟ್ಟು ಕುಟುಂಬಗಳ ಜನರನ್ನು, ಕೃಷಿಕರನ್ನು ಸಂಘಟಿಸಿ ಹೋರಾಟ ನಡೆಸಿ ಯಶಸ್ವಿಯಾದರು.
ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವ ಭಾರತದಲ್ಲಿ ಅವರು ಹುಟ್ಟು ಹಾಕಿದ ಹೋರಾಟದ ಗಾಥೆ ಇಂದು ಇತಿಹಾಸ. 1991ರಲ್ಲಿ ಫೇಡಿನಾ ಸಹಕಾರದಿಂದ ಫಿಲಿಫೈನ್ಸ್‌ಗೆ ಹೋಗಿ ಅಲ್ಲಿನ ಬುಡಕಟ್ಟು ಸಮುದಾಯಗಳ ಜೊತೆ ಸಂವಾದ ನಡೆಸುವ ವಿಶೇಷ ಅವಕಾಶವೂ ಇವರಿಗೆ ದೊರೆತದ್ದು, ಇವರ ಸಾಧನೆಯ ಹಾದಿಯ ಮುಖ್ಯ ಮೈಲಿಗಲ್ಲು. ಕರ್ನಾಟಕದ ಎರಡು ಮೂಲ ನಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಸೋಮಣ್ಣ ಅವರು ಮೈಸೂರು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ಜಿಲ್ಲಾಮಟ್ಟದ ಹಿತರಕ್ಷಣಾ ಸಮಿತಿಯ ಸದಸ್ಯರಾಗಿ ದ್ದರು. ಉಳ್ಳವರ ಸ್ವತ್ತಾಗಿದ್ದ ನ್ಯಾಯ ಬೆಲೆ ಅಂಗಡಿಗಳ ಪೈಕಿ ಕನಿಷ್ಠ ಬುಡಕಟ್ಟು ಸಮುದಾಯಗಳ ಹಟ್ಟಿಗಳಲ್ಲಿರುವ ನ್ಯಾಯಬೆಲೆ ಅಂಗಡಿ ಗಳನ್ನು ಸಮುದಾಯದವರೇ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹಕ್ಕೊತ್ತಾಯದ ಭಾಗವಾಗಿ ಕಾಲುನಡಿಗೆ ಜಾಥಾ ನಡೆಸಿ ಯಶಸ್ವಿಯಾದರು. ಬದುಕು ತನಗೆ ಕಲಿಸಿದ ಪಾಠವನ್ನು ತನ್ನ ಸಮುದಾಯದ ಜನರು ಕಲಿತುಕೊಳ್ಳುವುದಕ್ಕೆ ಸಂಘಟನೆಯಿಂದಷ್ಟೇ ಸಾಧ್ಯ ಎನ್ನುವುದನ್ನು ಅರಿತಿದ್ದ ಸೋಮಣ್ಣ ಇದಕ್ಕಾಗಿ ಅವಿರತ ಶ್ರಮಿಸಿದರು. ಸಿ.ಸೋಮಣ್ಣ ಅವರು ಕಲಿತದ್ದು ನಾಲ್ಕನೇ ತರಗತಿ. ಕಲಿಕೆ ಎನ್ನುವುದು ಬರೀ ನಾಲ್ಕು ಗೋಡೆ ಯೊಳಗಿರುವ ಪಾಠಶಾಲೆಯಲ್ಲಿ ನಡೆಯುವುದಿಲ್ಲ. ಬದುಕು ಎಂಬ ಬಾಣಲೆ ಯಲ್ಲಿ ಹುರಿದು ಒಪ್ಪಗೊಂಡು ಜೀವನ ಪ್ರೀತಿಯ ಸಂಕೇತವಾಗಿ ಹೊರ ಹೊಮ್ಮುವುದು ಸಾಧ್ಯವಿದೆ ಎನ್ನುವುದಕ್ಕೆ ಸಾಕ್ಷಿಯಾದವರು ಸಿ.ಸೋಮಣ್ಣ.
devikanagesh55@gmail.com
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…
ಹನೂರು : ಮೂರ್ಛೆ ತಪ್ಪಿದ್ದ ವೃದ್ದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಸಿಗದೆ ಡೋಲಿ ಮುಖಾಂತರ ಕರೆದುಕೊಂಡು ಬಂದಿರುವ ಘಟನೆ…
2.5 ವರ್ಷದಲ್ಲಿ 592 ಭರವಸೆಗಳಲ್ಲಿ 243 ಭರವಸೆ ಈಡೇರಿಕೆ ಹಾವೇರಿ : ಏನು ಮಾತು ಕೊಟ್ಟಿದ್ದೆವೋ ಅದರಂತೆ ನಡೆದಿದ್ದೇವೆ. ಸಾವಿರ…
ಜಮ್ಮು : ನೆರೆಯ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬಂದ ನಾಲ್ಕು ಕೆಜಿಗೂ ಹೆಚ್ಚು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ…
ಮದ್ದೂರು : ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ನಗರಸಭೆಗೆ ಗ್ರಾ.ಪಂ.ಗಳ ಸೇರ್ಪಡೆ ಸಂಬಂಧ ಸರ್ಕಾರದ ಹಂತದಲ್ಲಿ ಮಾತನಾಡಿ ಕ್ರಮ…