ಅಂಕಣಗಳು

ಆರ್ಥಿಕ ಅಸಮಾನತೆಯ ಅಧ್ಯಯನಕ್ಕೆ ನೊಬೆಲ್ ಗೌರವ

ಪ್ರೊ.ಆರ್.ಎಂ.ಚಿಂತಾಮಣಿ

ಡಾರನ್ ಏಸಮೊಗ್ಗು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ‘ರವರ ‘ತೌಲನಿಕ ಅಭಿವೃದ್ಧಿಯ ವಸಾಹತುಶಾಹಿ ಮೂಲಗಳು (Colonical Origins Of Comparative Development) ಸಂಶೋಧನಾ ಪ್ರಬಂಧವನ್ನು ನಾನು ಇಪ್ಪತ್ತು ವರ್ಷಗಳ ಹಿಂದೆ ಮೊದಲು ಓದಿದಾಗ ಇದು ಅದ್ಭುತ ಎಂದೆನ್ನಿಸಿತ್ತು. ಆಗ ನನ್ನೊಂದಿಗಿದ್ದ ನನ್ನ ಅಂತಾ ರಾಷ್ಟ್ರೀಯ ಹಣಕಾಸು ನಿಧಿಯ ಸಹೋದ್ಯೋಗಿಗಳಿಗೆ ಮುಂದೊಂದು ದಿನ ಇದಕ್ಕೆ ನೊಬೆಲ್ ಪ್ರಶಸ್ತಿ ಬಂದೇ ಬರುತ್ತದೆ ಎಂದು ಹೇಳಿದ್ದೆ. ಅದು ಅಷ್ಟು ಆಳವಾದ ಅಧ್ಯಯನವಾಗಿತ್ತು’. ಈ ಮಾತನ್ನು ತಮ್ಮ ಒಂದು ಬರಹದಲ್ಲಿ ಕಳೆದ ವಾರ ಹೇಳಿದವರು ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಮತ್ತು ಭಾರತ ಸರ್ಕಾರದ ಹಿಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್. ಇವರು ಈ ಮೂವರನ್ನು ಮತ್ತು ಅವರ ಬರಹಗಳನ್ನು ಅತಿ ಸಮೀಪದಿಂದ ಬಲ್ಲವರು.

ಕಳೆದ ವಾರ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ 2024ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಏಸಮೊಗ್ಗು, ಜಾನ್ಸನ್ ಮತ್ತು ರಾಬಿನ್ಸನ್ ಹಂಚಿಕೊಂಡಿದ್ದಾರೆ ಎಂದು ಪ್ರಕಟಿಸಿದಾಗ ಅಂದಿನ ಮಾತಿಗೆ ಅರ್ಥ ಬಂತು. ಮೂವರೂ ಅಮೆರಿಕದ ನಾಗರಿಕರಾಗಿದ್ದು, ಏಸಮೊಗ್ಗು ಮೂಲದವರಾಗಿದ್ದಾರೆ. ಜಾನ್ಸನ್ ಮತ್ತು ರಾಬಿನ್ಸನ್ ಬ್ರಿಟನ್ ಮೂಲದವರು.

ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ 1969ರಿಂದ ಆಲ್‌ಫ್ರೆಡ್ ನೊಬೆಲ್ ಹೆಸರಿನಲ್ಲಿ ಕೊಡುತ್ತಿರುವ ಆರನೇ ನೊಬೆಲ್ ಪ್ರಶಸ್ತಿಯನ್ನು ವಾಸ್ತವವಾಗಿ ಸ್ವೀಡನ್ನಿನ ಕೇಂದ್ರೀಯ ಬ್ಯಾಂಕು ತನ್ನ 300ನೇ ವರ್ಷದ ನೆನಪಿಗಾಗಿ 1968ರಲ್ಲಿ ಇಟ್ಟಿರುವ ದತ್ತಿಯ ಆದಾಯದಿಂದ ಕೊಡಲಾಗುತ್ತಿದೆ. ಈ ವರ್ಷ ಪ್ರಶಸ್ತಿಯ ಮೊತ್ತ 1.1 ಮಿಲಿಯನ್ ಡಾಲರ್ ಆಗಿದ್ದು, ಇದನ್ನು ಮೂವರಲ್ಲಿ ಹಂಚುವುದಲ್ಲದೇ ಅದರೊಡನೆ ಪ್ರಶಸ್ತಿ ಫಲಕ ಮತ್ತು ಒಂದು ಸ್ಮರಣಿಕೆಯನ್ನು ಮೂವರಿಗೂ ಕೊಡಲಾಗುತ್ತದೆ. ಪ್ರಶಸ್ತಿ ಫಲಕದಲ್ಲಿ ಅಕಾಡೆಮಿಯು ಈ ವಿಷಯವನ್ನೂ ಉಲ್ಲೇಖ ಮಾಡಿರುತ್ತದೆ.

ಅಧ್ಯಯನದ ವಿಷಯ ಅಸಮಾನತೆ : ಈ ಮೂವರು ಸಂಶೋಧಕರು ‘ಕೆಲವು ದೇಶಗಳೇಕೆ ಮುಂದುವರಿಯುತ್ತಿವೆ? ಮತ್ತು ಇನ್ನು ಕೆಲವು ಕಡು ಬಡತನದಲ್ಲಿರುವುದೇಕೆ?’ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಆರ್ಥಿಕ ಅಭಿವೃದ್ಧಿ ತತ್ವಗಳೊಡನೆ ತಾವು ಸಂಗ್ರಹಿಸಿದ ಅಂಕಿಸಂಖ್ಯೆಗಳನ್ನು ಬಳಸಿಕೊಂಡು ಅವರು ಕಂಡುಕೊಂಡ ಉತ್ತರಗಳು ಮೇಲ್ಕಂಡ ಗ್ರಂಥದಲ್ಲಿ ದಾಖಲಾಗಿವೆ.

ಯೂರೋಪಿಯನ್ ವಸಾಹತುಶಾಹಿಗಳ ವಶದಲ್ಲಿದ್ದ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ (ವಸಾಹತುಗಳಲ್ಲಿ ಎರಡು ರೀತಿಯ ಪರಿಣಾಮಗಳು ಕಂಡು ಬಂದಿವೆ. ಒಂದರಂತೆ ವಸಾಹತುಗಾರರು ಆ ವಸಾಹತುಗಳಲ್ಲಿ ಇದ್ದಷ್ಟು ದಿನ ಅಲ್ಲಿಯ ಸಂಪನ್ಮೂಲಗಳನ್ನು ದೋಚುತ್ತಾ ಆ ದೇಶಗಳು ಬಡ ದೇಶಗಳು ಬಡ ದೇಶಗಳಾಗಿಯೇ ಮುಂದುವರಿಯುವಂತೆ ಮಾಡಿರುವುದು. ಇದಕ್ಕೆ ಪುಷ್ಟಿ ಕೊಡುವಂತೆ ಈ ವರ್ಷದ ಅರ್ಥಶಾಸ್ತ್ರನೊಬೆಲ್ ಪ್ರಕಟವಾಗುವ ಹಿಂದಿನ ದಿನವೇ ವಿಶ್ವಬ್ಯಾಂಕು ಇಂದಿಗೂ ಜಗತ್ತಿನ 23 ದೇಶಗಳು ಕಡು ಬಡತನದಲ್ಲಿವೆ ಎಂದು ಪ್ರಕಟಿಸಿದೆ.

ಇನ್ನೊಂದು ಮಹತ್ವದ ಪರಿಣಾಮವೆಂದರೆ (ಅಥವಾ ಬೆಳವಣಿಗೆ ಎಂದರೆ) ವಸಾಹತುಗಾರರಲ್ಲಿ ಬಹಳಷ್ಟು ಜನರು ವಸಾಹತುಗಳಲ್ಲೇ ವಾಸ ಮಾಡುತ್ತ ತಮ್ಮ ಮತ್ತು ಅಲ್ಲಿಯ ಸ್ಥಳೀಯರ ಒಳಿತಿಗಾಗಿ ಹಲವು ಸಂಸ್ಥೆಗಳನ್ನು ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಸ್ಥಾಪಿಸಿರುವುದು ಮತ್ತು ಸ್ಥಾಪಿಸಲು ಉತ್ತೇಜನ ಕೊಟ್ಟಿರುವುದು. ಇದರಿಂದ ಎಲ್ಲ ಜನರಿಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಾಯಿತು ಎನ್ನುವುದು ಸಂಶೋಧಕರ (ನೊಬೆಲ್ ಪ್ರಶಸ್ತಿ ಪುರಸ್ಕೃತರ ಖಚಿತ ಅಭಿಪ್ರಾಯ. ಅವುಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮಹತ್ವದ್ದು. ನಾವು ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತೇವೆ ಎನ್ನುತ್ತಾರೆ ಮೂವರಲ್ಲಿ ಒಬ್ಬರಾದ ಏಸಮೊಗ್ಲುರವರು.

ನ್ಯಾಯಾಂಗ ವ್ಯವಸ್ಥೆ, ಸಮಾನತೆಯ ಹಕ್ಕು, ಶಿಕ್ಷಣ ವ್ಯವಸ್ಥೆ, ಉನ್ನತ ಶಿಕ್ಷಣ ಆಯ್ದುಕೊಳ್ಳುವ ಹಕ್ಕು, ದುಡಿಯುವ ಹಕ್ಕು, ಆರೋಗ್ಯ ಸೇವೆ, ಸ್ಥಳೀಯ ಆಡಳಿಯ ವ್ಯವಸ್ಥೆ ಮತ್ತು ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ಮುಂತಾದವು ಗಳನ್ನು ಹೆಸರಿಸಬಹುದು.

ವಸಾಹತುಶಾಹಿ ಮೂಲದ ಈ ಅಸಮಾನತೆಗಳನ್ನು ಮತ್ತು ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಆಗಿರುವ ಬದಲಾವಣೆಗಳನ್ನು ಮತ್ತು ಆರ್ಥಿಕ ಬೆಳವಣಿಗೆ ಗಳನ್ನು ವಿವರಿಸಲು ಕೊಡಲಾಗಿರುವ ಹಲವು ಉದಾಹರಣೆಗಳಲ್ಲಿ ಯುಎಸ್‌ಎ ಮತ್ತು ಮೆಕ್ಸಿಕೊ ಗಡಿಯಲ್ಲಿರುವ ನೊಗಲಸ್ (Nogales) ನಗರದಲ್ಲಿಯ ವೈರುಧ್ಯಗಳ ವಿವರಣೆಯನ್ನು ನೊಬೆಲ್ ಜೂರಿ ಸಹಿತ ಮೆಚ್ಚಿಕೊಂಡಿದೆ. ಈ ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಭಾಗ ಮೆಕ್ಸಿಕೊದಲ್ಲಿದ್ದು, ಉತ್ತರ ಭಾಗ ಅಮೆರಿಕದ ಅರಿಜೋನಾ ರಾಜ್ಯದಲ್ಲಿದೆ.

ಅಮೆರಿಕದ ಭಾಗದಲ್ಲಿರುವ ನಾಗರಿಕರು ಪ್ರಜಾತಂತ್ರದ ಎಲ್ಲ ಹಕ್ಕು ಬಾಧ್ಯತೆಗಳನ್ನೂ, ಸೌಲಭ್ಯಗಳನ್ನೂ ಅನುಭವಿಸುತ್ತಿದ್ದಾರೆ. ಲಾಭದಾಯಕ ಉದ್ಯೋಗಗಳೂ ದೊರೆತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಆರ್ಥಿಕ ವಾಗಿ ಬೆಳೆಯುತ್ತಿದ್ದಾರೆ. ಆದರೆ ಮೆಕ್ಸಿಕೊ ಕಡೆ ಇರುವವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ.

ಅನೇಕರನ್ನು ಬಡತನ ಕಾಡುತ್ತಿದೆ. ಇವರಿಬ್ಬರೂ ಇರುವುದು ಒಂದೇ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಯಲ್ಲಿ, ಒಂದೇ ನೈಸರ್ಗಿಕ ಸಂಪನ್ಮೂಲಗಳು ಲಭ್ಯ. ಹಾಗಿದ್ದರೆ ಈ ಅಂತರವೇಕೆ?

ಇದಕ್ಕೆ ಏಸಮೊಗ್ಲು, ಜಾನ್ಸನ್ ಮತ್ತು ರಾಬಿನ್ಸನ್ ಸಂಶೋಧನೆ ಕೊಡುವ ಉತ್ತರ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳು, ಅಮೆರಿಕ ಭಾಗದಲ್ಲಿ ಅವು ಇವೆ. ಮೆಕ್ಸಿಕೋ ಭಾಗದಲ್ಲಿ ಅವು ಇಲ್ಲ.

ಏಸಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಹೆಸರು ಮಾಡಿ ದ್ದಾರೆ. ಅವರ ತಲೆಮಾರಿನ ಪ್ರಾಧ್ಯಾಪಕರಲ್ಲೇ ಅತ್ಯಂತ ಪ್ರಸಿದ್ಧರು. ಜಾನ್ಸನ್ ರವರು ಎಂಐಟಿಯ ಬಿಜಿನೆಸ್ ಸ್ಕೂಲ್‌ನಲ್ಲಿ ಉದ್ಯಮಶೀಲತೆ ಪಾಠ ಮಾಡುತ್ತಿ ದ್ದಾರೆ. ರಾಬಿನ್ಸನ್‌ರವರು ಮಾತ್ರ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಬಹಳ ವರ್ಷಗಳಿಂದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ನೀತಿಗಳನ್ನು ಪಾಠ ಮಾಡು ತ್ತಿದ್ದಾರೆ. ಮೂವರೂ ಸೇರಿ ಹಲವು ಬೆಸ್ಟ್ ಸೆಲ‌ ಪುಸ್ತಕಗಳನ್ನು ರಚಿಸಿದ್ದಾರೆ. ಉದಾಹರಣೆಗೆ 1.Why Nations Fail, 2. Origin Of power, Prosperity and Poverty ಹೆಸರುಗಳನ್ನು ಮಾತ್ರ ಹೇಳಬಹುದು.

ಸಮಾಜ ವಿಜ್ಞಾನಗಳಲ್ಲಿ ಯಾವುದೇ ಸಂಶೋಧನೆ ಪರಿಪೂರ್ಣ ವಾಗಿರಲಿಕ್ಕಿಲ್ಲ. ಭಿನ್ನಾಭಿಪ್ರಾಯಗಳಿರಬಹುದು. ಒಂದು ಸಂಶೋಧನೆ ಶ್ರೇಷ್ಠವೆನ್ನಬೇಕಾದರೆ ಅದು ಮಾನವ ಕುಲದ ಜೀವನವನ್ನು ಉನ್ನತಮಟ್ಟಕ್ಕೆ ಒಯ್ಯುವಂತಿರಬೇಕು. ಪರಿಸರ ಕಾಯಬೇಕು. ಈ ದಿಕ್ಕಿನಲ್ಲಿ ನೀತಿ ನಿರೂಪಕರಿಗೆ ಮಾರ್ಗದರ್ಶನ ನೀಡುವಂತಿರಬೇಕು. ಈ ಮೂವರ ಕೆಲಸ ಹಾಗಿದೆ. ಅದಕ್ಕಾಗಿಯೇ ನೊಬೆಲ್

ವಸಾಹತುಶಾಹಿ ಮೂಲದ ಈ ಅಸಮಾನತೆಗಳನ್ನು ಮತ್ತು ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಆಗಿರುವ ಬದಲಾವಣೆಗಳನ್ನು ಮತ್ತು ಆರ್ಥಿಕ ಬೆಳವಣಿಗೆಗಳನ್ನು ವಿವರಿಸಲು ಕೊಡಲಾಗಿರುವ ಹಲವು ಉದಾಹರಣೆಗಳಲ್ಲಿ ಯುಎಸ್‌ಎ ಮತ್ತು ಮೆಕ್ಸಿಕೊ ಗಡಿಯಲ್ಲಿರುವ ನೊಗಲಸ್‌ (nogales) ನಗರದಲ್ಲಿಯ ವೈರುಧ್ಯಗಳ ವಿವರಣೆಯನ್ನು ನೊಬೆಲ್ ಜೂರಿ ಸಹಿತ ಮೆಚ್ಚಿಕೊಂಡಿದೆ. ಈ ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಭಾಗ ಮೆಕ್ಸಿಕೊದಲ್ಲಿದ್ದು, ಉತ್ತರ ಭಾಗ ಅಮೆರಿಕದ ಅರಿಜೋನಾ ರಾಜ್ಯದಲ್ಲಿದೆ.

 

 

 

ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

3 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

5 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

6 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

6 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

6 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

6 hours ago