• ಬಿ.ಟಿ.ಮೋಹನ್ ಕುಮಾರ್
ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದಿರುವುದು, ಅಣೆಕಟ್ಟೆಗಳ ನೀರನ್ನೇ ನಂಬಿ ಬೇಸಾಯ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕಡಿಮೆ ನೀರಿನಲ್ಲಿ ಕೃಷಿಯನ್ನು ಮಾಡುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಮೊದಲ ಹೆಜ್ಜೆಯಾಗಿ ಸಾಮೂಹಿಕ ಕೃಷಿ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಕೆ. ಆರ್.ಎಸ್.ಯೋಜನೆಯ ವಿಶ್ವೇಶ್ವರಯ್ಯ ನಾಲಾ ಜಾಲದ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗಿ ದ್ದರೂ ನಾಲಾ ಜಾಲದ ಕೊನೆಯಲ್ಲಿರುವ 51 ಗ್ರಾಮ ಗಳ ಸುಮಾರು 25,327ಎಕರೆ (10,250 ಹೆ.) ಪ್ರದೇಶಕ್ಕೆ ನಿಯತಕಾಲಿಕ ವಾಗಿ ಅಗತ್ಯ ಪ್ರಮಾಣದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿ ರಲಿಲ್ಲ. ಬಾಧಿತ ಅಚ್ಚುಕಟ್ಟಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಿ, ಆ ಭಾಗದ ಜನರ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ ಪೂರಿ ಗಾಲಿ ಗ್ರಾಮದ ಸಮೀಪ (ಬಿಳಿಜಗಲಿ ಮೊಳೆ) ಕಾವೇರಿ ನದಿ ಜಲ ಮೂಲದಿಂದ ನೀರನ್ನು ಎತ್ತಿ 51 ಗ್ರಾಮ ಗಳಿಗೆ ಸೇರಿದ 25,327 ಎಕರೆ ಪ್ರದೇಶಕ್ಕೆ ಹನಿ ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಲು ಹಾಗೂ 16 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಹೋಬಳಿಯಲ್ಲಿ ಸುಮಾರು 25 ಸಾವಿರ ಎಕರೆ ಭೂಮಿಯಲ್ಲಿ ಸಾಮೂಹಿಕ ಬೇಸಾಯ ಮಾಡುವುದಕ್ಕಾಗಿ ನರೇಂದ್ರ ಸ್ವಾಮಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ತುಂಡು ಭೂಮಿಯನ್ನು ಹೊಂದಿರುವ ರೈತನ್ನು ಒಗ್ಗೂಡಿಸಿ, ಕೃಷಿ ಭೂಮಿಗಳು ಹಾಗೂ ಕಾವೇರಿ ನೀರಾವರಿ ನಿಗಮ ಅಧಿಕಾರೊಗಳು ತಮ್ಮ ಜೊತೆಯಲ್ಲೇ ರೈತರ ಬಳಿಗೆ ಕರೆದೊಯ್ದು ಸಾಮೂಹಿಕ ಬೇಸಾಯದ ಅರಿವು ಮೂಡಿಸಿ, ಅದರ ಪ್ರಯೋಜನ ತಿಳಿಸುತ್ತಿದ್ದಾರೆ.
ನರೇಂದ್ರಸ್ವಾಮಿ ಅವರು ಏಳು ವರ್ಷಗಳ ಹಿಂದೆ ಅಂದಿನ ಸರ್ಕಾರದಿಂದ ಮಂಜೂರು ಮಾಡಿಸಿದ ಯೋಜನೆ ಕೃಷಿಯಲ್ಲಿ ಬದಲಾವಣೆಯ ಕ್ರಾಂತಿ ಸೃಷ್ಟಿಸ ಬಹುದೆಂಬ ನಿರೀಕ್ಷೆಯನ್ನು ಹುಟ್ಟಿಸಿದೆ. ಈಗಾ ಗಲೇ ಹನಿ-ತುಂತುರು ನೀರಾವರಿ ಯೋಜನೆ ಯಡಿ ಮಳವಳ್ಳಿ ತಾಲ್ಲೂಕಿನ ಹಾಲಗಟ್ಟ ಕೊಪ್ಪಲು ಸೇರಿದಂತೆ ಬಿ.ಜಿ.ಪುರ ಹೋಬಳಿಯ ವಿವಿಧೆಡೆ ಸಾಮೂಹಿಕ ಕೃಷಿ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿದ್ದು, ಇದನ್ನು ಹೋಬಳಿಯಾದ್ಯಂತ ವಿಸ್ತರಣೆ ಮಾಡುವುದಕ್ಕೂ ಮುನ್ನ ಸಾಮೂಹಿಕ ಕೃಷಿಯ ಮಹತ್ವ, ಅದರಿಂದ ಖರ್ಚನ್ನು ಕಡಿಮೆ ಹೇಗೆ ಮಾಡಿಕೊಳ್ಳಬಹುದು? ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಮಾರುಕಟ್ಟೆ ಪ್ರವೇಶಿಸು ವುದು ಹೇಗೆ? ಆದಾಯ ಸೃಷ್ಟಿಸಿಕೊಳ್ಳುವ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ಸದ್ಯ ಹನಿ ಮತ್ತು ತುಂತುರು ನೀರಾವರಿ ಯೋಜನೆ ಯನ್ನು ಬಿ.ಜಿ.ಪುರ ಹೋಬಳಿ ವ್ಯಾಪ್ತಿಯ 25 ಸಾವಿರ ಎಕರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ವಾರ್ಷಿಕ 2 ಟಿಎಂಸಿ ನೀರನ್ನು ಪಡೆದುಕೊಳ್ಳ ಲಾಗುತ್ತಿದೆ. ಹನಿ ಮತ್ತು ತುಂತುರು ನೀರಾವರಿ ಯಲ್ಲಿ 3 ರಿಂದ 4 ತಿಂಗಳ ಬೆಳೆ ಬೆಳೆಯ ಬೇಕಾದರೆ ಒಂದು ಸಾವಿರ ಎಕರೆ ಪ್ರದೇಶಕ್ಕೆ 8 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಸಾಮಾನ್ಯ ಕೃಷಿಯಲ್ಲಿ ಈ ಪ್ರದೇಶಕ್ಕೆ ಎರಡು ಪಟ್ಟು ಹೆಚ್ಚು ನೀರಿನ ಅಗತ್ಯ ಬೀಳುತ್ತದೆ. ಇದ ರಿಂದ ಕಡಿಮೆ ನೀರನ್ನು ಬಳಸಿ ಬೆಳೆ ಬೆಳೆ ಯುವುದಕ್ಕೆ ಈ ಯೋಜನೆಯಡಿ ವಿಪುಲ ಅವಕಾಶಗಳಿವೆ ಎನ್ನುವುದು ನೀರಾವರಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪ್ರಸ್ತುತ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿದೆ. ಪ್ರತ್ಯೇಕವಾಗಿ ಕೃಷಿ ಮಾಡು ವುದರಿಂದ ಲಾಭಾಂಶ ಕಾಣುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಒಂದು ಸಾವಿರ ಎಕರೆಗೆ ಅನುಗುಣವಾಗಿ ಆಪ್ರದೇಶದ ರೈತರು ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚನೆ ಮಾಡಿಕೊಂಡು ಸಾಮೂಹಿಕ ವಾಗಿ ಕೃಷಿಯಲ್ಲಿ ತೊಡಗಿದರೆ ಅಷ್ಟೂ ಜಮೀನಿನ ರೈತರು ಗುಣಮಟ್ಟದ ಬೆಳೆ ಬೆಳೆದು ಆದಾಯ ಗಳಿಸಬಹುದು ಎಂಬುದು ನರೇಂದ್ರ ಸ್ವಾಮಿಯವರ ಯೋಜನೆಯ ಉದ್ದೇಶ.
ಆಧುನಿಕ ಕೃಷಿ ಪದ್ಧತಿಗೆ ಹಲವು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ಸರಗೂರು ಹ್ಯಾಂಡ್ ಪೋಸ್ಟ್ ಬಳಿಯಿರುವ ಹಾಲಗಟ್ಟೆ ಕೊಪ್ಪಲು ಎಂಬ ಗ್ರಾಮದಲ್ಲಿ ಸಾಮೂಹಿಕ ಕೃಷಿ ಪದ್ಧತಿಯಡಿ ಟೊಮ್ಯಾಟೊ, ದಪ್ಪ ಮೆಣಸಿನ ಕಾಯಿ, ಹಸಿರು ಮೆಣಸಿನಕಾಯಿ, ಹೂಕೋಸು, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಈಗಾಗಲೇ ರಾಗಿಯನ್ನು ಕೊಯ್ದು ಮಾಡಲಾಗಿದೆ. ಬೇರೆ ಬೇರೆ ಬೆಳೆಗಳು ಕೊಯ್ಲಿನ ಹಂತ ತಲುಪಿವೆ.
ಇನ್ನು ಬಿ.ಜಿ.ಪುರ ಹೋಬಳಿಯಲ್ಲಿ ಈವರೆಗೆ 26 ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚನೆ ಮಾಡಲಾಗಿದೆ. ಒಂದೊಂದು ಸಂಘದಲ್ಲಿ ಕನಿಷ್ಠ 74 ರಿಂದ 171 ಜನ ಸದಸ್ಯರಿದ್ದಾರೆ. ಒಟ್ಟು 2570 ರೈತರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಜಮೀನು ಯಾರ ಹೆಸರಿನಲ್ಲಿರುತ್ತದೋ ಅವರು ಸಂಘದ ಸದಸ್ಯರಾಗಿರುವುದಕ್ಕೆ ಅರ್ಹರಾಗಿರುತ್ತಾರೆ. ಪೌತಿ ಖಾತೆ ಮಾಡಿಸಿಕೊಂಡಿಲ್ಲದವರು ಅರ್ಜಿ ಸಲ್ಲಿಸಿ ಪೌತಿಖಾತೆ ಮಾಡಿಸಿಕೊಂಡರೆ ಸದಸ್ಯರಾಗುವುದಕ್ಕೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ಹೆಕ್ಟೇರ್‌ಗೆ 4 ಹೈಡ್ರಾಲಿಕ್ ವಾಲ್: ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆಯಲ್ಲಿ ಪ್ರತಿ 10 ಹೆಕ್ಟೇರ್ ನ ಒಂದು ಬ್ಲಾಕ್‌ಗೆ 4 ಹೈಡ್ರಾಲಿಕ್ ವಾಲ್‌ಗಳನ್ನು ಅಳವಡಿಸಲಾಗುವುದು. ಒಂದು ಹೈಡ್ರಾಲಿಕ್ ವಾಲ್ ಮೂಲಕ 6 ಎಕರೆಗೆ ನೀರು ಪೂರೈಸಬಹುದು. ನೀರು ಎಲ್ಲಿಯೂ ವ್ಯರ್ಥವಾಗದೆ ಬೆಳೆಯ ಬುಡಕ್ಕೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.
ರೈತರು ಒಗ್ಗೂಡಬೇಕು: ನಿರ್ದಿಷ್ಟ ಪ್ರದೇಶದಲ್ಲಿ ಒಂದು ಸಾವಿರ ಎಕರೆಗೆ ಒಂದೊಂದು ರೀತಿಯ ಮೌಲ್ಯವರ್ಧಿತ ಬೆಳೆ ಬೆಳೆಯುವುದರಿಂದ ಸಂಸ್ಕೃ ರಣಾ ಘಟಕಗಳು ತೆರೆದುಕೊಳ್ಳುತ್ತವೆ. ಇದರಿಂದ ಉತ್ಪನ್ನಗಳ ಮೌಲ್ಯ ವೃದ್ಧಿಯಾಗುತ್ತದೆ. ನೇರವಾಗಿ ರೈತರೇ ಮಾರುಕಟ್ಟೆ ಪ್ರವೇಶಿಸಬಹುದು. ಇದರಿಂದ ಆದಾಯವೂ ಹೈಚ್ಚವಾಗುತ್ತದೆ ಸ್ಥಳೀಯವಾಗಿ ಉದ್ಯೋಗ ಗಳೂ ಸೃಷ್ಟಿಯಾಗುತ್ತವೆ ಎಂಬುದು ಯೋಜನೆಯ ಹಿಂದಿರುವ ಕನಸಾಗಿದ್ದು, ರೈತರು ಒಗ್ಗೂಡಬೇಕಿದೆ.
ಮಾಧವಮಂತ್ರಿ ಅಣೆಕಟ್ಟೆಯಿಂದ ನೀರು: 25 ಸಾವಿರ ಎಕರೆ ಪ್ರದೇಶಕ್ಕೆ ಮಾಧವಮಂತ್ರಿ ಅಣೆಕಟ್ಟೆಯಿಂದ ನೀರನ್ನು ತರಲಾಗಿದೆ. ಈ ಯೋಜನೆ ಯನ್ನು ಜೈನ್ ಇರಿಗೇಷನ್ ಸಿಸ್ಟಮ್ ಲಿ.ನ ಸಹಯೋಗ ಮತ್ತು ಕಾವೇರಿ ನೀರಾವರಿ ನಿಗಮದ ನೇತೃತ್ವದಲ್ಲಿ ಮಾಡಲಾಗಿದೆ. ಪ್ರತಿ ದಿನ ಸಮಯ ನಿಗದಿ ಮಾಡಿ ನೀರನ್ನು ನೀಡಲಾಗುವುದು.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…