ಅಂಕಣಗಳು

ನಾ.ದಿವಾಕರ ವಾರದ ಅಂಕಣ: ಜನಪರ ಗಟ್ಟಿ ದನಿಯ ಅನಂತ ಅನುರಣನ

ವರ್ತಮಾನದ ಸಿಕ್ಕುಗಳ ನಡುವೆ ನೆನಪಾಗಿ ಕಾಡುವ ಪ.ಮಲ್ಲೇಶ್

21ನೇ ಶತಮಾನದಲ್ಲಿ ಭಾರತದ ಆರ್ಥಿಕ ಪ್ರಗತಿ ಅಥವಾ ಅಭಿವೃದ್ಧಿ ಎಂಬ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ, ಕಾಣದೆ ಹೋಗುವ ಅಸಂಖ್ಯಾತ (ಬಹುಸಂಖ್ಯಾತ ಎಂದೂ ಹೇಳಬಹುದು) ಜನರು, ವಿಭಿನ್ನ ಜಾತಿ, ಬುಡಕಟ್ಟು, ಸಮುದಾಯ, ಭಾಷೆ ಮತ್ತು ಧರ್ಮಗಳನ್ನು ಪ್ರತಿನಿಧಿಸುವ ಸಮಾಜಗಳು ಈ ಸಂದಿಗ್ಧತೆಗೆ ನೇರ ಮುಖಾಮುಖಿಯಾಗಲಿವೆ.

ಇಲ್ಲಿ ಎದುರಿಸಬೇಕಾದ ಸಿಕ್ಕುಗಳು ಮತ್ತು ಸವಾಲುಗಳು ತಳಮಟ್ಟದ ಸಮಾಜಗಳನ್ನು ನಾಲ್ಕೂ ದಿಕ್ಕುಗಳಿಂದ ಕಾಡುತ್ತಿರುವಂತೆಯೇ, ಈ ಸಮಾಜದಲ್ಲಿ ಅವಕಾಶ ವಂಚಿತರಾಗಿ, ಭವಿಷ್ಯದ ಕನಸು ಕಟ್ಟಲಾಗದೆ ಜೀವನೋಪಾಯದ ಮಾರ್ಗಗಳನ್ನು ಮಾರುಕಟ್ಟೆಯ ಜಗುಲಿಯಲ್ಲೇ ಕಂಡುಕೊಳ್ಳಬೇಕಾದ ಸನ್ನಿವೇಶವನ್ನು ಎದುರಿಸಲಿದ್ದಾರೆ. ಈ ತಳಸಮಾಜಗಳ ತಲ್ಲಣಗಳಿಗೆ ಸ್ಪಂದಿಸುವ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ, ಸಿಕ್ಕುಗಳನ್ನು ಬಿಡಿಸುವ, ಹೋರಾಟಗಳು ತಳಮಟ್ಟದಿಂದಲೇ ರೂಪುಗೊಳ್ಳಬೇಕಿದೆ.

ನಿರ್ವಾತದಲ್ಲಿ ನೆನಪಾಗುವ ಜೀವ: ಈ ಕನಸು ಮನದಲ್ಲಿ ಮೂಡಿದ ಕ್ಷಣವೇ ಮೈಸೂರಿನ ಪುರೋಗಾಮಿ ಆಲೋಚನೆಗಳ ಸಮಾಜಕ್ಕೆ ನೆನಪಾಗುವುದು ಕೆಲವು ವರ್ಷಗಳ ಮುನ್ನ ನಮ್ಮೆಲ್ಲರನ್ನೂಬಿಟ್ಟು ಹೋದ ಒಂದು ಹಿರಿಯ ಜೀವ, ಪ.ಮಲ್ಲೇಶ್. ತಾತ್ವಿಕವಾಗಿ ಗಾಂಧಿವಾದಿ, ಲೋಹಿಯಾವಾದಿ, ಸಮಾಜವಾದಿ ಮುಂತಾಗಿ ಬಣ್ಣಿಸಲ್ಪಡುವ ಮಲ್ಲೇಶ್ ಈಎಲ್ಲ ವಾದಗಳನ್ನೂ ಮೀರಿ ನಿಲ್ಲುವಂತಹ ಜನಪರ ಜೀವ ಎನ್ನುವುದು ನಿರ್ವಿವಾದ. ಏಕೆಂದರೆ ಕನ್ನಡ ಹೋರಾಟಗಾರರಾಗಿ, ಗಾಂಧಿ ತತ್ವಗಳಿಗೆ ಕೊನೆಯ ಉಸಿರಿರುವವರೆಗೂ ಬದ್ಧರಾಗಿದ್ದು, ಸಮ ಸಮಾಜದ ಕನಸುಗಳನ್ನು ನನಸು ಮಾಡಲು ನಿರಂತರ ಹೋರಾಟದಲ್ಲಿ ತೊಡಗಿದ್ದ ಮಲ್ಲೇಶ್, ಮೂಲತಃ ಅನ್ಯಾಯ, ಅಸಮಾನತೆ, ದೌರ್ಜನ್ಯ, ತಾರತಮ್ಯ, ಹಿಂಸೆ ಮತ್ತು ಇಂದು ಭಾರತವನ್ನು ಅಷ್ಟ ದಿಕ್ಕುಗಳಿಂದ ಕಾಡುತ್ತಿರುವ ಮತಾಂಧತೆ-ಮತೀಯವಾದ, ಇವುಗಳ ವಿರುದ್ಧ ಸದಾ ದನಿ ಎತ್ತುವ, ವಿಶಾಲ ಹಂದರದ ಕ್ರಿಯಾಶೀಲ ವ್ಯಕ್ತಿಯಾಗಿ ಬಾಳಿದವರು.

ಮಲ್ಲೇಶ್ ಪದೇ ಪದೇ ಏಕೆ ನೆನಪಾಗುತ್ತಾರೆ?: ಇತ್ತೀಚೆಗೆ ಮೈಸೂರಿನಲ್ಲಿ ೯ ವರ್ಷದ ಅಲೆಮಾರಿ ಕೂಸು, ಬಲೂನು ಮಾರುವ ಬಾಲೆ ಅತ್ಯಾಚಾರಕ್ಕೀಡಾಗಿ ಜೀವ ತೆತ್ತ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿಯನ್ನು ಆವರಿಸಿದ್ದ ಸನ್ನಿವೇಶ ನೆನಪಾದಾಗ, ಮಲ್ಲೇಶ್ ಸಹಜವಾಗಿ ಮನದಲ್ಲಿ ಹಾದು ಹೋಗುತ್ತಾರೆ. ಈಗ ವಿಸ್ಮೃತಿಗೆ ಜಾರಿರುವ ಆ ಹತಭಾಗ್ಯ ಬಾಲೆ ನಮ್ಮ ನಡುವೆ ಇನ್ನೂ ಇರುತ್ತಿತ್ತು, ನಮ್ಮ ಪ್ರಜ್ಞೆಯನ್ನು ಕದಡುತ್ತಲೇ ಇರುತ್ತಿತ್ತು. ಇದು ಮಲ್ಲೇಶ್ ಅವರಲ್ಲಿ ನಾವು ಗುರುತಿಸಬೇಕಾದ ವಿಶೇಷ ಲಕ್ಷಣ. ಯಾವುದೇ ರೀತಿಯ ದೌರ್ಜನ್ಯವಾದರೂ, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾದರೂ, ಕ್ಷಣಮಾತ್ರದಲ್ಲಿ ಸ್ಪಂದಿಸುವುದೇ ಅಲ್ಲದೆ, ನೊಂದ ಜನರಿಗೆ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ‘ನಿಮ್ಮೊಡನೆ ನಾನಿದ್ದೇನೆ’ ಎಂಬ ಅಭಯ ನೀಡುತ್ತಿದ್ದ ಮಲ್ಲೇಶ್, ಗುರಿ ತಲುಪುವವರೆಗೂ ಹೋರಾಡುವ ಛಲ, ಕ್ಷಮತೆ ಮತ್ತು ಸಾಮರ್ಥ್ಯ ಹೊಂದಿದ್ದರು.

ಇದನ್ನು ಓದಿ: ಬಾ.ನಾ.ಸುಬ್ರಹ್ಮಣ್ಯ ವಾರದ ಅಂಕಣ: ಭಾರತದ ೫೬ನೇ ಅಂ.ರಾ. ಚಿತ್ರೋತ್ಸವಕ್ಕೆ ಹೊಸ ರೀತಿಯ ಚಾಲನೆ 

ಇಲ್ಲಿ ಅವರಿಗೆ ಸಿದ್ಧಾಂತಗಳ, ರಾಜಕಾರಣದ ಅಥವಾ ಜಾತಿ-ಮತಗಳ ಅಡ್ಡ ಬೇಲಿಗಳು ನಗಣ್ಯವಾಗುತ್ತಿದ್ದವು. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆ ಈ ಮೌಲ್ಯಗಳಿಗೆ ಸದಾ ನಿಷ್ಠರಾಗಿದ್ದ ಮಲ್ಲೇಶ್, ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸದಾ ತುಡಿಯುತ್ತಿದ್ದವರು. ಅವರ ಆಶಯಗಳು ಕೇವಲ ಹಾಳೆಯ ಮೇಲಿರುತ್ತಿರಲಿಲ್ಲ ಅಥವಾ ಪುಸ್ತಕದಪುಟಗಳಲ್ಲಿ ಅಡಗಿರುತ್ತಿರಲಿಲ್ಲ. ಸದಾ ರಸ್ತೆಯಲ್ಲೇ ಸದ್ದು ಮಾಡುತ್ತಿದ್ದವು.

ತಾತ್ವಿಕವಾಗಿ ಭಿನ್ನ ವ್ಯಕ್ತಿತ್ವ: ಯಾವುದೇ ಜಟಿಲ ಸಮಸ್ಯೆಗಳ ಸುತ್ತ ವಿಚಾರ ಸಂಕಿರಣ ನಡೆದರೂ, ಎಲ್ಲವೂ ಮುಗಿದ ಮೇಲೆ ಅವರು ಕೇಳುತ್ತಿದ್ದ ಪ್ರಶ್ನೆ ‘What Next’’!ಅಂದರೆ ಸಾರ್ವಜನಿಕ ಪ್ರತಿಭಟನೆ, ಧರಣಿ, ಮುಷ್ಕರ, ಹೋರಾಟ ಇವೆಲ್ಲಕ್ಕೆ ಕಾರಣವಾಗುತ್ತಿದ್ದ ಜನಸಾಮಾನ್ಯರ, ಕಾರ್ಮಿಕರ, ರೈತರ, ಮಹಿಳೆಯರ ಹಾಗೂ ಶೋಷಿತ ಸಮುದಾಯಗಳ ಸಂಕಟಗಳು ಕೊನೆಯಾಗುವವರೆಗೂ ಹೋರಾಡುವ ಛಲ ಅವರಲ್ಲಿತ್ತು. ಅದು ಈಡೇರಿತೋ ಇಲ್ಲವೋ ಎನ್ನುವುದು ಮುಖ್ಯವಲ್ಲ ಆದರೆ ಒಂದು ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ಮುಂದುವರಿಸುವ ಕ್ಷಮತೆ ಮತ್ತು ದೃಢ ನಿಶ್ಚಯ ಅವರಲ್ಲಿ ಸದಾ ಇರುತ್ತಿತ್ತು. ಮೈಸೂರಿನ ಎನ್‌ಟಿಎಮ್ ಶಾಲೆಯನ್ನು ಉಳಿಸಲು ನಡೆಸಿದ ೭೫ ದಿನಗಳ ನಿರಂತರ ಮುಷ್ಕರ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ನಡೆಸಿದ ದಶಕಕ್ಕೂ ಹೆಚ್ಚು ಕಾಲದ ಹೋರಾಟ, ರಂಗಾಯಣ ಉಳಿಸಿ ಹೋರಾಟ ಅವರ ಈ ಧೋರಣೆಗೆ ಇತ್ತೀಚಿನ ಸಾಕ್ಷಿಗಳು. ಈ ನಿಟ್ಟಿನಲ್ಲಿ ಮಲ್ಲೇಶ್‌ರ ಸಾಫಲ್ಯ – ವೈಫಲ್ಯಗಳನ್ನು ಹೆಕ್ಕಿ ತೆಗೆಯಬೇಕಿಲ್ಲ. ದುಷ್ಟ ಸಾಂಸ್ಕ ತಿಕ ಶಕ್ತಿಗಳ ವಿರುದ್ಧ, ಸರ್ಕಾರಗಳ ವಿರುದ್ಧ ಹೋರಾಟಗಳು ನಡೆದಾಗ ಕಿಂಚಿತ್ತೂ ಹಿಂಜರಿಯದೆ, ಯಾವುದೇ ಸೈದ್ಧಾಂತಿಕ – ತಾತ್ವಿಕ ಭಿನ್ನತೆಗಳನ್ನೂ ಲೆಕ್ಕಿಸದೆ, ಕ್ರಿಯಾಶೀಲರಾಗಿ ಹಗಲು ರಾತ್ರಿ ಎನ್ನದೆ ಮುನ್ನುಗ್ಗುತ್ತಿದ್ದುದನ್ನು ಗೋಕಾಕ್ ಚಳವಳಿಯಿಂದ ಎನ್‌ಟಿಎಮ್‌ಎಸ್‌ವರೆಗಿನ ಚರಿತ್ರೆಯಲ್ಲಿ ಗುರುತಿಸಬಹುದು. ಡಿಜಿಟಲ್ ಯುಗದ ಯುವ ಸಮಾಜ ಈ ಹೆಜ್ಜೆಗಳನ್ನು ಗುರುತಿಸಬೇಕಿದೆ.

ಸೋಲಿಗೆ ಎದೆಗುಂದದೆ, ಗೆಲುವನ್ನು ಸಂಭ್ರಮಿಸದೆ, ನಾಯಕತ್ವದ ಫಲಾಪೇಕ್ಷೆಗಳಿಲ್ಲದೆ, ಎಲ್ಲರೊಳಗೊಂದಾಗಿ, ಅಂತಿಮವಾಗಿ ನ್ಯಾಯವೊಂದೇ ಗುರಿ ಎಂಬ ಮನೋಭಾವದೊಡನೆ ಹೋರಾಟದ ಅಖಾಡಕ್ಕೆ ಧುಮುಕುತ್ತಿದ್ದ ಮಲ್ಲೇಶ್ ಈ ದೃಷ್ಟಿಯಿಂದ ಆದರ್ಶಪ್ರಾಯರೂ, ಅನುಕರಣೀಯರೂ ಆಗುತ್ತಾರೆ. ಮಲ್ಲೇಶ್ ಭೌತಿಕವಾಗಿ ಇಲ್ಲವಾಗಿದ್ದಾರೆ ಅಷ್ಟೆ. ಅವರ ಕನಸುಗಳ ಮೂಲಕ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. ಈ ಉಸಿರು ನಿಲ್ಲುವುದಿಲ್ಲ.

” ಮೈಸೂರಿನಲ್ಲಿ ಪುರೋಗಾಮಿ ಸಂಘಟನೆಗಳು ಪ.ಮಲ್ಲೇಶ್ ಅವರನ್ನು ಸ್ಮರಿಸುವ ವಿಚಾರಸಂಕಿರಣ ಕಾರ್ಯಕ್ರಮವನ್ನು ನ.೨೧ರಂದು ಹಮ್ಮಿಕೊಂಡಿವೆ. ಈ ಸಮಾವೇಶದ ಆಶಯವೆಂದರೆ, ಮಲ್ಲೇಶ್ ಅವರು ಕಟ್ಟಿದ ಕನಸುಗಳನ್ನು, ಈಡೇರಿಸಲಾಗದೆ ಬಿಟ್ಟುಹೋದ ಆಶಯಗಳನ್ನು ಸಾಕಾರಗೊಳಿಸುವುದೇ ಆಗಿದೆ.”

ನಾ.ದಿವಾಕರ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

2 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

3 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

3 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

3 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

3 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

3 hours ago