ಅಂಕಣಗಳು

ನಾ.ದಿವಾಕರ ಅವರ ವಾರದ ಅಂಕಣ: ಎಳೆ ಪ್ರತಿಭೆಗೆ ಸಾಕ್ಷಿಯಾದ ರಂಗ ಪ್ರಯೋಗ

ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ. 

ನಾ.ದಿವಾಕರ

ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು ಗಮನಿಸಿದಾಗ, ಹಿಂಸೆ, ದೌರ್ಜನ್ಯ ಮತ್ತು ದ್ವೇಷ ಈ ಮೂರೂ ಅವಗುಣಗಳು ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿದೆ ಎಂದು ಭಾಸವಾಗುತ್ತದೆ. ಇದಕ್ಕೆ ಬಲಿಯಾಗುತ್ತಿರುವವರು ಮಹಿಳೆ ಯರು, ಆರ್ಥಿಕವಾಗಿ ಕೆಳ ಸ್ತರದಲ್ಲಿರುವ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ಜನರು. ಹಾಗಾಗಿಯೇ ಮತ ದ್ವೇಷ, ಕೋಮು ದ್ವೇಷ, ಹಿಂಸೆ, ಅತ್ಯಾಚಾರ, ದೌರ್ಜನ್ಯ ಮತ್ತು ಮನುಜ ಸಂಬಂಧಗಳ ಅಪಮೌಲ್ಯೀಕರಣ, ಸಾಮಾಜಿಕ ವ್ಯಾಧಿಯಾಗಿ ( (Social Malaise), ಸಾಂಸ್ಕೃತಿಕ ವ್ಯಸನವಾಗಿ ನಮ್ಮನ್ನು ಕಾಡುತ್ತಿದೆ.

ಈ ಸಾಮಾಜಿಕ ವ್ಯಾಧಿಯನ್ನು ಗುಣಪಡಿಸುವ, ಯುವ ಸಮೂಹವನ್ನು ಆವರಿಸಿರುವ ಮಾದಕ ವಸ್ತುಗಳಂತಹ ದ್ರವ್ಯರೂಪದ ವ್ಯಸನ, ಜಾತಿ ಉಪಜಾತಿ ಧರ್ಮ ಮುಂತಾದ ಸಾಂಸ್ಕೃತಿಕ ವ್ಯಸನವನ್ನು ಹೋಗಲಾಡಿಸುವ ಚಿಕಿತ್ಸಕ ಗುಣ ರಂಗಭೂಮಿಯಲ್ಲಿದೆ. ಈ ದೃಷ್ಟಿಯಿಂದ ಶಾಲಾ ಮಕ್ಕಳಿಂದ ಪದವಿ ಕಾಲೇಜಿನ ಶಿಕ್ಷಣಾರ್ಥಿಗಳವರೆಗೆ ಯುವ ಸಮಾಜವನ್ನು ತನ್ನೊಳಗೆ ಸೆಳೆಯುವ ಗುರುತರ ಜವಾಬ್ದಾರಿ ರಂಗಭೂಮಿಯ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ಭರವಸೆ ಮೂಡಿಸಿದ್ದು ಕರ್ನಾಟಕ ನಾಟಕ ಅಕಾಡೆಮಿ ಮತ್ತು ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು ಸಹಯೋಗದೊಂದಿಗೆ ರಂಗನಿರ್ದೇಶಕಿ ಕೆ.ಆರ್.ಸುಮತಿ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಳೆದ ವಾರ ಮೈಸೂರಿನ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಂಡ ‘ಊರ ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕ ; ಯುವ ಸಮೂಹ ರಂಗಭೂಮಿಗೆ ವಿಮುಖರಾಗಿಲ್ಲ ಎಂದು ನಿರೂಪಿಸುವ ಒಂದು ಪ್ರಯೋಗ. ಮಹಾಜನ ಕಾಲೇಜಿನ ಸಾಂಸ್ಕೃತಿಕ ರಂಗತಂಡ (ಸಾರಂತ)ದ ಯುವ ಕಲಾ ವಿದರು ಅಭಿನಯಿಸಿದ ಈ ನಾಟಕ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ.

ಈ ನಾಟಕದ ಮೂಲ ಕಥಾವಸ್ತು ಪ್ರಚಲಿತ ವಿದ್ಯ ಮಾನಗಳಿಗೆ ಕನ್ನಡಿ ಹಿಡಿದಂತಿದೆ. ಹನುಮಂತ ಹಾಲಗೇರಿ ಅವರು ರಚಿಸಿರುವ ‘ಊರ ಸುಟ್ಟರೂ ಹನುಮಪ್ಪ ಹೊರಗ’ ನಮ್ಮ ಸಮಾಜವನ್ನು ನಿರಂತರವಾಗಿ ಒಡೆಯು ತ್ತಲೇ ಇರುವ, ವಿಭಜಿಸುತ್ತಲೇ ಇರುವ ಧಾರ್ಮಿಕ ನಂಬಿಕೆ ಮತ್ತು ಮೌಢ್ಯಗಳು, ರಾಜಕೀಯದ ದಾಳವಾಗಿ ರುವ ದೈವತ್ವದ ಕಲ್ಪನೆ ಮತ್ತು ನಿರ್ದಿಷ್ಟ ದೇವರು ಮತ್ತು ದೇವಸ್ಥಾನಗಳನ್ನೇ ಸಮಾಜವಿಭಜಕ ಸೇತುವೆಗಳಾಗಿ ಬಳಸಿಕೊಳ್ಳುವ ಹೊಲಸು ರಾಜಕಾರಣ ಇವೆಲ್ಲವನ್ನೂ ಈ ಹಾಸ್ಯಮಿಶ್ರಿತ ನಾಟಕದ ಮೂಲಕ ಹೊರಗೆಡಹಲಾಗಿದೆ.

ದೈವ ಮತ್ತು ದೈವತ್ವವನ್ನು ಜಂಗಮ ರೂಪದಲ್ಲಿ ಹಂಚಿಕೊಂಡ ಭಾರತೀಯ ಸಮಾಜ ಸ್ಥಾವರ ರೂಪದಲ್ಲಿ ಪ್ರತಿಯೊಂದು ಗುಡಿಯನ್ನೂ ರಾಜಕೀಯ ಚಿಮ್ಮುಹಲಗೆ ಯನ್ನಾಗಿ (Political Launchpad) ಬಳಸಿಕೊಳ್ಳುತ್ತಿರುವುದನ್ನು, ಈ ನಾಟಕ ಸಮರ್ಥವಾಗಿ ತೆರೆದಿಡುತ್ತದೆ.

ಸ್ವತಂತ್ರ ಭಾರತದಲ್ಲಿ ದೈವ ನಂಬಿಕೆ ಮತ್ತು ಅದರಿಂದಲೇ ಉತ್ಪಾದಿಸಲಾಗುವ ಮೌಢ್ಯಾಚರಣೆಗಳು ಸಮಾಜದಲ್ಲಿ ಕಲಿತವರನ್ನೂ, ಕಲಿಯದವರನ್ನೂ ಸಮನಾಗಿ ದಾರಿ ತಪ್ಪಿಸುತ್ತವೆ. ಧಾರ್ಮಿಕ ಶ್ರದ್ಧಾ ಭಕ್ತಿಗಳು ಸಾಮುದಾಯಿಕ ಭಾವನೆಗಳ ಚೌಕಟ್ಟಿನಲ್ಲಿ ವ್ಯಕ್ತವಾಗುವಾಗ ಸೃಷ್ಟಿಯಾಗುವ ಉನ್ಮಾದ ಮತ್ತು ಭಾವಾವೇಶಗಳು ಸಮಾಜಗಳನ್ನು ಒಡೆಯುತ್ತಾ ಹೋಗುತ್ತವೆ. ಈ ವಿಘಟನೆಗೆ ಕಾರಣ ಸುತ್ತಲಿನ ಜನರ ದುಷ್ಟಬುದ್ಧಿಯೇ ಆದರೂ, ಯಾವುದೋ ಒಂದು ದೇವರ ಮೇಲೆ , ಗುಡಿ ಅಥವಾ ಪ್ರತಿಮೆಗಳ ಮೂಲಕ, ಜವಾಬ್ದಾರಿ ಹೊರಿಸಲಾಗುತ್ತದೆ. ಈ ನಾಟಕದಲ್ಲಿ ಹನುಮ ಈ ಪ್ರಾಯೋಗಿಕ ಶಿಶುವಾಗಿ ಕಾಣುತ್ತಾನೆ. ದೈವ ಭಕ್ತಿ ಮತ್ತು ಆರಾಧನೆಯ ಹೆಸರಿನಲ್ಲಿ ಇಬ್ಭಾಗವಾಗುವ ಒಂದು ಗ್ರಾಮ, ಎರಡು ಗುಂಪುಗಳ ನಡುವೆ ಬೆಳೆಯುವ ವೈಷಮ್ಯ ಮತ್ತು ಆ ಮೂರ್ತಿಯನ್ನು ಉಳಿಸಿಕೊಳ್ಳಲು ಎರಡೂ ಗ್ರಾಮಸ್ತರು ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುವ ದಾರುಣ ಪರಿಸ್ಥಿತಿ ಹೇಗೆ ದುಡಿದು ತಿನ್ನುವ ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎನ್ನುವುದನ್ನು ಈ ನಾಟಕವು ಪ್ರೇಕ್ಷಕರ ಮುಂದಿಡುತ್ತದೆ. ಹಾಗೆಯೇ ವೈಚಾರಿಕ ಪ್ರಜ್ಞೆ ಮತ್ತು ಸಮಾಜಮುಖಿ ಆಲೋಚನೆ ಹೇಗೆ, ತಳಮಟ್ಟದ ಸಮಾಜದಲ್ಲಿ ಜನರನ್ನು ಒಂದಾಗಿಸಿ, ಸಹಬಾಳ್ವೆಯ ಕಡೆಗೆ ಸಾಗಿಸುತ್ತದೆ ಎನ್ನುವುದನ್ನೂ ತೆರೆದಿಡುತ್ತದೆ.

ನಾಟಕದ ಹಿರಿಮೆ ಇರುವುದು ಮಹಾಜನ ಕಾಲೇಜಿನ ಶಿಕ್ಷಣಾರ್ಥಿಗಳ ಅದ್ಭುತ ಅಭಿನಯದಲ್ಲಿ ಮತ್ತು ಕೆ.ಆರ್. ಸುಮತಿ ಅವರ ದಕ್ಷ ನಿರ್ದೇಶನದಲ್ಲಿ. ಇಡೀ ನಾಟಕದಲ್ಲಿ ನಿರ್ದೇಶಕಿಯ ಅಪಾರ ಪರಿಶ್ರಮ ಎದ್ದು ಕಾಣುವಂತೆಯೇ, ವಿಭಿನ್ನ ಪಾತ್ರಗಳ ನಿರ್ವಹಣೆಯಲ್ಲಿ ಈ ಯುವ ಸಮೂಹ ತೋರಿರುವ ತನ್ಮಯತೆ, ಅಭಿವ್ಯಕ್ತಿಯ ಸಂಯಮ ಹಾಗೂ ಅಭಿನಯ ಕಲೆಯೂ ಪ್ರೇಕ್ಷಕರ ಮನಸ್ಸಿಗೆ ನಾಟು ವಂತಿದೆ. ವರ್ತಮಾನದ ಸಮಾಜಕ್ಕೆ ಅಗತ್ಯವಾದ ಸಮನ್ವಯ- ಸೌಹಾರ್ದತೆಯ ಸಂದೇಶ ಸಾರುವ ಕಥಾವಸ್ತುವನ್ನು ರಂಗದ ಮೇಲೆ ಇನ್ನೂ ಪರಿಣಾಮಕಾರಿಯಾಗಿ ಬಿಂಬಿಸಿರುವ ಸಾರಂತ ತಂಡಕ್ಕೆ ಮತ್ತು ನಿರ್ದೇಶಕಿ ಕೆ.ಆರ್.ಸುಮತಿ ಅವರಿಗೆ, ಉತ್ತಮ ಬೆಳಕಿನ ವಿನ್ಯಾಸ ಮಾಡಿರುವ ಮಧು ಮಳವಳ್ಳಿ ಅವರಿಗೆ, ಹಿನ್ನೆಲೆ ಗಾಯನ-ಸಂಗೀತ ಉಣಬಡಿಸಿದ ಚಿಂತನ್ ವಿಕಾಸ್-ಜನ್ನಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.

” ದೈವ ಭಕ್ತಿ ಮತ್ತು ಆರಾಧನೆಯ ಹೆಸರಿನಲ್ಲಿ ಇಬ್ಭಾಗವಾಗುವ ಒಂದು ಗ್ರಾಮ, ಎರಡು ಗುಂಪುಗಳ ನಡುವೆ ಬೆಳೆಯುವ ವೈಷಮ್ಯ ಮತ್ತು ಆ ಮೂರ್ತಿಯನ್ನು ಉಳಿಸಿಕೊಳ್ಳಲು ಎರಡೂ ಗ್ರಾಮಸ್ಥರು ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುವ ದಾರುಣ ಪರಿಸ್ಥಿತಿ ಹೇಗೆ ದುಡಿದು ತಿನ್ನುವ ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎನ್ನುವುದನ್ನು ಈ ನಾಟಕವು ಪ್ರೇಕ್ಷಕರ ಮುಂದಿಡುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಉದ್ಯೋಗಾಕಾಂಕ್ಷಿಗಳ ಆಶೋತ್ತರ ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಜೆಡಿಎಸ್‌ ಆಕ್ರೋಶ

ಬೆಂಗಳೂರು: ಯುವಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಮೂರು ವರ್ಷ ಕಳೆಯತ್ತಾ ಬಂದರೂ ಒಂದೇ ಒಂದು…

7 mins ago

ಮಂಡ್ಯ| ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಸಿಇಓ ನಂದಿನಿ ಸೂಚನೆ

ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್‌ ಸಿಇಓ…

30 mins ago

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೀದಿಗಿಳಿದ ಉದ್ಯೋಗಾಕಾಂಕ್ಷಿಗಳು

ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ…

48 mins ago

ಕಾಂತಾರ ವಿವಾದ: ನಟ ರಣವೀರ್‌ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ನಟ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-‌1 ಚಿತ್ರದ ದೈವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ…

54 mins ago

ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಬಂಧನ

ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಬಾನು ಚಿಬ್‌ ಅವರನ್ನು ದೆಹಲಿ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.…

58 mins ago

ಹನೂರು| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ…

1 hour ago