ಮಹಾಕಾವ್ಯದಲ್ಲಿ ಹೆಚ್ಚಾಗಿ ಸಿಗದ ವಾಲ್ಮೀಕಿ ವೈಯಕ್ತಿಕ ಮಾಹಿತಿ
ಭಾರತದ ಆದಿಕವಿ ಎಂದು ಗುರುತಿಸಲ್ಪಡುವ ವಾಲ್ಮೀಕಿ ಹುಟ್ಟಿದ ದಿನ ಇಂದು. ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿ ಹುಟ್ಟಿದ ದಿನವನ್ನು ೨೦೧೫ ರಿಂದ ಕರ್ನಾಟಕದಲ್ಲಿ ಸರ್ಕಾರದ ಕಾರ್ಯಕ್ರಮವಾಗಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ದಿನವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಎಂಬ ಹೆಸರಿನಲ್ಲಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ವಾಲ್ಮೀಕಿ ಹಿನ್ನೆಲೆಯನ್ನು ಕುರಿತು ಸಾಕಷ್ಟು ಕಥೆಗಳು ಮತ್ತು ಪುರಾಣಗಳು ಸೃಷ್ಟಿಯಾಗಿರುವುದನ್ನು ನಾವುಗಳು ಕೇಳಿರುತ್ತೇವೆ- ಈಗಲೂ ಕೇಳುತ್ತಿದ್ದೇವೆ ಅಥವಾ ಓದಿರುತ್ತೇವೆ-ಈಗಲೂ ಓದುತ್ತಿದ್ದೇವೆ; ಅವನು ದರೋಡೆಕೋರ ನಾಗಿದ್ದ, ಕ್ರೂರಿಯಾಗಿದ್ದ, ಕ್ರೌಂಚ ಪಕ್ಷಿಯ ಪ್ರಕರಣದಿಂದ ಮನಃಪರಿವರ್ತಿತನಾದ, ನಾರದ ಮಹರ್ಷಿ ಅವನು ಬದುಕು ಬದಲಾಯಿಸಿದ, ‘ಮರ ಮರ’ ಮಂತ್ರದಿಂದಲೇ ಪ್ರಭಾವಿತನಾಗಿ ರಾಮಾಯಣ ರಚಿಸಿದ, ದೀರ್ಘಕಾಲದ ತಪಸ್ಸಿನಿಂದಾಗಿ, ಮೈಮೇಲೆ ಹುತ್ತ ಬೆಳೆದು ಅದರಿಂದ ಅವನಿಗೆ ವಾಲ್ಮೀಕಿ ಎನ್ನುವ ಹೆಸರು ಬಂತು. ಇದು ಇಲ್ಲಿಗೆ ಮುಗಿಯುವುದಿಲ್ಲ ಇನ್ನಷ್ಟು ಮುಂದೆ ಹೋಗಿ ವಾಲ್ಮೀಕಿ ಹುತ್ತದಿಂದ ಎದ್ದು ಬಂದು ಜ್ಞಾನೋದಯವಾಗಿ ಕವಿಯಾದಂತಹ ಕಥೆಗಳು- ಪುರಾಣಗಳ ತಿರುಳು.
ಬಹಳ ಮುಖ್ಯ ವಿಚಾರವೆಂದರೆ ವಾಲ್ಮೀಕಿ ಹಿನ್ನೆಲೆಯನ್ನು ಕುರಿತಂತೆ ಇರುವ ಕಥೆಗಳು ಬೇರೆಯವರು ಸೃಷ್ಟಿಸಿರುವುದೇ ಹೊರತು, ಸ್ವತಃ ವಾಲ್ಮೀಕಿ ಎಲ್ಲಿಯೂ ಪ್ರಸ್ತಾಪಿಸಿರುವುದಿಲ್ಲ. ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜ ವನ್ನು ಕೆಲವೇ ಕೆಲವು ಕಥೆಗಳು ಆಳುತ್ತಾ ಬಂದಿವೆ. ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಇಂತಹ ದಾರ್ಶನಿಕರನ್ನು ದೈವತ್ವಕ್ಕೆ ಏರಿಸುವುದು ಅಪಾರ ನಷ್ಟ. ಅಲ್ಲದೆ, ಇವರನ್ನು ಒಂದು ಕುಲ, ಜಾತಿ, ಧರ್ಮ ಮತ್ತು ಪಂಥಕ್ಕೆ ಕಟ್ಟಿಹಾಕುವುದು ತುಂಬಾ ಅಪಾಯಕಾರಿ. ಒಬ್ಬ ಮನುಷ್ಯನ ಅಪ್ರತಿಮ ಸಾಧನೆಯನ್ನು ಮತ್ತು ಅವನ ಹಿನ್ನೆಲೆಯನ್ನು ಕೆದಕದೇ, ಅದರ ಮೇಲೆ ಕಥೆಗಳನ್ನು ಕಟ್ಟದೆ, ಬಾಹ್ಯ ಕಾರಣಗಳಿಂದ ಹಿಗ್ಗಿಸದೇ ಮತ್ತು ಅವರ ಸಾಧನೆಯನ್ನು ಕುಗ್ಗಿಸದೇ ವಸ್ತುಸ್ಥಿತಿ ಸ್ವೀಕರಿಸುವ ಮಾನಸಿಕ ವಿಕಾಸ ನಮ್ಮಲ್ಲಿ ಇನ್ನೂ ಸಂಪೂರ್ಣವಾಗಿ ಆಗಿಲ್ಲ ಎನ್ನುವುದು ವಾಸ್ತವ.
ಇದನ್ನು ಓದಿ : ಕುತೂಹಲ ಕೆರಳಿಸಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ
‘ಇರುವುದನ್ನು ಇರುವಂತೆಯೇ ಹೇಳು’ ಎಂಬ ಹೇಳಿಕೆಯು ಇತಿಹಾಸವನ್ನು ಬರೆಯುವುದರ ಕುರಿತು ಅಮೆರಿಕ ದೇಶದ ಸಾಹಿತಿದಾರ್ಶನಿಕ ಲಿಯೋಪೋಲ್ಡ್ ವಾನ್ ರಾಂಕೆಯು ಹೇಳಿದ್ದ ಪ್ರಸಿದ್ಧ ನುಡಿ. ಈ ಮಾತನ್ನು ಭಾರತದ ಮಹನೀಯರ ಹುಟ್ಟು ಮತ್ತು ಬದುಕಿ ತೋರಿಸಿದ ಸಾಧನೆಯ ಬಗ್ಗೆ ಭೂತಕಾಲದ ಸಂದರ್ಭಕ್ಕೆ ಅನ್ವಯಿಸಿದಾಗ ಇತಿಹಾಸವನ್ನು ಒರೆಗೆ ಹಚ್ಚುವ ಕೆಲಸವು ಇತ್ತೀಚಿನ ದಿನಗಳಲ್ಲಿ ಈ ಹೇಳಿಕೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಕನಕದಾಸರು ಉಡುಪಿಯ ಶ್ರೀ ಕೃಷ್ಣನ ದರ್ಶನಕ್ಕೆ ಕೇಳಿ ನಿಂತಿದ್ದು ಶೂದ್ರನೊಬ್ಬನ ಮೊದಲ ಪ್ರತಿಭಟನೆ. ಜಾತಿವ್ಯವಸ್ಥೆ ವಿರುದ್ಧ ಸಮರ ಸಾರಿದ ಮತ್ತು ಮೌಢ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಿದ ಇವನೊಬ್ಬ ಸಮಾಜ ಸುಧಾರಕ, ಧನಿಕ, ಸೈನಿಕ ಮತ್ತು ಕವಿಗಿಂತಲೂ ಕನಕನ ಕಿಂಡಿಯ ಬಗ್ಗೆ ಕಥೆಯನ್ನು ಸೃಷ್ಟಿಸಿ ಕೊನೆಗೆ ದೇವರ ದರ್ಶನ ಮಾಡಿಸಿ ಮತ್ತು ಗುರುಗಳು ಕೊಟ್ಟ ಬಾಳೆಹಣ್ಣಿಗೆ ಭಕ್ತಿಯ ಲೇಪನ ಮಾಡಿದ ಕಥೆಗೆ ಸೀಮಿತ ಮಾಡಿ ಕಟ್ಟಿ ಹಾಕಿರುವುದು ದುರಂತ.
ಮಹಾಭಾರತ ಕಾವ್ಯದಲ್ಲಿ ಬರುವ ಬೇಡರ ಹುಡುಗ ಏಕಲವ್ಯ ಕಲಿತ ಬಿಲ್ವಿದ್ಯೆ ಪರಿಣತಿಯನ್ನು ಪ್ರಬಲ ವರ್ಗಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅವನ ಪ್ರತಿಭೆಯನ್ನು ಒಪ್ಪಿಕೊಳ್ಳದೇ ಹೋಯಿತು. ಅವನ ಕಾಲದ ಅತಿರಥ ಮಹಾರಥ ಕ್ಷತ್ರಿಯ ರಾಜಕುಮಾರರು ಗುರುಗಳ ಮಾರ್ಗದರ್ಶನ ಪಡೆದು ಕೌಶಲವನ್ನು ಹೊಂದಿದದವರನ್ನು ಮೀರಿಸಿ ಅವರಿಗಿಂತಲೂ ಏಕಲವ್ಯ ಒಬ್ಬನೇ ಬಿಲ್ವಿದ್ಯೆ ಚೆನ್ನಾಗಿ ಕಲಿತ. ಆದರೆ ಅವನ ಸಾಧನೆಯ ಕುರಿತು ಕಟ್ಟುಕಥೆ ಕಟ್ಟದಿದ್ದರೂ ಹೆಬ್ಬೆರಳು ಕಿತ್ತುಕೊಂಡಿತು. ಆ ಮೂಲಕ ಅವನ ಪರಿಶ್ರಮವನ್ನು ಮಣ್ಣಾಗಿಸಿತು.
ಏಕಲವ್ಯನಿಗೆ ಹೋಲಿಸಿದರೆ, ಅಂಬೇಡ್ಕರ್ ಜೀವನದ ಪ್ರತಿಯೊಂದು ಏಳು ಬೀಳು, ಪರಿಶ್ರಮ ಇತ್ಯಾದಿಗಳ ಕುರಿತು ಸ್ಪಷ್ಟ ದಾಖಲೆಗಳಿರುವುದರಿಂದ ಅವರ ಸಾಧನೆಯನ್ನು ಅಲ್ಲಗೆಳೆಯಲು ಸಾಧ್ಯವಾಗಲಿಲ್ಲ ಎನ್ನಬಹುದು. ಬಹುಶಃ ದಾಖಲೆಗಳು ಇಲ್ಲದಿದ್ದರೆ ಅಂಬೇಡ್ಕರ್ ಕೂಡ ಬುದ್ಧನಂತೆ ಅವತಾರ ಪುರುಷ ನಾಗುವ ಎಲ್ಲಾ ಸಾಧ್ಯತೆಗಳಿದ್ದವು. ೨೪ ಸಾವಿರ ಸಂಸ್ಕ ತ ಶ್ಲೋಕಗಳಿರುವ ರಾಮಾಯಣ ಎಂಬ ಬೃಹತ್ ಗ್ರಂಥವನ್ನು ೭ ಖಂಡಗಳಾಗಿ ವಿಭಜಿಸಲಾಗಿದೆ. ಇಂತಹ ವಾಲ್ಮೀಕಿ ರಾಮಾಯಣ ಬರೆಯುವಷ್ಟು ಅಪಾರ ವಿದ್ವತ್ ಯಾವುದೋ ಒಂದು ಘಟನೆಯಿಂದಷ್ಟೇ ರೂಪುಗೊಳ್ಳಲು ಸಾಧ್ಯವಿಲ್ಲ. ಬದಲಾಗಿ ಅಲ್ಲಿ ಸಾಕಷ್ಟು ಪರಿಶ್ರಮ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ವಾಲ್ಮೀಕಿ ಹೆಸರು ಇಂದು ನಮಗೆ ಉಳಿದು ಬಂದಿರುವುದೇ ರಾಮಾಯಣದಿಂದ. ರಾಮಾಯಣದಲ್ಲಿ ವಾಲ್ಮೀಕಿ ಬಗ್ಗೆ ವೈಯಕ್ತಿಕ ಮಾಹಿತಿ ಸಿಗುವುದಿಲ್ಲ. ‘ಬಾಲಕಾಂಡ ಮತ್ತು ಉತ್ತರಕಾಂಡಗಳಲ್ಲಿ ಸ್ವಲ್ಪ ವಿವರ ಸಿಗುತ್ತದೆ. ವಾಲ್ಮೀಕಿಗೆ ಗೌರವ ದೊರೆತಿರುವುದು ಅವರ ಕಾವ್ಯದಿಂದಲೇ, ನಮಗೆ ಅವರ ಬದುಕಿನ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಇರಬಹುದು. ಆದರೆ ರಾಮಾಯಣವನ್ನು ಓದಿದರೆ ವಾಲ್ಮೀಕಿ ಅವರ ಮಾತೃವಾತ್ಸಲ್ಯ ಮತ್ತು ಹೃದಯ ವೈಶಾಲ್ಯ ವ್ಯಕ್ತಿತ್ವದ ಮಹಾದರ್ಶನ ಆಗುತ್ತದೆ. ಕೊನೆಯದಾಗಿ ವಾಲ್ಮೀಕಿಯ ಬಗ್ಗೆ ಕೇವಲ ಬಾಹ್ಯ ಘಟನೆಗಳನ್ನಷ್ಟೇ ವೈಭವೀಕರಿಸಿದರೆ ವಾಲ್ಮೀಕಿಯ ಸಾಧನೆಯನ್ನು ಕುಗ್ಗಿಸಿದಂತೆ ಆಗುತ್ತದೆ. ದೈವ ಭಾಷೆಯೆಂದು ಕರೆಯುವ ಸಂಸ್ಕ ತವನ್ನು ಕರಗತ ಮಾಡಿಕೊಂಡು ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ.
(ಲೇಖಕರು, ಮೈಸೂರು ಜಿಲ್ಲೆ ಸರಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು)
” ವಾಲ್ಮೀಕಿ ಹೆಸರು ಇಂದು ನಮಗೆ ಉಳಿದು ಬಂದಿರುವುದೇ ರಾಮಾಯಣದಿಂದ. ರಾಮಾಯಣದಲ್ಲಿ ವಾಲ್ಮೀಕಿ ಬಗ್ಗೆ ವೈಯಕ್ತಿಕ ಮಾಹಿತಿ ಸಿಗುವುದಿಲ್ಲ. ‘ಬಾಲಕಾಂಡ ಮತ್ತು ಉತ್ತರಕಾಂಡಗಳಲ್ಲಿ ಸ್ವಲ್ಪ ವಿವರ ಸಿಗುತ್ತದೆ.”
-ಎಚ್.ಹಾಲಪ್ಪ
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…