• ಕೀರ್ತನ ಎಂ.
ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು ಕರೆಯುತ್ತಿದ್ದಳು. ಏಷ್ಟು ವರ್ಷ… ಅಂದು ಅವಳು ಮೈನೆರೆದು ಸರಿಯಾಗಿ ಎರಡು ತಿಂಗಳುಗಳು ಕಳೆದಿತ್ತು. ಶಾಲೆಯಲ್ಲಿ ಕಾಡಿ ಬೇಡಿ ಮೂರು ವಾರ ರಜೆ ಗಿಟ್ಟಿಸಿ ಅದ್ಧೂರಿಯಾಗಿ ಆರತಿ ಶಾಸ್ತ್ರವನ್ನೂ ಮಾಡಿ ಮುಗಿಸಿದ್ದರು. ಆ ದಿನ ಕಾರ್ಯಕ್ರಮಕ್ಕೆ ಬಂದವನು ಮರಳಿ ಗೆಳೆಯನನ್ನು ಭೇಟಿ ಆಗುವ ನೆಪದಲ್ಲಿ ಮನೆಗೆ ಬಂದಿದ್ದ. ಅದೂ ತಾರ ಒಬ್ಬಳೇ ಇದ್ದ ಹೊತ್ತಲ್ಲಿ! ‘ಅಣ್ಣ…’ಬಾಗಿಲು ತೆಗೆದವಳು ಖುಷಿಯಿಂದ ಅವನ ಬಳಿ ಬಂದಳು.
ಮನೆಯಲ್ಲಿ ಯಾರೂ ಇಲ್ಲದ ಹೊತ್ತು ಎಲ್ಲಿ ನಿನ್ನ ಅಣ್ಣ? ಆಂಟಿ ಅಂಕಲ್ ಇಲ್ವಾ?’ ಎಂದು ಕೇಳುತ್ತ ಅವಳ ಹೆಗಲು ಬಳಸುತ್ತಾ ಒಳ ಬಂದ.
‘ಇಲ್ಲ ಅಪ್ಪ ಕೆಲಸಕ್ಕೆ ಹೋಗಿದ್ದಾರೆ ಅಮ್ಮ ಸಂತೆಗೆ ಹೋಗಿದ್ದಾರೆ. ಅಣ್ಣ ಇನ್ನೇನು ಬರಬಹುದು’ ಎಂದವಳ ಮಾತು ಕೇಳುತ್ತ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ತಾನು ಅಂಟಿಕೊಂಡು ಕುಳಿತ. ಹೆಗಲು ಬಳಸಿದ ಕೈ ನಿಧಾನವಾಗಿ ಕೆಳಜಾರಲು ಇರುಸುಮುರಿಸು ಅವಳಿಗೆ.
‘ಅಣ್ಣ ಇರು ಕಾಫಿ ತರ್ತಿನಿ’ ನಾಜೂಕಾಗಿ ಬಿಡಿಸಿಕೊಂಡು ಅಲ್ಲಿಂದ ಎದ್ದು ಬಂದವಳಿಗೆ ಮೊದಲ ಬಾರಿ ಅವನ ಸ್ಪರ್ಶ ಅಹಿತವಾಯಿತು.
ತಪ್ಪಿಸಿಕೊಂಡೆ ಎಂದುಕೊಳ್ಳುವಾಗ ಹಿಂದೆ ಬಂದವನು ತಪ್ಪಿಸಿಕೊಳ್ಳಲು ಆಗದಂತೆ ಕಚಗುಳಿ ಕೊಡುವ ನೆಪದಲ್ಲಿ ಅವಳ ಮೈ ಪೂರಾ ಸ್ಪರ್ಶಿಸುತ್ತಿದ್ದ. ಅವಳಿಗೂ ಏನೋ ಸರಿಯಿಲ್ಲ ಎನ್ನುವುದು ಅರ್ಥವಾಗಲು ‘ಅಣ್ಣ ಬಿಡಿ’ ಎಂದು ಕೂಗುತ್ತ ಹೇಗೋ ಬಿಡಿಸಿಕೊಂಡಳು.
ಮತ್ತೊಮ್ಮೆ ಅವಳ ಬಳಿ ಬರುವವನ ತಡೆದಿದ್ದು ಅಷ್ಟರಲ್ಲಿ ಹೊರಗೆ ಕೇಳಿದ ಅವಳ ತಾಯಿಯ ಸದ್ದು. ಅವನು ಹೊರ ನಡೆದ ತಕ್ಷಣ ದೀರ್ಘವಾಗಿ ಉಸಿರೆಳೆದುಕೊಂಡ ತಾರಾ ಏನೂ ನಡೆದಿಲ್ಲ ಎನ್ನುವಂತೆ ಇಬ್ಬರಿಗೂ ಕಾಫಿ ನೀಡಿದಳು. ಆದಷ್ಟು ಅವನಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಳು. ಆದರೆ ಅವನು ಎಲ್ಲರ ಕಣ್ಣಪ್ಪಿಸಿ ತನ್ನ ಚಪಲ ತೀರಿಸಿಕೊಳ್ಳುತ್ತಾ ಇದ್ದ. ಅವಳ ಕುಟುಂಬದವರು ಅವನ ಮೇಲಿಟ್ಟಿದ್ದ ನಂಬಿಕೆಯೇ ಅವನಿಗೆ ಅಸ್ತವಾಗಿತ್ತು. ಅವಳಿಗೂ ಮನೆಯಲ್ಲಿ ಹೇಳುವ ಧೈರ್ಯವಿಲ್ಲ. ದಿನೇ ದಿನೇ ಅವನ ಉಪಟಳ ಹೆಚ್ಚಾಗಿ ಒಮ್ಮೆಯಂತೂ ಅತಿಯಾಗಿ ವರ್ತಿಸಿ ಪೂರ್ತಿಯಾಗಿ ಹೆದರುವಂತೆ ಮಾಡಿದ್ದ.
ಇನ್ನು ಸುಮ್ಮನಿದ್ದರೆ ಆಗದು ಎಂದು ಯೋಚಿಸಿದ ತಾರ ವರ್ಷಗಳಿಂದ ಸಹಿಸಿದ್ದ ಅವನ ಕಾಟವನ್ನು ತಾನು ಪಿಯುಸಿ ಸೇರಿದಾಗ ಮನೆಯಲ್ಲಿ ಹೇಳುವ ನಿರ್ಧಾರ ಮಾಡಿ ತಾಯಿಗೆ ಭಯದಲ್ಲೇ ಎಲ್ಲವನ್ನೂ ಹೇಳಿದಳು.
‘ಮೊದಲೇ ಏಕೆ ಹೇಳಲಿಲ್ಲ ನೀನು? ಇನ್ನು ಅವನ ಹತ್ತಿರ ಹೋಗಬೇಡ’ ಎಂದು ಅವನಿಗೆ ಬೈದುಕೊಳ್ಳುತ್ತಾ ಇವಳಿಗೂ ಗದರಿದರು ಅಮ್ಮ. ಅದಾದ ಮೇಲೆ ಅವಳು ಓದಿನ ಸಲುವಾಗಿ ಬೇರೆ ಊರಿಗೆ ತೆರಳಿದಳು. ಅವನ ಕಾಟ ತಪ್ಪಿತ್ತು. ಅಲ್ಲಿಂದ ಹೊರ ಬಂದ ಮೇಲೆ ಅದು ಅವಳನ್ನು ಮಾನಸಿಕವಾಗಿ ಕಾಡಲು ಶುರುವಾಗಿ ಪುರುಷರನ್ನು ಕಂಡರೆ ವಿಚಿತ್ರ ಭಯ ಹುಟ್ಟಿಕೊಂಡಿತು. ಅದೊಂದು ದುಃಸ್ವಪ್ನವಾಗಿ ಜೀವನ ಪೂರ್ತಿ ತಾರಾಳನ್ನು ಕಾಡಿತು ಅವಳ ದಾಂಪತ್ಯ ಜೀವನವನ್ನೂ ಹಾಳು ಮಾಡಿತು…
ಅಂದು ತಾರ ಹೇಳಿಕೊಂಡಾಗ ಏನೂ ಅರಿಯದ ಅವಳ ಬದಲಾಗಿ ಅವಳ ತಾಯಿ ದನಿ ಏರಿಸಿದ್ದರೂ ಕೂಡ ಅದು ಅವಳನ್ನು ಜೀವನ ಪೂರ್ತಿ ಕಾಡುತ್ತಾ ಇರಲಿಲ್ಲವೇನೋ. ಕೇವಲ ತಂದೆ ತಾಯಿ ಪಾತ್ರ ಮಾತ್ರವೇ ಇದೆಯೇ ಇದರಲ್ಲಿ? ಖಂಡಿತ ಇಲ್ಲ. ಸಮಾಜದ ಪಾತ್ರವೂ ಇದೆ ಅಲ್ಲವೇ?
keerthana.manju.guha6@gmail.com
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…