ಪಂಜು ಗಂಗೊಳ್ಳಿ
ಪುರಾತನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಜಾತಿ, ಧರ್ಮ, ವರ್ಗ, ಆರ್ಥಿಕ ಅಂತಸ್ತಿನ ಭೇದವಿಲ್ಲದೆ ಎಲ್ಲ ಸಮುದಾಯಗಳಲ್ಲೂ ಟ್ರಾನ್ಸ್ ಜೆಂಡರುಗಳು ಕಾಣ ಸಿಗುತ್ತಾರೆ, ಆದರೆ, ಭಾರತೀಯ ಸಮಾಜ ಅವರನ್ನು ಎಂದಿಗೂ ಧನಾತ್ಮಕವಾಗಿ ಕಂಡುದುದಿಲ್ಲ. ಮೊಘಲರ ಹೊರತಾಗಿ ಬೇರೆಲ್ಲರೂ ಅವರನ್ನು ಒಂದು ಅನಪೇಕ್ಷಿತ ಸಮುದಾಯ ಎಂಬ ಧೋರಣೆಯಿಂದ ನೋಡುತ್ತ ಬಂದವರೇ, ಬ್ರಿಟಿಷರ ಆಳ್ವಿಕೆಯಲ್ಲಂತೂ ಟ್ರಾನ್ಸ್‌ಜೆಂಡರುಗಳು ಕ್ರಿಮಿನಲ್‌ಗಳೆಂದು ಗುರುತಿಸಲ್ಪಟ್ಟಿದ್ದರು. ಈ ಎಲ್ಲ ಹಿನ್ನೆಲೆಯಿಂದಾಗಿ ಟ್ರಾನ್ಸ್ ಜೆಂಡರ್‌ಗಳು ಒಬ್ಬ ಸಾಮಾನ್ಯ ಮನುಷ್ಯನ ಮೂಲಭೂತ ಅಗತ್ಯಗಳಾದ ಶಿಕ್ಷಣ, ಉದ್ಯೋಗ, ಸಾಮಾಜಿಕ ಅಸ್ತಿತ್ವ ಮೊದಲಾದವುಗಳಿಂದ ವಂಚಿತರಾಗಿ ಹೀನಾಯಕರವಾದ ಬದುಕನ್ನು ನಡೆಸಿಕೊಂಡು ಬರಬೇಕಾಗಿದೆ. ಲೈಂಗಿಕ ಚಟುವಟಿಕೆ, ಭಿಕ್ಷಾಟನ ಮೊದಲಾದ ತೀರಾ ಅಗೌರವಯುತವಾದ ಮಾರ್ಗಗಳ ಮೂಲಕ ಇವರುಗಳು ತಮ್ಮ ಜೀವನ ನಡೆಸಬೇಕಾದ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಕೋವಿಡ್ ಕಾಲದಲ್ಲಂತೂ ಲೈಂಗಿಕ ಚಟುವಟಿಕ ಹಾಗೂ ಭಿಕ್ಷಾಟನೆ ಎರಡೂ ನಿಷೇಧಿಸಲ್ಪಟ್ಟು, ಟ್ರಾನ್ಸ್ ಜೆಂಡರ್ ಗಳು ಜೀವನ ನಡೆಸಲು ಪಟ್ಟ ಪಾಡು ಹೇಳತೀರದು.
ಯಾರೇ ಒಬ್ಬ ಮನುಷ್ಯನಿಗೆ ಗೌರವಯುತ ಬದುಕು ನಡೆಸಬೇಕಾದರೆ ಒಂದು ಉದ್ಯೋಗ ಅಥವಾ ಯಾವುದಾದರೊಂದು ಆರ್ಥಿಕ ಮೂಲ ಇರಬೇಕಾದುದು ತೀರಾ ಅತ್ಯವಶ್ಯ. ಉದ್ಯೋಗವಲ್ಲದಿದ್ದರೆ ಉದ್ಯಮ ಮಾಡಿಯಾದರೂ ಒಬ್ಬ ವ್ಯಕ್ತಿ ತನ್ನ ಬದುಕನ್ನು ಸಾಗಿಸಬೇಕಾಗುತ್ತದೆ. ನಮ್ಮಳ್ಳಿ ಸಾಮಾನ್ಯವಾಗಿ ಉದ್ಯೋಗವೆಂದರೆ ಒಬ್ಬ ವ್ಯಕ್ತಿ ತಾನೇ ಸ್ವತಃ ಯಾವುದಾದರೂ ವಸ್ತುವನ್ನು ಉತ್ಪಾದಿಸಿ ಮಾರಾಟ ಮಾಡುವುದು ಎಂದರ್ಥ. ಉದ್ಯೋಗದಿಂದ ನಿರಾಕರಿಸಲ್ಪಡುವ ಟ್ರಾನ್ಸ್ ಜೆಂಡರ್‌ಗಳು ಉದ್ಯಮ ಮಾಡಿ ಬದುಕು ಸಾಗಿಸುತ್ತಿದ್ದಾರೆಂದರೆ ನಂಬಲು ಸಾಧ್ಯವೇ?
1976ರಲ್ಲಿ ಒಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀ ನಾರಾಯಣ್ ತ್ರಿಪಾಠಿ ದೇಶ ವಿದೇಶಗಳಲ್ಲಿ ಪರಿಚಿತರಾಗಿರುವ ಒಬ್ಬ ಟ್ರಾನ್ಸ್‌ಜೆಂಡರ್ ವ್ಯಕ್ತಿ. ಟ್ರಾನ್ಸ್‌ಜೆಂಡರ್ ಎಂಬ ಕಾರಣಕ್ಕೆ ಮನೆಯಿಂದ ಹೊರ ಹಾಕಲ್ಪಟ್ಟ ಲಕ್ಷ್ಮೀ ನಾರಾಯಣ್ ತ್ರಿಪಾಠಿ ಮಾಡೆಲ್ ಕೋ-ಆರ್ಡಿನೇಟರ್ ಆಗಿ ತಮ್ಮ ಔದ್ಯೋಗಿಕ ಬದುಕನ್ನು ಪ್ರಾರಂಭಿಸಿದರು. ಅವರು ಒಬ್ಬರು. ಗ್ರಾಜುಯೇಟ್ ಅಲ್ಲದೆ, ಭರತನಾಟ್ಯದಲ್ಲಿಯೂ ಪ್ರಾವಿಣ್ಯತೆ ಉಳ್ಳವರು. ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಅವರು ಟ್ರಾನ್ಸ್ಜೆಂಡರ್ ಸಂಬಂಧಿಕ ವಿಚಾರಗಳಲ್ಲಿ ಸಕ್ರಿಯವಾಗಿರುವವರು. ‘ರೆಡ್ ಲಿಪ್‌ಸ್ಟಿಕ್’ ಎಂಬ ಹೆಸರಿನ ತಮ್ಮ ಜೀವನ ಚರಿತ್ರೆಯನ್ನು ಪ್ರಕಟಿಸಿದ್ದಾರೆ. 2008ರಲ್ಲಿ ವಿಶ್ವಸಂಸ್ಥೆಯಲ್ಲಿ ಏಷಿಯಾ ಪೆಸಿಫಿಕ್‌ನ್ನು ಪ್ರತಿನಿಧಿಸಿದ ಪ್ರಪ್ರಥಮ ಟ್ರಾನ್ಸ್‌ಜೆಂಡರ್ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. 2018ರಲ್ಲಿ ಭಾರತದ ಸುಪ್ರೀಂ ಕೋರ್ಟು ಸಲಿಂಗ ಕಾಮವನ್ನು ಅಪರಾಧ ಎಂದು ಘೋಷಿಸುವ ಸೆಕ್ಷನ್ 377ನ್ನು ರದ್ದುಗೊಳಿಸುವಲ್ಲಿ ಇವರು ಪ್ರಧಾನ ಪಾತ್ರವಹಿಸಿದ್ದರು. ಈ ಕಾನೂನು ರದ್ದುಗೊಂಡ ನಂತರ ಟ್ರಾನ್ಸ್‌ಜೆಂಡರ್‌ಗಳು ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಗುರುತಿಸಲ್ಪಟ್ಟು ಇತರ ಅಲ್ಪಸಂಖ್ಯಾತರಿಗೆ ಲಭಿಸುವ ಸರ್ಕಾರಿ ಸವಲತ್ತುಗಳ ಫಲಾನುಭವಿಗಳಾಗಲು ಸಾಧ್ಯವಾಗಿದೆ. ಮಕ್ಕಳನ್ನು ದತ್ತು ಪಡೆಯಬಹುದಾಗಿದೆ.
ಲಕ್ಷ್ಮೀ ನಾರಾಯಣ್ ತ್ರಿಪಾಠಿ 2018ರಲ್ಲಿ ಡಾ.ಮನೀಶ್ ಜೈನ್ ಮತ್ತು ಡಾ.ಪೂಜಾ ಜೈನ್ ಎಂಬ ಇಬ್ಬರು ಆರೋಗ್ಯ ತಜ್ಞರ ಸಹಯೋಗದೊಂದಿಗೆ ಒಂದು ಬಾಟಲಿ ನೀರಿನ ಕಂಪೆನಿಯನ್ನು ಪ್ರಾರಂಭಿಸಿದರು. ಅದರ ಹೆಸರು “ಕಿನೀರ್’. ಕಿನ್ನರ ಎಂಬುದು ಹಿಂದೆ ಟ್ರಾನ್ಸ್ ಜೆಂಡರ್‌ಗಳನ್ನು ಕರೆಯಲು ಬಳಸುತ್ತಿದ್ದ ಒಂದು ಸುಂದರ ಹೆಸರು, ಕಿನೀ ಎಂಬುದು ಕಿನ್ನರ ಮತ್ತು ನೀರು ಎಂಬ ಪದಗಳನ್ನು ಸೇರಿಸಿ ಸೃಷ್ಟಿಸಿದ ಹೆಸರು. 2018ರಲ್ಲಿ ಕಿನೀ ಪ್ರಾರಂಭಗೊಂಡಾಗ ಅವರಿಗೆ ದೊಡ್ಡ ಗ್ರಾಹಕರಾಗಿ ಸಿಕ್ಕಿದ್ದು ವಿಸ್ತಾರ ಏರ್ ಲೈನ್ಸ್. ಅದು ಸಾಧ್ಯವಾದುದು ರತನ್ ಟಾಟಾರವರ ವೈಯಕ್ತಿಕ ಬೆಂಬಲದಿಂದ, ನಂತರ ಅವರಿಗೆ ಸಿಕ್ಕ ಪ್ರಮುಖ ಗ್ರಾಹಕರು ಲಲಿತ್ ಹೋಟೆಲ್ ಜೈನ್, ದೆಹಲಿಯ ಬರ್ಲೆಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಾಜಿಸ್, ಸೂಡೆಕ್ಸೋ, ಅಪೋಲೋ ಗ್ರೂಪ್, ಜೋನ್ಸ್ ಲಾಂಗ್ ಹಾಗೂ ಇತರ ಕಂಪೆನಿಗಳು.
ಕಿನೀರ್ ಕಂಪೆನಿಯಲ್ಲಿ ಸುಮಾರು 450 ಜನ ಟ್ರಾನ್ಸ್‌ಜೆಂಡರ್‌ಗಳು ಉದ್ಯೋಗಿಗಳಾಗಿದ್ದಾರೆ. ಹಾಗೆಯೇ, ಟ್ರಾನ್ಸ್‌ಜೆಂಡರ್‌ಗಳ ಜೊತೆಯಲ್ಲಿ ಲಿಂಗ, ಜಾತಿ, ಧರ್ಮದ ಭೇದವಿಲ್ಲದ ಇತರ ಸಾಮಾನ್ಯರಿಗೂ ಕಿನೀರ್ ಉದ್ಯೋಗಾವಕಾಶ ಕಲ್ಪಿಸಿದೆ. ಬಿಸ್ಲೆರಿ, ಆಕ್ಟಿರಿಚ್, ಆಕ್ಟಾಪಿನಾ, ರೈಲ್ ವಾಟರ್ ಮೊದಲಾದ ಬೃಹತ್ ಬ್ರಾಂಡ್‌ಗಳೊಂದಿಗೆ ಸ್ಪರ್ಧಿಸುತ್ತಿರುವ ಕಿನೀರ್ ಮುಂದೆ ದೇಶದ ಪ್ರಮುಖ ಮೂರು ಬ್ರಾಂಡುಗಳಲ್ಲಿ ಒಂದು ಎನಿಸಿಕೊಳ್ಳುವ ಮಹತ್ತರವಾದ ಗುರಿಯನ್ನು ಇಟ್ಟುಕೊಂಡಿದೆ.
ಇದು ಸಣ್ಣ ಸಾಹಸವಲ್ಲ. ಅಲ್ಲದೆ, ಕಿನೀರ್ ಕಾಸ್ಮೆಟಿಕ್, ಕಿನೀರ್ ವಾಶ್ ರೂಮ್, ಅಮೆನಿಟಿಸ್ ಮೊದಲಾದವುಗಳನ್ನು ಪ್ರಾರಂಭಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಲಂಡನ್ನಿನ ‘ಹೌಸ್ ಆಫ್ ಕಾಮನ್ಸ್ ಕಿನೀರ್‌ಗೆ ಮಹಾತ್ಮ ಗಾಂಧಿ ಸಮ್ಮಾನ್ ನೀಡಿ ಗೌರವಿಸಿದೆ. ನೇಷನಲ್ ಅಚಿವರ್ಸ್ ಅವಾರ್ಡ್, ಸೋಷಿಯಲ್ ಆಂಟರ್‌ಪ್ರೂನರ್ ಆಪ್ ದಿ ಇಯರ್, ಇನಿಶಿಎಟಿವ್ ಆವಾರ್ಡ್ ಮೊದಲಾದವು ಕಿನೀರ್ ಪಡೆದ ಪ್ರಮುಖ ಪ್ರಶಸ್ತಿಗಳು.
ಲಕ್ಷ್ಮೀ ನಾರಾಯಣ್’ ತ್ರಿಪಾಠಿ 2018ರಲ್ಲಿ ಡಾ.ಮನೀಶ್ ಜೈನ್ ಮತ್ತು ಡಾ.ಪೂಜಾ ಚೈನ್ ಎಂಬ ಇಬ್ಬರು ಆರೋಗ್ಯ ತಜ್ಞರ ಸಹಯೋಗದೊಂದಿಗೆ ಒಂದು ಬಾಟಲಿ ನೀರಿನ ಕಂಪೆನಿಯನ್ನು ಪ್ರಾರಂಭಿಸಿದರು. ಅದರ ಹೆಸರು “ಕಿನೀರ್’, ಕಿನ್ನರ ಎಂಬುದು ಹಿಂದೆ ಟ್ರಾನ್ಸ್‌ಜೆಂಡರ್‌ಗಳನ್ನು ಕರೆಯಲು ಬಳಸುತ್ತಿದ್ದ ಒಂದು ಸುಂದರ ಹೆಸರು. ಕಿನೀರ್ ಎಂಬುದು ಕಿನ್ನರ ಮತ್ತು ನೀರು ಎಂಬ ಪದಗಳನ್ನು ಸೇರಿಸಿ ಸೃಷ್ಟಿಸಿದ ಹೆಸರು. 2018ರಲ್ಲಿ ಕಿನಿರ್ ಪ್ರಾರಂಭಗೊಂಡಾಗ ಅವರಿಗೆ ದೊಡ್ಡ ಗ್ರಾಹಕರಾಗಿ ಸಿಕ್ಕಿದ್ದು ವಿಸ್ತಾರ ಏ ಲೈನ್ಸ್, ಅದು ಸಾಧ್ಯವಾದುದು ರತನ್ ಟಾಟಾರವರ ವೈಯಕ್ತಿಕ ಬೆಂಬಲದಿಂದ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…