• ಹೆಚ್.ಎಂ.ಶ್ವೇತಾಮಣಿ, ಉಪನ್ಯಾಸಕರು
ಕರ್ನಾಟಕದಲ್ಲಿ ಹಿಜಾಬ್ ಪ್ರಕರಣ ಕೋಮು ಅಸಹನೆಯ ಮನಸ್ಥಿತಿಯಿಂದಾಗಿ ಸೃಷ್ಟಿಯಾಯಿತು. ಕೋಮು ಅಸಹನೆಗೆ ಸ್ಪಂದಿಸಿದ ಸರ್ಕಾರ ಕೂಡ ಹಿಜಾಬ್ ಅನ್ನು ನಿಷೇಧಿಸಿತು. ಇದರಿಂದಾಗಿ ಅನೇಕ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ವಂಚಿತರಾದರು; ಪರೀಕ್ಷೆಗಳನ್ನು ತಪ್ಪಿಸಿಕೊಂಡರು. ಇದನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದನ್ನು ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕಿನ ಪ್ರಶ್ನೆಯಾಗಿ ನೋಡುವ ಕಣ್ಣನ್ನು ಸಮಾಜ ಪಡೆದುಕೊಳ್ಳಲಿಲ್ಲ.
ಕಳೆದ ವರ್ಷ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಗಳಿಗೆ ಹಿಜಾಬ್ ಧರಿಸಿ ಬರಬಾರದು ಎಂದು ಸರ್ಕಾರ ಆದೇಶಿಸಿತು. ಇದರಿಂದ ಎಷ್ಟೋ ಹೆಣ್ಣುಮಕ್ಕಳು ತರಗತಿ ಮತ್ತು ಪರೀಕ್ಷೆಗಳನ್ನು ತಪ್ಪಿಸಿಕೊಂಡರು. ನಮ್ಮ ಕಾಲೇಜಿನಲ್ಲಿ ಕೆಲವು ಹೆಣ್ಣುಮಕ್ಕಳು ಪ್ರತಿರೋಧ ತೋರದೆ ಹಿಜಾಬ್ ಅನ್ನು ತೆಗೆದರು. ಮತ್ತೆ ಕೆಲವರು ಬಲವಂತ ದಿಂದ ಹಿಜಾಬ್ ಕಳಚಿಟ್ಟು ಬಂದರು. ಆದರೆ ಒಬ್ಬ ವಿದ್ಯಾರ್ಥಿನಿ ಮಾತ್ರ ಹಿಜಾಬ್ ತೆಗೆಯಲು ಒಪ್ಪಲಿಲ್ಲ. ನಮಗೆ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ತೆಯಿತ್ತು. ನಾವೆಲ್ಲರೂ ಸೇರಿ ಎಷ್ಟೇ ಮನ ವೊಲಿಸಿದರೂ ಆ ವಿದ್ಯಾರ್ಥಿನಿ ಅಳುತ್ತಾ ನಿಂತುಬಿಟ್ಟಳು.
ಕೊನೆಗೆ ಆಕೆಯ ತಂದೆಯನ್ನು ಕರೆಸಿ ಪರಿಸ್ಥಿತಿಯನ್ನು ವಿವರಿಸಿದೆವು. ಅವರು ಹೇಳಿದರು: ನಾವು ಹಿಜಾಬ್ ಧರಿಸಬೇಕೆಂಬ ಕಡ್ಡಾಯವನ್ನೇನೂ ಮಾಡಿಲ್ಲ. ಆದರೆ ಅವಳಿಗೆ ಅದು ಅಭ್ಯಾಸವಾಗಿ ಹೋಗಿದೆ. ಅದರಿಂದ ಒಂದು ಥರದ ಕಂಫ ಫೀಲ್ ಮಾಡ್ತಾಳೆ ಎನ್ನುತ್ತಾ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರು. ಆಕೆ ಅವರ ಮಾತಿಗೂ ಅಳುವಿನ ಮೂಲಕವೇ ಉತ್ತರಿಸಿದಳು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಆಕೆ ತಯಾರಿರ ಲಿಲ್ಲ. ನಮ್ಮದು ಹುಡುಗಿಯರ ಕಾಲೇಜಾಗಿದ್ದರೂ, ಪರೀಕ್ಷೆ ಬರೆಯುವವರೆಲ್ಲ ಹೆಣ್ಣುಮಕ್ಕಳೇ ಆಗಿದ್ದರೂ, ಮಹಿಳಾ ಉಪನ್ಯಾಸಕರೇ ಮೇಲ್ವಿಚಾರಕರಾಗಿ ಬರುತ್ತಾರೆಂದರೂ ಆಕೆಯ ಮನಸ್ಸನ್ನು ಬದಲಿಸಲಾಗಲಿಲ್ಲ. “l quit’ ಎಂದು ಪರೀಕ್ಷೆ ಬರೆಯದೇ ಹೋದಳು.
ಈಗ ಮುಖ್ಯಮಂತ್ರಿಗಳು ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ ಎಂಬ ಸುದ್ದಿಗಳಿಂದ ಒಬ್ಬ ಹೆಣ್ಣುಮಗಳು ನಾನು ಮುಂದಿನ ವರ್ಷದಿಂದ ಕಾಲೇಜಿಗೆ ಹೋಗಬಹುದು ಎಂದು ತನ್ನ ಸಂತಸ ಹಂಚಿಕೊಂಡಿದ್ದಾಳೆ. ಹಿಜಾಬ್ ಧಾರ್ಮಿಕವಾಗಿ ಹೇರಿರುವ ಆಚರಣೆ ಇರಬಹುದು. ಹಾಗೆ ನೋಡಿದರೆ ಹೆಣ್ಣುಮಕ್ಕಳು ಮಾತ್ರವೇ ಧರಿಸಬೇಕಾದ ಪ್ರತಿಯೊಂದೂ ಅವರ ಮೇಲಿನ ಹೇರಿಕೆಯೇ ಆಗಿದೆ. ತಾಳಿ, ಕಾಲುಂಗುರ, ಕುಂಕುಮ ಹೀಗೆ ಹೆಣ್ಣುಮಕ್ಕಳ ಮೇಲೆ ಸಂಸ್ಕೃತಿಯ ಹೆಸರಲ್ಲಿ ಹೇರಲಾಗಿರುವಂಥವೇ ಆಗಿವೆ.
ಶಾಲೆಯ ಐಕ್ಯತೆಯ ಹೆಸರನ್ನು ಮುಂದಿಟ್ಟು ಹಿಜಾಬ್ ವಿಷಯವನ್ನು ಚರ್ಚಿಸುವುದು ಕೂಡ ಹಲವು ಮಿತಿಗಳಿಂದ ಕೂಡಿರುವಂಥದ್ದು. ನಮ್ಮದು ಬಹು ಸಂಸ್ಕೃತಿಗಳ ಸಮಾಜವಾದ್ದರಿಂದ ಐಕ್ಯತೆಯ ವ್ಯಾಖ್ಯಾ ನವೇ ಬದಲಾಗಬೇಕಾಗಿದೆ. ಹಾಗೆಂದು ಹಿಜಾಬ್ ಬೇಕೇ? ಬೇಡವೇ? ಸರಿಯೇ? ತಪ್ಪೇ? ಎನ್ನುವ ಪ್ರಶ್ನೆಗಳಿಗಿಂತ ಹಿಜಾಬ್‌ಗೆ ಒಗ್ಗಿರುವ ಹೆಣ್ಣುಮಕ್ಕಳಿಗೆ ಮೊದಲು ಶಿಕ್ಷಣ ಸಿಕ್ಕು ಅವರು ಸ್ವಾತಂತ್ರ್ಯವನ್ನು ಪಡೆಯುವಂತೆ ಮಾಡು ವುದು ನಮ್ಮ ಜವಾಬ್ದಾರಿಯಾಗಿದೆ. ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಿ ಅವರನ್ನು ಸ್ವಾವಲಂಬಿಗಳನ್ನಾಗಿ, ಸ್ವಾಭಿಮಾನಿ ಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜ ಮತ್ತು ಸರ್ಕಾರಗಳು ಇದನ್ನು ಸೂಕ್ಷ್ಮವಾಗಿ ಚಿಂತಿಸಬೇಕು.
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…
ಓದುಗರ ಪತ್ರ: ಗಾಳಿ... ತಂಗಾಳಿ ! ಚಾಮರಾಜನಗರದ ಶುದ್ಧ ಗಾಳಿಗೆ ದೇಶದಲ್ಲಿ ೪ನೇ ಸ್ಥಾನ ಎಂಥ ಪ್ರಾಣವಾಯು ! ಮಲೆ ಮಾದಪ್ಪ…
ರಾಜ್ಯ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮಸೂದೆ ೨೦೨೫ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ…
ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬಯಲಾಗಿವೆ. ಮುಡಾ ಹಗರಣದ…
ಮೈಸೂರಿನ ಬಹುತೇಕ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ. ನಗರದ…
ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೭,೭೩೩ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೫,೪೭೫ ಕೋಟಿ ರೂ. ವಂಚನೆ ನಡೆದಿರುವುದಾಗಿ, ಬೆಳಗಾವಿ…