ಅಂಕಣಗಳು

ಇಂಟರ್ನ್‌ಶಿಪ್ ಯೋಜನೆ; ಯುವ ಭಾರತದ ನಿರಾಸಕ್ತಿ

ಅಸಮರ್ಪಕ ತರಬೇತಿ, ಕಡಿಮೆ ಸ್ಟೈಫಂಡ್ ದೂರುಗಳು

ಡಿಜಿಟಲ್ ಭಾರತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಪೈಕಿ ಯುವ ಸಮೂಹದ ನಿರುದ್ಯೋಗ ಸರ್ಕಾರವನ್ನೂ, ನಾಗರಿಕರನ್ನೂ ಕಾಡುತ್ತಿರುವ ಜಟಿಲ ಸಮಸ್ಯೆ. ೨೦೨೪ರ ಅಧಿಕೃತ ವರದಿಯೊಂದರ ಅನುಸಾರ ಸೆಕೆಂಡರಿ ಹಂತದವರೆಗೆ ವಿದ್ಯಾರ್ಜನೆ ಪೂರೈಸಿರುವ ಯುವ ಸಮುದಾಯದಲ್ಲಿ ನಿರುದ್ಯೋಗ ಪ್ರಮಾಣ ಶೇ.೧೮.೪ರಷ್ಟಿದೆ. ಪದವೀಧರರಲ್ಲಿ ಇದು ಶೇ.೨೯.೧ರಷ್ಟಿರುವುದು ಶೋಚನೀಯ ಅಂಶ. ೨೦೧೪ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕೇಂದ್ರ ಬಿಜೆಪಿ – ಎನ್‌ಡಿಎ ಸರ್ಕಾರದ ಘೋಷವಾಕ್ಯ ಇರುವುದು ನಿರುದ್ಯೋಗ ನಿವಾರಣೆ ಅಥವಾ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ. ಈ ದೃಷ್ಟಿಯಿಂದಲೇ ಅಗ್ನಿವೀರ್‌ನಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವುದಲ್ಲದೆ, ಉದ್ಯೋಗಕ್ಕಾಗಿ ಹಂಬಲಿಸದೆ ಯುವ ಸಮೂಹ ಸ್ವಾವಲಂಬಿಯಾಗಲು ಸ್ಟಾರ್ಟ್‌ಅಪ್ ಔದ್ಯಮಿಕ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.

ಇಂಟರ್ನ್‌ಶಿಪ್ ಯೋಜನೆಯ ಸ್ವರೂಪ ಈ ದೃಷ್ಟಿಯಿಂದಲೇ ೨೦೨೪ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ, ಕೈಗಾರಿಕೆಗಳಲ್ಲಿ ಉದ್ಯೋಗಾರ್ಹತೆ ಪಡೆಯಲು ನೆರವಾಗಬಹುದಾದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿಗೊಳಿಸಿತ್ತು.

ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕ/ಯುವತಿಯರಿಗೆ ದೇಶದ ಅತ್ಯುನ್ನತ ೫೦೦ ಉದ್ಯಮಗಳಲ್ಲಿ ಇಂಟರ್ನ್‌ಶಿಪ್ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಂಪೆನಿಗಳು ವಿಶಾಲ ವ್ಯಾಪ್ತಿಯ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಆಟೋಮೊಬೈಲ್, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಹಣಕಾಸು, ಮಾರಾಟ ಕ್ಷೇತ್ರ, ಮಾರುಕಟ್ಟೆ ಮತ್ತಿತರ ವಲಯಗಳನ್ನೂ ಒಳಗೊಳ್ಳುವುದು ಯೋಜನೆಯ ಉದ್ದೇಶಗಳಲ್ಲೊಂದಾಗಿತ್ತು. ೧೨ ತಿಂಗಳುಗಳ ಕಾಲ ನೀಡಲಾಗುವ ಈ ಇಂಟರ್ನ್‌ಶಿಪ್ ಯೋಜನೆಯಲ್ಲಿ ಕನಿಷ್ಠ ೧೦ನೇ ತರಗತಿಯನ್ನು ಪೂರೈಸಿರುವ ೨೧ರಿಂದ ೨೪ರ ವಯೋಮಾನದ ಯುವ ಸಮೂಹಕ್ಕೆ ಅವಕಾಶ ಇರುತ್ತದೆ.

ಇದನ್ನು ಓದಿ : ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ೧,೪೨೫ ಹುದ್ದೆಗಳು

ಈ ಇಂಟರ್ನ್‌ಶಿಪ್ ಅಭ್ಯರ್ಥಿಗಳಿಗೆ ನೀಡುವ ಸ್ಟೈಫಂಡ್ ಮಾಹೆಯಾನ ೫,೦೦೦ ರೂ.ಗಳಾಗಿದ್ದು, ಇದರಲ್ಲಿ ಸರ್ಕಾರದಿಂದ ೪,೫೦೦ ರೂ., ಕಂಪೆನಿಯಿಂದ ೫೦೦ ರೂ.ಗಳನ್ನು ಭರಿಸಲಾಗುತ್ತದೆ. ಪ್ರವೇಶದ ಹಂತದಲ್ಲಿ ಒಂದೇ ಕಂತಿನಲ್ಲಿ ೬,೦೦೦ ರೂ.ಗಳನ್ನು ನೀಡಲಾಗುತ್ತದೆ. ೨೦೨೪ರ ಅಕ್ಟೋಬರ್‌ನಲ್ಲಿ ಆರಂಭವಾದ ಯೋಜನೆಯ ಮೊದಲ ಹಂತದಲ್ಲಿ ೭೪೫ ಜಿಲ್ಲೆಗಳ ೨೮೦ ಕಂಪೆನಿಗಳು ಜಾಹೀರಾತು ನೀಡಿ ೧.೨೭ ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಿದ್ದವು. ಎರಡನೇ ಹಂತವು ೨೦೨೫ರ ಜನವರಿಯಲ್ಲಿ ಜಾರಿಯಾಗಿದ್ದು ೩೨೭ ಕಂಪೆನಿಗಳು ೧.೧೮ ಲಕ್ಷ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದವು.

ಮೊದಲನೇ ಹಂತದಲ್ಲಿ ಭರ್ತಿಯಾಗದ ಸ್ಥಾನಗಳನ್ನು ಎರಡನೇ ಹಂತದಲ್ಲಿ ಒಳಗೊಳ್ಳಲಾಗಿತ್ತು. ಮೊದಲನೇ ಹಂತದಲ್ಲಿ ೬೦ ಸಾವಿರ ಅಭ್ಯರ್ಥಿಗಳಿಗೆ ಅವಕಾಶಗಳನ್ನು ನೀಡಲಾಗಿತ್ತು. ಕಂಪೆನಿಗಳು ಅನೇಕರನ್ನು ಸೂಕ್ತವಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಈ ೬೦ ಸಾವಿರ ಅಭ್ಯರ್ಥಿಗಳ ಪೈಕಿ ಇಂಟರ್ನ್‌ಶಿಪ್ ತರಬೇತಿಗೆ ಸೇರ್ಪಡೆಯಾದವರು ಕೇವಲ ೮,೭೦೦ ಮಾತ್ರ. ಎರಡನೇ ಹಂತದಲ್ಲಿ ೨.೧೪ ಅರ್ಜಿದಾರರು ಇದ್ದರೂ, ೭೨ ಸಾವಿರ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಲಾಗಿತ್ತು ಆದರೆ ಸೇರ್ಪಡೆಯಾದವರು ಕೇವಲ ೨೩ ಸಾವಿರ ಮಾತ್ರ. ಈ ನಿರಾಶಾದಾಯಕ ಫಲಿತಾಂಶಕ್ಕೆ ತಜ್ಞರು ಮತ್ತು ಯುವ ಸಬಲೀಕರಣ-ಉದ್ಯೋಗ ವಲಯದ ಕಾರ್ಯಕರ್ತರು ಹಲವು ಕಾರಣಗಳನ್ನು ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುದು, ೨೧-೨೪ರ ವಯೋಮಾನದ ಯುವಜನತೆ ಸಾಮಾನ್ಯವಾಗಿ ವಿದ್ಯಾಭ್ಯಾಸ ಪೂರೈಸಿ ಉದ್ಯೋಗವನ್ನು ಅರಸುತ್ತಿರುತ್ತಾರೆ. ಹಾಗಾಗಿ ಉದ್ಯೋಗ ಖಾತರಿ ನೀಡದ ಇಂಟರ್ನ್‌ಶಿಪ್ ಯೋಜನೆಯಲ್ಲಿ ಆಸಕ್ತಿ ತೋರುವುದಿಲ್ಲ.

ವಾಸ್ತವಿಕ ನೆಲೆಯ ಸಮಸ್ಯೆಗಳು: ಎಸ್.ಪಿ.ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸಂಸ್ಥೆಯ ಸಂಶೋಧಕ ಪ್ರಾಧ್ಯಾಪಕ ತನೋಜ್ ಮೇಶರಾಮ್, ಸ್ಟೆ ಫಂಡ್ ಮೊತ್ತವು ಬಹಳ ಕಡಿಮೆಯಾಗಿರುವುದರಿಂದ, ಬೇರೆ ಯಾವುದೇ ಪರ್ಯಾಯ ಇಲ್ಲದ ಯುವಜನರು ಮಾತ್ರ ಈ ಯೋಜನೆಗೆ ನೋಂದಾಯಿಸಿಕೊಳ್ಳುತ್ತಾರೆ. ಇದಕ್ಕೆ ಇತರ ಕಾರಣಗಳೂ ಸಾಕಷ್ಟಿವೆ. ಒಂದು ಕಂಪೆನಿಯು ಕೇವಲ ಏಳು ದಿನಗಳು ಮಾತ್ರ ತರಬೇತಿ ನೀಡಿರುವುದನ್ನು ಅಭ್ಯರ್ಥಿಯೊಬ್ಬರು ಉಲ್ಲೇಖಿಸುತ್ತಾರೆ.

ಅಷ್ಟೇ ಅಲ್ಲದೆ ತರಬೇತಿಯು ಪ್ರಾಥಮಿಕ ಸ್ವರೂಪದ್ದಾಗಿದ್ದು, ಅಪೇಕ್ಷಿತ ಕೌಶಲಗಳನ್ನು ಪರಿಚಯಿಸುವುದಷ್ಟೇ ಆಗುತ್ತದೆ ಎಂದೂ ಹೇಳುತ್ತಾರೆ. ಇಂಟರ್ನ್‌ಶಿಪ್ ಅವಧಿಯಲ್ಲಿ ತಮಗೆ ಹೆಚ್ಚಿನ ಕೆಲಸ ಕೊಡುವುದಿಲ್ಲ, ಸಾಫ್ಟ್‌ವೇರ್ ಕಲಿತು ಬಂದಿರುವವರಿಗೆ ಇದು ಪುನರಾವರ್ತನೆಯಾಗುತ್ತದೆ ಎಂಬ ಆಕ್ಷೇಪಗಳೂ ಕೇಳಿಬಂದಿವೆ.

ಇದನ್ನು ಓದಿ : ಗುರುವಿಲ್ಲದ ಗುರಿ ದೂರ!

ವಾಸ್ತವ ಅನುಭವದ ಹಿನ್ನೆಲೆಯಲ್ಲಿ ನೋಡಿದಾಗ ಅಭ್ಯರ್ಥಿಗಳಿಗೆ ಪ್ರವೇಶದ ಸಂದರ್ಭದಲ್ಲಿ ನೀಡುವ ೬,೦೦೦ ರೂ. ಮತ್ತು ಮಾಸಿಕ ೫,೦೦೦ ರೂ.ಗಳು, ಅವರ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. ಕೆಲವೊಮ್ಮೆ ಹಲವು ಕಿಲೋಮೀಟರ್‌ಗಳಿಗೂ ಹೆಚ್ಚು ದೂರದ ಕಂಪೆನಿಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಸಾರಿಗೆ ವೆಚ್ಚ, ಊಟ ತಿಂಡಿಯ ವೆಚ್ಚ ಮತ್ತು ಮೊಬೈಲ್ ಮತ್ತಿತರ ಸೇವೆಗಳ ಖರ್ಚುಗಳನ್ನು ನಿಭಾಯಿ ಸುವುದು ದುಸ್ತರವಾಗುತ್ತದೆ. ಕಂಪೆನಿ ಇರುವ ಸ್ಥಳದಲ್ಲೇ ತಂಗುವುದಾದರೆ, ಬಾಡಿಗೆ ಇತರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ.

ವಯೋಮಿತಿಯನ್ನು ೧೮ ವರ್ಷಗಳಿಗೆ ನಿಗದಿಪಡಿಸುವುದರಿಂದ ಹೆಚ್ಚಿನ ಯುವಜನತೆಗೆ ಉಪಯೋಗವಾಗುತ್ತದೆ ಎಂಬ ಅಭಿಪ್ರಾಯವನ್ನೂ ತಜ್ಞರು ವ್ಯಕ್ತಪಡಿಸುತ್ತಾರೆ. ಹಾಗೆಯೇ ಸ್ಟೆ ಫಂಡ್ ಮೊತ್ತ ಅತಿ ಕಡಿಮೆ ಇರುವುದರಿಂದ, ಅವರಿಗೆ ಯಾವುದೂ ವಸತಿ ಸೌಲಭ್ಯ ನೀಡದೆ ಹೋದರೆ, ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಗಳು ನಿರ್ಣಾಯಕವಾಗುತ್ತವೆ. ಅಭ್ಯರ್ಥಿಗಳ ಮನೆಗೆ ಹತ್ತಿರ ಇರುವ ಕಂಪೆನಿಗಳಲ್ಲೇ ಇಂಟರ್ನ್‌ಶಿಪ್ ದೊರೆತರೆ ಕೊಂಚಮಟ್ಟಿಗೆ ಕುಟುಂಬದ ಹೊರೆ ಕಡಿಮೆಯಾಗುತ್ತದೆ ಎಂಬುದು ಕೆಲ ತಜ್ಞರ ಅಭಿಮತ. ಕಂಪೆನಿಗಳು ಇಂಟರ್ನ್‌ಶಿಪ್ ಒದಗಿಸಲು ಸರ್ಕಾರ ಕಡ್ಡಾಯ ಮಾಡಲಾಗಲೀ, ಒತ್ತಡ ಹೇರಲಾಗಲೀ ಸಾಧ್ಯವಿಲ್ಲ. ಆದರೆ, ಒಂದು ವರ್ಷ ಇಂಟರ್ನ್ ಶಿಪ್ ಪೂರೈಸಿದ ನಂತರವೂ ಎಲ್ಲಿಯೂ ಉದ್ಯೋಗ ದೊರೆಯದೆ ಹೋದರೆ ಯುವಜನರು ಹತಾಶೆಗೊಳಗಾಗುವುದು ಸಹಜ.

ಭವಿಷ್ಯದ ಚಿಂತೆಯಲ್ಲಿ ಯುವಸಮೂಹ: ಇಂಟರ್ನ್‌ಶಿಪ್ ಮುಗಿದ ಮೇಲೆ ಅಭ್ಯರ್ಥಿಗಳು ಕಲಿತ ಕೌಶಲಗಳಿಗೆ ಸೂಕ್ತವಾದ ನೌಕರಿ ದೊರೆಯದೆ ಹೋದರೆ, ಒಂದು ವರ್ಷದ ಕಲಿಕೆ ನಿರರ್ಥಕವೂ ಆಗುತ್ತದೆ. ಸರ್ಕಾರದ ಉದ್ದೇಶ ಒಳ್ಳೆಯದೇ ಆದರೂ, ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಕೈಗಾರಿಕೆಗಳು (Manufacturing Industries) ಹೆಚ್ಚು ಇಲ್ಲದಿರುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಬಹುತೇಕ ಯುವಕರು ಗಿಗ್ ಕಾರ್ಮಿಕರಾಗಿ, ಹೆಚ್ಚಿನ ವ್ಯಾಸಂಗ ಮಾಡಲಾಗದವರು ಕಟ್ಟಡ ನಿರ್ಮಾಣದಂತಹ ಕೆಲಸಗಳಲ್ಲಿ ತೊಡಗಿ ಜೀವನ ಸವೆಸಬೇಕಾಗುತ್ತದೆ.

ಈ ಉದ್ಯೋಗಗಳು ಸೃಷ್ಟಿಸುವ ಅನಿಶ್ಚಿತತೆ ಮತ್ತು ಅಭದ್ರತೆಯೇ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರಕವಾಗುತ್ತದೆ. ನವ ಉದಾರವಾದಿ ಕಾರ್ಪೊರೇಟ್ ಆರ್ಥಿಕತೆಯನ್ನೇ ಆರಾಧಿಸುವ, ಅನುಸರಿಸುವ ಸರ್ಕಾರಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. (ಈ ಲೇಖನದ ಮಾಹಿತಿ, ದತ್ತಾಂಶಗಳಿಗೆ ಆಧಾರ ” Why young Indians are not interested in the prime minister’s ambitious internship scheme”  ಜೊಹಾನಾ ದೀಕ್ಷಾ -ದ ಸ್ಕ್ರೋಲ್ ೧೨ ಸೆಪ್ಟೆಂಬರ್ ೨೦೨೫ )

ಆಂದೋಲನ ಡೆಸ್ಕ್

Recent Posts

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

30 mins ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

55 mins ago

ಶಾರುಖ್‌ ಖಾನ್‌ ಪುತ್ರನಿಂದ ದುರ್ವತನೆ ಪ್ರಕರಣ: ಡಿಜಿ & ಡಿಜಿಪಿಗೆ ದೂರು ಸಲ್ಲಿಕೆ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ನಲ್ಲಿ ಮಿಡಲ್‌ ಫಿಂಗಲ್‌ ತೋರಿಸಿ ದುರ್ವತನೆ ಮೆರೆದಿದ್ದು,…

1 hour ago

1000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರು

ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…

2 hours ago

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

2 hours ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

3 hours ago