ಅಂಕಣಗಳು

೨೦೪೭ರ ಹೊತ್ತಿಗೆ ಎಲ್ಲರಿಗೂ ವಿಮೆ ರಕ್ಷಣೆ!

ಪ್ರೊ.ಆರ್.ಎಂ.ಚಿಂತಾಮಣಿ

   ವಿಮೆ ಒಂದು ಹಣಕಾಸು ಉದ್ದಿಮೆಯಷ್ಟೇ ಅಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ಸ್ವಾಸ್ಥ ಕ್ಕಾಗಿ ಸಾಮಾಜಿಕ ಸೇವೆಯೂ ಹೌದು, ಸಾಮಾಜಿಕ ಜವಾಬ್ದಾರಿಯೂ ಹೌದು. ಬದುಕಿನಲ್ಲಿನ ಅನಿಶ್ಚಿತತೆಗಳಿಂದ ಉಂಟಾಗುವ ನಷ್ಟ ಭಯದಿಂದ ( Risk ) ರಕ್ಷಣೆ ಒದಗಿಸುವವನೇ ವಿಮಾ ವೃತ್ತಿನಿರತ ಉದ್ಯಮಿ (Insurer). ಇವನಿಗೆ ನಿಗದಿತ ಬೆಲೆ (Premium) ಕೊಟ್ಟು ರಕ್ಷಣೆ ಪಡೆಯುವವನೇ ಗ್ರಹಕ ರಕ್ಷಿತನು (Insured). ಒಪ್ಪಂದದ ದಾಖಲೆಯೇ ವಿಮಾ ಪಾಲಿಸಿ. ವಿಮಾ ರಕ್ಷಣೆಯ ವಸ್ತುವಾಗಿರುವುದು (Subject matter) ರಕ್ಷಿತನ ಜೀವ ಅಥವಾ ತನ್ನವರ ಜೀವಗಳು ಅಥವಾ ತನ್ನ ಆಸ್ತಿಗಳು ಮೂರನೇ ಪಾರ್ಟಿಯೊಂದಿದೆ ನಷ್ಟ ಸಂಭವಿಸಿದಾಗ ಅಥವಾ ಪಾಲಿಸಿಯ ಅವಽ ಮುಗಿದಾಗ ಒಪ್ಪಿತ ಮೊತ್ತವನ್ನು ಪಡೆಯುವವನೇ ಫಲಾನುಭವಿ (Beneficiary). ಇವನು ರಕ್ಷಿತನೇ ಆಗಿರುತ್ತಾನೆ. ಅವನಿಲ್ಲದಿದ್ದರೆ ಅವನಿಂದ ಹೆಸರಿಸಲ್ಪಟ್ಟವನಾಗಿರುತ್ತಾರೆ.

ವಿಮೆಯಲ್ಲಿ ಎರಡು ವಿಧ. ಒಂದು ಜೀವ ವಿಮೆ, ಮತ್ತೊಂದು ಸಾಮಾನ್ಯ ವಿಮೆ (Life Insurance and General insurance ). ಎರಡರಲ್ಲಿಯೂ ಅವಶ್ಯಕತೆಗಳಿಗೆ ತಕ್ಕಂತೆ ಹಲವು ಪಾಲಿಸಿಗಳ ಯೋಜನೆಗಳಿವೆ. ಜೀವ ವಿಮೆಯಲ್ಲಿ ನಷ್ಟವಾದಾಗ (ಸಾವು ಸಂಭವಿಸಿದಾಗ) ಅಥವಾ ಅವಧಿ ಪೂರ್ಣಗೊಂಡಾಗ ಅಂಗೀಕೃತ ಮೊತ್ತವನ್ನು ವಿಮಾ ಕಂಪೆನಿ ಕೊಡುವ ಭರವಸೆ ಒಪ್ಪಂದದಲ್ಲಿರುತ್ತದೆ. ಸಾಮಾನ್ಯ ವಿಮೆಯಲ್ಲಿ ನಷ್ಟವಾದ ಆಸ್ತಿಯ ಮೌಲ್ಯ ಲೆಕ್ಕ ಹಾಕಿ ಅಷ್ಟು ಮೊತ್ತ ಕೊಡುವ ಭರವಸೆ ಇರುತ್ತದೆ. ಅದರಂತೆ ವಿಮಾ ಕಂಪೆನಿಗಳು ಆಕಸ್ಮಿಕ ಘಟನೆ ಸಂಭವಿಸಿದಾಗ ಆಸ್ತಿ ಪೂರ್ಣ ನಷ್ಟವಾಗಿದ್ದರೆ ಪೂರ್ಣ ಮೌಲ್ಯವನ್ನೂ, ಭಾಗಶಃ ಹಾಳಾಗಿದ್ದರೆ ಅಷ್ಟು ಮೌಲ್ಯವನ್ನೂ ಅಂದಿನ ಬೆಲೆಯಲ್ಲಿ ಲೆಕ್ಕಹಾಕಿ ಫಲಾನುಭವಿಗಳಿಗೆ ಕೊಡುತ್ತವೆ. ಇದಿಷ್ಟು ಸಂಕ್ಷಿಪ್ತ ಮಾಹಿತಿ.

ಭಾರತದಲ್ಲಿ ವಿಮೆ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದಲ್ಲಿ ನೂರಾರು ಸಣ್ಣ ದೊಡ್ಡ ಜೀವ ವಿಮಾ ಕಂಪೆನಿಗಳೂ ಸಾಮಾನ್ಯ ವಿಮಾ ಕಂಪೆನಿಗಳೂ ಕಾರ್ಯನಿರ್ವಹಿಸುತ್ತಿದ್ದವು. ಅವುಗಳೆಲ್ಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದು, ಇವೆಲ್ಲ ಖಾಸಗಿ ಕಂಪೆನಿಗಳಾಗಿದ್ದು, ಕೆಲವೇ ಜನರಿಗೆ ವಿಮಾ ಸೇವೆ ಒದಗಿಸುತ್ತಿದ್ದವು. ಅಂದಿನ ಬ್ರಿಟಿಷ್ ಸರ್ಕಾರ ವಿಮಾ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಈ ಕಂಪೆನಿಗಳ ಸುಸ್ಥಿರತೆಯ ಬಗ್ಗೆ ಯಾವುದೇ ಕಠಿಣ ನಿಯಮಗಳಿರಲಿಲ್ಲ.

ಸ್ವಾತಂತ್ರ್ಯಾನಂತರ ನಮ್ಮ ಸರ್ಕಾರ ಅಂದಿನ ಖಾಸಗಿ ಕಂಪೆನಿಗಳನ್ನು ಶಿಸ್ತಿಗೆ ಒಳಪಡಿಸಿ ಹೊಸ ನಿಯಮಗಳನ್ನು ರೂಪಿಸಿತಲ್ಲದೆ ವಿಮಾ ಸೌಲಭ್ಯ ಎಲ್ಲ ಹಳ್ಳಿ, ಪಟ್ಟಣಗಳಲ್ಲಿಯೂ ಲಭ್ಯವಾಗಬೇಕೆಂದು ಕಂಪೆನಿಗಳಿಗೆ ಆದೇಶಗಳನ್ನು ಹೊರಡಿಸಿತ್ತು. ಆದರೂ ಜೀವ ವಿಮೆಯಲ್ಲಿ ನಿರೀಕ್ಷಿಸಿದ ಪ್ರಗತಿ ಕಾಣಲಿಲ್ಲ.

1955ರಲ್ಲಿ ಅಂದಿನ ಎಲ್ಲ ಖಾಸಗಿ ಜೀವ ವಿಮಾ ಕಂಪೆನಿಗಳನ್ನು ರಾಷ್ಟ್ರೀಕರಿಸಿ ವಿಶೇಷ ಕಾಯ್ದೆಯ ಮೂಲಕ ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‌ಐಸಿ) ಅಸ್ತಿತ್ವಕ್ಕೆ ತರಲಾಯಿತು. ಅಲ್ಲಿಂದ ಹಳ್ಳಿಗಳ ಕಡೆಗೆ ಜೀವ ವಿಮಾ ವಿಸ್ತರಣೆಗೆ ಒಂದು ವೇಗ ಸಿಕ್ಕಂತಾಯಿತು. ಎಲ್‌ಐಸಿ ಹೆಚ್ಚು ಜನರನ್ನು ವಿಮೆ ಕಡೆಗೆ ಆಕರ್ಷಿಸಲು ಹೊಸ ಹೊಸ ಪಾಲಿಸಿಗಳನ್ನು ಪರಿಚಯಿಸಿತು. ಸ್ಯಾಲರಿ ಸೇವಿಂಗ್ಸ್ ಸ್ಕೀಮ್, ಮನಿಬ್ಯಾಂಕ್ ಪಾಲಿಸಿ, ಟರ್ಮ್ ಪಾಲಿಸಿ, ಮಕ್ಕಳ ಶಿಕ್ಷಣಕ್ಕಾಗಿ ಪಾಲಿಸಿ ಹೀಗೆ ಹಲವು ಪಾಲಿಸಿಗಳನ್ನು ಹೆಸರಿಸಬಹುದು. ಹಳ್ಳಿಗಳನ್ನು ದತ್ತು ತೆಗೆದುಕೊಂಡು ‘ವಿಮಾ ಗ್ರಾಮ’ ಯೋಜನೆಯನ್ನೂ ಜಾರಿಗೊಳಿಸಿತು. ಸರ್ಕಾರಗಳೂ ನೌಕರರಲ್ಲಿ ಕೆಲವು ವರ್ಗಗಳಿಗೆ ವಿಮೆ ಕಡ್ಡಾಯ ಮಾಡಿದ್ದವು. ಕೈಗಾರಿಕಾ ರಂಗ ಮತ್ತು ಸೇವಾ ವಲಯದಲ್ಲಿಯೂ ಉದ್ಯೋಗಿಗಳಲ್ಲಿ ಸಾಕಷ್ಟು ಅರಿವು ಮೂಡಿದ್ದು, ವಿಮಾ ಪಾಲಿಸಿಗಳು ಹೆಚ್ಚಾಗಿವೆ. ಆದರೆ ಅಸಂಘಟಿತ ವಲಯದಲ್ಲಿರುವ (ಕೃಷಿಯೂ ಸೇರಿ) ದೊಡ್ಡ ಜನಸಂಖ್ಯೆ ಬಹುತೇಕ ವಿಮೆಯಿಂದ ಹೊರಗೆ ಉಳಿದಿದೆ.

ಇನ್ನು ಸಾಮಾನ್ಯ ವಿಮೆ ಗಮನಿಸಿದರೆ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.1971ರಲ್ಲಿ ಎಲ್ಲ ಖಾಸಗಿ ಕಂಪೆನಿಗಳನ್ನೂ ರಾಷ್ಟ್ರೀಕರಿಸಿ ನಾಲ್ಕು ಸರ್ಕಾರಿ ಸಾಮಾನ್ಯ ವಿಮಾ ಕಂಪೆನಿಗಳನ್ನು ಸ್ಥಾಪಿಸಲಾಯಿತು. ಇವುಗಳ ನಿಯಂತ್ರಕ ಮಾಲೀಕ ಹೋಲ್ಡಿಂಗ್ ಕಂಪೆನಿಯಾಗಿ ಜನರಲ್ ಇನ್ಶೂರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ಹುಟ್ಟುಹಾಕಲಾಯಿತು. ಕಡ್ಡಾಯವಾಗಿ ವಿಮೆ ಮಾಡಿಸಲೇಬೇಕಾದ ಆಟೋ, ವಾಹನಗಳು, ವಿಮಾನಗಳು, ಹಡಗುಗಳು, ಫ್ಯಾಕ್ಟರಿಗಳು ಮತ್ತು ಗೊಡೌನುಗಳು, ಬೆಂಕಿ ಹೊತ್ತುವ ಭಯವಿರುವ ಸ್ಥಾವರಗಳು ಮತ್ತು ನಗರಗಳಲ್ಲಿಯ ಕೆಲವು ಆಸ್ತಿಗಳು ಮುಂತಾದವುಗಳಲ್ಲಿ ಹೆಚ್ಚಿನ ಸಾಧನೆ ಕಂಡುಬಂದರೂ ಇತರೆಡೆಗಳಲ್ಲಿರುವ ಆಸ್ತಿಗಳ ವಿಮಾ ರಕ್ಷಣೆ ಬೆಳವಣಿಗೆ ಕಡಿಮೆ.

ಇವೆರಡೂ ಪ್ರಯೋಗಗಳಾದ ನಂತರ 1991ರ ಆರ್ಥಿಕ ಸುಧಾರಣೆಗಳ ಭಾಗವಾಗಿ 1994ರಿಂದ ಎರಡೂ ವಲಯಗಳಲ್ಲಿ ಮತ್ತೆ ಖಾಸಗಿ ಕಂಪೆನಿಗಳಿಗೆ ಅವಕಾಶ ಕಲ್ಪಿಸಲಾಯಿತು. ಈಗ ದೇಶದಲ್ಲಿ ಎರಡೂ ವಲಯಗಳು ಸೇರಿ ಇಪ್ಪತ್ತಕ್ಕೂ ಹೆಚ್ಚು ವಿಮಾ ಕಂಪೆನಿಗಳು ಕಾರ್ಯನಿರತವಾಗಿವೆ. ಎಲ್‌ಐಸಿ ಒಟ್ಟು ಜೀವ ವಿಮಾ ಪೇಟೆಯ ಅರ್ಧಕ್ಕಿಂತ ಹೆಚ್ಚು ವ್ಯವಹಾರ ಹೊಂದಿದೆ. ಆದರೂ ಮೊದಲಿನಂತೆ ಹಳ್ಳಿಗಳಿಗೆ ಹೋಗುವ ಉತ್ಸಾಹ ಕಡಿಮೆಯಾದಂತೆ ಕಂಡುಬರುತ್ತಿದೆ. ಸಾಮಾನ್ಯ ವಿಮೆಯಲ್ಲಿ ಬಹುತೇಕ ಎಲ್ಲ ಖಾಸಗಿ ಕಂಪೆನಿಗಳೂ ನಗರ ಕೇಂದ್ರೀಕೃತವಾಗಿವೆ.

ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ದೊಡ್ಡ ಗುರಿ: ಕಳೆದ ವಾರ ಬಿಜಿನೆಸ್           ಸ್ಟ್ಯಾಂಡರ್ಡ್ ದೈನಿಕ ವ್ಯವಸ್ಥೆಗೊಳಿಸಿದ್ದ ವಿಚಾರಗೋಷ್ಠಿಯಲ್ಲಿ ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ದೇಬಶಿಶ್ ಪಾಂಡಾರವರು ‘2047ರ ಆಗಸ್ಟ್ 15ರೊಳಗೆ ದೇಶದಲ್ಲಿರುವ ಎಲ್ಲ ಅರ್ಹ ವಯಸ್ಸಿನವರನ್ನೂ ವಿಮಾ ರಕ್ಷಣೆಯ ಒಳಗೆ ತರುವ ಗುರಿ ಹೊಂದಲಾಗಿದೆ’ ಎಂದು ಪ್ರಕಟಿಸಿದ್ದಾರೆ. ಇದೊಂದು ಭಾರಿ ಮಹತ್ವಾಕಾಂಕ್ಷೆಯ ಗುರಿಯಾಗಿದ್ದು, ಸಮಯಕ್ಕೆ ಸರಿಯಾಗಿ ಸಾಧಿಸಿದರೆ ಅದೊಂದು ದೊಡ್ಡ ಸಾಧನೆಯೇ ಆದೀತು.

ಇದಕ್ಕೆ ಹಿನ್ನೆಲೆಯಾಗಿ ಇಂದಿನ ಸ್ಥಿತಿಯನ್ನಷ್ಟು ನೋಡೋಣ. ಒಟ್ಟು ಅರ್ಹ ವಯಸ್ಸಿನ ಜನಸಂಖ್ಯೆಯಲ್ಲಿ ವಿಮಾ ರಕ್ಷಣೆಗೆ ಒಳಪಡಿಸಲ್ಪಟ್ಟವರ ಪ್ರಮಾಣವನ್ನು ‘ಒಳ ನುಗ್ಗುವಿಕೆಯ ಪ್ರಮಾಣ’ (penetration rate ) ಎಂದು ಕರೆಯುತ್ತಾರೆ. ಈ ಪ್ರಮಾಣವು ಭಾರತದಲ್ಲಿ ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ 2022ರಲ್ಲಿ ಜೀವ ವಿಮೆಯಲ್ಲಿ ಶೇ.3.2, ಸಾಮಾನ್ಯ ವಿಮೆಯಲ್ಲಿ ಶೇ.1.0 ಮತ್ತು ಒಟ್ಟಾರೆ ಶೇ.4.2 ಇದ್ದವು. ಇವುಗಳ ಜಾಗತಿಕ ಸರಾಸರಿಗಳು ಅನುಕ್ರಮವಾಗಿ ಶೇ.3.0, ಶೇ.೩3.9ಮತ್ತು ಶೇ6.9 ಇರುತ್ತವೆ. ಅಮೆರಿಕ ಮತ್ತು ಇಂಗ್ಲೆಂಡ್ ನಮಗಿಂತ ಬಹಳ ಮೇಲೆ ಇದ್ದು, ಚೀನಾ ನಮ್ಮ ಆಸುಪಾಸಿನಲ್ಲಿದೆ.

ಅವರ ಪ್ರಕಾರ ವಿಮೆಯನ್ನು ಜನರ ಬಳಿಗೇ ಒಯ್ಯಲಾಗುವುದು, ಉಪಯುಕ್ತತೆಯ ಮಾಹಿತಿ ವಿಸ್ತರಣೆ ಮಾಡಲಾಗುವುದು, ತಂತ್ರಜ್ಞಾನ ಬಳಸಲಾಗುವುದು, ಹಣಕಾಸು, ಶಿಕ್ಷಣ ಎಲ್ಲರಿಗೂ ತಲುಪುವಂತೆ ಮಾಡಲಾಗುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀಮಿಯಂ ಜನರ ಕೊಡುವ ಸಾಮರ್ಥ್ಯಕ್ಕೆ ತಕ್ಕಂತೆ ಇರುವಂತೆ ನೋಡಿಕೊಳ್ಳಲಾಗುವುದು. ಅಂದರೆ ಪ್ರೀಮಿಯಂ ಮೇಲಿನ ಶೇ.18 ಜಿಎಸ್‌ಟಿ ತೆಗೆಯಬಹುದಾ? ಇಷ್ಟೆಲ್ಲ ಮಾಡಿದರೂ ಗುರಿ ಸಾಧಿಸಲು ಹೆಚ್ಚು ಬೆವರು ಸುರಿಸಬೇಕಾಗುತ್ತದೆ.

andolanait

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

13 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago