Categories: ಅಂಕಣಗಳು

ಹಣದುಬ್ಬರ ಮತ್ತೆ ಮೇಲೇರುತ್ತಿದೆ, ಎಚ್ಚರ

ಪ್ರೊ. ಆರ್. ಎಂ. ಚಿಂತಾಮಣಿ

ಕೇಂದ್ರ ಅಂಕಿಸಂಖ್ಯಾ ಕಚೇರಿ ಕಳೆದ ಮಂಗಳವಾರ (ನವೆಂಬರ್, ೧೨) ಅಕ್ಟೋಬರ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ವಿವರಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್‌ವರೆಗೆ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಮಿತಿಯೊಳಗೆ (ಶೇ. ೨. ೦ರಿಂದ ಶೇ. ೬. ೦) ಇದ್ದ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ. ೬. ೨ಕ್ಕೆ ಏರಿದೆ. ಹದಿಮೂರು ತಿಂಗಳ ನಂತರ ಇದು ಶೇ. ೬. ೦ನ್ನು ದಾಟಿ ಮೇಲೆ ಹೋಗಿರುವುದು ತಜ್ಞರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ ಡಿಸೆಂಬರ್ ದ್ವೈಮಾಸಿಕ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯು ನೀತಿ ಬಡ್ಡಿ ದರಗಳನ್ನು (ರೆಪೊ ದರ, ರಿಸರ್ವ್ ರೆಪೊ ದರ ಮತ್ತು ಬ್ಯಾಂಕ್ ರೇಟ್) ಇಳಿಸಬಹುದೆಂಬ ನಿರೀಕ್ಷೆಯು ಹುಸಿಯಾಗ ಬಹುದೆಂದೂ ಅದು ಮತ್ತಷ್ಟು ತಿಂಗಳು ಮುಂದೂಡಲ್ಪಡ ಬಹು ದೆಂದೂ ಹೇಳಲಾಗುತ್ತಿದೆ. ಈ ಹೆಚ್ಚಳಕ್ಕೆ ಅತಿದೊಡ್ಡ ಕಾಣಿಕೆ ಸಲ್ಲಿಸಿರುವುದು ಅಕ್ಟೋಬರ್ ತಿಂಗಳಲ್ಲಿ ತರಕಾರಿ ಬೆಲೆಗಳ ಅತಿ ದೊಡ್ಡ ಪ್ರಮಾಣದ ಏರಿಕೆ. ಒಂದು ಹಂತದಲ್ಲಿ ಈರುಳ್ಳಿ, ಆಲೂಗೆಡ್ಡೆ ಮತ್ತು ಟಮೋಟೋ ಸೇರಿದಂತೆ ಎಲ್ಲ ತರಕಾರಿಗಳ ಬೆಲೆಗಳು ಗಗನಕ್ಕೆ ಹೋಗಿದ್ದು, ಶೇ. ೪೨ಕ್ಕಿಂತ ಹೆಚ್ಚು ಏರಿಕೆ ದಾಖಲಾಗಿದೆ.

ಕೆಲವು ದೊಡ್ಡ ರಾಜ್ಯಗಳಲ್ಲಿ (ಛತ್ತೀಸಗಡ ಸೇರಿದಂತೆ) ಏರಿಕೆ ಇನ್ನೂ ಹೆಚ್ಚಾಗಿತ್ತು. ಇದು ತಾತ್ಕಾಲಿಕವೆಂದು ನಿರ್ಲಕ್ಷಿಸುವಂತಿಲ್ಲ. ಮೇಲಿಂದ ಮೇಲೆ ಈ ರೀತಿ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಸರ್ಕಾರ ಇವುಗಳ ಆಮದು ರಫ್ತು ನೀತಿಗಳಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿರುವುದೂ ಒಂದು ಕಾಣರವೆನ್ನಲಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ: ಒಟ್ಟಾರೆ ಎಲ್ಲ ಆಹಾರ ಪದಾರ್ಥಗಳ ಬೆಲೆಗಳಿಗೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (consumer price index) ಶೇ. ೪೬ ಮಹತ್ವವಿದೆ (weightage). ಅಕ್ಟೋಬರ್ ತಿಂಗಳಲ್ಲಿ ಎಲ್ಲ ಆಹಾರ ಗುಂಪುಗಳ ಬೆಲೆಗಳೂ ಏರಿಕೆಯನ್ನು ಕಂಡಿವೆ. ಜೋಳ, ಗೋಽ, ರಾಗಿಯಂತಹ ಹಿಟ್ಟಿನ ಕಾಳುಗಳ (cereals) ಬೆಲೆಗಳು ಆಗಸ್ಟ್‌ನಿಂದಲೇ ಹೆಚ್ಚುತ್ತಿದ್ದು, ಶೇ. ೭. ೦ರ ಮೇಲೆ ಇವೆ. ಅಡುಗೆ ಎಣ್ಣೆಗಳು ಮತ್ತು ಷಿಷ್ಟ ಪದಾರ್ಥಗಳ (fats) ಬೆಲೆಗಳು ಶೇ. ೯. ೫ ಏರಿದ್ದರೆ ಹಣ್ಣುಗಳ ಮತ್ತು ಬೇಳೆ ಕಾಳುಗಳ ಬೆಲೆಗಳು ಅನುಕ್ರಮವಾಗಿ ಶೇ. ೮. ೪ ಮತ್ತು ಶೇ. ೭. ೪ ಹೆಚ್ಚಾಗಿರುತ್ತವೆ. ಹೀಗೆ ಒಟ್ಟಾರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಆಹಾರ ಪದಾರ್ಥಗಳ ಹಣದುಬ್ಬರ ಶೇ. ೧೦. ೯ ಎಂದು ದಾಖಲಾಗಿದೆ.

ಇದನ್ನು ಹೊರತುಪಡಿಸಿದರೆ ಮೂಲ ಹಣದುಬ್ಬರ ದರ ಶೇ. ೩. ೭ (core inflation) ಎಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಆಹಾರ ಬೆಲೆಗಳ ಮಹತ್ವ ಇಲ್ಲಿ ತಿಳಿಯುತ್ತದೆ. ಈ ಏರಿಕೆಯನ್ನು ವಿವಿಧ ಹಂಗಾಮುಗಳಲ್ಲಾಗುವ (ಬಿತ್ತನೆ ಸುಗ್ಗಿ ಮುರಿ) ಏರಿಳಿತಗಳ ಭಾಗವೆಂದು ತಳ್ಳಿ ಹಾಕುವಂತಿಲ್ಲ. ಇಡೀ ವರ್ಷದಲ್ಲಿ ಇಳಿತಗಳನ್ನು ಮೀರಿ ಏರಿಕೆಗಳಾಗಿವೆ ಎಂಬುದನ್ನು ಕಳೆದ ಎಂಟು ವರ್ಷಗಳ ಅಂಕಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಡೆಪುಟಿ ಗವರ್ನರ್ ಮೈಕೆಲ್ ದೇಬಬ್ರತ ಪಾತ್ರಾರವರು ಇತರರೊಡಗೂಡಿ ಒಂದು ಸಂಶೋಧನಾ ಲೇಖನದಲ್ಲಿ (ರಿಸರ್ವ್ ಬ್ಯಾಂಕ್ ಮಾಸಿಕ ಬುಲೆಟಿನ್) ಆಧಾರ ಸಮೇತ ಸಿದ್ಧಮಾಡಿ ತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ರೂಪಾಯಿ ವಿನಿಮಯ ಪೇಟೆಯಲ್ಲಿ ಡಾಲರ್ ವಿರುದ್ಧ ಹೆಚ್ಚು ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದಲೂ ನಾವು ಆಯಾತ ಮಾಡಿಕೊಳ್ಳುತ್ತಿರುವ ಕೆಲವು ಅಡುಗೆ ಎಣ್ಣೆಗಳು ಮತ್ತು ಬೇಳೆ ಕಾಳುಗಳ ಬೆಲೆಗಳು ಹೆಚ್ಚಾತ್ತಿದ್ದು, ಆಹಾರ ಹಣದುಬ್ಬರಕ್ಕೆ ಇದೂ ಕಾರಣ.

ಬೆಲೆಯೇರಿಕೆಯ ನಿರೀಕ್ಷೆಯೂ ಆಹಾರ ಬೆಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪೇಟೆಯ ಮಧ್ಯವರ್ತಿಗಳು ದಾಸ್ತಾನು ಹೊಂದಿರುವುದು ಮತ್ತು ಹೆಚ್ಚಿನ ದಾಸ್ತಾನುಗಳನ್ನು ಹೊಂದುವುದು, ಇಂದಿನ ಬೆಲೆಯೇರಿಕೆಗೆ ಕಾರಣವಾಗುತ್ತವೆ. ಅಲ್ಲದೆ ಬೆಲೆಗಳ ಏರಿಳಿತಗಳಿಂದಲೇ ಲಾಭ ಮಾಡಿಕೊಳ್ಳ ಬಯಸುವ ಸಟ್ಟಾ ವ್ಯಾಪಾರಿಗಳಿಗೆ (speculators) ಇದು ಹೆಚ್ಚು ಅನುಕೂಲ ಮಾಡಿಕೊಟ್ಟು ಗ್ರಾಹಕರ ಮೇಲೆ ಹೊರೆ ಬೀಳುವಂತಾಗುತ್ತದೆ. ಇದೆಲ್ಲವನ್ನೂ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಮತ್ತು ಪರಿಣಾಮಕಾರಿ ಹಣಕಾಸು ನೀತಿಯಿಂದ ತಪ್ಪಿಸಬಹುದು. ರೈತನ ಭೂಮಿಯಿಂದ ಮತ್ತು ಆಮದಾದ ಬಂದರಿನಿಂದ ಗ್ರಾಹಕರವರೆಗೆ ಆಹಾರ ಪದಾರ್ಥಗಳನ್ನು ತಲುಪಿಸಲು ಸಮರ್ಥ ಮತ್ತು ವೇಗದ ಸಾಗಾಣಿಕೆ ವ್ಯವಸ್ಥೆ ಬೇಕು. ಜಿಡಿಪಿ ಅಂದಾಜುಗಳ ಮೇಲೆ ಪರಿಣಾಮ ಬೀರೀತೆ? : ರಾಷ್ಟ್ರೀಯ ಒಟ್ಟಾದಾಯವು (ಜಿಡಿಪಿ) ೨೦೨೪-೨೫ರಲ್ಲಿ ಶೇ. ೭. ೦ರಿಂದ ೭. ೨ರವರೆಗೆ ಬೆಳವಣಿಗೆ ಕಾಣಬಹುದು ಎಂದು ರಿಸರ್ವ್ ಬ್ಯಾಂಕ್ ಸೇರಿ ವಿವಿಧ ಅಧ್ಯಯನಗಳು ಅಂದಾಜು ಮಾಡಿರುತ್ತವೆ. ಮಧ್ಯಮಾವಽಯಲ್ಲಿಯೂ ಇದರ ಹಿಂದೆ ಮುಂದೆ ಬೆಳವಣಿಗೆಯಾದೀತೆಂದೂ ಅಂದಾಜುಗಳಿವೆ.

ಆದರೆ ಈ ಮಿತಿ ಮೀರಿದ ಹಣದುಬ್ಬರ ಮತ್ತು ಇತರೆ ಕೆಲವು ಸಕಾರಾತ್ಮಕ ಬೆಳವಣಿಗಗಳು ಅಂದಾಜುಗಳನ್ನು ಹುಸಿಗೊಳಿಸಿಯಾವೆ? ಬೆಳವಣಿಗೆ ಕಡಿಮೆಯಾದೀತೆ? ನವೆಂಬರ್ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಆಶಾವಾದವೂ ಇದೆ. ಆದರೆ ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಪರಿಸ್ಥಿತಿ ಒಂದು ಹದಕ್ಕೆ ಇನ್ನೂ ಬಂದಿಲ್ಲ. ನಮ್ಮ ವಿದೇಶಿ ವಿನಿಮಯ ನಿಽ ಹೆಚ್ಚುತ್ತಿದೆಯಾದರೂ ನಮ್ಮ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಲೇ ಇದೆ. ಆತಂರಿಕ ತೊಂದರೆಗಳೂ ಮುಂದುವರಿಯುತ್ತಿವೆ. ಕೈಗಾರಿಕಾ ಬೆಳವಣಿಗೆಯ ದಿಕ್ಸೂಚಿ ಎಂದೇ ಕರೆಯಲಾಗುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಆಗಸ್ಟ್ ತಿಂಗಳಲ್ಲಿ ಹಿನ್ನಡೆ ಕಂಡಿದ್ದದ್ದು ಸೆಪ್ಟೆಂಬರ್‌ನಲ್ಲಿ ಶೇ. ೩. ೧ರಷ್ಟು ಬೆಳವಣಿಗೆ ಕಂಡಿದೆ.

ಆದರೆ ಮುಂದಿನ ದಿನಗಳಲ್ಲಿ ಹೆಚ್ಚಿರುವ ಹಣದುಬ್ಬರದಿಂದ ಸಮಸ್ಯೆಯಾದೀತೆ? ಈ ವರ್ಷದ ಎರಡನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್) ಕಂಪೆನಿಗಳ ವರದಿಗಳು ನಿರೀಕ್ಷಿಸಿದಷ್ಟು ಆಶಾದಾಯಕವಾಗಿರಲಿಲ್ಲ. ಗ್ರಾಮೀಣ ಬೇಡಿಕೆ ಬೆಲೆಯೇರಿಕೆ ಮತ್ತು ನಿರುದ್ಯೋಗ ಸಮಸ್ಯೆಯಿಂದಾಗಿ ಈ ಹಬ್ಬಗಳ ಹಂಗಾಮಿನಲ್ಲೂ ಹೆಚ್ಚಾಗುತ್ತಿಲ್ಲ. ನಗರಗಳಲ್ಲಿಯೂ ಸಾಮಾನ್ಯ ಜನರಿಂದ ಬೇಡಿಕೆ ಹೆಚ್ಚುತ್ತಿಲ್ಲ. ಆಟೋಮೊಬೈಲ್ ಉದ್ದಿಮೆಯೊಂದನ್ನೇ ತೆಗೆದುಕೊಂಡರೆ ಪ್ರೀಮಿಯಂ ಕಾರುಗಳಿಗೆ ಬೇಡಿಕೆಯಿದ್ದರೂ ಕಡಿಮೆ ಬೆಲೆಯ ಕಾರುಗಳಿಗೆ ದೊಡ್ಡ ಡಿಸ್ಕೌಂಟ್ ಕೊಟ್ಟರೂ ಬೇಡಿಕೆಯೇ ಇಲ್ಲ. ದೊಡ್ಡ ಸಂಖ್ಯೆಯಲ್ಲಿ ದಾಸ್ತಾನು ಗೊಡೌನುಗಳಲ್ಲಿ ಬಿದ್ದಿದೆ. ನೌಕರರನ್ನು ಕೆಲಸದಿಂದ ತೆಗೆಯುವ ಸ್ಥಿತಿ ಬಂದಂತಿದೆ. ಷೇರುಪೇಟೆ ಸೂಚ್ಯಂಕಗಳೆರಡೂ (ಸೆನ್ಸೆಕ್ಸ್ ನಿಫ್ಟಿ) ಅಕ್ಟೋಬರ್ ತಿಂಗಳೊಂದರಲ್ಲಿಯೇ ಶೇ. ೯. ೦ರಷ್ಟು ಮೌಲ್ಯ ಕಳೆದುಕೊಂಡಿವೆ. ಅಷ್ಟರಮಟ್ಟಿಗೆ ಷೇರುದಾರರ ಆಸ್ತಿ ಕುಸಿದಿದೆ. ಈಗ ಬೆಳವಣಿಗೆಗೆ ಪೂರಕ ಕ್ರಮಗಳು ಬೇಕಾಗಿವೆ.

ಆಂದೋಲನ ಡೆಸ್ಕ್

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

18 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

31 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

42 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

1 hour ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago