ಎಫ್.ಡಿ.ಐ.ಪಡೆಯುವಲ್ಲಿ ಭಾರತ ಏಳನೇ ಸ್ಥಾನ

ಎಫ್.ಡಿ.ಐ.ಬ ಗ್ಗೆ ಮುಕ್ತ ಮನಸ್ಸು ಹೊಂದಿರುವ ಭಾರತಕ್ಕೆ ಕಠಿಣ ಸ್ಥಿತಿ ಇದ್ದ  2020ರಲ್ಲೇ 66ಬಿಲಿಯನ್ ಡಾಲರ್ ಒಳಹರಿವು ಇತ್ತು!

ಪ್ರೊ.ಆರ್.ಎಂ.ಚಿಂತಾಮಣಿ

ವಿಶ್ವ ಸಂಸ್ಥೆಯ ಅಂಗ ಸಂಘಟನೆ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆಯು (United Nations Conference on Trade and Development) ಜಾಗತಿಕ ಮಟ್ಟದಲ್ಲಿ ವಿದೇಶಿ ನೇರ ಹೂಡಿಕೆಗಳಿಗೆ (Foreign Direct Investment &FDI) ಸಂಬಂಧಿಸಿದಂತೆ ೨೦೨೧ರ ವಾರ್ಷಿಕ ವರದಿಯನ್ನು ಕಳೆದ ಗುರುವಾರ ಪ್ರಕಟಿಸಿದೆ. ಅದರಂತೆ ಅತಿ ಹೆಚ್ಚು ಎಫ್‌ಡಿಐ ಪಡೆದಿರುವ ಹತ್ತು ದೇಶಗಳಲ್ಲಿ ಭಾರತ ಏಳನೇ ಸ್ಥಾನಕ್ಕೇರಿದೆ. ಹಿಂದಿನ ವರ್ಷ ಎಂಟನೇ ಸ್ಥಾನದಲ್ಲಿತ್ತು. ವರದಿಯಂತೆ ೨೦೨೧ರಲ್ಲಿ ಒಟ್ಟು ೧.೬ ಟ್ರಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ವಿವಿಧ ದೇಶಗಳಿಗೆ ಹರಿದು ಬಂದಿದೆ. ಇದು ಕೋವಿಡ್-೧೯ ಆಘಾತಕ್ಕಿಂತ ಮೊದಲಿನ ಮಟ್ಟಕ್ಕೆ (೨೦೧೯ರ ಮಟ್ಟಕ್ಕೆ) ಬಂದಿದೆ ಎಂದೂ ಹೇಳಲಾಗಿದೆ.

ವಿವರಗಳಿಗೆ ಹೋಗುವ ಮೊದಲು ಏನಿದು ಎಫ್‌ಡಿಐ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬೇಕು.

ಒಂದು ದೇಶದ ಬಂಡವಾಳದಾರರು ಹೂಡಿಕೆ ನಿಧಿಗಳು, ಹೂಡಿಕೆ ಕಂಪನಿಗಳು, ದೊಡ್ಡ ಹಣಕಾಸು ಹೊಂದಿರುವ ಹೂಡಿಕೆದಾರ ವ್ಯಕ್ತಿಗಳು, ಸರ್ಕಾರಗಳು ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ದೊಡ್ಡ ಗ್ರಾತದ ಬಂಡವಾಳವನ್ನು ಇನ್ನೊಂದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ದೀರ್ಘಾವಧಿಗಾಗಿ ಒಪ್ಪಂದದ ಮೇರೆಗೆ ಹೂಡಿಕೆ ಮಾಡುವುದನ್ನು ಸಾಮಾನ್ಯವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ಎಂದು ಕರೆಯುತ್ತಾರೆ. ಇವುಗಳು ಆರಂಭದ ಹೂಡಿಕೆಗಳಾಗಿರಬಹುದು ಅಥವಾ ನಂತರದಲ್ಲಿ ಬೆಳವಣಿಗೆ, ವಿಸ್ತರಣೆ, ತಂತ್ರಜ್ಞಾನ ಉನ್ನತೀಕರಣ, ವ್ಯವಹಾರದಲ್ಲಿ ವೈವಿಧ್ಯತೆ ತರುವ ಮತ್ತು ಪುನರುಜ್ಜೀವನ ಉದ್ದೇಶಗಳಿಗಾಗಿ ಇರಬಹುದು. ಸಾಮಾನ್ಯವಾಗಿ ಶೇರುಗಳಲ್ಲಿ ತೊಡಗಿಸಲ್ಪಡುತ್ತದೆ. ಇದು ದೀರ್ಘಾವಧಿ ಸಾಲಪತ್ರಗಳಲ್ಲೂ ಇರಬಹುದು. ಈ ಹೂಡಿಕೆದಾರರು ಕಂಪನಿ ಆಡಳಿತದಲ್ಲಿ ಭಾಗವಹಿಸಬಹುದು ಅಥವಾ ಭಾಗವಹಿಸಲಿಕ್ಕಿಲ್ಲ. ಈ ಹೂಡಿಕೆಗಳ ವಿಷಯದಲ್ಲಿ ಪಡೆಯುವ ದೇಶದ ಸರ್ಕಾರದ ನೀತಿ, ವ್ಯವಹಾರ ನಡೆಸಲು ಪೂರಕ ವಾತಾವರಣ, ವ್ಯವಹಾರ ನಡೆಸುವ ಸರಳತೆ, ಕಂಪನಿಯ ಉದ್ದೇಶಗಳು, ಪ್ರವರ್ತಕರ ಮತ್ತು ಆಡಳಿತ ವರ್ಗದ ಅನುಭವ ಮತ್ತು ತಂತ್ರಜ್ಞಾನ ಪ್ರಾವಿಣ್ಯತೆ, ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆ ಮತ್ತು ದೀರ್ಘಾವಧಿ ಲಾಭದಾಯಕತೆ ಮುಂತಾದ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹೂಡಿಕೆಗಳು ನೇರವಾಗಿ ಕಂಪನಿಗೆ ಸಂದಾಯವಾಗಿ ಅದರ ಚಟುವಟಿಕೆಗಳಲ್ಲಿ ಉಪಯೋಗಿಸಲ್ಪಡುತ್ತವೆ. ಈಗ ಸಾಕಷ್ಟು ಸುದ್ದಿಯಲ್ಲಿರುವ ಟೆಸ್ಲಾ ಆಟೋಮೊಬೈಲ್ ಕಂಪನಿಯ ಮುಖ್ಯಸ್ಥ ಏಲನ್ ಮಸ್ಕ್‌ರವರು ವಿದೇಶಿ ವ್ಯಕ್ತಿ ಹೂಡಿಕೆದಾರರಿಗೆ ಒಂದು ಉದಾಹರಣೆ. ಅಬುಧಾಬಿ ಸಾವರಿನ್ ಇನ್‌ವೆಸ್ಟ್‌ಮೆಂಟ್ ಅಥಾರಿಟಿಯನ್ನು ಸರ್ಕಾರಿ ಹೂಡಿಕೆದಾರ ಎನ್ನಬಹುದು. ಬಹುರಾಷ್ಟ್ರೀಯ ಹೂಡಿಕೆ ಕಂಪನಿಗಳು ಮತ್ತು ಪೆನ್ಷನ್ ಫಂಡಗಳು ಸಾಕಷ್ಟಿವೆ. ಒಂದು ದೇಶ ತಾನು ವಿದೇಶಗಳಲ್ಲಿ ನೇರ ಹೂಡಿಕೆ ಮಾಡಬಹುದು ಮತ್ತು ವಿದೇಶಗಳಿಂದ ಹೂಡಿಕೆಗಳನ್ನು ಪಡೆಯಬಹುದು. ಎರಡೂ ಏಕಕಾಲಕ್ಕೆ ನಡೆಯಬಹುದು.

ದೇಶಗಳ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದಲ್ಲಿ ಇವುಗಳ ಪಾತ್ರ ಮಹತ್ವದ್ದು. ವಿಶ್ವ ಬ್ಯಾಂಕು ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ತಮ್ಮ ಅಂಗ ಸಂಸ್ಥೆಗಳೊಡನೆ ಎಫ್‌ಡಿಐ ವೃದ್ಧಿ ಮತ್ತು ಅವಶ್ಯವಿದ್ದಲ್ಲಿ ಹರಿಯಲು ಪೂರಕ ವಾತಾವರಣ ನಿರ್ಮಿಸುತ್ತವೆ.

ಎಫ್‌ಡಿಐ ದಿಕ್ಕು ಮತ್ತು ಮುನ್ನೋಟ.

ಹಿಂದಿನ ವರ್ಷಕ್ಕಿಂತ ೨೦೨೧ರಲ್ಲಿ ಎಫ್‌ಡಿಐ ಶೇ.೬೪ರಷ್ಟು ಬೆಳವಣಿಗೆ ಕಂಡಿದ್ದು, ಅದದಲ್ಲಿ ನಾಲ್ಕರಲ್ಲಿ ಮೂರು ಪಾಲು ಅಭಿವೃದ್ಧಿ ಹೊಂದಿದ ದೇಶಗಳ ಕಡೆಗೇ ಹರಿದಿದೆ. ಉಳಿದ ಒಂದು ಭಾಗ ಮಾತ್ರ ಅಭಿವೃದ್ಧಿಶೀಲ ದೇಶಗಳ ಕಡೆಗೆ ಹೋಗಿದೆ. ಅದರಲ್ಲಿಯೂ ದೊಡ್ಡ ಪಾಲು ಚೀನಕ್ಕೆ, ನಂತರದ ಸ್ಥಾನ ಬಹುದೂರದಲ್ಲಿ ಭಾರತಕ್ಕೆ. ಇಲ್ಲಿ ಕೊಟ್ಟಿರುವ ಸಂಖ್ಯಾ ಪಟ್ಟಿ ಚಿತ್ರದ ದೊಡ್ಡ ಭಾಗವನ್ನು ತೆರೆದಿಡುತ್ತದೆ.

ಆಮೆರಿಕಾ, ಚೀನ ಮತ್ತು ಹಾಂಗಕಾಂಗ್ ಮೊದಲಿನಿಂದಲೂ ಮೊದಲು ಮೂರು ಸ್ಥಾನಗಳಲ್ಲಿವೆ. ಭಾರತ ಮಾತ್ರ ಈ ವರ್ಷ ಸ್ವಲ್ಪ ಕಡಿಮೆ ಪಡೆದಿದ್ದರೂ ಎಂಟರಿಂದ ಏಳನೇ ಸ್ಥಾನಕ್ಕೇರಿದೆ.

ವರದಿಯ ಮುನ್ನೋಟದಂತೆ ೨೦೨೨ರಲ್ಲಿ ಎಫ್‌ಡಿಐ ಹರಿವು ಕಡಿಮೆಯಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣಗಳು ಎಲ್ಲರಿಗೂ ಗೊತ್ತಿರುವಂತೆ ಕಚ್ಚಾ ತೈಲ ಏರಿಕೆ, ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಹಣ ದುಬ್ಬರ ಮತ್ತು ಮುಂದುವರಿಯುತ್ತಿರುವ ಉಕ್ರೇನ್-ರಶಿಯಾ ಯುದ್ಧ ಮಧ್ಯಮಾವಧಿಯಲ್ಲಿ ಇನ್ನಷ್ಟು ಕುಸಿಯದಿದ್ದರೂ ಯಥಾಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ.

ಒಂದು ದೇಶದ ಬಂಡವಾಳದಾರರು ಹೂಡಿಕೆ ನಿಧಿಗಳು, ಹೂಡಿಕೆ ಕಂಪನಿಗಳು, ದೊಡ್ಡ ಹಣಕಾಸು ಹೊಂದಿರುವ ಹೂಡಿಕೆದಾರ ವ್ಯಕ್ತಿಗಳು, ಸರ್ಕಾರಗಳು ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ದೊಡ್ಡ ಗ್ರಾತದ ಬಂಡವಾಳವನ್ನು ಇನ್ನೊಂದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ದೀರ್ಘಾವಧಿಗಾಗಿ ಒಪ್ಪಂದದ ಮೇರೆಗೆ ಹೂಡಿಕೆ ಮಾಡುವುದನ್ನು ಸಾಮಾನ್ಯವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ಎಂದು ಕರೆಯುತ್ತಾರೆ.

ರಾಜಕೀಯ ಭೌಗೋಳಿಕ ತಲ್ಲಣಗಳು ಕಡಿಮೆಯಾಗಿ ಜಾಗತಿಕ ಸಹಕಾರ ಹೆಚ್ಚಿದರೆ ಎಫ್‌ಡಿಐ ಹರಿವು ಹೆಚ್ಚಾಗುವುದೆಂಬ ಆಶಾಭಾವನೆ ದೀರ್ಘಾವಧಿಗಾಗಿ ವ್ಯಕ್ತವಾಗಿದೆ.

ಭಾರತ ಮತ್ತು ಎಫ್‌ಡಿಐ

ಮೊದಲಿನಿಂದಲೂ ಎಫ್‌ಡಿಐ ಬಗ್ಗೆ ಮುಕ್ತ ಮನಸ್ಸು ಹೊಂದಿರುವ ಭಾರತಕ್ಕೆ ಅಂಥ ಕಠಿಣ ಸ್ಥಿತಿ ಇದ್ದ ೨೦೨೦ರಲ್ಲಿ ೬೬ ಬಿಲಿಯನ್ ಡಾಲರ್ ಒಳ ಹರಿವು ಇತ್ತು. ಆಗ ದೊಡ್ಡ ಸಂಖ್ಯೆಯ ತಂತ್ರಜ್ಞಾನ ‘ಸ್ಟಾರ್ಟ್‌ಆಪ್’ ಗಳಿಗೆ (ಉದಾ: ಪೆಟಿಎಂ, ನೈಕಾ, ಮುಂ.) ಹೆಚ್ಚಿನ ಪ್ರಮಾಣದಲ್ಲಿ ಎಫ್‌ಡಿಐ ಬಂದಿತ್ತು. ೨೦೨೧ರಲ್ಲಿ ೪೫ ಬಿಲಿಯನ್ ಡಾಲರ್‌ಗಳಿಗೆ ತೃಪ್ತಿಪಡೆಬೇಕಾದರೂ ಜಾಗತಿಕ ಮಟ್ಟದಲ್ಲಿ ಒಂದು ಸ್ಥಾನ ಮೇಲೆ ಹೋಗಲು ಸಾಧ್ಯವಾಯಿತು.

ಭಾರತದಿಂದಲೂ ಸಾಕಷ್ಟು ಎಫ್‌ಡಿಐ ೧೫.೫ ಬಿಲಿಯನ್ ಡಾಲರ್ ಹೊರದೇಶಗಳಿಗೆ ಹೋಗಿದ್ದು ಇದು ಹಿಂದಿನ ವರ್ಷಕ್ಕಿಂತ ಶೇ.೪೩ರಷ್ಟು ಹೆಚ್ಚಾಗಿದೆ. ಹಲವು ಬೆಳೆಯುತ್ತಿರುವ ದೇಶಗಳಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತಿದೆ. ಸೇವಾ ವಲಯದಲ್ಲಿ ಹೆಚ್ಚಾಗಿರುವುದು. ಭಾರತಕ್ಕೆ ಬಂದಿರುವ ಎಫ್‌ಡಿಐ ನಲ್ಲಿ ದೊಡ್ಡ ಭಾಗವು ೨೩ ದೊಡ್ಡ ನವೀಕರಿಸಬಹುದಾದ ಶಕ್ತಿ ಮೂಲ ವಲಯದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ನಂತರದಲ್ಲಿ ಸ್ಥಾನ ನಿರ್ಮಾಣ ವಲಯದ್ದು (ಮೂಲ ಸೌಲಭ್ಯ ಸೇರಿದಂತೆ). ೧೩.೫ ಬಿಲಿಯನ್ ಡಾಲರ್ ಎಫ್‌ಡಿಐನೊಂದಿಗೆ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ (ಜಪಾನ್) ನವರ ಹೊಸ ಸ್ಟೀಲ್ ಮತ್ತು ಸಿಮೆಂಟ್ ಉತ್ಪಾದನಾ ಯೋಜನೆಗಳನ್ನು ಹೆಸರಿಸಬಹುದು. ಅದೇ ರೀತಿ ಸುಜ್ಹುಕಿಯ (ಜಪಾನ್) ೨.೫ ಬಿಲಿಯನ್ ಡಾಲರ್ ಹೊಸ ಕಾರು ಯೋಜನೆಗಳನ್ನೂ ಇಲ್ಲಿ ದಾಖಲಿಸಬಹುದು.

ಒಂದು ಮಾತು: ಭಾರತದಲ್ಲಿ ಇನ್ನೂ ಹೆಚ್ಚು ಎಫ್‌ಡಿಐ ಆಕರ್ಷಿಸಲು ಅವಕಾಶಗಳಿವೆ. ನಮ್ಮಲ್ಲಿ ಸಂಶೋಧನೆ ನಾವೀನ್ಯತೆ ಮತ್ತು ಕೌಶಲಾಭಿವೃದ್ಧಿ ಹೆಚ್ಚಾಗಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗುಣಟಮ್ಟದ ಉತ್ಪನ್ನಗಳನ್ನು ವಿದೇಶಗಳಲ್ಲಿ ಹೆಚ್ಚು ರಫ್ತು ಮಾಡುವಂತಾಗಬೇಕು.

andolana

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

43 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

54 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago