Categories: ಅಂಕಣಗಳು

ದೇವರ ನಾಡಲ್ಲೊಬ್ಬಳು ಸೇಂದಿ ಇಳಿಸುವ ಧೀರೆ

  • ಪಂಚು ಗಂಗೊಳ್ಳಿ

ದೇವರ ಸ್ವಂತ ನಾಡು ಎಂದು ಹೆಸರಾಗಿರುವ ಕೇರಳ, ‘ದೇವರಿಗೆ ಪ್ರಿಯ’ವಾದ ಪಾನೀಯ ಸೇಂದಿಗೂ ಅಷ್ಟೇ ಪ್ರಸಿದ್ಧವಾದುದು. ಸೇಂದಿ ಇಲ್ಲದ ‘ದೇವರ ನಾಡನ್ನು ಊಹಿಸಲೂ ಅಸಾಧ್ಯ. ಕೇರಳಿಗರನ್ನು ಕೇಳಿದರೆ ಅವರಿಗೆ ಸೇಂದಿ ಇಳಿಸಲು ಕಲಿಸಿದ್ದೂ ದೇವರೇ ಎಂದು ಹೇಳುತ್ತಾರೆ. ಒಮ್ಮೆ ಪಾರ್ವತಿ ದೇವಲೋಕದಿಂದ ಕೆಳಕ್ಕೆ ನೋಡುವಾಗ ಅವಳಿಗೆ ಕಲ್ಪವೃಕ್ಷಗಳಿಂದ ತುಂಬಿ ಕಂಗೊಳಿಸುವ ಒಂದು ಭೂಭಾಗ ಕಾಣಿಸಿತಂತೆ. ಅದರ ಸೌಂದರ್ಯಕ್ಕೆ ಮಾರು ಹೋದ ಅವಳು ಪತಿ ಶಿವನೊಡನೆ ಅದನ್ನು ಕಾಣಲು ಭೂಲೋಕಕ್ಕೆ ಬಂದಳು. ಅದೇ ಕೇರಳ. ಶಿವ ಪಾರ್ವತಿ ಅಲ್ಲಿ ವಿಹರಿಸುವಾಗ ಶಿವನಿಗೆ ಬಾಯಾರಿಕೆ ಯಾಯಿತು. ಅತ್ತಿತ್ತ ನೋಡುವಾಗ ಅವನಿಗೆ ಕಲ್ಪವೃಕ್ಷಗಳ ಕಾಂಡದಿಂದ ಬಿಳಿ ದ್ರವ ಒಸರುವುದು ಕಾಣಿಸಿತು. ಅವನು ಅದನ್ನು ಕುಡಿದನು. ಅದರ ರುಚಿ ಮತ್ತು ಮುತ್ತಿಗೆ ಮನಸೋತ ಅವನು ಅದನ್ನು ಮತ್ತೆ ಮತ್ತೆ ಕುಡಿದನು. ಶಿವ ಕುಡಿದು ಮತ್ತೇರಿದುದನ್ನು ಕಂಡ ಪಾರ್ವತಿಯು ಕಲ್ಪವೃಕ್ಷದ ಕಾಂಡವನ್ನು ತನ್ನ ಕೈಗಳಿಂದ ಉಜ್ಜಿದಳು. ಆಗ ಕಲ್ಪವೃಕ್ಷದ ಕಾಂಡದಲ್ಲಿದ್ದ ದ್ರವವು ಅದರ ತುದಿಗೆ ಹೋಯಿತು. ಆಗಲೂ ಶಿವ ಬಿಡದೆ ತನ್ನ ತೊಡೆಯಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸಿ, ಅವನನ್ನು ಮರ ಹತ್ತಿಸಿ, ಅವನ ಮೂಲಕ ದ್ರವವನ್ನು ಕೆಳಕ್ಕಿಳಿಸಿ ಕುಡಿದನು. ಇದು ಸೇಂದಿ ಕುರಿತು ಕೇರಳದಲ್ಲಿರುವ ಒಂದು ಕಥೆ.

ಕೇರಳದಲ್ಲಿ ಸೇಂದಿಯನ್ನು ಕುಡಿಯುವವರು ಹೆಚ್ಚಿನ ಸಂಖ್ಯೆಯವರು ಶಿವನಂತೆ ಗಂಡಸರೇ ಆಗಿರುವಂತೆ, ಸೇಂದಿಯನ್ನು ಇಳಿಸುವವರೂ ಸಂಪೂರ್ಣ ವಾಗಿ ಗಂಡಸರೇ. ಆದರೆ, 2019ರಿಂದ ಅದೇ ದೇವರ ನಾಡಿನಲ್ಲಿ ಒಬ್ಬ ಮಹಿಳೆ ಸೇಂದಿ ಇಳಿಸುವ ಕಾಯಕ ಮಾಡುವ ಮೂಲಕ ಪುರುಷರ ಆ ಏಕಸ್ವಾಮ್ಯಕ್ಕೆ ಲಗ್ಗೆ ಹಾಕಿದ್ದಾಳೆ. ಕಣ್ಣೂರಿನ ಪಣ್ಣಿಯೊಡೆಯ ಮೂವತ್ತೆಂಟು ವರ್ಷ ಪ್ರಾಯದ ಸಿ.ಶೀಜಾ ಅವರೇ ಆ ಮಹಿಳೆ, ಹಾಗೆಂದು, ಆಕೆ ಇಷ್ಟಪಟ್ಟಾಗಲೀ, ಪುರುಷರಿಗೆ ಸವಾಲೊಡ್ಡಲಾಗಲೀ ಸೇಂದಿ ಇಳಿಸುವ ಕೆಲಸಕ್ಕೆ ಬಂದವರಲ್ಲ. ಅವರ ಕುಟುಂಬದಲ್ಲಿ ನಡೆದ ಒಂದು ದುರ್ಘಟನೆ ಅವರನ್ನು ಈ ಕಾಯಕಕ್ಕೆ ಅಕ್ಷರಶಃ
ದೂಡಿತು.

ಶೀಜಾ ತನ್ನ ತಂದೆ ತಾಯಿಯ ಐವರು ಮಕ್ಕಳಲ್ಲಿ 2ನೆಯವರು. ಆರ್ಥಿಕ ಅನನುಕೂಲತೆಯ ಕಾರಣ ಅವರು 8ನೇ ತರಗತಿಗೆ ತನ್ನ ಶಾಲಾ ಶಿಕ್ಷಣವನ್ನು ನಿಲ್ಲಿಸಬೇಕಾಯಿತು.ಅವರಿಗೆ 21 ವರ್ಷಪ್ರಾಯವಿದ್ದಾಗ ಮದುವೆಯಾಯಿತು. ಶೀಜಾರ ಪತಿ ಜಯಕುಮಾರ್ ಒಬ್ಬ ಮೂರ್ತೆದಾರ. ಸಣ್ಣ ಸಂಪಾದನೆಯಲ್ಲೂ ಅವರ ಕುಟುಂಬ ಸುಖವಾಗಿತ್ತು. ಆದರೆ, 2019ರಲ್ಲಿ ಒಂದು ದಿನ ಜಯಕುಮಾರ್ ಎಂದಿನಂತೆ ತನ್ನ ಬೈಕಲ್ಲಿ ಸ್ಥಳೀಯ ಅಂಗಡಿಗೆ ಸೇಂದಿ ಹಾಕಲು ಹೋಗುವಾಗ ರಸ್ತೆಯಲ್ಲಿ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡರು. ವರ್ಷ ಕಳೆದರೂ ಅವರು ಚೇತರಿಸಿಕೊಳ್ಳಲಾಗಲಿಲ್ಲ. ಸೇಂದಿ ಇಳಿಸುವುದೊಂದೇ ಶೀಜಾರ ಕುಟುಂಬದ ಹೊಟ್ಟೆ ಪಾಡಿನ ದಾರಿಯಾಗಿತ್ತು. ಅದು ಬಿಟ್ಟರೆ, ಕೆಲಸ ಸಿಕ್ಕಾಗ ಶೀಜಾ ‘ನರೇಗಾ’ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಮನೆಯಲ್ಲಿ ಜಯಕುಮಾರ್, ಶೀಜಾ ಮತ್ತು ಇಬ್ಬರು ಚಿಕ್ಕ ಮಕ್ಕಳು. ದೊಡ್ಡ ಮಗು ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದರೆ ಸಣ್ಣ ಮಗು ಐದನೇ ತರಗತಿಯಲ್ಲಿದೆ. ಇದನ್ನೆಲ್ಲ ಯೋಚಿಸಿದ ಶೀಜಾ ತಾನೇ ಸೇಂದಿ ಇಳಿಸುವ ಕೆಲಸ ಮಾಡುತ್ತೇನೆ ಎಂದು ಗಂಡನಿಗೆ ಹೇಳಿದರು. ಆದರೆ ಸೇಂದಿ ಇಳಿಸುವ ಕೆಲಸದಲ್ಲಿನ ಅಪಾಯ ಮತ್ತು ಅಕ್ಕಪಕ್ಕದ ಜನ ಏನು ಹೇಳಬಹುದು ಎಂಬುದು ತಿಳಿದಿದ್ದ ಜಯಕುಮಾರ್ ಮೊದಲಿಗೆ ಅದಕ್ಕೊಪ್ಪಲಿಲ್ಲ. ಆದರೆ, ನಂತರ ಬೇರೆ ದಾರಿಯಿಲ್ಲದಿದ್ದುದರಿಂದ ಆತನೂ ಒಪ್ಪ ಬೇಕಾಯಿತು.

ಶೀಜಾರಿಗೂ ಸೇಂದಿ ಇಳಿಸುವ ಕೆಲಸದಲ್ಲಿನ ಅಪಾಯ ಏನೆಂಬುದು ಗೊತ್ತಿದ್ದ ವಿಚಾರವೇ, ಏಕೆಂದರೆ, ಅವರೂ ಸೇಂದಿ ಇಳಿಸುವ ಕುಟುಂಬದಿಂದ ಬಂದವರು. ಒಂದು ರೀತಿಯಲ್ಲಿ, ಸೇಂದಿ ಇಳಿಸುವ ಕಾಯಕ ಆಕೆಯ ರಕ್ತದಲ್ಲೇ ಇತ್ತು ಎನ್ನಬಹುದು. ಅವರ ತಂದೆ ಹಾಗೂ ಸಹೋದರನೂ ಸೇಂದಿ ಇಳಿಸುವ ಕೆಲಸ ಮಾಡುತ್ತಿದ್ದರು. ಆಕೆಗೆ ಸೇಂದಿ ಇಳಿಸಲು ಪ್ರತಿದಿನ ಮೂರು ಬಾರಿ ತೆಂಗಿನ ಮರ ಹತ್ತಿ ಇಳಿಯುವುದು ಎಷ್ಟು ಶ್ರಮದಾಯಕವಾದುದು ಎಂಬುದು ಮಾತ್ರವಲ್ಲದೆ, ಅದು ಎಷ್ಟು ಅಪಾಯಕರವಾದ ಕೆಲಸ ಎಂಬುದನ್ನೂ ಕಣ್ಣಾರೆ ಕಂಡ ಅನುಭವವಿತ್ತು. ‘ಮರ ಹತ್ತೋನ್ ಹೆಜ್ಜೆ ಮೂರೊತ್ತು ಮುಂಡೆ (ಮೂರ್ತೆದಾರನ ಹೆಂಡತಿ ಮೂರು ಹೊತ್ತೂ ವಿಧವೆ)’ ಅನ್ನುವ ಗಾದೆ ಮೂರ್ತೆದಾರನ ಬದುಕನ್ನು ಸ್ಪಷ್ಟವಾಗಿ ತೋರಿಸುತ್ತದೆ. ಏಳು ವರ್ಷಗಳ ಹಿಂದೆ
ಶೀಜಾರ ಸಹೋದರ ರತೀಶನ್ ಮರ ಹತ್ತಿ ಗೊನೆ ಕತ್ತರಿಸುವಾಗ ಆಕಸ್ಮಿಕವಾಗಿ ತನ್ನ ಕೈಯ ನಾಡಿಯನ್ನು ಕತ್ತರಿಸಿಕೊಂಡನು. ಒಂದೇ ಸಮನೆ ರಕ್ತ ಸೋರುತ್ತಿದ್ದುದರಿಂದ ಮರದಿಂದ ಇಳಿಯಲು ಭಯಗೊಂಡು ಅಲ್ಲೇ ಕುಳಿತನು. ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡು ಮರದಿಂದ ಕೆಳಕ್ಕೆ ಬಿದ್ದು ತೀರಿಕೊಂಡನು. ಆ ಘಟನೆಯನ್ನು ಶೀಜಾ ಯಾವತ್ತೂ ಮರೆಯಲಾರರು. ಆದರೆ, ಸಂಸಾರ ನಡೆಸುವ ಸಲುವಾಗಿ ಶೀಜಾ ಈಗ ತಾನೇ ಸ್ವತಃ ಆ ಕೆಲಸ ಮಾಡುವುದು ಅನಿವಾರ್ಯವಾಯಿತು.

ಶೀಜಾ ಮೊದಲಿಗೆ ಚಿಕ್ಕ ಚಿಕ್ಕ ಮರಗಳನ್ನು ಹತ್ತಿ ಅಭ್ಯಾಸ ಮಾಡತೊಡಗಿದರು. ಜಯಕುಮಾರ್‌ ಕೆಳಗೆ ನಿಂತು ಆಕೆಗೆ ಮರ ಹತ್ತುವ ತರಬೇತಿ ನೀಡಿದರು. ತುಸು ಎತ್ತರದ ಮರ ಹತ್ತಿದಾಗ ಅವರಿಗೆ ತಲೆ ಸುತ್ತು ಬರುವಂತಾಯಿತು. ಕೆಲವು ಬಾರಿ ಕಾಲೂ ಜಾರಿತು. ತುದಿಯಲ್ಲಿದ್ದಾಗ ಜೋರು ಗಾಳಿ ಬೀಸುವಾಗ ಭಯಗೊಳ್ಳುತ್ತಿದ್ದರು. ಆದರೆ, ಕುಟುಂಬದ ನಿರ್ವಹಣೆಯ ಅನಿವಾರ್ಯತೆ ಅವರಿಗೆ ಆ ಭಯವನ್ನು ಮೆಟ್ಟಿ ನಿಲ್ಲಲು ಧೈರ್ಯ ನೀಡಿತು. ಶೀಜಾ ಮರ ಹತ್ತುವ ಅಭ್ಯಾಸ ಮಾಡುವ ಜೊತೆಯಲ್ಲಿ ಅಕ್ಕಪಕ್ಕದವರ ಗೇಲಿ, ಕುಹಕಗಳನ್ನೂ ಎದುರಿಸುವುದನ್ನು ಕಲಿತುಕೊಳ್ಳಬೇಕಾಯಿತು. ಆ ಕಾರಣಕ್ಕಾಗಿಯೇ ಅವರು ಮೊದ ಮೊದಲು ಜನರ ಕಣ್ಣು ತಪ್ಪಿಸಿ ಮರ ಹತ್ತುತ್ತಿದ್ದರು. ಹೀಗೆ, ಹಲವು ದಿನಗಳ ಅಭ್ಯಾಸದ ನಂತರ, 25-30 ಅಡಿಗಳ ಎತ್ತರದ ಮರಗಳನ್ನು ಹತ್ತುವಲ್ಲಿ ಯಶಸ್ವಿಯಾದರು. ನಂತರ, ತಾನಿನ್ನು ಗಂಡನಂತೆಯೇ ಸಲೀಸಾಗಿ ತೆಂಗಿನ ಮರವನ್ನು ಹತ್ತಿ ಇಳಿಯಬಲ್ಲೆ ಎಂಬ ಧೈರ್ಯ ಬಂದ ಮೇಲೆ, 2019ರಲ್ಲಿ ಕಣ್ಣೂರಿನ ‘ಕೂತುಪರಂಬಾ ಎಕ್ಸೆಸ್ ರೇಂಜ್’ ನಿಂದ ಮೂರ್ತೆದಾರಿಕೆಯ ಲೈಸನ್ಸ್ ಪಡೆದರು.

ಶೀಜಾ ಈಗ ಒಬ್ಬರು ವೃತ್ತಿಪರ ಮೂರ್ತೆದಾರಳು. ಬೆಳಿಗ್ಗೆ ನಾಲ್ಕು ಅವರ ದಿನ ಶುರುವಾಗುತ್ತದೆ. ಗಂಡ ಮತ್ತು ಮಕ್ಕಳಿಗೆ ಬೆಳಿಗ್ಗೆಯ ತಿಂಡಿ ಮಾಡಿಟ್ಟು, ಅರುಕತ್ತಿ, ಸೇಂದಿ ಸಂಗ್ರಹಿಸುವ ಹಂಡೆ ಮತ್ತು ಮರ ಹತ್ತಲು ಬೇಕಾದ ಪರಿ%E

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago