ಅಂಕಣಗಳು

ಮಾನವ ಸರಪಳಿ ಎಂಬ ಪ್ರಜಾಪ್ರಭುತ್ವದ ಅರಿವಿನ ಯಾನ

ಡಾ. ಎಸ್‌.ಕೆ. ಮಂಜುನಾಥ್‌, ತಿಪಟೂರು

ಭಾರತದ ನೆಲದ ಗುಣವೇ ಸಹೋದರತೆ, ಸಹಬಾಳ್ವೆಯಿಂದ ಜನರು ಜೀವಿಸುವುದು. ಸಂವಿಧಾನ ಜಾರಿಯಾದಾಗ ಅನೇಕ ಬದಲಾವಣೆ, ಪರಿವರ್ತನೆಗಳನ್ನು ಕಾಣಲು ಸಾಧ್ಯವಾಯಿತು. ‘ಭಾರತ ಸಂವಿಧಾನ’ದ ಪೀಠಿಕೆಯೇ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ಎತ್ತಿಹಿಡಿದಿದೆ. ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವದ ಗಣರಾಜ್ಯವಾಗಿ ರಚಿಸಲು ಸಮಸ್ತ ನಾಗರಿಕರಿಗೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃ ಭಾವನೆ, ವ್ಯಕ್ತಿಗೌರವ, ರಾಷ್ಟ್ರದ ಏಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸುವುದಾಗಿದೆ’ ಹೀಗೆ ಎಲ್ಲ ರೀತಿಯಿಂದಲೂ ಕೂಡ ಸರ್ವಧರ್ವ ಸಮನ್ವಯತೆಯು ಭಾರತದ ಆತ್ಮವಾಗಿದೆ

‘ಯಾವುದೇ ರಕ್ತಪಾತವಿಲ್ಲದೆ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿ ಕಾರಿ ಬದಲಾವಣೆಗಳನ್ನು ತರುವ ಸರ್ಕಾರದ ಒಂದು ಸ್ವರೂಪ ಮತ್ತು ವಿಧಾನವೇ ಪ್ರಜಾಪ್ರಭುತ್ವ’ ಎಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ. ಪ್ರಜಾಪ್ರಭುತ್ವದ ಸೌಂದರ್ಯವಿರುವುದೇ ಜನರು ಪಾಲ್ಗೊಳ್ಳುವಿಕೆಯ ಸಹಭಾಗಿತ್ವದಲ್ಲಿ. ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವು ಇದೇ ಸೆಪ್ಟೆಂಬರ್೧೫ ರಂದು ಮತ್ತೊಮ್ಮೆ ಎದುರಾಗಿದೆ. ‘ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ’ದ ಮಹತ್ವ, ಇಂದಿನ ಅಗತ್ಯವೂ, ಅನಿ ವಾರ್ಯವೂ ಆಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ತಮಗೆ ಬೇಕಾದ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡು ಆಡಳಿತ ನಡೆಸುವ ವಿಧಾನವೇ ಪ್ರಜಾಡಳಿತ ಅಥವಾ ಪ್ರಜಾಪ್ರಭುತ್ವವಾಗಿದೆ.

 

ಮಾನವ ವಿರೋಧಿ ನಡೆಗಳಾದ ಸರ್ವಾಧಿಕಾರಿತನ, ಧಾರ್ಮಿಕ ಹಿಂಸೆ, ಜಮೀನ್ದಾರಿ ಪದ್ಧತಿಗೆ ಎದುರಾಗಿ ಪ್ರಜಾ ಪ್ರಭುತ್ವ ವನ್ನು ರೂಪಿಸಿಕೊಂಡಿದ್ದು ಜನ ಬದುಕಿನ ಹೋರಾಟವೇ ಆಗಿದೆ. ಈ ನಿಟ್ಟಿನಲ್ಲಿ ‘Indian Parlimentary Union (IPU)’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ೧೮೮೬ರಲ್ಲಿ ಸ್ಥಾಪನೆಯಾಯಿತು. ಇದು ೧೭೬ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಕೂಡ ಇದರ ಸದಸ್ಯ ರಾಷ್ಟ್ರವಾಗಿದೆ. IPU ಸಂಸ್ಥೆಯು ‘ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾಯಿತು. ಇದರ ಕೇಂದ್ರ ಕಚೇರಿಯು ಸ್ವಿಟ್ಜರ್‌ಲ್ಯಾಂಡಿನ ಜಿನೀವಾದಲ್ಲಿದೆ. IPUವಿನ ಸದಸ್ಯರಾಷ್ಟ್ರಗಳು ೧೯೯೭ ಸೆಪ್ಟೆಂಬರ್೧೫ ರಂದು ಸಭೆಯನ್ನು ಸೇರಿ ಸೆಪ್ಟೆಂಬರ್ ೧೫ನೇ ತಾರೀಖನ್ನು “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಎಂದು ಘೋಷಿಸಲು ನಿರ್ಧರಿಸಿದವು. ಮುಂದಿನ ಅನುಮೋದನೆ ಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾ ಯಿತು. ೨೦೦೭ ಸೆಪ್ಟೆಂಬರ್ ೧೫ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಣೆಯ ನಿರ್ಣಯವನ್ನು ವಿಶ್ವಸಂಸ್ಥೆಯು ಅಂಗೀಕರಿಸಿತು. ಹಾಗಾಗಿ IPU ಸಂಸ್ಥೆಯು ೧೫ ಸೆಪ್ಟೆಂಬರ್ ೨೦೦೮ ರಂದು ಮೊದಲ ಬಾರಿಗೆ ‘ಅಂತಾ ರಾಷ್ಟ್ರೀಯ ಪ್ರಜಾಪ್ರಭುತ್ವ’ ದಿನವನ್ನು ಮೂರು ತತ್ವಗಳೊಂದಿಗೆ ಆಚರಿಸಲು ಮುಂದಾಯಿತು.

ಮುಖ್ಯವಾಗಿ, ೧. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಸರ್ಕಾರಗಳ ಮರುಚಿಂತನೆ ೨. ಸಂಸತ್ತಿನ ಘನತೆಯನ್ನು ಎತ್ತಿಹಿಡಿಯುವುದು ೩. ನ್ಯಾಯವನ್ನು ಎತ್ತಿಹಿಡಿಯುವ ಸಂಸತ್ತಿನ ಘನತೆ ಯನ್ನು ಸಂಭ್ರಮದಿಂದ ಆಚರಿಸುವುದು. ಈ ಮೂರು ತತ್ವಗಳೊಂದಿಗೆ ಮೊದಲು ಆಚರಿಸಿತು. ಹೀಗೆ ಪ್ರತಿವರ್ಷವೂ ಕೂಡ ಒಂದೊಂದು ಥೀಮ್‌ನೊಂದಿಗೆ ಆಚರಿಸುತ್ತಾ ಬರಲಾ ಗಿದೆ. ಭಾರತವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ವಿಶ್ವದ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ‘ಅಂತಾ ರಾಷ್ಟ್ರೀಯ ಪ್ರಜಾಪ್ರಭುತ್ವ’ ದಿನವನ್ನು ೨೦೨೩ ಸೆಪ್ಟೆಂಬರ್೧೫ ರಂದು ಆಚರಿಸಿತು. ‘ಸಂವಿಧಾನದ ಪೀಠಿಕೆಯ ಓದು’ ಅಭಿಯಾನದ ಮೂಲಕ ಜನಸಾಮಾನ್ಯರಿಗೂ ಪ್ರಜಾ ಪ್ರಭುತ್ವದ ಮಹತ್ವವನ್ನು ತಲುಪಿಸಲು ಮುಂದಾಯಿತು. ಹಾಗಾಗಿ ಭಾರತ ಪ್ರಜಾಪ್ರಭುತ್ವಗೊಂಡ ನಂತರ ‘ಅಂತಾ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಿದ್ದು ಚಾರಿತ್ರಿಕ ವಾದದ್ದು.

 

ಏಕೆಂದರೆ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ವನ್ನು, ಸಂವಿಧಾನವನ್ನು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟವಾಗಿರು ವುದೇ ನಮ್ಮ ಭಾರತ ದೇಶವಾಗಿದೆ. ಭಾರತದ ನೆಲವು ಪ್ರಜಾಸತ್ತಾತ್ಮಕ ಗುಣವನ್ನು ತನ್ನ ಒಡಲಲ್ಲೇ ಹೊಂದಿದೆ. ಈ ನೆಲವು ಕಾರುಣ್ಯಕ್ಕಾಗಿ ಮಿಡಿಯು ತ್ತದೆ. ಅದಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅವರ ಕೊಡುಗೆಗಳು ಮತ್ತು ಸಾಮಾನ್ಯ ಜನರ ಬದುಕಿನ ಕ್ರಮಗಳೇ ಸಾಕ್ಷಿಯಾಗಿವೆ. ಬುದ್ಧ ಗುರುವಿನ ಸಂಘದ ಪರಿಕಲ್ಪನೆಯಲ್ಲೇ ಪ್ರಜಾಪ್ರಭುತ್ವದ ಆಶಯವಿದೆ. ಕನ್ನಡದ ನೆಲದಲ್ಲಿ ರೂಪುಗೊಂಡ ವಚನ ಚಳವಳಿ ಮತ್ತು ಅದರ ಭಾಗವಾಗಿ ಮೂಡಿಬಂದ ‘ಅನುಭವ ಮಂಟಪ’ವು ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಪಾದಿಸಿವೆ. ಸಾಮಾಜಿಕ ಚಲನೆಯನ್ನು ಮಾನವೀಯತೆಯ ನೆಲೆಯಲ್ಲಿ ರೂಪಿಸಿದೆ. ಆನಂತರದಲ್ಲಿ ರಾಜಪ್ರಭುತ್ವವಿದ್ದ ಮೈಸೂರು ಸಂಸ್ಥಾನದಲ್ಲಿ ‘ಪ್ರಜಾಪ್ರತಿನಿಽ ಸಭೆ’ ಆರಂಭಿಸುವ ಮೂಲಕ ಪ್ರಜೆಗಳಿಗೆ ಇರಬೇಕಾದ ಮಹತ್ವವನು ತಿಳಿಸಿದೆ. ಇದಲ್ಲದೆ, ಸ್ವಾತಂತ್ರ್ಯ ಚಳವಳಿಯು ರಾಜಪ್ರಭುತ್ವ, ಪರಕೀಯತೆಯ ವಿರುದ್ಧ ಜನತೆಯ ಆಶೋತ್ತರವಾಗಿ ಭಾರತ ದಾದ್ಯಂತ ಜನಮಾನಸದಲ್ಲಿ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಬಂಡಾಯದ ಕಿಡಿಯು ಬೆಳಕಾಗಿ ಉರಿಯುತ್ತಿದೆ.

ಇದಕ್ಕೆಲ್ಲ ಕಿರೀಟಪ್ರಾಯ ದಂತೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವನ್ನು ಕಟ್ಟುವುದು ಹೇಗೆ? ಎಂಬುದಕ್ಕೆ ನಿದರ್ಶನವಾಗಿ ಭಾರತದ ಸಂವಿಧಾನವನ್ನು ಈ ನೆಲದ ಗುಣಸ್ವಭಾವಕ್ಕೆ ತಕ್ಕಂತೆ ಕೊಡುಗೆಯಾಗಿ ನೀಡಿದರು. ಇವರು ಮೂರು ರೀತಿಯ ಪ್ರಜಾಪ್ರಭುತ್ವ ವನ್ನು ಪ್ರತಿಪಾದಿಸಿದರು. ೧. ಸಂಸದೀಯ ಪ್ರಜಾಪ್ರಭುತ್ವ ೨. ಸಾಮಾಜಿಕ ಪ್ರಜಾಪ್ರಭುತ್ವ ೩. ಆರ್ಥಿಕ ಪ್ರಜಾಪ್ರಭುತ್ವ ಸಂಸದೀಯ ಪ್ರಜಾಪ್ರಭುತ್ವವು ‘ಒಂದು ವೋಟು ಒಂದು ಮೌಲ್ಯ’ವನ್ನು ಪ್ರತಿಪಾದಿಸುತ್ತದೆ. ಸಾಮಾಜಿಕ ಪ್ರಜಾಪ್ರಭು ತ್ವವು ಅಸ್ಪೃಶ್ಯತೆ, ಲಿಂಗಭೇದ, ಕೋಮುಭಾವನೆ ಮುಂತಾ ದವುಗಳಿಗೆ ಮುಲಾಮು ಹುಡುಕಲು ಪ್ರಯತ್ನಿಸಿತು. ಆರ್ಥಿಕ ಪ್ರಜಾಪ್ರಭುತ್ವವು ವರ್ಗ ಅಸಮಾನತೆ, ಬಂಡವಾಳ ಶಾಹಿ, ಕಾರ್ಮಿಕರ ಸಂಘರ್ಷ, ಶ್ರೀಮಂತ-ಬಡವ, ಉಳ್ಳವರು-ಇಲ್ಲದವರ ನಡುವಿನ ಸಮಾನತೆಗಾಗಿ ಸಾಂವಿಧಾನಿಕ ಅಗತ್ಯ ಕುರಿತು ಚಿಂತಿಸಿದೆ. ಭಾರತದ ನೆಲದ ಗುಣವೇ ಸಹೋದರತೆ, ಸಹಬಾಳ್ವೆ ಯಿಂದ ಜನರು ಜೀವಿಸುವುದು.

 

ಸಂವಿಧಾನ ಜಾರಿಯಾ ದಾಗ ಅನೇಕ ಬದಲಾವಣೆ, ಪರಿವರ್ತನೆಗಳನ್ನು ಕಾಣಲು ಸಾಧ್ಯವಾಯಿತು. ‘ಭಾರತ ಸಂವಿಧಾನ’ದ ಪೀಠಿಕೆಯೇ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ಎತ್ತಿಹಿಡಿದಿದೆ. ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾ ವದ ಗಣರಾಜ್ಯವಾಗಿ ರಚಿಸಲು ಸಮಸ್ತ ನಾಗರಿಕರಿಗೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃ ಭಾವನೆ, ವ್ಯಕ್ತಿಗೌರವ, ರಾಷ್ಟ್ರದ ಏಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸುವುದಾಗಿದೆ’ ಹೀಗೆ ಎಲ್ಲ ರೀತಿಯಿಂದಲೂ ಕೂಡ ಸರ್ವಧರ್ಮ ಸಮನ್ವಯತೆಯು ಭಾರತದ ಆತ್ಮವಾಗಿದೆ. ಈ ಆತ್ಮವನ್ನು ಕಳೆದುಕೊಂಡರೆ ನಾವೆಲ್ಲರೂ ಜೀವಚ್ಛವಗಳಾಗಿ ಬದುಕಬೇಕಾಗುತ್ತದೆ.

 

ಇದಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಯಾರೇ ಮಾಡಿ ದರೂ ಒಕ್ಕೊರಲಿನಿಂದ ಕೂಗಿ ಹಿಮ್ಮೆಟ್ಟಿಸುವ ಪ್ರಯತ್ನವನ್ನು ಈ ನಾಡಿನ ಪ್ರಜ್ಞಾವಂತರು, ಸಮಸಮಾಜದ ಕನಸು ಗಾರರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಸಂವಿಧಾನ ವಿರೋಧಿ ನಡೆಗಳಿಗೆ ಚಲನಶೀಲವಾಗಿಯೇ ಪ್ರತಿಕ್ರಿಯಿಸುತ್ತ ಸಾಮಾನ್ಯ ಜನರಿಗೆ ಹತ್ತಿರ ಸಂವಿಧಾನದ ಮಹತ್ವ, ಅಗತ್ಯ, ಅನಿವಾರ್ಯತೆಗಳನ್ನು ಮನದಟ್ಟು ಮಾಡಿ ದ್ದಾರೆ. ಗುಲಾಮಗಿರಿಯಿಂದ ಸ್ವಾಭಿಮಾನದ ಬದುಕನ್ನು ಜೀವಿಸಲು ಕಣ್ಣಮುಂದಿನ ಬೆಳಕಾಗಿ ಇರುವುದು ಭಾರತದ ಸಂವಿಧಾನ. ಸಂವಿಧಾನದ ಮೂಲಕ ಕಟ್ಟಿಕೊಂಡಿರುವ ಪ್ರಜಾ ಪ್ರಭುತ್ವದ ಸೌಂದರ್ಯದ ಬೆಡಗು-ಬೆರಗು. ‘ಸಂವಿಧಾನ ಓದು’ ಅಭಿಯಾನಕ್ಕಾಗಿ ನ್ಯಾ. ಎಚ್. ಎನ್. ನಾಗ ಮೋಹನ್ ದಾಸ್ ಅವರು ಕನ್ನಡ ನೆಲದ ತುಂಬೆಲ್ಲಾ ಹಗಲಿರಳು ಎನ್ನದೇ ಸುತ್ತಾಡಿ ತನ್ನ ಆರೋಗ್ಯವನ್ನೂ ಲೆಕ್ಕಿಸದೆ ಆರೋಗ್ಯಕರ ಸಮಾಜ ಕಟ್ಟುವ ನಿಟ್ಟಿನಲ್ಲಿ ದುಡಿದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹೀಗೆ ಸಮ ಸಮಾಜದ ನಿರ್ಮಾತೃಗಳು, ಸಂವಿಧಾನ ಪ್ರಿಯರು, ಒಂದರ್ಥದಲ್ಲಿ ನಿಜವಾದ ಭಾರತೀಯರು ಯಾವಾಗಲೂ ಸಮಾನತೆ, ಸಹೋದರತೆ, ಸಹಬಾಳ್ವೆಗೆ ದುಡಿಯುತ್ತಲೇ ಇದ್ದಾರೆ.

 

ಘನತೆಯಿಂದ ಬದುಕಲು ಪ್ರತಿಯೊಬ್ಬ ರಿಗೂ ಅವಕಾಶ ಮಾಡಿಕೊಟ್ಟ ‘ಭಾರತದ ಸಂವಿಧಾನ’ವೇ ನಿಜವಾದ ಅರ್ಥದಲ್ಲಿ ಭಾರತೀಯರ ಧರ್ಮಗ್ರಂಥವಾ ಗಿದೆ. ಭಾರತೀಯತೆ ಧರ್ಮವಾಗಿದೆ. ‘ನಾವು ಸಂವಿಧಾನ ವನ್ನು ಉಳಿಸಿದರೆ, ಸಂವಿಧಾನವು ನಮ್ಮನ್ನು ಉಳಿಸುತ್ತದೆ’ ಇದೇ ನಮ್ಮ ಘೋಷವಾಕ್ಯವಾಗಿ ಬಾಳ ಸಂವಿಧಾನ ವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಕರ್ನಾಟಕ ಸರ್ಕಾರವು ಇಡೀ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ೨೦೨೩ ಸೆಪ್ಟೆಂಬರ್೧೫ ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿತು. ಈಗ ಮತ್ತೊಮ್ಮೆ ಬೀದರ್‌ನಿಂದ ಚಾಮರಾಜನಗರದವರೆಗೆ ‘ಬನ್ನಿ ಪ್ರಜಾಪ್ರಭುತ್ವಕ್ಕಾಗಿ ಕೈಜೋಡಿಸೋಣ’ ಅಂತ ಸುಮಾರು ೨,೫೦೦ ಕಿ. ಮೀ. , ೨೫ ಲಕ್ಷ ಜನರು, ೧೦ ಲಕ್ಷ ಸಸಿಗಳು, ೫,೦೦೦ ಪೀಠಿಕೆಗಳ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ಸಂತಸದ ಸಂಗತಿ. ಇಂದು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬೆಳವಣಿಗೆಗಾಗಿ ಜನರನ್ನು ಜಾಗೃತಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಈ ನಿಟ್ಟಿನಲ್ಲಿ ಮಾನವ ಸರಪಳಿ ಎಂಬುದು ಅತ್ಯುತ್ತಮ ಪರಿಕಲ್ಪನೆಯಾಗಿದೆ. ಸಂವಿಧಾನದ ಮೂಲ ಪರಿಕಲ್ಪನೆಯೆಂದರೆ, ಭ್ರಾತೃತ್ವದಿಂದ ಬಾಳುವುದು. ಮಾನವ ಸರಪಳಿ ಎಂಬುದು ಬಂಧುತ್ವವನ್ನು ಪ್ರತಿನಿಧಿಸುತ್ತದೆ. ಬಹುತ್ವ ಭಾರತಕ್ಕೆ ಸಮಾನತೆಯ ಸಂವಿಧಾನ ನೀಡಿದ ಮಹಾಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ’ ದಿನವನ್ನು ಜವಾಬ್ದಾರಿಯಿಂದ,

 

andolana

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

1 hour ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

1 hour ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

3 hours ago