ಅಂಕಣಗಳು

ಹಿರಿಯರು ಮುಗ್ಗರಿಸದ ಹಾಗೆ ಮನೆಯವರು ಜಾಗ್ರತೆ ವಹಿಸಿ‌

ಡಾ.ದುಷ್ಯಂತ್.ಪಿ.

ನಾವು ಇದನ್ನು ಎಲ್ಲೆಡೆ ಕೇಳಿರುತ್ತೇವೆ. ‘ನಮ್ಮ ಅತ್ತೆ ಬಚ್ಚಲಲ್ಲಿ ಕಾಲುಜಾರಿ ಬಿದ್ದುಬಿಟ್ಟರು‘, ‘ನಮ್ಮ ತಂದೆ ಮೆಟ್ಟಿಲು ಇಳಿಯಬೇಕಾದರೆ ಬಿದ್ದರು‘, ‘ಅವರಿಗೆ ಮೂಳೆ ಮುರಿದಿದೆ, ಅಪರೇಷನ್ ಮಾಡುತ್ತಾರೋ, ಏನೋ ಗೊತ್ತಿಲ್ಲ. ಎಲ್ಲ ಕಡೆ ಚೆನ್ನಾಗಿ ಓಡಾಡಿಕೊಂಡಿದ್ರು ಇವಾಗ ಹೀಗೆ ಆಗಿಹೊಯ್ತು‘.

ಬೀಳುವುದರ ಬಗ್ಗೆ ನಾವು ಅಷ್ಟಾಗಿ ಗಮನ ನೀಡದಿದ್ದರೂ ಇದೊಂದು ಗಂಭೀರ ಆರೋಗ್ಯ ಸಮಸ್ಯೆ. ಅದರಲ್ಲೂ ಹಿರಿಯರಲ್ಲಿ ಇದು ದೈಹಿಕ ತೊಂದರೆ ಮಾತ್ರವಲ್ಲದೆ ಮಾನಸಿಕವಾಗಿಯೂ ಅವರನ್ನು ಕಾಡುತ್ತದೆ.

ಮನೆಯಲ್ಲಿ ವೃದ್ಧ ದಂಪತಿ ಇಬ್ಬರೇ ವಾಸಿಸುತ್ತಿದ್ದರು. ಗಂಡ ಮನೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಮೂಳೆ ಮುರಿದಿದ್ದು ಖಚಿತವಾಗಿತ್ತು. ಮೂಳೆ ಮುರಿದ ಜಾಗ, ವಯಸ್ಸು ಮತ್ತು ಅವರಿಗಿದ್ದ ಇತರೆ ಕಾಯಿಲೆಗಳಿಂದಾಗಿ ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಮುರಿದ ಜಾಗಕ್ಕೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಅಂದರೆ ಎರಡು ತಿಂಗಳು ಹಾಸಿಗೆ ಹಿಡಿಯಬೇಕು. ಮನೆಯಲ್ಲಿ ನೋಡಿಕೊಳ್ಳಲು ಇವರ ಮಡದಿ ಒಬ್ಬರೇ, ಅವರೂ ವೃದ್ದರೇ, ಅವರಿಗೂ ಕಾಯಿಲೆಗಳು. ಮನೆಯಲ್ಲಿನ ಹೆಚ್ಚಿನ ಕೆಲಸ ಹಾಗೂ ದಿನಸಿ, ತರಕಾರಿ ತರುವುದು ಎಲ್ಲವನ್ನು ಇವರ ಗಂಡನೇ ಮಾಡುತ್ತಿದ್ದರಿಂದ ಈಗ ಇವರಿಗೆ ಸಂಕಷ್ಟದ ಸ್ಥಿತಿ. ಅಕ್ಕಪಕ್ಕದವರ ಸಹಾಯ ಎಷ್ಟು ದಿನ? ಮೂಳೆ ಮುರಿತದ ನೋವು ಒಂದೆಡೆಯಾದರೆ ನಿತ್ಯ ಜೀವನದ ಸಂಕಷ್ಟ ಇನ್ನೊಂದು ಕಡೆ.

ವಯೋವೃದ್ಧರಲ್ಲಿ ‘ಬೀಳುವುದು’ ಗಂಭೀರ ಸಮಸ್ಯೆ ಇದಕ್ಕೆ ಕಾರಣಗಳು ಹಲವು. ಕೆಲವೊಮ್ಮೆ, ಜಾರುವ ನೆಲ, ಎತ್ತರದ ಮೆಟ್ಟಿಲು, ಹಿಡಿಯಲು ಆಧಾರ ಇಲ್ಲದಿರುವುದು ಕಾರಣವಾಗಬಹುದು. ಹಾಗೆೆಯೇ ನಮ್ಮ ದೇಹದಲ್ಲಿರುವ ಇತರ ರೋಗಗಳು ಸಹ ಬೀಳುವುದಕ್ಕೆ ಕಾರಣವಾಗುತ್ತವೆ. ವೃದ್ಧರಲ್ಲಿ ಉಂಟಾಗುವ ದೃಷ್ಟಿ ದೋಷಗಳು (ಕಣ್ಣಿನ ಪೊರೆ, ರೇಟಿನ ಸಮಸ್ಯೆ), ನರರೋಗ ಸಂಬಂಧಿ ಖಾಯಿಲೆಗಳು (ಪಾರ್ಕಿನ್ಸನ್, ನ್ಯೂಕ್), ಮೂಳೆಗಳ ಸವೆಯುವಿಕೆ (ಓನ್ವಯೋಪೋರೂಸಿಸ್), ರಕ್ತದಲ್ಲಿ ಕಿಣ್ವಗಳ ಏರುಪೇರು (electrolyte imbalance), ಒಳಕಿವಿಯಲ್ಲಿನ ತೊಂದರೆಯಿಂದಾಗಿ ದೇಹದ ಸಮತೋಲನ ತಪ್ಪುವುದು (vertigo) ಇವುಗಳೆಲ್ಲವೂ ಬೀಳುವುದಕ್ಕೆ ಕಾರಣವಾಗಬಹುದು.

ಬೀಳುವಿಕೆಯಿಂದಾಗಿ ಉಂಟಾಗುವ ದೈಹಿಕ ತೊಂದರೆಯಿಂದಾಗಿ ವೃದ್ಧರ ಚಲನಶೀಲತೆ ಕಡಿಮೆಯಾಗುತ್ತದೆ. ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಹೊಸದಾಗಿ ಬರಬಹುದು ಅಥವಾ ಈಗಾಗಲೇ ಇರುವ ಕಾಯಿಲೆಗಳು ಉಲ್ಬಣಿಸಬಹುದು. ಚಲನಶೀಲತ ಕಡಿಮೆಯಾಗಿ, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ನಿಯಂತ್ರಣ ಕಳೆದುಕೊಳ್ಳುತ್ತದೆ. ಮಲಬದ್ಧತೆ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ, ನೋಂಕು, ಕೀಲುಗಳಲ್ಲಿ ನೋವು, ಅಸ್ತಮಾ ಮತ್ತು ಉಸಿರಾಟದ ಸಮಸ್ಯೆ ಹೆಚ್ಚಾಗುವುದು, ಸದಾಕಾಲ ಹಾಸಿಗೆಯಲ್ಲಿ ಮಲಗಿರುವುದರಿಂದ ಚರ್ಮದಲ್ಲಿ ಹುಣ್ಣು, ಭ್ರಮೆ ಮತ್ತು ಮರೆವು (delirium and dementia) ಉಂಟಾಗಬಹುದು.

ಬೀಳುವಿಕೆಯನ್ನು ತಡೆಯಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬಹುದು. ತಮಲ್ಲಿರುವ ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ನರರೋಗ ಸಂಬಂಧಿ ಸಮಸ್ಯೆಗಳಿಗೆ ಸರಿಯಾದ ಮತ್ತು ನಿಯಮಿತವಾದ ಚಿಕಿತ್ಸೆ, ಬೀಳುವಿಕೆಯ ಸಂಭವವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು, ಒಮ್ಮೆ ಬೀಳುವ ಹಾಗೆ ಅನುಭವ ಆಗಿದ್ದು, ವೈದ್ಯರಲ್ಲಿ ಇದರ ಬಗ್ಗೆ ತಿಳಿಸಿ, ಸಂಪೂರ್ಣ ಪರೀಕ್ಷೆಗೆ ಒಳಪಟ್ಟು ಅದಕ್ಕಿರುವ ಕಾರಣಗಳನ್ನು ನಿವಾರಿಸುವುದು, ಹೊರಗಡೆ ಓಡಾಡುವಾಗ ಎಚ್ಚರಿಕೆ ವಹಿಸುವುದು. ಮನೆಯಲ್ಲಿ ಜಾರುವ ನೆಲ, ಎತ್ತರದ ಮೆಟ್ಟಿಲುಗಳನ್ನು ಸರಿಪಡಿಸುವುದು, ಬಚ್ಚಲುಮನೆ ಮತ್ತು ಓಡಾಡುವ ಜಾಗಗಳಲ್ಲಿ ಹಿಡಿಕೆಗಳನ್ನು ಅಳವಡಿಸುವುದು, ಅಗತ್ಯಬಿದ್ದಾಗ ಊರುಗೋಲು ಅಥವಾ ವಾಕರ್ ಬಳಸುವುದು ತುರ್ತು ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಯೋಜನೆಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳುವುದು.

ಹೀಗೆ ಹಲವು ಎಚ್ಚರಿಕೆಗಳ ಮೂಲಕ ಬೀಳುವುದನ್ನು ತಡೆಯಬಹುದು. ಬೀಳುವಿಕೆಗೆ ಚಿಕಿತ್ಸೆಗೆ ಹಲವು ಆಯಾಮಗಳು, ವೈದ್ಯಕೀಯ ಚಿಕಿತ್ಸೆ ಅಲ್ಲದೆ, ದೀರ್ಘಕಾಲ ಆರೈಕೆ ಮತ್ತು ಶುಶ್ರೂಷೆ ಅಗತ್ಯ. ಇದರಲ್ಲಿ ಕುಟುಂಬದ ಜವಾಬ್ದಾರಿ ಹೆಚ್ಚಾಗಿರುತ್ತದೆ ಮತ್ತು ಕುಟುಂಬದ ಸಹಾಯವಿಲ್ಲದ ಸಂದರ್ಭದಲ್ಲಿ ಸಮಾಜ ಕೂಡ ವೃದ್ಧರ ನೆರವಿಗೆ ಬರಬೇಕಾಗುತ್ತದೆ. ಇದರಲ್ಲಿ ನಮ್ಮೆಲ್ಲರ ಪಾತ್ರ ಮತ್ತು ಕಳಕಳಿ ಬಹಳ ಮುಖ್ಯ.

andolanait

Recent Posts

ಮೋಟಾರ್ ವಾಹನ ಸೆಸ್ ಕೈಬಿಟ್ಟ ಮೈಸೂರು ಮಹಾನಗರ ಪಾಲಿಕೆ

ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…

43 seconds ago

ದಿಢೀರ್‌ ಕುಸಿದುಬಿದ್ದ ಲೋಕಾಯುಕ್ತ ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…

55 mins ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದಿಷ್ಟು?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…

2 hours ago

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

3 hours ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

3 hours ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

3 hours ago