ಅಂಕಣಗಳು

ಶತಮಾನಗಳು ಕಳೆದಂತೆ ನಲುಗುತ್ತಿರುವ ಹಂಪಿ

• ಅನಿಲ್ ಅಂತರಸಂತೆ

6-7 ಶತಮಾನಗಳ ಹಿಂದೆ ವಿಶ್ವದ ಶ್ರೀಮಂತ ನಗರಗಳಲ್ಲಿ ಒಂದಾಗಿ ಮೆರೆದ ಹಂಪಿ ಈಗ ಹಾಳು ಕೊಂಪೆಯಂತಾಗಿದೆ. ಶತಮಾನಗಳ ಹಿಂದಿನ ವೈಭವ ಕುಂದಿದ್ದು, ಭವ್ಯ ಕಲಾಕೃತಿ, ವಾಸ್ತು ಶಿಲ್ಪ ಭಗ್ನವಾಗಿ ನಿಂತಿವೆ.

1336ರ ವಿದ್ಯಾರಣ್ಯರ ಕಾಲಘಟದಲ್ಲಿ ಮಾರ್ಗ ದರ್ಶನದಂತೆ ಹರಿಹರ, ಬುಕ್ಕರಾಯ ಕಟ್ಟಿ ಬೆಳೆಸಿದ ಸಾಮ್ರಾಜ್ಯವೇ ವಿಜಯನಗರ. ವಿಜಯನಗರದ 2-3 ಶತಮಾನಗಳ ಆಡಳಿತಾವಧಿಯಲ್ಲಿ ಹಂಪಿ ವಿಶ್ವದ ನಾನಾ ಸಾಮ್ರಾಜ್ಯಗಳ ಕಣ್ಣುಕುಕ್ಕುವಂತೆ ವೈಭವದಿಂದ ಮೆರೆದಿತ್ತು. 1565ರಲ್ಲಿ ವಿಜಯನಗರದ ಸುತ್ತಲಿನ ಶತ್ರು ಸುಲ್ತಾನ ಸಾಮ್ರಾಜ್ಯಗಳು ಒಟ್ಟಾಗಿ ನಡೆಸಿದ ತಾಳಿಕೋಟೆ ಕದನದಲ್ಲಿ ವಿಜಯನಗರ ಶರಣಾಗಬೇಕಾಯಿತು. ಯುದ್ಧದಲ್ಲಿ ಸೋತ ಬಳಿಕ
ಪತನದತ್ತ ಸಾಗಿತು. ಕೆಲ ಇತಿಹಾಸದ ದಾಖಲೆಗಳಂತೆ ಅಂದು ಹಂಪಿಯನ್ನು ಆಳಿದ ಮೊಘಲರು ಸುಮಾರು 6 ತಿಂಗಳುಗಳ ಕಾಲ ಹಂಪಿಯ ಸಂಪತ್ತನ್ನು ದೋಚಿದರು, ಹಂಪಿಯ ಕಲಾವೈಭವವನ್ನು ಭಗ್ನ ಮಾಡಿದರು, ಹಂಪಿಗೆ ಬೆಂಕಿಯಿಟ್ಟು ನಾಶ ಮಾಡಿದರು ಎಂಬುದಾಗಿದೆ.

ಕೃಷ್ಣದೇವರಾಯನ ಕಾಲ ದಲ್ಲಿ ಉತ್ತುಂಗದಲ್ಲಿದ್ದ ಹಂಪಿಯ ವೈಭವದ ಬೀದಿ ಬೀದಿಗಳಲ್ಲಿ ವಜ್ರಾಭರಣ ಗಳನ್ನು ತೂಕದ ಮಾದರಿಯಲ್ಲಿ ಮಾರಲಾ ಗುತ್ತಿತ್ತೆಂತೆ. ಅಷ್ಟು ಸಂಪತ್ತನ್ನು ಆರು ತಿಂಗಳುಗಳ ಕಾಲ ಶತ್ರುಗಳು ದೋಚಿದರು ಎಂದರೆ ಹಂಪಿಯ ಆ ವೈಭವವನ್ನು ಊಹಿಸಲು ಅಸಾಧ್ಯ.

ದಕ್ಷಿಣ ಭಾರತವನ್ನು ಒಗ್ಗೂಡಿಸಿ, ಉತ್ತರದ ತುಘಲಕ್, ದೆಹಲಿಯ ಸುಲ್ತಾನರು, ವಿದೇಶಿಯ ಸಾಮ್ರಾಜ್ಯಗಳು ದಕ್ಷಿಣ ಭಾರತದತ್ತ ದಂಡೆತ್ತಿ ಬಾರದಂತೆ ಯಶಸ್ವಿಯಾಗಿ ತಡೆಯುವಷ್ಟರ ಮಟ್ಟಗೆ ಇಲ್ಲಿನ ಆಡಳಿತ ಬಲಿಷ್ಠವಾಗಿತ್ತು. ಹೀಗೆ ದಕ್ಷಿಣ ಭಾರತವನ್ನೇ ಒಂದಾಗಿಸಿದ್ದ ಆಳಿದ ವಿಜಯನಗರ ಸಾಮ್ರಾಜ್ಯ (ಹಂಪಿ) ಪ್ರಸ್ತುತದ ರಾಜ ಕೀಯ ಕಾರಣ ಕ್ಕಾಗಿಯೋ, ಆಡಳಿತದ ಹಿತಕ್ಕಾಗಿ, ಜನರ ಅಭಿ ವೃದ್ಧಿಯ ದೃಷ್ಟಿಯಿಂದಲೋ ಕೊಪ್ಪಳ, ಬಳ್ಳಾರಿ ಎಂಬ ಜಿಲ್ಲೆಗಳಾಗಿ ಬೇಲ್ಪಟ್ಟಿತು. ಇತ್ತೀಚೆಗೆ ಬಳ್ಳಾರಿ ಯಿಂದ ಹೊಸ ಜಿಲ್ಲೆಯೊಂದನ್ನು ಸೃಜಿಸಿ ರಾಜ್ಯದ 31ನೇ ಜಿಲ್ಲೆಯಾಗಿ ಗುರುತಿಸಿ ‘ವಿಜಯನಗರ’ ಎಂಬ ಹೆಸರಿಡಲಾಗಿದೆ.

ಅಂದು ಕೃಷ್ಣಯಿಂದ ತುಂಗಾಭದ್ರಾ, ಕಾವೇರಿಯ ಜಲಾನಯನ ಪ್ರದೇಶದವರೆಗೂ ಹರಡಿದ್ದ ಹಂಪಿ ಈಗ 3 ಭಾಗವಾಗಿದೆ. ಅಂದು ವೈಭವದಿಂದ ಕಂಗೊಳಿಸಿದ್ದ ಈ ಸ್ಥಳ ಈಗ ಅಭಿವೃದ್ಧಿಗಾಗಿ ಹಾತೊರೆಯುತ್ತಿದೆ. ಅಂದು ಜನಸಂಖ್ಯೆಯಲ್ಲಿ ಬೀಜಿಂಗ್ ನಂತರದ ಎರಡನೇ ಸ್ಥಾನದಲ್ಲಿದ್ದ ವಿಜಯನಗರಕ್ಕೆ ಈಗ ಜನಸಂಖ್ಯೆಗೆ ಅನುಗುಣವಾಗುವಂತೆ ಅನುದಾನಗಳನ್ನು ತಂದು ಅಭಿವೃದ್ಧಿಪಡಿಸುವ ಜತೆಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮತ್ತು ಪ್ರತಿ ನಗರಗಳಲ್ಲಿಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರವಾಸಿ ತಾಣಗಳಲ್ಲಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುವುದರೊಂದಿಗೆ ಒಂದಷ್ಟು ಮೂಲಸೌಕರ್ಯಗಳನ್ನು ಒದಗಿಸಿ ಹಂಪಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ.

ಇಲ್ಲಿನ ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತದ ಕಲ್ಲಿನ ಕಂಬಗಳು, ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಆನೆ
ಲಾಯ ಸೇರಿದಂತೆ ಅನೇಕ ತಾಣಗಳು ಹಂಪಿಯ ಆ ದಿನಗಳ ಭವ್ಯ ಇತಿಹಾಸವನ್ನು ಸಾರುತ್ತಿವೆ. ಈ ಸ್ಥಳಗಳಲ್ಲಿ ಒಂದಿಷ್ಟು ಪ್ರವಾಸಿಗರಿಗೆ ಅನುಕೂಲಕರ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ.

ಒಟ್ಟಾರೆ ಕರ್ನಾಟಕದ ಭವ್ಯ ಪರಂಪರೆಯೊಂದು ದುರಂತ ಅಂತ್ಯ ಕಂಡಿದ್ದು, ಹಂಪಿಗೆ ಭೇಟಿ ನೀಡಿದ ಕನ್ನಡಿಗರ ಕಣ್ಣಂಚಲ್ಲಿ ನೀರು ತರಿಸುವುದಂತೂ ನಿಜ. ಸದ್ಯ ಉಳಿದಿರುವ ಹಾಳು ಹಂಪಿಯನ್ನಾದರೂ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಂಪಿ ಇತಿಹಾಸ ಹೇಳುವಂತಾಗಲಿ.

andolanait

Recent Posts

ಓದುಗರ ಪತ್ರ: ಅರಳುವ ಪ್ರತಿಭೆಗಳಿಗೆ ಸಮಯ ಹೆಚ್ಚು ಸಿಗಲಿ

ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…

2 hours ago

ಅಗಲಿದ ದೃಶ್ಯಬ್ರಹ್ಮ ಸಿಂಗೀತಂ, ‘ನಟಸಮ್ರಾಟ್’ ನಾನಾ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…

2 hours ago

ಮಹಾಲಯ ಅಮಾವಾಸ್ಯೆಗೆ ಮ.ಬೆಟ್ಟ ಸಜ್ಜು

ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ  ಹನೂರು: ಮಹಾಲಯ ಅಮಾವಾಸ್ಯೆ…

3 hours ago

ಮಹೇಂದ್ರನ ಸುತ್ತ ಅನುಮಾನದ ಹುತ್ತ!

ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…

3 hours ago

ನಲ್ಲೂರು ಅಮಾನಿ ಕೆರೆಗೆ ಹರಿದು ಬಂದ ನೀರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ  ಗುಂಡ್ಲುಪೇಟೆ:…

3 hours ago

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

17 hours ago