ಅಂಕಣಗಳು

ಸರ್ಕಾರದ ಒತ್ತಾಸೆ, ಚಿತ್ರರಂಗದ ಭರಪೂರ ಚಟುವಟಿಕೆ

೨೦೨೪-೨೫ನೇ ಸಾಲಿನ ಮುಂಗಡಪತ್ರದಲ್ಲಿ ಚಿತ್ರೋದ್ಯಮಕ್ಕೆ ಕೆಲವು ಕೊಡುಗೆಗಳಿದ್ದವು. ಅರ್ಥ ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟಿಟಿ ತಾಣ, ಚಿತ್ರರಂಗಕ್ಕೆ ಉದ್ಯಮದ ಸ್ಥಾನ, ಸಿನಿಮಾ ಭಂಡಾರ, ಪ್ರವೇಶ ದರ ಮುಂತಾದ ವಿಷಯಗಳ ಕುರಿತಂತೆ ಗಮನ ಹರಿಸಿದ್ದಾರೆ.

ಅವುಗಳನ್ನು ಒಂದೊಂದಾಗಿ ಪೂರೈಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಿದ್ದಾರೆ. ಅವು ಕಾರ್ಯೋನ್ಮುಖವಾಗಿವೆ. ಅಲ್ಲಿ ಉದ್ಯಮದ ಪ್ರಾತಿನಿಽಕ ಸಂಸ್ಥೆಗಳ ಮುಖ್ಯರನ್ನು ಪರಿಗಣಿಸದಿರುವ ಬಗೆಗೂ ಮಾತುಗಳಿವೆ. ಅದಿರಲಿ, ಒಟಿಟಿಗೆ ಸಂಬಂಧಪಟ್ಟಂತೆ, ನಿರ್ಮಾಪಕರ ಸಂಘದ ಸ್ವಂತ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸ್ತಾಪವಾಗಿತ್ತು.

ಇದನ್ನು ಮಾಡಿದವರು, ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧುಕೋಕಿಲ ಅವರು. ‘ಇನ್ನು ಆರು ತಿಂಗಳಲ್ಲಿ ಕರ್ನಾಟಕದ್ದೇ ಆದ ಒಟಿಟಿತಾಣ ಕನ್ನಡ ಚಿತ್ರೋದ್ಯಮಕ್ಕೆ ಲಭ್ಯವಾಗಲಿದೆ’ ಎನ್ನುವುದಾಗಿತ್ತು ಅವರ ಆಶ್ವಾಸನೆ. ಆ ದಿಕ್ಕಿನಲ್ಲಿ ಅವರ ಪ್ರಯತ್ನವೂ ಸಾಗಿದಂತಿತ್ತು. ಅದಕ್ಕೆ ಮೂಲ, ನೆರೆಯ ಕೇರಳ ರಾಜ್ಯದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು. ಸಿನಿಮಾ ಸಂಬಂಧಪಟ್ಟಂತೆ ಅಲ್ಲಿ ಅಕಾಡೆಮಿ ಮತ್ತು ಅಭಿವೃದ್ಧಿ ನಿಗಮಗಳಿವೆ. ಚಲನಚಿತ್ರ ಮಾಧ್ಯಮದ ಕುರಿತಂತೆ ಅಕಾಡೆಮಿಯ ಗಮನವಾದರೆ, ಉದ್ಯಮದತ್ತ ನಿಗಮದ ಗಮನ. ನಿಗಮದ ಅಧ್ಯಕ್ಷರಾಗಿ ಶಾಜಿ ಕರುಣ್ ಅವರ ಅಽಕಾರಾವಽಯಲ್ಲಿ ಹತ್ತು ಹಲವು ಕೆಲಸಗಳಾದುವು. ಚಿತ್ರಗಳ ನಿರ್ಮಾಣ (ನಿರ್ದೇಶಕಿಯರಿಗೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ), ಚಿತ್ರಮಂದಿರಗಳ ನಿರ್ಮಾಣ, ಚಿತ್ರಾಂಜಲಿ ಸ್ಟುಡಿಯೊ ಮೇಲುಸ್ತುವಾರಿ ಹೀಗೆ. ಬಹುರಾಷ್ಟ್ರೀಯ ಸಂಸ್ಥೆಗಳ ಒಟಿಟಿಗಳು ಭಾರತೀಯ ಭಾಷಾ ಚಿತ್ರಗಳತ್ತ ಗಮನ ಹರಿಸುವುದು ಕಡಿಮೆ. ಅದರಲ್ಲೂ ಕಲಾತ್ಮಕ, ಸಾಂಸ್ಕೃತಿಕ ಹಿನ್ನೆಲೆಯ ಚಿತ್ರಗಳ ಬಗ್ಗೆ ಅವುಗಳ ಧೋರಣೆಯ ಕಾರಣ ಸರ್ಕಾರ ತಾನೇ ಒಂದು ಒಟಿಟಿ ತಾಣವನ್ನು ಸ್ಥಾಪಿಸುವ ಯೋಜನೆ ನಿಗಮದ್ದಾಗುತ್ತದೆ. ಕಳೆದ ವರ್ಷ ಆ ತಾಣ ಸಿ ಸ್ಪೇಸ್ ಕಾರ್ಯಾರಂಭ ಮಾಡುತ್ತದೆ.

ಇದನ್ನು ಓದಿ : ದಾಖಲೆ ಬರೆದ ದಸರಾ ವೆಬ್‌ಸೈಟ್‌

ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಒಟಿಟಿಗೆ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯದ ಬೆಂಬಲ. ಅರ್ಥಾತ್, ಅಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಸಂಸ್ಕೃತಿ ಇಲಾಖೆಯ ಮೂಲಕ ಆಗುತ್ತಿದೆ. ಅಲ್ಲಿ ಪ್ರಸಾರಕ್ಕೆ ಗುಣಮಟ್ಟದ ಚಿತ್ರಗಳ ಆಯ್ಕೆಗೆ ಚಿತ್ರೋದ್ಯಮದ ಸಂತೋಷ್ ಶಿವನ್, ಸನ್ನಿ ಜೋಸೆಫ್, ಜಿಯೋ ಬೇಬಿ ಸೇರಿದಂತೆ ೬೦ ಮಂದಿ ಸಿನಿಮಾ ತಜ್ಞರ ಸಮಿತಿಯನ್ನು ನೇಮಿಸಲಾಗಿದ್ದು, ಆ ಸಮಿತಿ ಕಾಲಕಾಲಕ್ಕೆ ಚಿತ್ರಗಳನ್ನು ಆಯ್ಕೆ ಮಾಡುತ್ತದೆ.

ಸಿ ಸ್ಪೇಸ್ ಎನ್ನುವುದರಲ್ಲಿನ ಸಿ, ಸಿನಿಮಾ, ಸಂಸ್ಕೃತಿ (ಕಲ್ಚರ್), ಚಿತ್ರಾಂಜಲಿ ಮತ್ತು ಸೃಜನಶೀಲ ಮನರಂಜನೆ (ಕ್ರಿಯೇಟಿವ್ ಎಂಟರ್‌ಟೈನ್‌ಮೆಂಟ್) ಇವುಗಳ ಮೊದಲಕ್ಷರ; ಅದಕ್ಕಿರುವ ಜಾಗ ಸಿ ಸ್ಪೇಸ್! ಸದಭಿರುಚಿಯ, ಗುಣಮಟ್ಟದ ಮನರಂಜನೆಗೆ ಈ ತಾಣ. ಅಲ್ಲಿ ಚಿತ್ರಗಳನ್ನು ವೀಕ್ಷಿಸಲು ಪ್ರತಿ ಚಿತ್ರಕ್ಕೆ ೭೫ ರೂ. ನೀಡಬೇಕು. ತಾಣದ ಗಳಿಕೆಯಲ್ಲಿ ಅರ್ಧದಷ್ಟನ್ನು ನಿರ್ಮಾಪಕರಿಗೆ ನೀಡಲಾಗುತ್ತಿದೆ.

‘ಮಲಯಾಳ ಚಿತ್ರರಂಗದಲ್ಲಿ ಕಲಾತ್ಮಕ ಮತ್ತು ಮುಖ್ಯವಾಹಿನಿ ಚಿತ್ರಗಳಲ್ಲಿ ಅಷ್ಟೇನೂ ಅಂತರವಿಲ್ಲ’ ಎಂದು ಮೊನ್ನೆ ಚಿತ್ರೋದ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ದೇಶ ನೀಡುವ ಅತ್ಯುನ್ನತ ಗೌರವ ಪಡೆದ ನಟ ಮೋಹನ್‌ಲಾಲ್ ಹೇಳಿದ್ದರು. ಅವರಾಗಲೀ, ಮಮ್ಮುಟ್ಟಿ ಅವರಾಗಲೀ, ಉಳಿದ ಜನಪ್ರಿಯ ನಟರಾಗಲೀ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವೆ ಅಂತರ ಕಾಣಲೇ ಇಲ್ಲ. ಹಾಗಾಗಿಯೇ ಅಲ್ಲಿನ ಹೆಚ್ಚಿನ ಜನಪ್ರಿಯ ನಟರು ತಮ್ಮ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕದಲ್ಲಿ ಕಲಾತ್ಮಕ ಚಿತ್ರಗಳೆಂದರೆ ಜನಪ್ರಿಯ ನಟರಲ್ಲಿ ಹಲವರಿಗೆ ಅದೇನೋ ಆಗಿಬರದು. ಅಷ್ಟೇ ಏಕೆ, ವಾಣಿಜ್ಯ ಮಂಡಳಿಯಂತೂ ಈ ಚಿತ್ರಗಳ ಮಂದಿಯನ್ನು ನೋಡುವ ರೀತಿಯೇ ಬೇರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಹಿಂದೆ ಎಪ್ಪತ್ತರ ದಶಕದಲ್ಲಿ ‘ಹಂಸಗೀತೆ’, ‘ಚೋಮನ ದುಡಿ’ ಸೇರಿದಂತೆ ಕಲಾತ್ಮಕ ಚಿತ್ರಗಳು ಇತರವುಗಳಂತೆಯೇ ತೆರೆಗೆ ಬರುತ್ತಿದ್ದವು. ಐವತ್ತು, ನೂರು ದಿನಗಳ ಪ್ರದರ್ಶನ ಕಂಡಿದ್ದವು. ‘ಮುಂದೆ ಈ ಚಿತ್ರಗಳೇ ಹೆಚ್ಚಾದರೆ ಕಷ್ಟ’ ಎಂದುಕೊಂಡೋ ಏನೋ ನಂತರದ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಇಂತಹ ಚಿತ್ರಗಳಿಗೆ ಪ್ರದರ್ಶನ ಅವಕಾಶ ಕಡಿಮೆ ಆಯಿತು, ಕಡಿಮೆ ಮಾಡಲಾಯಿತು. ಕೇರಳದಲ್ಲಿನ ಒಟಿಟಿ ತಾಣ ಇಂತಹ ಚಿತ್ರಗಳಿಗೆ ಪ್ರದರ್ಶನ ಅವಕಾಶ ನೀಡುವ ಮೂಲ ಉದ್ದೇಶದಿಂದ ಸ್ಥಾಪನೆ ಆಗಿದೆ. ಇಲ್ಲಿ ಅಂತಹದೊಂದು ಯೋಚನೆಗೆ ಚಾಲನೆ ಸಿಗಬಹುದೇ? ಸಾಧ್ಯವೇ ಎನ್ನುವ ಪ್ರಶ್ನೆಯೂ ಇದೆ.

ಅಲ್ಲಿನಂತೆ ಪ್ರಶಸ್ತಿ ವಿಜೇತ ಚಿತ್ರಗಳು, ಕಲಾತ್ಮಕ ಚಿತ್ರಗಳು, ವಾಣಿಜ್ಯ ಚಿತ್ರಗಳು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡ ಚಿತ್ರಗಳು ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದ ಚಿತ್ರಗಳನ್ನು ಪ್ರಸಾರ ಮಾಡುವ ಯೋಜನೆ ಇಲ್ಲೂ ಆರಂಭಿಕ ಹಂತದಲ್ಲೇ ಚರ್ಚೆಗೆ ಬರಬೇಕು, ಜಾರಿಗೆ ಬರುವಂತೆ ಆಗಬೇಕು ಎನ್ನುವುದು ಅಂತಹ ಚಿತ್ರಾಸಕ್ತರ ಹಂಬಲ. ಚಲನಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ ಮತ್ತು ಚಿತ್ರಗಳಿಗೆ ನೀಡುವ ಸಹಾಯಧನದ ಕುರಿತಂತೆ ಮರುಪರಿಶೀಲನೆಯ ಪ್ರಸ್ತಾವನೆಯ ಮಾತುಗಳು ಕೇಳಿಬರುತ್ತಿವೆ. ಅಲ್ಲಲ್ಲಿ ಸಹಾಯಧನ ನಿಲ್ಲಿಸುವ ಮಾತೂ ಕೇಳುತ್ತಿದೆ. ಎಲ್ಲ ಉದ್ಯಮಗಳಲ್ಲೂ ಸಹಾಯಧನ ಇದ್ದೇ ಇದೆ. ಉದ್ಯಮದ ಸ್ಥಾನ ದೊರೆತಾಗ ಮೂಲಸೌಲಭ್ಯಗಳನ್ನು ಒದಗಿಸಲು ಸುಲಭಸಾಧ್ಯವಾಗಬಹುದು, ಚಿತ್ರಮಂದಿರಗಳ ನಿರ್ಮಾಣ, ಸಿನಿಮಾ ತರಬೇತಿಯೇ ಮೊದಲಾಗಿ ಸೌಲಭ್ಯಗಳನ್ನು ಒದಗಿಸಬಹುದು. ಸರ್ಕಾರ ಚಿತ್ರರಂಗದ ಪ್ರಗತಿಗೆ ಪೂರಕವಾದ ಕೆಲಸಗಳನ್ನು ಆಸ್ಥೆಯಿಂದ ಮಾಡುವ ಇಚ್ಛೆಯನ್ನು ಪ್ರಕಟಿಸಿದೆ. ಆದರೆ ಉದ್ಯಮದ ಆಯಕಟ್ಟಿನಲ್ಲಿರುವ ಮಂದಿಗೆ, ಡಿಜಿಟಲ್ ಮಾಧ್ಯಮಕ್ಕೆ ಹೊರಳಿದ ಚಿತ್ರೋದ್ಯಮ, ಅದರ ಇಂದಿನ ಬೇಕು-ಬೇಡಗಳು, ಸಾಧ್ಯಾಸಾಧ್ಯತೆಗಳು, ಮುಂದಿರುವ ಸವಾಲುಗಳು.

ಇವುಗಳ ಕುರಿತು ಮಾಹಿತಿ ಎಷ್ಟಿದೆ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಜಾರಿಗೆ ತಂದ ‘ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-೨೦೨೫’ – ಇದಕ್ಕೆ ನ್ಯಾಯಾಲಯದ ಮೂಲಕತಡೆಯಾಜ್ಞೆ ತಂದು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಮುಂದಿನ ಆದೇಶದವರೆಗೆ ಈ ತಡೆಯಾಜ್ಞೆ. ಅದೇ ಸಂಸ್ಥೆಯ ಮುಖ್ಯಸ್ಥರು ದೀರ್ಘವಾಗಿ ತಮ್ಮ ಖಾತೆಯಲ್ಲಿ ಪ್ರಕಟಿಸಿದ ಸಾಲೊಂದು ಈಗ ನೆನಪಾಗುತ್ತಿದೆ. ಅದು ನಿರ್ದೇಶಕ ಕರಣ್ ಜೋಹರ್, ಸಮಾರಂಭವೊಂದರಲ್ಲಿ, ಚಿತ್ರವೊಂದನ್ನು ವೀಕ್ಷಿಸಲು, ನಾಲ್ಕು ಮಂದಿಯ ಕುಟುಂಬವೊಂದು ಒಮ್ಮೆಗೆ ೧೦,೦೦೦ ರೂ. ಖರ್ಚು ಮಾಡಬೇಕು ಎಂದ ಮಾತಿಗೆ ಪ್ರತಿಕ್ರಿಯೆ ಅದು. ಅಸೋಸಿಯೇಶನ್ ಪರವಾಗಿ ಬಂದ ಆ ಪ್ರಕಟಣೆಯಲ್ಲಿ, ದೇಶದಲ್ಲಿ ಸರಾಸರಿ ಒಂದು ಟಿಕೆಟಿನ ಪ್ರವೇಶದರ ೨೦೨೩ರಲ್ಲಿ ೧೩೦ ರೂ; ಅವರ ಪಿವಿಆರ್ ಐನಾಕ್ಸ್‌ನಲ್ಲಿ ೨೦೨೩-೨೪ರಲ್ಲಿ ಅದು ೨೫೮ ರೂ. ಅಲ್ಲಿ ಅವರ ಪ್ರಕಾರ ೧,೫೦೦ + ರೂ.ಯಲ್ಲಿ ನಾಲ್ವರು ಚಿತ್ರ ನೋಡಬಹುದು ಎನ್ನುವುದು ಷರಾ.

ಹ್ಞಾಂ, ತಡೆಯಾಜ್ಞೆ ನೀಡಲು ಕೋರಿ ಮಂಡಿಸಿದ ವಾದದಲ್ಲಿ ಸರ್ಕಾರಕ್ಕೆ ಪ್ರವೇಶದರ ನಿಗದಿ ಮಾಡುವ ಹಕ್ಕಿಲ್ಲ ಎಂದದ್ದಾಗಿ ವರದಿಯಾಗಿತ್ತು. ಅದೇನಿದ್ದರೂ ಚಿತ್ರಮಂದಿರಗಳ ಮಾಲೀಕರ ಹಕ್ಕು ಎನ್ನುವುದು ಅವರ ವಾದ. ಈ ವಾದದ ವರದಿ ನೋಡುತ್ತಿದ್ದಂತೆ ಈ ವರ್ಷ ಜೂನ್ ತಿಂಗಳ ೯ರಂದು ತಮಿಳುನಾಡು ಹೈಕೋರ್ಟು ನೀಡಿದ ತೀರ್ಪು ನೆನಪಾಯಿತು. ಅದು ಸರ್ಕಾರಕ್ಕೆ ನೀಡಿದ ಆದೇಶ.

ಇದನ್ನು ಓದಿ : ಯುವ ದಸರಾ | ಬಾಲಿವುಡ್‌ ಹಾಡಿಗೆ ಮೈಸೂರಿಗರು ಫಿದಾ…

‘ಸಿನಿಮಾ ಪ್ರೇಕ್ಷಕರನ್ನು ಪಲಾಯನ ಮಾಡಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎನ್ನುವ ಆದೇಶವನ್ನು ಅಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಮಾಡಿದ್ದು, ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಿದ ಚಿತ್ರಮಂದಿರದ ವಿರುದ್ಧ ಪ್ರೇಕ್ಷಕರೊಬ್ಬರು ನೀಡಿದ್ದ ದೂರಿನ ಕುರಿತ ತೀರ್ಪು ನೀಡುವ ವೇಳೆ.ಅದು ೨೦೧೭ರ ವೇಳೆ ನೀಡಿದ್ದ ದೂರು. ಅಜಿತ್ ಕುಮಾರ್ ಅಭಿನಯದ ‘ವಿವೇಗಂ’ ಚಿತ್ರದ ವೇಳೆ, ಕೆಲವು ಚಿತ್ರಮಂದಿರಗಳು ಹೆಚ್ಚು ಹಣವನ್ನು ವಸೂಲಿ ಮಾಡಿದ್ದವು. ಅದನ್ನು ವಾಪಸು ಕೊಡಿಸಬೇಕು ಎಂದು ಕೋರಿದ ದೂರಿನ ಅಂತಿಮ ತೀರ್ಪದು.ಸರ್ಕಾರ ಪ್ರವೇಶದರವನ್ನು ನಿಗದಿ ಪಡಿಸಿರುವಾಗ, ಪ್ರದರ್ಶಕರು ಹೆಚ್ಚು ಹಣ ಸಂಗ್ರಹಿಸುವ ಮೂಲಕಪ್ರೇಕ್ಷಕರನ್ನು ಚಿತ್ರಮಂದಿರಗಳಿಂದ ದೂರ ಮಾಡಿಸುವ ಕೆಲಸ ಮಾಡುತ್ತಿವೆ. ಸರ್ಕಾರ ಅಂತಹ ಚಿತ್ರಮಂದಿರಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದು ವರದಿಯಾಗಿತ್ತು. ಇಲ್ಲಿ ಸರ್ಕಾರಕ್ಕೆ ಪ್ರವೇಶದರ ನಿಗದಿಪಡಿಸುವ ಅಧಿಕಾರ ಇಲ್ಲ ಎನ್ನುವ ವಾದವಾದರೆ, ಅಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆದೇಶ! ಅಲ್ಲಿ ಪ್ರವೇಶದರ ೨೦೦ ರೂ.ಗಿಂತ ಕಡಿಮೆ ೫೦- ೬೦ ರೂಪಾಯಿಗೂ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ವೀಕ್ಷಿಸುವ ಅವಕಾಶ, ಇಲ್ಲಿ ಅದು ಈಗ ಕನಸು. ಅಂತಿಮ ಹಂತದ ತೀರ್ಪಿಗಾಗಿ ಕಾಯೋಣ ಅಲ್ಲವೇ?

” ಚಲನಚಿತ್ರರಂಗಕ್ಕೆ ಉದ್ಯಮದ ಸ್ಥಾನ ದೊರೆತಾಗ ಮೂಲಸೌಲಭ್ಯಗಳನ್ನು ಒದಗಿಸಲು ಸುಲಭ ಸಾಧ್ಯವಾಗಬಹುದು, ಚಿತ್ರಮಂದಿರಗಳ ನಿರ್ಮಾಣ, ಸಿನಿಮಾ ತರಬೇತಿಯೇ ಮೊದಲಾಗಿ ಸೌಲಭ್ಯಗಳನ್ನು ಒದಗಿಸಬಹುದು”

-ವೈಡ್‌ ಆಂಗಲ್‌ 
 ಬಾ.ನಾ.ಸುಬ್ರಹ್ಮಣ್ಯ 

ಆಂದೋಲನ ಡೆಸ್ಕ್

Recent Posts

ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…

1 hour ago

ಸಿಎಂ ಸಿದ್ದರಾಮಯ್ಯಗೆ ಬಿಗ್‌ಶಾಕ್‌ ಕೊಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…

1 hour ago

ಬೆಳಗಾವಿ ಚಳಿಗಾಲದ ಅಧಿವೇಶನ: ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…

2 hours ago

ಮುಂದುವರಿದ ಇಂಡಿಗೋ ಸಮಸ್ಯೆ: ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…

2 hours ago

ನಟಿ ಮೇಲೆ ಅತ್ಯಾಚಾರ ಕೇಸ್‌: ಮಲಯಾಳಂ ಸ್ಟಾರ್‌ ನಟ ದಿಲೀಪ್‌ ಖುಲಾಸೆ

ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…

2 hours ago

ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋದ ನಟ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…

2 hours ago