ಪ್ರೊ.ಆರ್.ಎಂ.ಚಿಂತಾಮಣಿ
ಇತ್ತೀಚೆಗೆ ಕೇಂದ್ರ ಸರ್ಕಾರದ ಹಿರಿಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಯೊಬ್ಬರು ಒಂದು ವಿಚಾರಸಂಕಿರಣದಲ್ಲಿ ‘೨೦೪೭ರ ಹೊತ್ತಿಗೆ ವಿಕಸಿತ ಭಾರತವಾಗಬೇಕಾದರೆ ಮಹಿಳೆಯರಲ್ಲಿ ಶೇ.೭೦ರಷ್ಟು ಪ್ರಮಾಣದಲ್ಲಾದರೂ ದುಡಿಯುವವರ ಸಂಖ್ಯೆಯಲ್ಲಿ ಪಾಲ್ಗೊಂಡಿರಬೇಕು (Ladies Participation Rate in Labour Force)’ ಎಂದು ಹೇಳಿದ್ದಾರೆ. ಅಂದರೆ ಹೆಚ್ಚು ಹೆಚ್ಚು ಮಹಿಳೆಯರು ರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ರಾಷ್ಟ್ರೀಯ ಒಟ್ಟಾದಾಯಕ್ಕೆ ಮಹಿಳೆಯರ ಕಾಣಿಕೆ ಹೆಚ್ಚಾಗಬೇಕು ಎಂದರ್ಥ.
೨೦೨೩-೨೪ರ ಹೊತ್ತಿಗೆ ದುಡಿಯುವ ವಯಸ್ಸಿನಲ್ಲಿರುವ (೧೫-೬೫ ವರ್ಷ ವಯಸ್ಸಿನ) ಮಹಿಳೆಯರಲ್ಲಿ ಶೇ.೪೨.೩ರಷ್ಟು ಜನರು ಆದಾಯ ತರುವ ಒಂದಿಲ್ಲೊಂದು ಕೆಲಸದಲ್ಲಿದ್ದರು. ಈ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ.೩೨.೮ ಮತ್ತು ಶೇ.೩೫.೯ ಇತ್ತು. ಇದು ಇನ್ನಷ್ಟು ವೇಗವಾಗಿ ಬೆಳೆದು ಶೇ.೭೦ಕ್ಕೆ ತಲುಪಿದರೆ ದೇಶದ ಮಾನವ ಸಂಪನ್ಮೂಲದ ಅರ್ಧದಷ್ಟಿರುವ ಮಹಿಳೆಯರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿದಂತಾಗುತ್ತದೆ. ದೇಶದ ಪ್ರಗತಿಯ ಗತಿ ಹೆಚ್ಚಾಗುತ್ತದೆ.
ಹೆಣ್ಣು ಅಬಲೆ ಎನ್ನುತ್ತಿದ್ದ ತಪ್ಪು ಕಲ್ಪನೆ ನಿಧಾನವಾಗಿ ಮಾಯವಾಗುತ್ತಿದೆ. ಪುರುಷರಿಗೆ ಸಮಾನವಾಗಿ ಸ್ತ್ರೀಯರು ಸೇನೆ ಮತ್ತು ಪೊಲೀಸ್ ಇಲಾಖೆಯೂ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕಾರಣದಲ್ಲೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರಾಗಿ ಯಶಸ್ವಿಯಾಗಿದ್ದಾರೆ. ಸಂಶೋಧನೆ ಮತ್ತು ನಾವೀನ್ಯತೆ(Innovation)ಗಳಲ್ಲಿಯೂ ಮಹಿಳೆಯರ ಸಾಧನೆ ದೊಡ್ಡದಾಗಿದೆ.
ಪುರುಷ ಪ್ರಧಾನ ಕುಟುಂಬ ಮತ್ತು ಸಮಾಜದ ಪರಿಕಲ್ಪನೆ ಹಂತ ಹಂತವಾಗಿ ಕಡಿಮೆಯಾಗುತ್ತಿದ್ದು, ಲಿಂಗ ಸಮಾನತೆಯತ್ತ ದಾಪುಗಾಲು ಇಡುತ್ತಿದ್ದೇವೆ. ಮಹಿಳೆಯರು ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆಗಳನ್ನು ಆರಂಭಿಸಿ ಮುನ್ನಡೆಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.
ಕೆಲವು ತಪ್ಪು ಕಲ್ಪನೆಗಳು ಹೋಗಬೇಕು: ಇಷ್ಟೆಲ್ಲ ಸಾಧನೆಗಳು ಮತ್ತು ಸತ್ಯ ಸಂಗತಿಗಳು ಕಣ್ಮುಂದೆ ಇದ್ದರೂ ಮಹಿಳೆಯರ ಸ್ವಭಾವ ಮತ್ತು ಸಾಮರ್ಥ್ಯಗಳ ವಿಷಯದಲ್ಲಿ ಕೆಲವು ತಪ್ಪು ಕಲ್ಪನೆಗಳಿರುವುದನ್ನೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದು ಬರಿ ಗಂಡಸರು ಮಾತನಾಡಿಕೊಳ್ಳುತ್ತಿರುವುದಲ್ಲ. ತಮ್ಮ ಸಾಮರ್ಥ್ಯಗಳನ್ನು ತಿಳಿದುಕೊಳ್ಳದೇ ಇರುವ ಕಾರಣದಿಂದಲೋ ಏನೋ ಸಾಮಾನ್ಯವಾಗಿ ಮಹಿಳೆಯರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಉದ್ಯೋಗದ ಸ್ಥಳಗಳಲ್ಲಿ (Work places) ಈ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಕೆಲವು ತಪ್ಪು ಕಲ್ಪನೆಗಳನ್ನು (Myths)) ಇಲ್ಲಿ ನಮೂದಿಸುವುದು ಸೂಕ್ತವೆನಿಸುತ್ತದೆ. ಅವುಗಳೆಂದರೆ ಮಹಿಳೆಯರು ಬಹುಬೇಗ ಭಾವಪರವಶರಾಗುತ್ತಾರೆ (Emotional), ಮಹಿಳೆಯರು ಬಹಳ ಮಾತನಾಡುತ್ತಾರೆ, ಕೂಡಿ ಒಟ್ಟಾಗಿ ಕೆಲಸ ಮಾಡಲಾಗುವುದಿಲ್ಲ, ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ, ನಾಯಕತ್ವದ ಗುಣ ಅವರಲ್ಲಿಲ್ಲ ಮತ್ತು ತಾನೇ ಮೇಲು ಎನ್ನುವ ಅಹಂ ಅವರಲ್ಲಿದೆ ಮುಂತಾದವುಗಳು.
ಇಂಥ ತಪ್ಪು ಕಲ್ಪನೆಗಳು ನಮ್ಮ ದೇಶದಲ್ಲಿ ಮಾತ್ರ ಇರುತ್ತವೆ ಎಂದು ತಿಳಿದರೆ ಅದು ತಪ್ಪು. ಬೇರೆಲ್ಲ ದೇಶಗಳಲ್ಲಿಯೂ ಇರುವುದನ್ನು ಶ್ರೀಮತಿ ಮೆಟ್ಟಿ ಜೊಹಾನ್ಸನ್‌ರವರು ಬರೆದ ಪುಸ್ತಕ ‘ಮಹಿಳೆಯರನ್ನು ಉದ್ಯೋಗದಲ್ಲಿ ಹಿಂದೆ ಸರಿಯುವಂತೆ ಮಾಡುವ ಕಥನಗಳು’ ((Narratives: The Stories That Hold women Back at Work) ಪೆಂಗ್ವಿನ್ ಪ್ರಕಾಶನ ಪ್ರಕಟಿಸಿರುವ ಪುಸ್ತಕದ ಬೆಲೆ ೪೯೯ ರೂ. ಮತ್ತು ೨೩೮ ಪ್ಲಸ್ ಪುಟಗಳು. ಇದರಲ್ಲಿ ಲೇಖಕರು ತಮ್ಮ ಸ್ವಂತ ಅನುಭವದ ಕಥನಗಳೊಂದಿಗೆ ಸಂಶೋಧನೆಗಳ ಅಂಕಿ ಸಂಖ್ಯೆಗಳ ಆಧಾರಗಳೊಂದಿಗೆ ಈ ತಪ್ಪು ಗ್ರಹಿಕೆಗಳನ್ನು ಅಲ್ಲಗಳೆಯಲು ಪರಿಣಾಮಕಾರಿಯಾಗಿ ಪ್ರಯತ್ನಿಸಿದ್ದಾರೆ.
ಮೆಟ್ಟಿಯವರ ಬಗ್ಗೆ ಒಂದು ಮಾತು. ಇವರು ಸ್ವತಃ ಕಾರ್ಪೊರೇಟ್ ಆಡಳಿತದಾರರಾಗಿದ್ದು, ಹಲವು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಮುಖ್ಯ ಆಡಳಿತಗಾರ ಸ್ಥಾನಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ೧೦ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಡೆನ್ಮಾರ್ಕ್ ದೇಶದವರಾಗಿದ್ದು, ಈಗ ಒಂದು ಆಡಳಿತ ತರಬೇತಿ ಸಂಸ್ಥೆ ನಡೆಸುತ್ತಿದ್ದು, ಹಲವು ಕಂಪೆನಿಗಳಿಗೆ ಸಲಹೆಗಾರರಾಗಿದ್ದಾರೆ.
ಈಗ ಒಂದೊಂದೇ ತಪ್ಪು ಗ್ರಹಿಕೆಗಳನ್ನು ನೋಡೋಣ. ಹೆಚ್ಚು ಭಾವಪರವಶರಾಗುವುದು. ಗಂಡಸರು ಹಾಗಾಗುವುದಿಲ್ಲವೇ? ಮೇಜು ಕುಟ್ಟುವುದು, ಪೆನ್ನು ಎಸೆಯುವುದು, ಕಾರಣವಿಲ್ಲದೆ ಎದುರುಗಿದ್ದವರ ಮೇಲೆ ಕಿರುಚಾಡುವುದು ಮುಂತಾದವುಗಳನ್ನು ನಾವು ನೋಡಿಲ್ಲವೇ? ಹೆಂಗಸರಷ್ಟೇ ಗಂಡಸರೂ ಭಾವಪರವಶರಾಗುತ್ತಾರೆ. ಆದರೆ ಪ್ರತಿಕ್ರಿಯೆ ಭಿನ್ನವಾಗಿರುತ್ತದೆ. ಹೆಚ್ಚು ಮಾತನಾಡುತ್ತಾರೆ ಎನ್ನುವುದೂ ತಪ್ಪು ಮೆಟ್ಟಿಯವರ ಅಧ್ಯಯನದ ಪ್ರಕಾರ ಪುರುಷರು ಮತ್ತು ಸ್ತ್ರೀಯರು ಸಾಮಾನ್ಯವಾಗಿ ೧೬,೦೦೦ ಪದಗಳನ್ನು ಮಾತನಾಡುತ್ತಾರೆ. ಪ್ರಸಂಗ ಬಂದಾಗ ಇಬ್ಬರೂ ಸ್ವಲ್ಪ ಹೆಚ್ಚು ಮಾತನಾಡಬಹುದು, ಕಡಿಮೆಯೂ ಮಾತನಾಡುವ ಸಾಧ್ಯತೆ ಇದೆ. ಇದು ಮಹಿಳಾ ಸಮಾನತೆಗೆ ಅಡ್ಡ ಬರಲಾರದು. ಪರಸ್ಪರ ಸಹಕಾರ ಮುಖ್ಯ. ಒಟ್ಟುಗೂಡಿ ಕೆಲಸ ಮಾಡುವ ವಿಚಾರಕ್ಕೆ ಬಂದರೆ, ಹಲವು ವರ್ಷಗಳಿಂದ (ದಶಕಗಳಿಂದ) ಮಹಿಳೆಯರೇ ಸೇರಿ ‘ಲಿಜ್ಜಿತ’ ಹಪ್ಪಳ ಉದ್ದಿಮೆಯನ್ನು ಯಶಸ್ವಿಯಾಗಿ ನಡೆಸುತ್ತಿಲ್ಲವೇ? ಇಂಥ ಅನೇಕ ಉದಾಹರಣೆಗಳನ್ನು ಹೇಳಬಹುದು. ಮಹಿಳಾ ಸಂಘಟನೆಗಳು ನಡೆಯುತ್ತಿವೆ. ಭಿನ್ನಾಭಿಪ್ರಾಯಗಳು ಪುರುಷರಲ್ಲಿಯೂ ಇರುತ್ತವೆ.
ನಿರ್ಧಾರ ತೆಗೆದುಕೊಳ್ಳಲು ಮಹಿಳೆಯರಿಗೆ ಸಾಧ್ಯವಿಲ್ಲ ಎನ್ನುವುದು ತಪ್ಪು ಗ್ರಹಿಕೆಯಲ್ಲವೇ? ಬಹುತೇಕ ಕುಟುಂಬಗಳಲ್ಲಿ ಕೌಟುಂಬಿಕ ವ್ಯವಹಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಮಹಿಳೆಯರೇ. ಕುಟುಂಬದ ಹಣಕಾಸು ವ್ಯವಹಾರ ಅವರ ಕೈಯಲ್ಲಿ ಇರುತ್ತದೆ. ನಾಯಕತ್ವದ ಬಗ್ಗೆ ಮಾತನಾಡುವುದಾದರೆ, ಬಹುರಾಷ್ಟ್ರೀಯ ಕಂಪೆನಿಗಳನ್ನೇ ಮುನ್ನಡೆಸಿದ ಇಂದಿರಾ ನೂಯಿಯವರಂಥ ನೂರಾರು ಮಹಿಳಾ ಕಾರ್ಪೊರೇಟ್ ನಾಯಕರ ಹೆಸರುಗಳನ್ನು ಹೇಳಬಹುದು. ದೇಶದಲ್ಲಿ ಮಹಿಳಾ ಉದ್ಯಮಿಗಳು ಮತ್ತು ಸಿಇಒಗಳು (Chief Executive Officers) ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗೆ ಎಲ್ಲ ತಪ್ಪು ಕಲ್ಪನೆಗಳನ್ನು ಅಲ್ಲಗಳೆಯಬಹುದು.
ಒಟ್ಟಿನಲ್ಲಿ ಪುರುಷ ಮತ್ತು ಮಹಿಳೆ ಅರ್ಥವ್ಯವಸ್ಥೆಯ ಎರಡು ಮಾನವ ಸಂಪನ್ಮೂಲ ಎರಡೆತ್ತುಗಳು. ಎರಡೂ ಸಮವಾಗಿ ಓಡಿದರೆ ಬಂಡಿ ಸುರಕ್ಷಿತವಾಗಿ ವೇಗವಾಗಿ ಓಡುತ್ತದೆ. ಒಂದು ಮೇಲು ಇನ್ನೊಂದು ಕೀಳು ಎಂದರೆ ಏರುಪೇರಾಗಿ ನಿರೀಕ್ಷಿತ ವೇಗದಲ್ಲಿ ಬಂಡಿ ಓಡಲಾರದು. ಆದ್ದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಅವರು ವಹಿಸಲ್ಪಟ್ಟ ಚಟುವಟಿಕೆಗಳಲ್ಲಿ ಸಮರ್ಥವಾಗಿ ಕೆಲಸ ಮಾಡಬಲ್ಲರು. ಅರ್ಥ ವ್ಯವಸ್ಥೆಯ ಬೆಳವಣಿಗೆಯ ವೇಗ ಹೆಚ್ಚುತ್ತದೆ. ಹೀಗಾಗಿ ಮೊದಲು ಹೇಳಿದಂತೆ ಕೆಲಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವಂತೆ ವಾತಾವರಣ ಸೃಷ್ಟಿಸಬೇಕು.
” ಇಷ್ಟೆಲ್ಲ ಸಾಧನೆಗಳು ಮತ್ತು ಸತ್ಯ ಸಂಗತಿಗಳು ಕಣ್ಮುಂದೆ ಇದ್ದರೂ ಮಹಿಳೆಯರ ಸ್ವಭಾವ ಮತ್ತು ಸಾಮರ್ಥ್ಯಗಳ ವಿಷಯದಲ್ಲಿ ಕೆಲವು ತಪ್ಪು ಕಲ್ಪನೆಗಳಿರುವುದನ್ನೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದು ಬರಿ ಗಂಡಸರು ಮಾತನಾಡಿಕೊಳ್ಳುತ್ತಿರುವುದಲ್ಲ. ತಮ್ಮ ಸಾಮರ್ಥ್ಯಗಳನ್ನು ತಿಳಿದುಕೊಳ್ಳದೇ ಇರುವ ಕಾರಣದಿಂದಲೋ ಏನೋ ಸಾಮಾನ್ಯವಾಗಿ ಮಹಿಳೆಯರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಉದ್ಯೋಗದ ಸ್ಥಳಗಳಲ್ಲಿ (Work places) ಈ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಪಾಸಿಟಿವ್ ಕೇಸ್‌ಗಳು ಮತ್ತಷ್ಟು…
ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಕೆಲ ತಿಂಗಳಿಂದ ಹಣ ಜಮೆಯಾಗಿದಿರುವುದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ: ಗೃಹ…
ಕೊಡಗು: ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಹಣೆ ಕಾಮಗಾರಿ…
ಎಚ್.ಡಿ.ಕೋಟೆ: ಗಾಂಜಾ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದಲ್ಲಿ…
ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.…
ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 1)…