ಅಂಕಣಗಳು

ವಿಮಾ ವಲಯದಲ್ಲಿ ಮತ್ತಷ್ಟು ಸುಧಾರಣೆಗಳು

ಪ್ರೊ.ಆರ್.ಎಂ.ಚಿಂತಾಮಣಿ 

ವಿಮಾ ಸೇವೆಗಳನ್ನು ಇನ್ನಷ್ಟು ಹೆಚ್ಚು ಪಾಲಿಸಿದಾರ ಗ್ರಾಹಕ ಸ್ನೇಹಿ ಮಾಡಬೇಕೆನ್ನುವ ಮತ್ತು ಈ ವಲಯಕ್ಕೆ ಇನ್ನೂ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ಸೂಕ್ತ ಸುಧಾರಣೆಗಳನ್ನು ಸರ್ಕಾರ ಕೈಗೊಳ್ಳಬೇಕೆನ್ನುವ ಬೇಡಿಕೆಗಳು ಸಂಬಂಧಪಟ್ಟ ಎಲ್ಲರಿಂದಲೂ ಬರುತ್ತಲೇ ಇದ್ದವು. ವಿಮಾ ರಕ್ಷಣೆ, ಎಲ್ಲ ನಾಗರಿಕರಿಗೂ ಸುಲಭವಾಗಿ, ಸರಳವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯಬೇಕು. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ೨೦೪೭ರ ಹೊತ್ತಿಗೆ ದೇಶದಲ್ಲಿರುವ ಎಲ್ಲ ಜನರಿಗೂ ವಿಮಾ ಸೌಲಭ್ಯವನ್ನು ಒದಗಿಸುವ ನಮ್ಮ ಕೇಂದ್ರ ಸರ್ಕಾರದ ಗುರಿಯನ್ನು ಸಾಽಸಬೇಕಾದರೆ ಕಟ್ಟಕಡೆಯ ವ್ಯಕ್ತಿಯವರೆಗೂ ವಿಮೆಯ ಅನುಕೂಲತೆಗಳು ಮತ್ತು ಅವಶ್ಯಕತೆಯ ಬಗ್ಗೆ ಮಾಹಿತಿ ವಿಸ್ತರಣೆಯಾಗಬೇಕು. ಪಾಲಿಸಿ ಪಡೆಯುವ ಮತ್ತು ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಗಳು ಸರಳವಾಗಿರಬೇಕು. ಎಲ್ಲರಿಗೂ ಅರ್ಥವಾಗಬೇಕು. ಈ ದಿಕ್ಕಿನಲ್ಲಿ ಸರ್ಕಾರ ಮತ್ತು ವಿಮಾ ಕಂಪೆನಿಗಳು ಗಂಭೀರವಾಗಿ ಚಿಂತಿಸಬೇಕು. ತಜ್ಞರು ಮತ್ತು ಆಸಕ್ತರು ಕೈಗೂಡಿಸಬೇಕು.

ಸುಧಾರಣೆಗಳು ನಿರಂತರ: ಅಂದಂದಿನ ಅವಶ್ಯಕತೆಗಳಿಗನುಸಾರವಾಗಿ ಬದಲಾವಣೆಗಳನ್ನು ಮಾಡಲೇಬೇಕಾಗುತ್ತದೆ. ಕೇಂದ್ರ ಹಣಕಾಸು ಇಲಾಖೆ ಕಳೆದ ವಾರ ಸಾರ್ವಜನಿಕ ಚರ್ಚೆಗಾಗಿ ವಿಮಾ ರಂಗದಲ್ಲಿ ತರಬೇಕೆಂದಿರುವ ಬದಲಾವಣೆಗಳ ಪ್ರಸ್ತಾವನೆಗಳನ್ನು ಪ್ರಕಟಿಸಿದೆ. ಅವುಗಳಲ್ಲಿ

 ೧. ವಿಮಾ ಕಂಪೆನಿಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗಳ ಪ್ರಮಾಣವನ್ನು ಶೇ.೧೦೦ಕ್ಕೆ ಹೆಚ್ಚಿಸುವುದು

 ೨. ವಿದೇಶಿ ಕಂಪೆನಿಗಳು ಜೀವ ವಿಮೆ, ಆರೋಗ್ಯ ವಿಮೆ ಮತ್ತು ಸಾಮಾನ್ಯ ವಿಮೆ ಹೀಗೆ ಎಲ್ಲ ವಿಮಾ ವ್ಯವಹಾರಗಳನ್ನೂ ಮಾಡಬಹುದು

 ೩. ವಿಮಾ ಕಂಪೆನಿಗಳ ನಿವ್ವಳ ಸ್ವಂತ ಬಂಡವಾಳದ ಮೊತ್ತವನ್ನುಈವರೆಗಿರುವ ೫,೦೦೦ ಕೋಟಿ ರೂ.ಗಳಿಂದ ೧,೦೦೦ ಕೋಟಿ  ರೂ.ಗಳಿಗೆ ಇಳಿಸುವುದು ಮುಂತಾದವುಗಳು ಸೇರಿವೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್‌ಡಿಎ) ಇನ್ನಷ್ಟು ಅಧಿಕಾರಗಳನ್ನು ಕೊಟ್ಟು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ.

ಈ ವಲಯದಲ್ಲಿ ಇನ್ನೂ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಗಳ ಅವಕಾಶ ಮತ್ತು ಅವಶ್ಯಕತೆ ಇದೆ. ಅದರೊಡನೆ ಆ ಕಂಪೆನಿಗಳ ಇತ್ತೀಚಿನ ಆಡಳಿತ ವಿಧಾನಗಳು ವಿಮಾ ಸೇವೆಗಳನ್ನು ಒದಗಿಸುವ ಗ್ರಾಹಕ ಸ್ನೇಹಿ ವಿಧಾನಗಳು ಮತ್ತು ಪಾಲಿಸಿದಾರರಿಗೆ ಹೊಸ ಅನುಕೂಲತೆಗಳೂ ಬರುತ್ತವೆ. ಭಾರತೀಯ ವಿಮಾ ಕಂಪೆನಿಗಳಲ್ಲಿ ವಿದೇಶಿ ನೇರ ಹೂಡಿಕೆಗಳ ಪ್ರಮಾಣ ಶೇ.೪೯ ಇದ್ದದ್ದನ್ನು ೨೦೨೧ರ ಜೂನ್ ತಿಂಗಳಲ್ಲಿ ಕಾಯ್ದೆ ತಿದ್ದುಪಡಿ ಮಾಡಿ ಶೇ.೭೪ಕ್ಕೆ ಹೆಚ್ಚಿಸಲಾಯಿತು. ಇದರ ಪರಿಣಾಮವಾಗಿ ಈಗಾಗಲೇ ಭಾರತೀಯ ಕಂಪೆನಿಗಳಲ್ಲಿ ಅರ್ಥದಷ್ಟು ಪಾಲುದಾರಿಕೆ ಇದ್ದ ವಿದೇಶಿ ಕಂಪೆನಿಗಳು ಶೇ.೭೪ರವರೆಗೆ ಹೆಚ್ಚಿಸಿದವು. ಅಲ್ಲದೆ ಹೊಸದಾಗಿ ಪಾಲುದಾರಿಕೆ ಸ್ಥಾಪಿಸಿದ ವಿದೇಶಿ ಕಂಪೆನಿಗಳು ಒಟ್ಟು ಬಂಡವಾಳದ ಶೇ.೭೪ರವರೆಗೆ ಹೂಡಿಕೆ ಮಾಡಿದವು. ಉದಾಹರಣೆಗೆ ಕೊಟಕ್ ಮಹೀಂದ್ರ ವಿಮಾ ಕಂಪೆನಿಯಲ್ಲಿ ಸ್ವಿಟ್ಜರ್‌ಲ್ಯಾಂಡಿನ ಜುರಿಕ್ ವಿಮಾ ಕಂಪೆನಿಯು ಶೇ.೭೦ರಷ್ಟು ಹೂಡಿಕೆ ಮಾಡಿದೆ. ಇನ್ನೂ ಕೆಲವು ತಮ್ಮ ಪಾಲನ್ನು ಹೆಚ್ಚಿಸಿರುವುದುಂಟು. ವಿಮಾ ವಲಯ ಅಷ್ಟರ ಮಟ್ಟಿಗೆ ವಿಸ್ತರಣೆಗೊಂಡಿದೆ.

ಆದರೂ ದೇಶದಲ್ಲಿಯ ವಿಮಾ ಅವಶ್ಯಕತೆಗಳನ್ನು ಪೂರ್ಣವಾಗಿ ಪೂರೈಸಲಾಗಿಲ್ಲ. ಹಳ್ಳಿಗಳನ್ನು ಸಮರ್ಪಕವಾಗಿ ತಲುಪಲು ಸಾಧ್ಯವಾಗಿಲ್ಲ. ವಿಮಾ ಪೇಟೆಯನ್ನು ಪೂರ್ಣ ಉಪಯೋಗಿಸಬೇಕಾಗಿದೆ. ವಿದೇಶಿ ನೇರ ಬಂಡವಾಳಕ್ಕೆ ಇನ್ನೂ ಅವಕಾಶಗಳಿವೆ. ಹಲವು ಪ್ರಸಿದ್ಧ ವಿದೇಶಿ ಕಂಪೆನಿಗಳು ಭಾರತಕ್ಕೆ ಬರಲು ಆಸಕ್ತಿ ಹೊಂದಿದ್ದರೂ ಸದ್ಯದ ಸ್ಥಿತಿಯಲ್ಲಿ ಬರಲು ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಪಾಲುದಾರಿಕೆಯನ್ನು ಒಲ್ಲದ ಕೆಲವು ಕಂಪೆನಿಗಳು ಭಾರತದಲ್ಲಿ ತಮ್ಮದೇ ಅಂಗಸಂಸ್ಥೆ ಸ್ಥಾಪಿಸಿ ಭಾರತದ ನಿಯಮಗಳಂತೆ ತಮ್ಮದೇ ರೀತಿಯಲ್ಲಿ ವ್ಯವಹಾರ ನಡೆಸಲು ಇಚ್ಛಿಸುತ್ತವೆ ಎಂದೂ ಹೇಳಲಾಗಿದೆ. ಇನ್ನು ಕೆಲವು ಈಗಿರುವ ಪಾಲುದಾರಿಕೆ ಒಪ್ಪಂದ ಗಳಿಂದ ಹಿಂದೆ ಸರಿದು ಹೊಸ ಸಾಧ್ಯತೆಗಳನ್ನು ಹುಡುಕುತ್ತಿವೆ ಎಂದೂ ವರದಿಗಳಿವೆ.

ಆದ್ದರಿಂದ ವಿದೇಶಿ ನೇರ ಹೂಡಿಕೆಗಳ ಮಿತಿಯನ್ನು ರದ್ದುಗೊಳಿಸಿ ಶೇ.೧೦೦ಕ್ಕೆ ತರುವ ಅವಶ್ಯಕತೆಯನ್ನು ಒತ್ತಿ ಹೇಳಲಾಗುತ್ತಿದೆ. ಇದಕ್ಕೆ ಈಗ ಸರ್ಕಾರವೂ ದನಿಗೂಡಿಸಿದೆ. ಅಂದರೆ ವಿದೇಶಿ ಕಂಪೆನಿಗಳು ನಮ್ಮಲ್ಲಿ ತಮ್ಮ ಭಾರತೀಯ ಕಂಪೆನಿಗಳನ್ನು ಸ್ಥಾಪಿಸಿ ಎಲ್ಲ ವಿಮಾ ವ್ಯವಹಾರಗಳನ್ನು ಮಾಡಬಹುದು.

ಜೀವ ವಿಮಾ ಪಾಲಿಸಿದಾರರಿಗೊಂದು ಕೊಡುಗೆ: ಜೀವ ವಿಮೆಯಲ್ಲಿ ಸುಧಾರಣೆಯ ಭಾಗವಾಗಿ ಇದೇ ಅಕ್ಟೋಬರ್ ಒಂದರಿಂದ ಜಾರಿಗೆ ಬರುವಂತೆ ಒಂದು ಮಹತ್ವದ ಬದಲಾವಣೆಯಾಗಿದೆ. ಇಲ್ಲಿಯವರೆಗೆ ವಿಮಾ ಪಾಲಿಸಿ ಪಡೆದು ಮೊದಲ ವರ್ಷದ ಪ್ರೀಮಿಯಂ ಪಾವತಿಸಿ ನಂತರದ ಕಂತುಗಳನ್ನು ಕಟ್ಟದೇ ಇದ್ದ ಪಾಲಿಸಿದಾರರಿಗೆ ರಕ್ಷಣೆ ದೊರೆಯುತ್ತಿರಲಿಲ್ಲ. ಅಷ್ಟೇ ಅಲ್ಲ ಅವಧಿ ಮುಗಿದ ಮೇಲೂ ಕಟ್ಟಿದ ಪ್ರೀಮಿಯಂನಲ್ಲಿ ಏನೂ ದೊರೆಯುತ್ತಿರಲಿಲ್ಲ. ಎರಡು ವರ್ಷ ಅಥವಾ ನಂತರದ ವರ್ಷಗಳಲ್ಲಿ ಪ್ರೀಮಿಯಂ ಕಟ್ಟಿ ನಂತರ ನಿಲ್ಲಿಸಿದರೆ ಪ್ರೀಮಿಯಂ ಕಟ್ಟದೇ ಇರುವ ಅವಽಯಲ್ಲಿ ವಿಮಾ ರಕ್ಷಣೆಯ ಭರವಸೆ ಸ್ವಾಭಾವಿಕವಾಗಿಯೇ ಇರುವುದಿಲ್ಲ. ಪಾಲಿಸಿ ಮುಗಿಯುವ ಹೊತ್ತಿಗೆ (ಅವಧಿ ಮುಗಿದಾಗ) ಕಟ್ಟಿದ ಪ್ರೀಮಿಯಂ ಬಾಬ್ತು ಕಂಪೆನಿಗಳ ಲೆಕ್ಕಾಚಾರದಂತೆ ಒಂದಿಷ್ಟು ಮೊತ್ತವನ್ನು ‘ಸರಂಡರ್ ವ್ಯಾಲ್ಯು’ ಎಂದು ಪಾಲಿಸಿದಾರರಿಗೆ ಕೊಡಲಾಗುತ್ತಿತ್ತು.

ಈಗ ಒಂದೇ ವರ್ಷ ಪ್ರೀಮಿಯಂ ಕಟ್ಟಿ ಮುಂದುವರಿಸದ ಪಾಲಿಸಿ ದಾರರಿಗೆ ‘ವಿಶೇಷ ಸರಂಡರ್ ವ್ಯಾಲ್ಯು’ ಎಂದು ಒಂದು ಮೊತ್ತವನ್ನು ಅವಧಿ ಮುಗಿದ ಮೇಲೆ ಕೊಡಲಾಗುವುದು. ಎರಡು ವರ್ಷ ಮತ್ತು ಹೆಚ್ಚು ಅವಧಿ ಪ್ರೀಮಿಯಂ ಕಟ್ಟಿ ಮುಂದುವರಿಸಲಾರದ ಪಾಲಿಸಿದಾರರಿಗೆ ಕಟ್ಟಿದ ಪ್ರೀಮಿಯಂ ಮೊತ್ತದ ಜತೆಗೆ ಅದರ ಮೇಲೆ ಅವಧಿ ಮುಗಿದಂದು ಇದ್ದಂತೆ ಕೇಂದ್ರ ಸರ್ಕಾರ ೧೦ ವರ್ಷ ಬಾಂಡುಗಳ ಬೆಲೆ ಮತ್ತು ಮುಖಬೆಲೆಯ ನಡುವಿನ ಅಂತರದಲ್ಲಿ ಬಾಂಡಿನ ಬಡ್ಡಿ ದರವನ್ನು ಕಳೆದು ನಂತರ ಬರುವ ನಿವ್ವಳ ಲಾಭ ಸೇರಿಸಿ ‘ಸರಂಡರ್ ವ್ಯಾಲ್ಯು’ ಎಂದು ಕೊಡಲಾಗುವುದೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಐಆರ್‌ಡಿಎ ಅಧ್ಯಕ್ಷ ದೇಬಶಿಶ್ ಪಾಂಡಾರವರು ವಿವರಿಸಿರುವಂತೆ ತಂತ್ರಜ್ಞಾನ ಅಳವಡಿಕೆಯಲ್ಲಿಯೂ ವಿಮಾ ವಲಯ ಮುಂದಿದ್ದು, ಐಆರ್‌ಡಿಎ ಅಭಿವೃದ್ಧಿಪಡಿಸಿರುವ ‘ಬಿಮಾ ಸುಗಮ್’ ಆಪ್ ವಿಮಾ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಉತ್ತಮ ಸಾಧನವಾಗಿದೆ. ಸಾಮಾನ್ಯ ಜನರೂ ಸಲೀಸಾಗಿ ಬಳಸುವಷ್ಟು ಸರಳವಾಗಿದೆ ಎನ್ನಲಾಗಿದೆ. ಮೊದಲೇ ಹೇಳಿದಂತೆ ನಿರಂತರ ಸಂಶೋಧನೆಯಿಂದ ತೊಡಕುಗಳನ್ನು ಸರಿ ಮಾಡುತ್ತ ಸುಧಾರಣೆಗಳಾಗುತ್ತವೆ. ಅವುಗಳೆಲ್ಲ ಜನಸ್ನೇಹಿಯಾಗಿರ ಬೇಕೆಂಬುದು ಅವಶ್ಯ.

” ದೇಶದಲ್ಲಿಯ ವಿಮಾ ಅವಶ್ಯಕತೆಗಳನ್ನು ಪೂರ್ಣವಾಗಿ ಪೂರೈಸಲಾಗಿಲ್ಲ. ಹಳ್ಳಿಗಳನ್ನು ಸಮರ್ಪಕವಾಗಿ ತಲುಪಲು ಸಾಧ್ಯವಾಗಿಲ್ಲ. ವಿಮಾ ಪೇಟೆಯನ್ನು ಪೂರ್ಣ ಉಪಯೋಗಿಸಬೇಕಾಗಿದೆ. ವಿದೇಶಿ ನೇರ ಬಂಡವಾಳಕ್ಕೆ ಇನ್ನೂ ಅವಕಾಶಗಳಿವೆ. ಹಲವು ಪ್ರಸಿದ್ಧ ವಿದೇಶಿ ಕಂಪೆನಿಗಳು ಭಾರತಕ್ಕೆ ಬರಲು ಆಸಕ್ತಿ ಹೊಂದಿದ್ದರೂ ಸದ್ಯದ ಸ್ಥಿತಿಯಲ್ಲಿ ಬರಲು ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಪಾಲುದಾರಿಕೆಯನ್ನು ಒಲ್ಲದ ಕೆಲವು ಕಂಪೆನಿಗಳು ಭಾರತದಲ್ಲಿ ತಮ್ಮದೇ ಅಂಗಸಂಸ್ಥೆ ಸ್ಥಾಪಿಸಿ ಭಾರತದ ನಿಯಮಗಳಂತೆ ತಮ್ಮದೇ ರೀತಿಯಲ್ಲಿ ವ್ಯವಹಾರ ನಡೆಸಲು ಇಚ್ಛಿಸುತ್ತವೆ ಎಂದೂ ಹೇಳಲಾಗಿದೆ. ಇನ್ನು ಕೆಲವು ಈಗಿರುವ ಪಾಲುದಾರಿಕೆ ಒಪ್ಪಂದಗಳಿಂದ ಹಿಂದೆ ಸರಿದು ಹೊಸ ಸಾಧ್ಯತೆಗಳನ್ನು ಹುಡುತ್ತಿವೆ ಎಂದೂ ವರದಿಗಳಿವೆ.”

ಆಂದೋಲನ ಡೆಸ್ಕ್

Recent Posts

ಸಿ.ಟಿ. ರವಿಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…

44 mins ago

ಕಾಂಗ್ರೆಸ್‌ನವರು ನಕಲಿ ಹೋರಾಟಗಾರರು: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್‌…

2 hours ago

ಮೈಸೂರು ಮುಡಾ ಕೇಸ್:‌ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್‌

ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್‌ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…

3 hours ago

ಬಿಜೆಪಿ ಸಂಸದರಿಂದ ನನ್ನ ಮೇಲೆ ಹಲ್ಲೆ ಆಗಿದೆ: ಸ್ಪೀಕರ್‌ಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಂಸತ್‌ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…

3 hours ago

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಂವಿಧಾನಿಕ ಪದ ಬಳಸಿದ ಸಿ.ಟಿ.ರವಿ?

ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್‌ ಶಾ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…

3 hours ago

ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನಸಭೆಯಲ್ಲೂ ಪ್ರತಿಭಟನೆ

ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…

4 hours ago