ಅಂಕಣಗಳು

ರಸ್ತೆ ಗುಡಿಸಿ ಭಾರತೀಯರಿಗೆ ಸ್ವಚ್ಛತೆ ಪಾಠ ಹೇಳುವ ವಿದೇಶಿಗ

ಪ್ರಚಾರದ ಉದ್ದೇಶವಿಲ್ಲ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದೇ ಧೈಯ

ಒ೦ದು ಆಲಸಿ ಭಾನುವಾರದ ಬೆಳಗ್ಗಿನ ಹೊತ್ತು ಹರಿಯಾಣದ ಓಗುರ್ಗಾಂವ್‌ ನಿದ್ದೆಯ ಮಂಪರಿನಿಂದ ನಿಧಾನವಾಗಿ ಮೈಮುರಿಯುತ್ತ ಏಳುತ್ತಿದ್ದರೆ ಗುರು ದ್ರೋಣಾಚಾರ್ಯ ಮೆಟ್ರೋ ಸ್ಟೇಷನ್ ಬಳಿ ಯುವಕ ಯುವತಿಯರ ಗುಂಪೊಂದು ಕೈಯಲ್ಲಿ ಪೊರಕೆ ಹಿಡಿದು ರಸ್ತೆಯಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಗುಡಿಸಿ, ಚರಂಡಿಯಲ್ಲಿ ಜಮಾಗೊಂಡಿದ್ದ ಕಸವನ್ನು ಎತ್ತಿ ಹಾಕಿ ಕೊಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತಿದ್ದರು. ಆ ಗುಂಪಿನಲ್ಲಿ ಒಬ್ಬ ವಿದೇಶಿ ಯುವಕನೂ ಕೈಯಲ್ಲಿ ಪೊರಕೆ ಹಿಡಿದು ಅವರೊಂದಿಗೆ ಕಸ ಗುಡಿಸುತ್ತಿದ್ದ. ವಾಸ್ತವದಲ್ಲಿ, ಆತನೇ ಆ ಗುಂಪಿನ ಕೇಂದ್ರ ಬಿಂದುವಾಗಿದ್ದ!

ಸರ್ಬಿಯಾ ಮೂಲದ ಆತನ ಹೆಸರು ಲೇಝರ್ ಜಾಂಕೊವಿಕ್, ಆತ ಯಾವುದೇ ಸರ್ಕಾರೇತರ ಸಂಸ್ಥೆಯನ್ನಾಗಲಿ ನಡೆಸುತ್ತಿಲ್ಲ; ಯಾವುದೇ ಸಂಸ್ಥೆಯಿಂದಾಗಲೀ ಫಂಡಿಂಗ್ ಪಡೆಯುತ್ತಿಲ್ಲ; ಯಾವುದೇ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ. ಬದಲಿಗೆ, ತಮ್ಮ ನಗರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆ ನಗರದ ಜನರೇ ಮುಂದೆ ಬರಬೇಕು ಎಂಬ ಸಂದೇಶವನ್ನು ನೀಡಲು ಆತ ಈ ಕೆಲಸ ಮಾಡುತ್ತಿದ್ದಾನೆ. ಗುರ್ಗಾಂವ್ ಸ್ವಚ್ಛತಾ ಅಭಿಯಾನ ವಾಸ್ತವದಲ್ಲಿ ಲೇಝರ್‌ ಆಲೋಚನೆಯಲ್ಲ. ಭಾರತದ ಕಸದ ಪರಿಸ್ಥಿತಿ ಬಗ್ಗೆ ಅವರು ಹಾಕಿದ ವಿಡಿಯೋಗಳನ್ನು ನೋಡಿ ಸ್ಥಳೀಯರೇ ಮುಂದೆ ಬಂದು, ರಸ್ತೆ ಗುಡಿಸುವ ಕಾಯಕಕ್ಕೆ ಮುಂದಾದರು. ಮತ್ತು, ಅದಕ್ಕೆ ಲೇಝರ್‌ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು.

2018ರಲ್ಲಿ ಲೇಝರ್ ಜಾಂಕೊವಿಕ್ ಒಂದು ಮಾಡೆಲಿಂಗ್ ಗುತ್ತಿಗೆಗಾಗಿ ಸರ್ಬಿಯಾದಿಂದ ಭಾರತಕ್ಕೆ ಬಂದಿದ್ದರು. ಸರ್ಬಿಯಾದಲ್ಲಿ ಅವರು ಮಾರ್ಷಲ್ ಆರ್ಟ್ಸ್ (ಸಮರ ಕಲೆ) ಕಲಿತಿದ್ದರು. ಮಸಾಲೆ ದೋಸೆ, ಬಟ‌ ಚಿಕನ್ ಮೊದಲಾದ ಭಾರತದ ಖಾದ್ಯಗಳಿಗೆ ಮನಸೋತ ಲೇಝರ್ ಅಂದಿನಿಂದ ಇಲ್ಲೇ ನೆಲೆಸಿದ್ದಾರೆ. ಕೇರಳದ ಹಿನ್ನೀರು, ಋಷಿಕೇಶದ ಘಾಟ್ ಗಳು, ಸಿಕ್ಕಿಂನ ಬೆಟ್ಟ ಗುಡ್ಡಗಳಲ್ಲಿ ತಿರುಗಾಡಿದ್ದಾರೆ. ಅವರು ಎಲ್ಲೇ ಹೋದರೂ ಅಲ್ಲಿನ ಸೌಂದರ್ಯಕ್ಕೆ ಮಾರು ಹೋಗುತ್ತಿದ್ದರು. ಆದರೆ, ಮರುಕ್ಷಣವೇ, ಎಲ್ಲೆಂದರಲ್ಲಿ ನಿರ್ಲಕ್ಷ್ಯವಾಗಿ ಎಸೆಯಲ್ಪಟ್ಟ ಕಸದ ರಾಶಿಗಳನ್ನು ಕಂಡು ಅವರ ಮನಸ್ಸು ಮುದುಡಿ ಹೋಗುತ್ತಿತ್ತು. ಇಷ್ಟು ಸುಂದರ ದೇಶದಲ್ಲಿ ಜನ ಎಲ್ಲೆಂದರಲ್ಲಿ ಕಸ ಎಸೆಯುವುದು ನೋಡಿ ಅವರು ವಿಷಾದಿಸುತ್ತಿದ್ದರು.

ಇದನ್ನೂ ಓದಿ:-ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ

ಭಾರತದಲ್ಲಿ 62 ಮಿಲಿಯನ್ ಟನ್ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಹೆಚ್ಚಿನ ಪಾಲು ರಸ್ತೆಗಳ ಮೇಲೆ ಬಂದು ಬೀಳುತ್ತದೆ. ಪರಿಸರ ಖಾತೆ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗಳ ಅಂಕಿಅಂಶಗಳ ಪ್ರಕಾರವೇ 40% ಪ್ಲಾಸ್ಟಿಕ್ ಕಸ ರಸ್ತೆ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲಲ್ಪಡುತ್ತದೆ.

ಲೇಝರ್ ಎಲ್ಲಿಯೇ ಹೋಗಲಿ, ಅಲ್ಲಿ ಕಸ ಕಂಡರೆ ಅದನ್ನು ಎತ್ತಿ ಆ ಜಾಗವನ್ನು ಸ್ವಚ್ಛಗೊಳಿಸುತ್ತಾರೆ. ಅವರು ಆರು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದರು. ಆ ಅವಧಿಯಲ್ಲಿ ಅವರು ಬೆಂಗಳೂರಲ್ಲಿ ಸುಮಾರು 20 ಬಾರಿ ಸಣ್ಣಪುಟ್ಟ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿದ್ದರು. 2024ರಲ್ಲಿ ಹರಿಯಾಣದ ಗುರ್ಗಾಂವ್‌ಗೆ ಹೋದರು. ಅಲ್ಲಿ ಅವರು ‘ಏಕ್ ದಿನ್ ಏಕ್ ಗಲ್ಲಿ (ಒಂದು ದಿನ ಒಂದು ರಸ್ತೆ)’ ಎಂಬ ಒಂದು ಟೈಮ್ ಟೇಬಲ್ ಮಾಡಿಕೊಂಡು, ಪ್ರತಿದಿನ ಒಂದೊಂದು ರಸ್ತೆಯನ್ನು ಸ್ವಚ್ಛಗೊಳಿಸುವ ಲೇಝರ್ ಸ್ವಚ್ಛತೆಯ ಬಗ್ಗೆ ಉದ್ದುದ್ದ ಭಾಷಣವನ್ನು ಬಿಗಿಯುವುದಿಲ್ಲ. ಬದಲಿಗೆ, ಪ್ರತಿಯೊಬ್ಬರೂ ತಮ್ಮ ಮನೆ ಬಾಗಿಲಿನ ಹೊರಗಡೆ ಕೇವಲ ಎರಡು ಮೀಟರಿನಷ್ಟು ಜಾಗವನ್ನು ಸ್ವಚ್ಛ ಮಾಡುವ ಅಭ್ಯಾಸ ಮಾಡಿಕೊಂಡರೆ ಅರ್ಧದಷ್ಟು ಸಮಸ್ಯೆ
ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.

ಕೆಲಸವನ್ನು ಮಾಡಿದರು. ಕಾಲಿಗೆ ಸ್ಲಿಪ್ಪರ್ ಧರಿಸಿ, ಕೈಯಲ್ಲಿ ಪೊರಕೆ ಹಿಡಿದು ಭಾರತದ ರಸ್ತೆಗಳಲ್ಲಿ ಕಸ ಗುಡಿಸುವ ವಿದೇಶಿ ಯುವಕನ ವಿಡಿಯೋ ವೈರಲ್ ಆದವು. ವಿದೇಶಿ ಯುವಕನೊಬ್ಬ ತಮ್ಮ ರಸ್ತೆಗಳನ್ನು ಗುಡಿಸುವುದನ್ನು ನೋಡಿ ಅಪರಾಧಿ ಮನೋಭಾವನೆ ತಳೆದ ಕೆಲವರು ತಾವೇ ಸಂಘಟಿತರಾಗಿ ತಮ್ಮ ಅಕ್ಕಪಕ್ಕದ ರಸ್ತೆಗಳನ್ನು ಗುಡಿಸಲು ಮುಂದಾದರು. ಭಾನುವಾರದ ಬೆಳಗ್ಗಿನ ಗುರ್ಗಾಂವ್ ಸ್ವಚ್ಛತಾ ಅಭಿಯಾನ ಅಂತಹದೊಂದು.

‘ನಾನು ಮುಂದಿನ ಐವತ್ತು ವರ್ಷಗಳ ಕಾಲ ಹೀಗೆ ಗುಡಿಸಿದರೂ ಗುರ್ಗಾಂವಿನ ಕೆಲವು ಸೆಕ್ಟರುಗಳನ್ನು ಮಾತ್ರವೇ ಸ್ವಚ್ಛ ಮಾಡಲು ಶಕ್ಯನಾಗಬಲ್ಲೆ. ಆದರೆ, ನನ್ನಿಂದ ಹಲವರು ಸ್ಫೂರ್ತಿಗೊಂಡು ಸ್ವಚ್ಛತೆ ಕೆಲಸಕ್ಕೆ ಮುಂದಾದರೆ ಅದರಿಂದ ಮಹತ್ವದ ಬದಲಾವಣೆಯಾಗಲು ಸಾಧ್ಯ’ ಎಂದು ಲೇಝರ್ ಹೇಳುತ್ತಾರೆ.ಲೇಝರ್ ದೆಹಲಿಗೆ ಹೋದಾಗ ಅಲ್ಲಿನ ಇಂಡಿಯಾ ಗೇಟ್ ಎದುರಿನ ಪ್ರದೇಶವನ್ನು ಸ್ವಚ್ಛ ಮಾಡಿದರು. ಇನ್ಸಾಗ್ರಾಮ್‌ನ ಜನಪ್ರಿಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಸ್ವಚ್ಛಭಾರತದ ಬಗೆಗಿನ ತಮ್ಮ ಸಂದೇಶಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡಿದರು. ನಮ್ಮಲ್ಲಿ ಸಾಮಾನ್ಯವಾಗಿ ಜನ ಕಸ ಗುಡಿಸುವುದನ್ನು ಕೀಳಾಗಿ ನೋಡುತ್ತಾರೆ. ಆದರೆ, ಅವರು ತಾವೇ ಎಲ್ಲೆಂದರಲ್ಲಿ ಕಸ ಎಸೆದು ಕೊಳಕು ಮಾಡಿದ ತಮ್ಮ ರಸ್ತೆಗಳನ್ನು ಒಬ್ಬ ವಿದೇಶಿಗ ಗುಡಿಸುವುದನ್ನು ನೋಡಿದಾಗ ಅವರಲ್ಲಿ ಕೆಲವರಾದರೂ ಮುಜುಗರ ಪಡುತ್ತಾರೆ. ಅಂತಹವರಲ್ಲಿ ಕೆಲವರು ಮುಂದೆ ಬಂದು ಆತನೊಂದಿಗೆ ಸೇರಿಕೊಂಡು ಸ್ವಚ್ಛತೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೀಗೆ ಲೇಝರ್ ಸ್ಥಳೀಯರನ್ನು ಪ್ರೇರೇಪಿಸುತ್ತಾರೆ.

“ನೀವೇಕೆ ಸ್ವಚ್ಛ ಮಾಡುತ್ತೀರಿ?’ ಎಂದು ಯಾರಾದರೂ ಲೇಝರ್‌ನ್ನು ಕೇಳಿದರೆ ಅದಕ್ಕವರು, ‘ನಾನೇಕೆ ಸ್ವಚ್ಛ ಮಾಡುತ್ತೇನೆ ಎಂದು ಕೇಳಬೇಡಿ. ಬದಲಿಗೆ ನೀವೇಕೆ ಸ್ವಚ್ಛಮಾಡುವುದಿಲ್ಲ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ’ ಎಂದು ಪ್ರಶ್ನೆ ಕೇಳಿದವರಿಗೆ ಉತ್ತರಿಸುವ ಮೂಲಕ ಅವರು ಆಲೋಚಿಸುವಂತೆ ಮಾಡುತ್ತಾರೆ. ಲೇಝರ್ ಸ್ವಚ್ಛತೆಯ ಬಗ್ಗೆ ಉದ್ದುದ್ದ ಭಾಷಣವನ್ನು ಬಿಗಿಯುವುದಿಲ್ಲ. ಬದಲಿಗೆ, ಪ್ರತಿಯೊಬ್ಬರು ತಮ್ಮ ಮನೆ ಬಾಗಿಲಿನ ಹೊರಗಡೆ ಕೇವಲ ಎರಡು ಮೀಟರಿನಷ್ಟು ಜಾಗವನ್ನು ಸ್ವಚ್ಛ ಮಾಡುವ ಅಭ್ಯಾಸ ಮಾಡಿಕೊಂಡರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.

ಲೇಝರ್ ಮಾಡೆಲಿಂಗ್ ಕೆಲಸದ ಮೇಲೆ ಭಾರತಕ್ಕೆ ಬಂದಿದ್ದರೂ ಅವರೀಗ ಯೋಗ, ಧ್ಯಾನ ಮತ್ತು ಫಿಸಿಯೋಥೆರಪಿಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ರಸ್ತೆಗಳನ್ನು ಗುಡಿಸುವುದು ಅದರ ಒಂದು ಭಾಗ. ಹಿಂದಿ ಸಿನಿಮಾ, ಹಾಡು, ಹಾಗೂ ಆಟೋ ರಿಕ್ಷಾ ಪ್ರಯಾಣದಲ್ಲಿ ಸಾಕಷ್ಟು ಹಿಂದಿಯನ್ನೂ ಕಲಿತುಕೊಂಡಿದ್ದಾರೆ. ಅವರು ಹಿಮಾಲಯಕ್ಕೆ ಹೋಗಿ ಕಸಕಡ್ಡಿಯಿಲ್ಲದ ಸ್ವಚ್ಛ ವಾತಾವರಣದಲ್ಲಿ ಧ್ಯಾನ ಮಾಡಲು ಬಯಸುತ್ತಾರೆ. ಗೋವಾಕ್ಕೆ ಹೋಗಿ ಕೊಳಕು ರಹಿತ ಸ್ವಚ್ಚ ಸಮುದ್ರದ ನೀರಿನಲ್ಲಿ ಈಜಲು ಬಯಸುತ್ತಾರೆ. ಕಸಕಡ್ಡಿಯಿಲ್ಲದ ಭಾರತದ ರಸ್ತೆಗಳಲ್ಲಿ ನಡೆಯಲು ಬಯಸುತ್ತಾರೆ. ಏಕೆಂದರೆ, ಸುಂದರವಾದ ಭಾರತ ಸ್ವಚ್ಛ ಭಾರತವೂ ಆಗಿರಬೇಕೆಂದು ಅವರು ಬಯಸುತ್ತಾರೆ.

ಲೇಝರ್ ತಮ್ಮ ಅನುಭವದ ಆಧಾರದ ಮೇರೆಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲು ಮುಂದೆ ಬರುವವರಿಗಾಗಿ ಕೆಲವು ಸೂತ್ರಗಳನ್ನು ರೂಪಿಸಿದ್ದಾರೆ-ನಿಮ್ಮ ಸ್ನೇಹಿತರು, ವಠಾರದವರು ಅಥವಾ ಸ್ಥಳೀಯ ಯುವಕರ ಗುಂಪುಗಳನ್ನು ಸೇರಿಸಿ ಒಂದು ‘ಕೋರ್ ಗ್ರೂಪ್’ನ್ನು ಕಟ್ಟಿಕೊಳ್ಳಿ. ಮೊದಲಿಗೆ ಒಮ್ಮೆಗೆ ದೊಡ್ಡ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳದೆ ಪಾರ್ಕ್, ರಸ್ತೆ ಅಥವಾ ಯಾವುದಾದರೂ ಒಂದು ಚಿಕ್ಕ ಪೇಟೆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪ್ರಯತ್ನ ಆದಷ್ಟು ಮಟ್ಟಿಗೆ ಇತರರ ಗಮನಕ್ಕೆ ಬರುವಂತೆ ರೂಪಿಸಿಕೊಳ್ಳಿ. ನೀವು ಗುಡಿಸಿ ಸಂಗ್ರಹಿಸಿದ ಕಸದ ಸೂಕ್ತ ವಿಲೇವಾರಿಗೆ ಸ್ಥಳೀಯಾಡಳಿತದ ಸಹಾಯವನ್ನು ಪಡೆದುಕೊಳ್ಳಿ. ಕಸ ಗುಡಿಸುವ ಕೆಲಸಕ್ಕೆ ಬೇಕಾಗುವ ಪೊರಕೆ, ಗೌಸ್, ಮಾಸ್ಕ್, ಕಸದ ಚೀಲ, ಕಸದ ಬುಟ್ಟಿ ಮೊದಲಾದವುಗಳನ್ನು ಮೊದಲೇಖರೀದಿಸಿಟ್ಟುಕೊಳ್ಳಿ, ಸ್ಥಳೀಯ ಶಾಲೆ, ಕಾಲೇಜುಗಳೊಂದಿಗೆ ಸಂಪರ್ಕ ಸಾಧಿಸಿ ವಿದ್ಯಾರ್ಥಿ, ಶಿಕ್ಷಕರ ಸಹಾಯವನ್ನು ಪಡೆಯಿರಿ. ಅಗತ್ಯ ಬಿದ್ದರೆ ಕ್ರೌಡ್ ಫಂಡಿಂಗ್ ಮೂಲಕ ಧನ ಸಂಗ್ರಹವನ್ನೂ ಮಾಡಬಹುದು.

ಆಂದೋಲನ ಡೆಸ್ಕ್

Recent Posts

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ 2 ತಿಂಗಳಲ್ಲಿ ದಾಖಲೆಯ ಆದಾಯ

ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್‌ ಹಾಗೂ…

1 hour ago

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…

1 hour ago

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 10 ಮಂದಿ ನಕ್ಸಲರ ಹತ್ಯೆ

ಜಾರ್ಖಂಡ್:‌ ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…

2 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…

2 hours ago

ಸದನದಲ್ಲಿ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮ ಆಗಲಿ: ಆರ್.‌ಅಶೋಕ್‌

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ಕಿಡಿಕಾರಿದ್ದಾರೆ.…

2 hours ago

ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ…

3 hours ago