ರೇಣುಕಾ ನಿಡುಗುಂದಿ
ನಿನ್ನೆ (ಏಪ್ರಿಲ್ 2) ಹನುಮ ಜಯಂತಿ. ಒಮ್ಮೆ ಇದೇ ಹನುಮ ಜಯಂತಿಯಂದು ಯಾವುದೋ ಕಾರ್ಯಕ್ರಮಕ್ಕೆಂದು ಹೊರಟವಳು ಸರಿಯಾದ ಸಮಯಕ್ಕೆ ತಲುಪಲಾಗಲೇ ಇಲ್ಲ. ದಾರಿಯುದ್ದಕ್ಕೂ ಕೇಸರಿ ಧ್ವಜಗಳನ್ನು ಹಾರಿಸುತ್ತಾ ಜೈ ಶ್ರೀರಾಮ್, ಜೈ ಹನುಮಾನ್ ಜಯಕಾರಗಳನ್ನು ಕೂಗುತ್ತಾ ಡಿಜೆ ಹಾಕಿಕೊಂಡು ಉರಿಬಿಸಿ ಲಲ್ಲೂ ಕುಣಿಯುತ್ತಾ ಮೆರವಣಿಗೆ ನಡೆಸುತ್ತಿರುವವರ ಗುಂಪು ವಾಹನ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ಈ ಟ್ರಾಫಿಕ್ ಜಾಮ್‌ನಿಂದ ಹೊರಬಂದರೆ ಸಾಕಪ್ಪಾ ಎನಿಸಿತ್ತು. ಈಗೀಗ ಈ ಆಚರಣೆಗಳಿಗಿಂತ ಹೆಚ್ಚಾಗಿ ಚಿಂತೆಯಾಗುವುದು ಯಾವ ಹೊತ್ತಿಗೆ ಏನು ದಾಂದಲೆ ಆಗುತ್ತದೋ ಎಂದು.
ಕಳೆದ ವಾರವಷ್ಟೇ ಪಶ್ಚಿಮ ಬಂಗಾಳದ ಮುರಶಿ ದಾಬಾದ್‌ನ ರಘುನಾಥ್ ಗಂಜ್‌ನಲ್ಲಿ ರಾಮನವಮಿ ಮೆರವಣಿಗೆಯ ವೇಳೆ ಧ್ವಜದ ವಿಚಾರವಾಗಿ ಜಗಳ ಉಂಟಾಗಿ, ಕಲ್ಲೆಸೆತ, ಬೆಂಕಿ ಹಚ್ಚುವಿಕೆಯಿಂದ ಸುಮಾರು ಅಂಗಡಿಗಳು ಧ್ವಂಸಗೊಂಡ ಸುದ್ದಿ ನೋಡಿದ್ದೆ.
ಇತ್ತೀಚಿನ ದಿನಗಳಲ್ಲಿ “ಜೈ ಶ್ರೀರಾಂ” ಭಕ್ತಿಯ ಕರೆಯಾಗಿ, ನಲ್ಮೆಯ ದನಿಯಾಗಿ ಉಳಿಯದೇ ದ್ವೇಷದ ಘೋಷಣೆಯಾದಂತಿದೆ. ಈ ದ್ವೇಷ ರಾಜಕಾರಣಕ್ಕೆ ನಾನಾ ಚಹರೆಗಳಿವೆ ಮತ್ತು ಅದೀಗ ಕೇವಲ ಅಪರೂಪದ ಘಟನೆಯಾಗಿ ಉಳಿದಿಲ್ಲ; ಸಾರ್ವಜನಿಕ ರಾಜಕೀಯದ ದೈನಂದಿನ ಭಾಗವಾಗಿ ರೂಪುಗೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ರಾಜಕೀಯ ನಾಯಕರುಗಳೇ ಪ್ರಚೋದನಕಾರಿ ಹೇಳಿಕೆಗಳನ್ನು, ಭಾಷಣಗಳನ್ನು ಮಾಡತೊಡಗಿದ್ದು ಚುನಾವಣಾ ರಾಜಕೀಯ, ಧಾರ್ಮಿಕ ಮೆರವಣಿಗೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಟಿವಿ ಚರ್ಚೆಗಳ ಮೂಲಕ ದ್ವೇಷಪೂರ್ಣ ಭಾಷೆ ಸಾಮಾನ್ಯೀಕರಣಗೊಳ್ಳುತ್ತಿದೆ.
ಇಂಡಿಯಾ ಹೇಟ್ ಲ್ಯಾಬ್‌ನ ೨೦೨೫ರ ವರದಿಯ ಪ್ರಕಾರ ದೇಶಾದ್ಯಂತ ೧,೩೧೮ ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ. ಅಂದರೆ ದಿನಕ್ಕೆ ಸರಾಸರಿ ನಾಲ್ಕು ಘಟನೆಗಳು. ಈ ಘಟನೆಗಳಲ್ಲಿ ೯೮ ಶೇಕಡಾ ಭಾಷಣಗಳು ಮುಸ್ಲಿಂ ಸಮುದಾಯವನ್ನು ನೇರವಾಗಿ ಗುರಿಯಾಗಿ ಸಿದ್ದವು. ವರದಿ ಪ್ರಕಾರ, ೮೮ ಶೇಕಡಾ ಘಟನೆಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಡೆದಿವೆ.
ಇದರಲ್ಲಿ ವಿಶೇಷವಾಗಿ ರಾಮನವಮಿ ಮೆರವಣಿಗೆಗಳ ಸಮಯದಲ್ಲಿ ದ್ವೇಷ ಭಾಷಣಗಳ ಏರಿಕೆ ಹೆಚ್ಚು ಗಮನ ಸೆಳೆಯುತ್ತದೆ. ರಾಮನವಮಿಯೆಂಬುದು ಮರ್ಯಾದಾ ಪುರುಷೋತ್ತಮ ರಾಮನ ಜನ್ಮೋತ್ಸವ. ಇದು ಶಾಂತಿ, ಧರ್ಮ, ನ್ಯಾಯ ಮತ್ತು ಮೌಲ್ಯಗಳ ಸಂಕೇತ ವಾಗಿರಬೇಕಾದ ಹಬ್ಬ. ಆದರೆ ದೇವರ ಹೆಸರನ್ನು ಬಳಸಿ ದ್ವೇಷದ ಘೋಷಣೆಗಳನ್ನು ಕೂಗುವುದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸುವುದು, ಅಂಗಡಿ ಗಳನ್ನು ಧ್ವಂಸಗೊಳಿಸುವುದು – ಇವು ರಾಮನ ಮೌಲ್ಯಗಳಿಗೆ ವಿರುದ್ಧವಲ್ಲವೇ? ಹಬ್ಬ ಭಕ್ತಿಯದಾಗಿ ರಬೇಕು, ಭೀತಿಯದಾಗಬಾರದಲ್ಲವೇ.
೨೦೨೫ರಲ್ಲಿ ಉತ್ತರ ಪ್ರದೇಶ ಸರ್ಕಾರವು ನವರಾತ್ರಿಯ ಅವಽಯಲ್ಲಿ ಧಾರ್ಮಿಕ ಸ್ಥಳಗಳ ೫೦೦ ಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿ, ರಾಮನವಮಿ ದಿನ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ವಿಧಿಸಿತು. ಇದೇ ರೀತಿ ಇತರ ರಾಜ್ಯಗಳಲ್ಲಿಯೂ ಮಾಂಸ ಮತ್ತು ಮೀನು ಅಂಗಡಿಗಳನ್ನು ಮುಚ್ಚಿಸುವ ಆದೇಶಗಳು ಪುನರಾವರ್ತಿತವಾಗಿವೆ.
ಹಬ್ಬದ ದಿನ ಕೆಲವು ನಿಯಮಗಳು ಇರಬಹುದು. ಆದರೆ ಒಂದು ಸಮುದಾಯದ ಆಹಾರ ಪದ್ಧತಿ ಮತ್ತು ಮತ್ತೊಂದು ಸಮುದಾಯದ ಜೀವನೋಪಾಯ ಎರಡನ್ನೂ ಸಮಾನವಾಗಿ ಪರಿಗಣಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಸಮಾಜದಲ್ಲಿ ಅಸಮಾನತೆ ಮತ್ತು ಅಸಮಾಧಾನವನ್ನು ಹೆಚ್ಚಿಸುತ್ತವೆ. ಆಡಳಿತವು ಇದನ್ನು “ಧಾರ್ಮಿಕ ಭಾವನೆಗಳಿಗೆ ಗೌರವ” ಎಂದು ಸಮರ್ಥಿಸಿದರೂ, ಧಾರ್ಮಿಕ ಹಬ್ಬದ ಹೆಸರಿನಲ್ಲಿ, ಇನ್ನೊಬ್ಬರ ಉದ್ಯೋಗ ಮತ್ತು ಆಹಾರ ಸ್ವಾತಂತ್ರ್ಯವನ್ನು ನಿರ್ಬಂಽಸುವುದು ಎಷ್ಟು ಸಮಂಜಸ?
ದ್ವೇಷ ಭಾಷಣವೆಂದರೆ ಕೇವಲ ಪದಗಳಲ್ಲಿ ಮಾತ್ರ ಇರದು; ಒಂದು ಸಮುದಾಯವನ್ನು ಸಾರ್ವಜನಿಕವಾಗಿ ಅವಮಾನಿಸುವ, ಬೆದರಿಸುವ, ಬೇರ್ಪಡಿಸುವ ಗುಂಪು ವರ್ತನೆಯೂ ಅದರ ಭಾಗವೇ ಆಗಿದೆ. ಫೆಬ್ರವರಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಪ್ರಖ್ಯಾತ ಇತಿಹಾಸಕಾರರಾದ ಎಸ್. ಇರ್ಫಾನ್ ಹಬೀಬ್ ಮಾತನಾಡುತ್ತಿದ್ದಾಗ ಅವರ ಮೇಲೆ ನೀರು ತುಂಬಿದ ಕಸದ ಬಕೆಟ್ ಎಸೆಯಲಾಯ್ತು. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕ ತಿಯ ಸಮಾಜದಲ್ಲಿ ಇಂತಹ ಘಟನೆಗಳು ಈ ಕಾಲದ ದುರಂತವನ್ನು ಹೇಳುತ್ತವೆ.
ದ್ವೇಷ ರಾಜಕಾರಣದ ದೊಡ್ಡ ಅಪಾಯ ಅದರ ತಕ್ಷಣದ ಪರಿಣಾಮಕ್ಕಿಂತ ಅದರ ಸಾಮಾನ್ಯೀಕರಣದಲ್ಲಿದೆ. ಒಂದು ಸಮುದಾಯವನ್ನು ಪದೇಪದೇ “ಅನ್ಯ” ಎಂದು ಗುರುತಿಸುವ ಭಾಷೆ, ನಂತರದ ಸಾಮಾಜಿಕ ಬಹಿಷ್ಕಾರ, ಆರ್ಥಿಕ ಬಹಿಷ್ಕಾರ, ಮತ್ತು ಕೆಲವೊಮ್ಮೆ ನೇರ ಹಿಂಸೆಗೆ ನೆಲಹಾಸುತ್ತದೆ. ಇದಕ್ಕೆ ದೊಡ್ದ ಉದಾಹರಣೆ “ಪೂರ್ವೋತ್ತರ ದಿಲ್ಲಿಯ ಗಲಭೆ”.
ರಾಜಕೀಯ ಪಕ್ಷಗಳು ಮತ ಧ್ರುವೀಕರಣಕ್ಕಾಗಿ ಧರ್ಮ ಮತ್ತು ಸಮುದಾಯದ ಗುರುತನ್ನು ಬಳಸಿದಾಗ, ಭಾಷೆಯೇ ಮೊದಲು ವಿಷವಾಗುತ್ತದೆ; ನಂತರ ಸಮಾಜವೇ ವಿಭಜಿತವಾಗುತ್ತದೆ. ರಾಯಿಟರ್ಸ್ ವರದಿಯೂ ಚುನಾವಣಾ ಅವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣಗಳು ಹೆಚ್ಚಾಗುತ್ತವೆ ಎಂದು ಸೂಚಿಸಿದೆ.
ಹಿಂದೆ ೨೦೨೩ರಲ್ಲಿ ಲೋಕಸಭೆಯಲ್ಲಿ ಚಂದ್ರಯಾನ-೩ ಕುರಿತ ಚರ್ಚೆಯ ವೇಳೆ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಬಿಎಸ್‌ಪಿ ಸಂಸದ ದಾನಿಶ್ ಅಲಿ ಅವರನ್ನು ಉದ್ದೇಶಿಸಿ “ಕಟುವಾ”, ಮುಲ್ಲಾ, ಆತಂಕವಾದಿ ಎಂದೆಲ್ಲ ಅವಹೇಳನಕಾರಿ ಪದ ಬಳಸಿ ಮಾತನಾಡಿದ್ದರು. ವರದಿಗಳ ಪ್ರಕಾರ ಬಿಧೂರಿ ದಾನಿಶ್ ಅಲಿ ಅವರನ್ನು ಧಾರ್ಮಿಕ ಗುರುತಿನ ಆಧಾರದ ಮೇಲೆ ಅವಮಾನಿಸಿದ್ದರು.
ಇದರಿಂದ ದೇಶವ್ಯಾಪಿ ತೀವ್ರ ವಿರೋಧ ವ್ಯಕ್ತವಾಯಿತು. ಆದರೇನು ಬಿದೂರಿಗೆ ಶಿಕ್ಷೆಯಾಯಿತೆ? ಇಲ್ಲ. ೨೦೨೦ರಲ್ಲಿ ದೆಹಲಿಯಲ್ಲಿ “ಗೋಲಿಮಾರೋ ಸಾಲೋಂ ಕೋ” ಘೋಷಣೆ ಕೂಗಿ ಕೋಮು ಗಲಭೆಯನ್ನು ಪ್ರಚೋದಿಸಿದ್ದ ಸಂಸದ ಅನುರಾಗ್ ಠಾಕೂರ ಆರಾಮಾಗಿದ್ದಾನೆ. ಸಂಸತ್ತು ಎಂಬುದು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ವೇದಿಕೆ. ಅಲ್ಲಿ ಈ ರೀತಿಯ ಭಾಷೆಯನ್ನು ಬಳಸಲಾಯ್ತು. ಅಲ್ಲಿ ಇಂತಹ ಜನ ಪ್ರತಿನಿಧಿಗಳಿದ್ದಾರೆ ಎಂದರೆ ಜನಸಾಮಾನ್ಯರ ಗತಿಯೇನು ಯೋಚಿಸಿ.
ಭಾರತದಲ್ಲಿ ೨೦೨೪ರಿಂದ (Bharatiya Nyaya Sanhita) BNS ( IPC ಹಳೆಯದು) Section ೧೯೬ರ ಪ್ರಕಾರ ಧರ್ಮ, ಜಾತಿ, ಭಾಷೆ, ಸಮುದಾಯ, ಪ್ರಾಂತ ಇತ್ಯಾದಿಗಳ ಆಧಾರದ ಮೇಲೆ ಶತ್ರುತ್ವ, ದ್ವೇಷ, ವೈಮನಸ್ಯ ಪ್ರಚೋದಿಸುವ ಮಾತು/ಬರಹ ಶಿಕ್ಷಾರ್ಹ. ಸಾಮಾನ್ಯವಾಗಿ ೩ ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ ಎನ್ನುತ್ತದೆ ಕಾನೂನು. BNS Section ೨೯೯ – ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು ಶಿಕ್ಷಾರ್ಹ. BNS Section ೩೫೩ ಅಡಿ ಸಾರ್ವಜನಿಕ ಶಾಂತಿ ಭಂಗವಾಗುವಂತೆ ಉದ್ದೀಪಕ/ ವದಂತಿ ಸಂದೇಶಗಳು ಅಥವಾ ಹೇಳಿಕೆಗಳು ಹರಡುವುದು ಅಪರಾಧ. ” ಇಷ್ಟೆಲ್ಲಾ ಕಾನೂನು ಇದ್ದರೂ, ಮುಖ್ಯ ಸಮಸ್ಯೆ ಅದರ ಪಾಲನೆಯಲ್ಲಿದೆ (implementation). ಪ್ರಶ್ನೆ ಕೇವಲ ದ್ವೇಷ ಭಾಷಣ ಸಂಖ್ಯೆಯ ಬಗ್ಗೆ ಅಲ್ಲ, ಒಬ್ಬರ ಮೇಲಿನ ಹಲ್ಲೆ ಕೇವಲ ಹಲ್ಲೆ ಅಲ್ಲ, ಅದು ನಮ್ಮ ಪ್ರಜಾಸತ್ತಾತ್ಮಕ ಸಂಸ್ಕ ತಿಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದರ ಬಗ್ಗೆ.
ಮಾತುಗಳು ಕೇವಲ ಶಬ್ದಗಳಲ್ಲ; ಅವು ಸಮಾಜದ ಭವಿಷ್ಯವನ್ನು ರೂಪಿಸುವ ರಾಜಕೀಯ ಸಾಧನಗಳಾಗಿವೆ. ದ್ವೇಷ ಭಾಷಣವನ್ನು ತಡೆಯುವುದು ಕೇವಲ ಕಾನೂನು ಹೊಣೆಗಾರಿಕೆ ಅಲ್ಲ; ಅದು ಸಮಾಜದ ನೈತಿಕ ಕರ್ತವ್ಯವೂ ಆಗಿದೆ.
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…
ಬೆಂಗಳೂರು: ಗ್ಯಾಸ್ ಸಿಗದೇ ಆಟೋ ಚಾಲಕರು ಪರದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ…
ದಾವಣಗೆರೆ: ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಜೊತೆಗೆ ಅಭಿವೃದ್ಧಿಗೂ ಪ್ರತಿ ಕ್ಷೇತ್ರಕ್ಕೆ ನೂರು ಕೋಟಿ ರೂ.ಗಳಿಗೆ ಹೆಚ್ಚಿನ ಅನುದಾನವನ್ನು ಸಿದ್ದರಾಮಯ್ಯ ಅವರು…
ಚೆನ್ನೈ: ತಾವು ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ. ಇದರ ಬಗ್ಗೆ ಅನಗತ್ಯವಾಗಿ ಗೊಂದಲಗಳು ಬೇಡ ಎಂದು…
ಟೆಹರಾನ್: ಅಮೇರಿಕಾ ಜೊತೆ ಮಾತುಕತೆ ನಡೆಸಲು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ. ಯುದ್ಧವನ್ನು ರಾಜತಾಂತ್ರಿಕತೆ ಮೂಲಕ ನಿಲ್ಲಿಸಲು ಸಜ್ಜಾಗಿದ್ದ ಅಮೇರಿಕಾಗೆ ಈಗ…
ಬೆಂಗಳೂರು: ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲನೆ ನಡೆಸುವಂತೆ…