ವಾರೆ ನೋಟ : ‘ಆತ್ಮ’ ಮತ್ತು ‘ಸಾಕ್ಷಿ’ಯ ಮುಖಾಮುಖಿ!

‘ಏಯ್ ಸಾಕ್ಷಿ, ಎಲ್ಲ್ ಹೋಗ್ತಾ ಇದ್ದೀಯಾ ನಿಲ್ಲೋ.. ಯಾಕೋ ಶಾನೆ ಬೇಜಾರಾದಂಗಿದೆ, ಏನಾಯ್ತು? ಯಾರಾದ್ರೂ ಚೀಟ್ ಮಾಡಿದ್ರಾ?’

‘ಅಯ್ಯೋ ಬಿಡು ಮಾರಾಯಾ, ಚೀಟ್ ಆಗೋದೆಲ್ಲಾ ಈಗ ಕಾಮನ್ನಾಗೋಗಿದೆ. ಎಲ್ರೂ ಚೀಟ್ ಮಾಡೋರೆಯಾ. ಚೀಟಾಗಿ ಚೀಟಾಗಿ ಅಭ್ಯಾಸಾನು ಆಗಿ ಹೋಗಿದೆ ಜನಾ ಚೀಟ್ ಮಾಡೋದನ್ನು ಸಹಿಸ್ಕೋಬಹುದು ಆದ್ರೆ ಸ್ಪ್ಲಿಟ್ ಮಾಡೋದನ್ನ ಸಹಿಸೋಕಾಗೋಲ್ಲ ಕಣೋ ಆತ್ಮಾ .ಆದ್ರೆ, ಈ ಜನಾ ಯಾವಾಗ್ಲೂ ನಮ್ಮುನ್ನೇ ಟಾರ್ಗೆಟ್ ಮಾಡೋದು ಯಾಕೆ? ನಾವೇನು ಬಿಟ್ಟಿ ಬಿದ್ದಿದಿವಾ?’

‘ಯಾವಾಗ್ಲೂ ಇಲ್ಲಾ ಕಣೋ ಸಾಕ್ಷಿ , ಎಲೆಕ್ಷನ್ ಬಂದಾಗ, ಅದ್ರಲ್ಲೂ ಈ ರಾಜ್ಯಸಭೆ ಎಲೆಕ್ಷನ್ ಬಂದಾಗ ನೋಡ್ ನಮ್ಮನ್ನಾ ಟಾರ್ಗೆಟ್ ಮಾಡ್ತಾರೆ, ಅದ್ಯಾರ್ಯಾರೆಲ್ಲಾ ನಮ್ಮ ವಿಷ್ಯ ಮಾತಾಡ್ತಾರೆ. ನಾವು ಅಂದ್ರೇನು ನಮ್ ವಿಷ್ಯಾ ಅಂದ್ರೇನು ಗೊತ್ತಿಲ್ದೆರೋಲೆಲ್ಲಾ ಮಾತಾಡ್ತಾರೆ ಕಣೋ,
ಮಾತಾಡೋರ್ ಮಾತಾಡ್ಕೊಳ್ಳಿ ಅದುಕ್ಕೂ ಬೇಜಾರಿಲ್ಲ. ಆದ್ರೆ, ನಮ್ಮುನ್ನೇ ಸ್ಪ್ಲಿಟ್ ಮಾಡೋಕ್ಕೆ ಹೋಗಿದ್ರಲ್ಲಾ ಅದುಕ್ಕೆ ಬೇಜಾರಾಯ್ತುಆತ್ಮಾ

‘ಯಾರ್ ವಿಷ್ಯಾ ಮಾತಾಡ್ತಾ ಇದ್ದೀಯ ಸಾಕ್ಷಿ ?ಸಿದ್ದರಾಮಯ್ಯ ಅವರ ವಿಷಯಾನಾ? ಆತ್ಮಸಾಕ್ಷಿಗೆ ಓಗೊಟ್ಟು ಮತಹಾಕಿ ಅಂತ ಕರೆ ನೀಡಿದ್ರಲ್ಲಾ.. ಆ ವಿಷ್ಯಕ್ಕಾ?’


ಇಲ್ಲ ಕಣೋ ಆತ್ಮ, ಚುನಾವಣೆ ಹೊತ್ತಿಗೆ ಕರೆ ನೀಡೋದ್ ಇದ್ದೇ ಇದೆ. ಕರೆ ಕೊಡ್ತಾರೆ. ಕೆಲವರು ‘ಕರ-ದಂಟು’ ಕೊಟ್ಟವರಿಗೆ ಮತ ಹಾಕ್ತಾರೆ. ‘ಕರ-ದಂಟಿ’ನ ಮೌಲ್ಯ ಎಷ್ಟು ಅಂತಾ ಯಾರಿಗೆ ಗೊತ್ತಪ್ಪಾ? ಒಟ್ನಲ್ಲಿ ತಮ್ಮ ಪಟ್ಟವನ್ನು ಭದ್ರ ಪಡಿಸಿಕೊಳ್ಳಲು ಹಿತವಾಗಿಯೇ ಆಸಕ್ತಿ ತೋರಿಸುವಂತಹ ಈ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ್ ಬಗ್ಗೆ ಮಾತಾಡ್ತಾನೆ ಇರ್ತವೆ. ಇಂತಹ ಹಿತಾಸಕ್ತಿಗಳಲ್ಲಿ ಯಾರ ಹಿತ ಅಡಗಿದೆಯೋ ಯಾರ ಆಸಕ್ತಿಗಾಗಿ ನಮ್ಮನ್ನಾ ಮಧ್ಯದಲ್ಲಿ ಎಳೆಯುತ್ತಾರೋ ಗೊತ್ತಾಗೊಲ್ಲ
ಹೌದು ಕಣೋ ’

‘ನೀನ್ ಹೇಳಿದ್ದು ನಿಜಾ. ಯಾವ್ ಹುತ್ತದಲ್ಲಿ ಯಾವ್ ಹಾವ್ ಇರುತ್ತೆ ಹೇಳೋಕಾಗೊಲ್ಲ. ಹಾವೇ ಇಲ್ದೇರೋ ಹುತ್ತಗಳು ಇರ್ತಾವೆ.. ಹಾವ್ ಇದೆಯೋ ಇಲ್ವೋ ಅಂತಾ ಹೇಳೋದ್ ಕೂಡಾ ಕಷ್ಟ ಆಗ್ಬುಟ್ಟಿದೆ. ಅದ್ಸರಿ ನೀನ್ಯಾಕೆ ಶಾನೆ ಬೇಜಾರ್ ಮಾಡ್ಕೊಂಡಿದ್ದೀಯಾ? ಸಾಕ್ಷಿಟ

‘ಆಗ್ಲೆ ಹೇಳಿದ್ನಲ್ಲಾ ಆತ್ಮಾ. ನಮ್ಮುನ್ನೇ ಸ್ಪ್ಲಿಟ್ ಮಾಡೋಕೆ ಹುನ್ನಾರ ಮಾಡ್ತಾ ಇದಾರೆ.. ಅಂತಾ, ಅದುಕ್ಕೆ ಬೇಜಾರು’

‘ನೀನ್ ಯಾರ್ ವಿಚಾರ ಹೇಳ್ತಾ ಇದ್ದೀಯಾ? ನಮ್ಮನ್ನೇ ಸ್ಲ್ಪಿಟ್ ಮಾಡೋಕೆ ರಾಜಕಾರಣಿಗಳು ಯಾವಾಗ್ಲೂ, ಎಲ್ರೂ ಕಾಯ್ಕೊಂಡೆ ಕುತೀರ್ತಾರೆ ಆತ್ಮ-ಸಾಕ್ಷಿ ಜತೇಲಿದ್ರೆ ಕೆಲ್ಸ ಕೆಡುತ್ತೆ ಅಂತಾ ಗೊತ್ತಿರುತ್ತೆ. ಡಿವೈಡ್ ಅಂಡ್ ರೂಲ್ ಅನ್ನೋದೇ ಅವರ ಪಾಲಿಸಿ.. ಟೇಕ್ ಇಟ್ ಈಸಿ’.

‘ಆಫ್ ದಿ ರೆಕಾರ್ಡು ಇವ್ರ ನಮ್ಮುನ್ನಾ ಸ್ಪ್ಲಿಟ್ ಮಾಡ್ತಾನೇ ಇದ್ರು.. ಇವತ್ತುಂದಿನಾ ಏನಾಗಿದೆ ಅಂದ್ರೆ ಪಬ್ಲಿಕ್ಕಾಗಿ ನಮ್ಮುನ್ನಾ ಸ್ಲ್ಪಿಟ್ ಮಾಡ್ತಾ ಇದಾರೆ ನಮ್ಮುನ್ನೇ ಸ್ಪ್ಲಿಟ್ ಮಾಡೋ ಜನಾ ಇವ್ರ, ಇನ್ನೇನ್ ಬಿಡ್ತಾರೆ ಹೇಳು? ರಸ್ತೆ ಮತ್ತು ಲೋಕೋಪಯೋಗಿ ಇಲಾಖೆ ಸ್ಪ್ಲಿಟ್ ಮಾಡ್ದೆ ಬಿಡ್ತಾರಾ?’

‘ಹೌದು ಕಣೋ ಸಾಕ್ಷಿ… ನೀನ್ ಯಾರ್ ಬಗ್ಗೆ ಹೇಳ್ತಾ ಇದ್ದೀಯಾ ಅಂತಾ ನಂಗೆ ಕನ್ಫ್ಯೂಸ್ ಆಗ್ತಾ ಇದೆ.. ನೀನೇನಾದ್ರೂ ವಿಶ್ವಗುರು ಮೋದಿ ಅವರ ಬಗ್ಗೆ ಏನಾದ್ರೂ ಹೇಳ್ತಾ ಇದ್ದೀಯಾ ಹೆಂಗೆ?’

‘ಇಲ್ಲ ಕಣೋ ಆತ್ಮಾ , ಅವರು ನನ್ನನ್ನು ನಿನ್ನನ್ನು ಇಬ್ಬರನ್ನು ಅವರ ವಿಶ್ವಾಸ ವಲಯದಿಂದ ಕಿತ್ತೊಗೆದಿದ್ದಾರೆ.. ಅವರ ಬಗ್ಗೆ ಮಾತನಾಡಲು ನಮಗೆ ಶಕ್ತಿ ಇಲ್ಲ ಕಣೋ’


ಮತ್ಯಾರ ಬಗ್ಗೆ ಹೇಳ್ತಾ ಇದೀಯಾ ಹೇಳು ನಮ್ಮುನ್ನೇ ಸ್ಪ್ಲಿಟ್ ಮಾಡೋ ಖತರ್‌ನಾಕ್ ಐಡಿಯಾ ಇದೆ ಅಂದ್ರೆ, ಅವ್ರ ಮುಂದಿನ್ ಎಲೆಕ್ಷನ್‌ನಲ್ಲಿ ಅತಂತ್ರ ವಿಧಾನಸಭೆ ಬಂದ್ರೆ ಅವ್ರೆ ಏನಾದ್ರೂ ಸಿಎಂ ಆಗೋ ಪ್ಲಾನ್ ಮಾಡಿದ್ದಾರಾ ಹೆಂಗೇ? ನಾನು- ನೀನು ಒಟ್ಟಿಗೆ ಇಲ್ಲ ಅಂದ್ರೆ ಆಗಬಾರದ್ದೆಲ್ಲಾ ಆಗುತ್ತೆ.. ನೋಡು’


ಹೌದು ಮಾರಾಯಾ ನಮ್ಮ ಜಾದಳ ನಾಯುಕ್ರು ಸಿದ್ದರಾಮಯ್ಯ ಅವ್ರ ಬಗ್ಗೆ ಯದ್ವಾ ತದ್ವಾ ಟೀಕೆ ಮಾಡುದ್ರಲ್ಲಾ, ಆವಾಗ್ಲೆ ಅವ್ರ ನಮ್ಮುನ್ನಾ ಸ್ಪ್ಲಿಟ್ ಮಾಡೋಕೆ ತಂತ್ರ ಮಾಡಿದ್ರು.’

‘ಹೌದಾ ಸಾಕ್ಷಿ ?ನೀನ್ ಹೇಳ್ತಾ ಇರೋದಕ್ಕೆ ನಿನ್ನತ್ರಾ ಸಾಕ್ಷಿ ಇದೆಯಾ?’

‘ಲೇ.. ಆತ್ಮಾ ನಾನು ಏನೇ ಮಾತಾಡಿದ್ರೂ ನಿಜಾನೇ ಮಾತಾಡ್ತಿನಿ ಅದುಕ್ಕೆಲ್ಲಾ ಸಾಕ್ಷಿ ಕೊಡಕಾಗಕಿಲ್ಲಾ.. ಆದ್ರೆ, ಆತ್ಮಸಾಕ್ಷಿಯಾಗಿ ಮಾತಾಡ್ತೀನಲ್ಲಾ ಅದುಕ್ಕಿಂತಾ ಸಾಕ್ಷಿ ಬೇಕಾ?’

‘ಸರಿ ಬಿಡಪಾ ಸಾಕ್ಷಿ, ನಾವ್ ನಾವೇ ಯಾಕ್ ಕಚ್ಚಾಡೋದು? ಕುಮಾರ್‌ಸ್ವಾಮಿ ನಮ್ಮುನ್ನಾ ಸ್ಪ್ಲಿಟ್ ಮಾಡೋ ಅಂತಾ ಕೆಲ್ಸ ಏನ್ ಮಾಡಿದ್ರು?

‘ನೀನು ಸರಿಯಾಗಿ ಕೇಳಿಸ್ಕೊಳ್ಳಲಿಲ್ಲ.. ಅನ್ಸುತ್ತೆ ಆತ್ಮ. ಸಿದ್ದರಾಮಯ್ಯ ಅವರಿಗೆ ‘ಆತ್ಮಾ’ನೂ ಇಲ್ಲಾ ‘ಸಾಕ್ಷಿ’ನೂ ಇಲ್ಲ ಅಂತಾ ಕುಮಾರಸ್ವಾಮಿ ಹಿಗ್ಗಾ ಮುಗ್ಗಾ ಟೀಕೆ ಮಾಡಿದ್ದಾರೆ. ಅಲ್ಲಾ ಸಿದ್ದರಾಮಯ್ಯಗೆ ‘ಆತ್ಮಸಾಕ್ಷಿ’ ಇಲ್ಲಾ ಅಂತಾ ಟೀಕೆ ಮಾಡಿದ್ರೆ ನಮ್ ತಕರಾರೇನೂ ಇರ್ತಿರಲಿಲ್ಲ. ಆದ್ರೆ ಇವತ್ತುಂದಿನಾ ಕುಮಾರಣ್ಣನಾ ಮಾತು ಏನಿದೆ, ಅದು ನಮ್ಮುನ್ನ ಸ್ಪ್ಲಿಟ್ ಮಾಡೋಕೆ ಅಂತಾನೇ ಹೇಳಿರೋ ಮಾತು. ಈ ಮಾತುನ್ನಾ ಬೇಕಾದ್ರೆ ಕುಮಾರಣ್ಣುನ್ನೇ ಕೇಳೋಣಾ.. ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ ನೀವು ನಮ್ಮುನ್ನಾ ಸ್ಪ್ಲಿಟ್ ಮಾಡೋಕೆ ತಾನೇ ಸಿದ್ದರಾಮಯ್ಯ ಅವರಿಗೆ ಆತ್ಮಾನೂ ಇಲ್ಲಾ ಸಾಕ್ಷಿನೂ ಇಲ್ಲಾ ಅಂತಾ ಹೇಳಿದ್ದು.. ಅಂತಾ… ಏನಂತೀಯಾ ಆತ್ಮಾ?’

‘ನೀನ್ ಹೇಳೋದು ಸರಿಯಾಗಿಯೇ ಇದೆ ಸಾಕ್ಷಿ, ಆದ್ರೆ, ಕುಮಾರಣ್ಣ ಮುಂದಿನ ಚುನಾವಣೆಲೀ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ನಾವೆಲ್ಲಾ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದೇವೆ ಈಗ ಆತ್ಮಸಾಕ್ಷಿ ವಿಷ್ಯಾ ಮಾತಾಡೋದಿಲ್ಲಾ ಅಂದ್ರೆ ಏನ್ಮಾಡೋದು ಸಾಕ್ಷಿ???
ಅದೂ ನಿಜಾನೇ ಕಣೋ ಆತ್ಮ!!!

– ‘ಅಷ್ಟಾವಕ್ರಾ’

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

24 mins ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

1 hour ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

1 hour ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

2 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

2 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

2 hours ago