ಅಂಕಣಗಳು

ಎಲಾನ್ ಮಸ್ಕ್ ಪಂಜರಕ್ಕೆ ಬಿದ್ದ ಟ್ವಿಟ್ಟರ್ ಹಕ್ಕಿ!

ಭಾರತ  : ಭಾರತ ಸರ್ಕಾರ ಮತ್ತು ಟ್ವಿಟ್ಟರ್ ನಡುವೆ ಹಲವು ತಗಾದೆಗಳು ಈಗ ನ್ಯಾಯಾಲಯದ ಮೆಟ್ಟಿಲೇರಿವೆ. ಕೇಂದ್ರ ಸರ್ಕಾರ ತನ್ನ ವಿರುದ್ಧ ಪ್ರಚಾರ ಮಾಡುವವರ ಪಟ್ಟಿಯನ್ನು ಟ್ವಿಟ್ಟರ್‌ಗೆ ಆಗಿಂದಾಗ್ಗೆ ನೀಡುತ್ತಾ ಖಾತೆಗಳನ್ನು ಬಂದ್ ಮಾಡುವಂತೆ ಆದೇಶಿಸುತ್ತಿದೆ. ಟ್ವಿಟ್ಟರ್ ಆದೇಶ ಪಾಲಿಸುತ್ತಿಲ್ಲ. ಬದಲಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದೆ. ಮುಕ್ತ ಸ್ವಾಂತಂತ್ರ್ಯ ಪ್ರತಿಪಾದಿಸುವ ಮಸ್ಕ್ ಆಡಳಿತದಲ್ಲಿ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ಬಿರುಸಾದರೆ ಅಚ್ಚರಿ ಪಡಬೇಕಿಲ್ಲ.

ಟ್ವಿಟ್ಟರ್‌ನಲ್ಲೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್!  ಟ್ವಿಟ್ಟರ್  ಹಕ್ಕಿ ಎಲಾನ್ ಮಸ್ಕ್ ಪಂಜರ ಸೇರಿದೆ. ಇದುವರೆಗೆ  ಟ್ವಿಟ್ಟರ್ ಮುನ್ನಡೆಸುತ್ತಿದ್ದವರ ತಲೆಯುರುಳಿವೆ. ಎಲ್ಲಾ ಎಲಾನ್ ಮಸ್ಕ್ ಮಾಯೆ!

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್  ಟ್ವಿಟ್ಟರ್  ಖರೀದಿಗೆ ಮುಂದಾಗಿದ್ದೇ ಒಂದು ಕತೆ. ಸದಾ ವಿವಾದಾತ್ಮಕ ಟ್ವೀಟ್ ಮಾಡುತ್ತಿದ್ದ ಎಲಾನ್ ಮಸ್ಕ್  ಟ್ವಿಟ್ಟರ್  ಆಡಳಿತ ಮಂಡಳಿಯೊಂದಿಗೆ ವಿಷಯವೊಂದರ ಕುರಿತು ಜಿದ್ದಿಜಿದ್ದಿಗೆ ಬಿದ್ದರು. ಆ ಜಿದ್ದಿನಿಂದಲೇ  ಟ್ವಿಟ್ಟರ್  ಖರೀದಿಗೆ ಮುಂದಾದರು.

ಎಲ್ಲಾ ಆಗಿ ಕೊನೆಗೆ  ಟ್ವಿಟ್ಟರ್  ಬೇಡ ಎಂದರು. ಭಾರತೀಯ ಭಾಷೆಯಲ್ಲಿ ಹೇಳುವುದಾದರೆ, ಮಧುಮಗ ವಧುಪರೀಕ್ಷೆ ನಡೆಸಿ, ನಿಶ್ಚಿತಾರ್ಥ ಮಾಡಿಕೊಂಡಾದ ಮೇಲೆ ವಿವಾಹವನ್ನೇ ರದ್ದು ಮಾಡಿದಂತೆ! ಹಿರಿಯರು ನ್ಯಾಯಪಂಚಾಯ್ತಿ ಮಾಡಿ ಮತ್ತೆ ಮದುವೆಗೆ ಒಪ್ಪಿಸಿದಂತೆ!!  ಇದೀಗ ನ್ಯಾಯಾಲಯದ ಮೂಲಕ  ಟ್ವಿಟ್ಟರ್  ಖರೀದಿ ಒಪ್ಪಂದವನ್ನು ಮಸ್ಕ್ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಒಪ್ಪದೇ ಹೋಗಿದ್ದರೆ ದೊಡ್ಡ ಪ್ರಮಾಣದಲ್ಲಿ ದಂಡ ಕಟ್ಟಬೇಕಾಗುತ್ತಿತ್ತು. ದೊಡ್ಡ ಪ್ರಮಾಣದ ದಂಡಕ್ಕಿಂತಲೂ ಮಸ್ಕ್ ವ್ಯಕ್ತಿತ್ವದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿತ್ತು.

10 ಕೋಟಿ ಹಿಂಬಾಲಕರನ್ನು ಪಡೆದಿರುವ ಎಲಾನ್ ಮಸ್ಕ್ ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲಿ ಎತ್ತಿದ ಕೈ. ಆಗಾಗ್ಗೆ ತಮ್ಮ ಕಂಪನಿ ವ್ಯವಹಾರಗಳ ಕುರಿತು  ಟ್ವಿಟ್ಟರ್‌ನಲ್ಲಿ ಚರ್ಚಿಸಿ ಷೇರು ಬೆಲೆ ತೀವ್ರವಾಗಿ ಕುಸಿಯಲು ಕಾರಣರಾಗಿದ್ದಾರೆ.

ಜನವರಿಯಿಂದಲೇ ಮುಕ್ತ ಮಾರುಕಟ್ಟೆಯಲ್ಲಿ  ಟ್ವಿಟ್ಟರ್  ಷೇರು ಖರೀದಿಸಿಲಾರಂಭಿಸಿದ ಮಸ್ಕ್, ಏಪ್ರಿಲ್ 4 ರ ಹೊತ್ತಿಗೆ ಶೇ.9.2 ರಷ್ಟು ಷೇರುಗಳನ್ನು ಖರೀದಿಸಿ ಅತಿ ಹೆಚ್ಚು ಸಂಖ್ಯೆ ಷೇರುಹೊಂದಿರುವ ವ್ಯಕ್ತಿಯಾದರು.  ಟ್ವಿಟ್ಟರ್  ಆಡಳಿತ ಮಂಡಳಿಯಲ್ಲಿ ಸ್ಥಾನ ಬಯಸಿದರು. ಆಡಳಿತ ಮಂಡಳಿ ಸ್ಥಾನ ನೀಡಲು ನಿರಾಕರಿಸಿತು. ಮುಕ್ತ ಮಾರುಕಟ್ಟೆಯಲ್ಲಿ ಮತ್ತಷ್ಟು ಷೇರುಗಳನ್ನು ಖರೀದಿಸಿ ತಮ್ಮ ಷೇರುಗಳ ಪ್ರಮಾಣವನ್ನು ಶೇ.14.9  ರಷ್ಟು ಹಿಗ್ಗಿಸಿಕೊಂಡರು.

ಏಪ್ರಿಲ್ 14ರಂದು  ಟ್ವಿಟ್ಟರ್  ಖರೀದಿ ಮಾಡುವುದಾಗಿ ಘೋಷಿಸಿದರು. ಪ್ರತಿ ಷೇರಿಗೆ 54.20ಡಾಲರ್ ನೀಡುವುದಾಗಿಯೂ (ಮಾರುಕಟ್ಟೆ ದರಕ್ಕಿಂತ ಶೇ.54 ರಷ್ಟು ಹೆಚ್ಚು) ಆಹ್ವಾನ ನೀಡಿದರು. ಏಪ್ರಿಲ್ ೨೧ರಂದು 44 ಬಿಲಿಯನ್ ಡಾಲರ್ ಆಫರ್ ನೀಡಿದರು. ಏಪ್ರಿಲ್ 25ರಂದು 44 ಬಿಲಿಯನ್ ಡಾಲರ್ (ರೂಪಾಯಿ ಲೆಕ್ಕದಲ್ಲಿ 3,62,824 ಕೋಟಿ ) ಕೊಟ್ಟು ಖರೀದಿ ಮಾಡಲು   ಒಪ್ಪಿದ್ದರು. ಈ ಸಂಬಂಧ ಔಪಚಾರಿಕ ಒಪ್ಪಂದಗಳೂ ಆದವು.

ಎಲಾನ್ ಮಸ್ಕ್  ಟ್ವಿಟ್ಟರ್  ಖರೀದಿಸುತ್ತಾರೆ ಎಂಬ ಸುದ್ದಿ ಹೊರ ಬಂದ ನಂತರ  ಟ್ವಿಟ್ಟರ್  ಷೇರು ಬೆಲೆಯಷ್ಟೇ ಅಲ್ಲ ಟೆಸ್ಲಾ ಮೋಟಾರ್ಸ್ ಷೇರು ಬೆಲೆಯೂ ಕುಸಿಯಿತು.

ಖರೀದಿ ಒಪ್ಪಂದವಾಗುವ ಮುನ್ನವೇ ಮಸ್ಕ್  ಟ್ವಿಟ್ಟರ್ ಆಡಳಿತ ಮಂಡಳಿ ಮೇಲೆ ಕೆಲವು ನಿರ್ಬಂಧ ಹೇರಲಾರಂಭಿಸಿದ್ದರು. ಮೊದಲನೆಯದಾಗಿ ಹೊಸದಾಗಿ ಯಾರನ್ನೂ ನೇಮಕ ಮಾಡಿಕೊಳ್ಳಬಾರದು ಮತ್ತು ಹಾಲಿ ಇರುವವರನ್ನು ಕೆಲಸದಿಂದ ತೆಗೆಯಬಾರದು ಎಂಬುದು ಪ್ರಮುಖ ಷರತ್ತಾಗಿತ್ತು.

ಮಾಲೀಕತ್ವ ಹಸ್ತಾಂತರ ಪ್ರಕ್ರಿಕೆಯೆ ಎಲ್ಲವೂ ಸಲೀಸಾಗಿ ನಡೆಯುತ್ತಿದ್ದ ಹಂತದಲ್ಲಿ ಮೇ 13 ರಂದು ಮಸ್ಕ್  ಟ್ವಿಟ್ಟರ್ ಮಾರಾಟ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಘೋಷಿಸಿದರು. ಅದಕ್ಕೆ ಅವರು ನೀಡಿದ ಕಾರಣ,  ಟ್ವಿಟ್ಟರ್  ಖಾತೆಗಳಲ್ಲಿ ನಿಜವಾದ ಖಾತೆಗಳೆಷ್ಟು ನಕಲಿ ಖಾತೆಗಳೆಷ್ಟು ಎಂಬುದರ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂಬುದು.

ಮೇ 17ರಂದು  ಟ್ವಿಟ್ಟರ್  ಖರೀದಿ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಮಸ್ಕ್ ಬೆದರಿಕೆ ಹಾಕಿದರು. ಒಪ್ಪಂದದಿಂದ ಹಿಂದೆ ಸರಿಯುವುದಾದರೆ 1 ಬಿಲಿಯನ್ ಡಾಲರ್ ದಂಡ ಕಟ್ಟುವಂತೆ  ಟ್ವಿಟ್ಟರ್  ಆಡಳಿತ ಮಂಡಳಿ ಹೇಳಿತು. ಜುಲೈ 12ರಂದು  ಟ್ವಿಟ್ಟರ್  ನ್ಯಾಯಾಲಯದ ಕಟ್ಟೆ ಏರಲು ನಿರ್ಧರಿಸಿ, ಡೆಲ್ವೇರ್ ಚಾನ್ಸರಿ ಕೋರ್ಟ್‌ನಲ್ಲಿ ದಾವೆ ಹೂಡಿತು.

ವಿಚಾರಣೆ ನಡೆಸಿದ ಡೆಲ್ವೇರ್ ಕೋರ್ಟ್ ಮಸ್ಕ್‌ಗೆ ಅಕ್ಟೋಬರ್ 28 ರವರೆಗೆ ಗಡುವು ನೀಡಿತ್ತು.

ಎಲ್ಲರೂ ಮಸ್ಕ್ ದಂಡ ಶುಲ್ಕ ಪಾವತಿಸಿ  ಟ್ವಿಟ್ಟರ್ ಒಪ್ಪಂದದಿಂದ ಹೊರಗೆ ಉಳಿಯುತ್ತಾರೆ ಎಂದೇ ನಂಬಿದ್ದರು. ಆದರೆ, ಗಡುವು ಮುಗಿಯುವ ಕೊನೆ ಕ್ಷಣದಲ್ಲಿ  ಟ್ವಿಟ್ಟರ್ ಖರೀದಿಸುವುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ.

ಇದುವರೆಗೆ ಸಿಇಒ ಆಗಿದ್ದ ಪರಾಗ್ ಅಗರ್‌ವಾಲ್, ಕಾನೂನು ಆಡಳಿತ ವಿಭಾಗದ ಮುಖ್ಯಸ್ಥರಾಗಿದ್ದ ವಿಜಯ್ ಗದ್ದೆ ಸೇರಿದಂತೆ ಉನ್ನತ ಸ್ಥಾನದಲ್ಲಿದ್ದ ಹಲವರನ್ನು ಸೇವೆಯಿಂದ ವಜಾ ಮಾಡಿದ್ದಾರೆ.

‘ಹಕ್ಕಿಯೀಗ ಸ್ವಾತಂತ್ರ್ಯಗೊಂಡಿದೆ…’ ಎಂಬ ಒಕ್ಕಣೆಯೊಂದಿಗೆ  ಟ್ವಿಟ್ಟರ್ ಕೇಂದ್ರ ಕಚೇರಿಗೆ ಪ್ರವೇಶಿಸುತ್ತಿರುವ ವಿಡಿಯೋ ಟ್ವೀಟ್ ಮಾಡಿರುವ ಮಸ್ಕ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

 

ಜಗತ್ತಿನಾದ್ಯಂತ 23ಕೋಟಿ ಜನರು  ಟ್ವಿಟ್ಟರ್  ಬಳಸುತ್ತಿದ್ದಾರೆ.  ಟ್ವಿಟ್ಟರ್  ಈಗ ಕೇವಲ ಸಂದೇಶವಾಹಕವಾಗಿ ಮಾತ್ರ ಉಳಿಯದೇ ಸುದ್ದಿ ಸಮಾಚಾರಗಳನ್ನು ತ್ವರಿತವಾಗಿ ತಲುಪಿಸುವ ಸಂಪರ್ಕಜಾಲವಾಗಿ ಹೆಮ್ಮರವಾಗಿ ಬೆಳೆದಿದೆ.

ಆಯ್ದ ಗುಂಪುಗಳ ಮೇಲೆ ಪ್ರಭಾವ ಬೀರುವ, ಪ್ರಚಾರಾಂದೋಲನ ಮಾಡುವ ಸುಲಭ ಸಾಧನವಾಗಿರುವ  ಟ್ವಿಟ್ಟರ್  ರಾಜಕೀಯ ಪಕ್ಷಗಳ ಡಾರ್ಲಿಂಗ್ ಕೂಡಾ ಹೌದು.

ಪತ್ರಿಕೆಗಳು, ವಿದ್ಯುನ್ಮಾನ ವಾಹಿನಿಗಳೀಗ ಮೂಲೆ ಗುಂಪಾಗಿವೆ. ಯಾರೇ ಆದರು ತ್ವರಿತವಾಗಿ ಏನೇ ಘೋಷಣೆ ಮಾಡಬೇಕಿದ್ದರೂ ಟ್ವೀಟ್  ಮಾಡುತ್ತಿದ್ದಾರೆ. ಟ್ವೀಟ್ ಆಧರಿಸಿಯೇ ಸುದ್ಧಿಗಳಾಗುತ್ತವೆ. ಟ್ವೀಟಿಗೆ ಪ್ರತಿ ಟ್ವೀಟ್ ಆಗುತ್ತಾ ಆಗುತ್ತಾ ಬೇರೆಯ ಸ್ವರೂಪದಲ್ಲೇ ವೈರಲ್ಲಾಗುತ್ತಿವೆ.

ಭಾರತದ ಮೇಲಾಗುವ ಪರಿಣಾಮವೇನು?

ಮುಕ್ತ ಸ್ವಾತಂತ್ರ ಪ್ರತಿಪಾದಿಸುವ ಎಲಾನ್ ಮಸ್ಕ್  ಟ್ವಿಟ್ಟರ್‌ನಿಂದ ಶಾಶ್ವತವಾಗಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಮರು ಸ್ಥಾಪಿಸುವುದಾಗಿ ಹೇಳಿದ್ದಾರೆ. ಟ್ರಂಪ್ ಅವರು ಚುನಾವಣಾ ಪೂರ್ವದಲ್ಲಿ  ಟ್ವಿಟ್ಟರ್ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಇದೆ.

ಭಾರತ ಸರ್ಕಾರ ಮತ್ತು  ಟ್ವಿಟ್ಟರ್ ನಡುವೆ ಹಲವು ತಗಾದೆಗಳು ಈಗ ನ್ಯಾಯಾಲಯದ ಮೆಟ್ಟಿಲೇರಿವೆ. ಕೇಂದ್ರ ಸರ್ಕಾರ ತನ್ನ ವಿರುದ್ಧ ಪ್ರಚಾರ ಮಾಡುವವರ ಪಟ್ಟಿಯನ್ನು  ಟ್ವಿಟ್ಟರ್‌ಗೆ ಆಗಿಂದಾಗ್ಗೆ ನೀಡುತ್ತಾ ಖಾತೆಗಳನ್ನು ಬಂದ್ ಮಾಡುವಂತೆ ಆದೇಶಿಸುತ್ತಿದೆ.  ಟ್ವಿಟ್ಟರ್  ಆದೇಶ ಪಾಲಿಸುತ್ತಿಲ್ಲ. ಬದಲಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದೆ.

ಮುಕ್ತ ಸ್ವಾಂತಂತ್ರ್ಯ ಪ್ರತಿಪಾದಿಸುವ ಮಸ್ಕ್ ಆಡಳಿತದಲ್ಲಿ  ಟ್ವಿಟ್ಟರ್  ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ಬಿರುಸಾದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಎಲಾನ್ ಮಸ್ಕ್ ಬರೀ ಮುಕ್ತ ಸ್ವಾತಂತ್ರ್ಯ ಪ್ರತಿಪಾದಿಸುವ ವ್ಯಕ್ತಿಯಷ್ಟೇ ಅಲ್ಲ ಜಗತ್ತಿನ ಅತಿ ಶ್ರೀಮಂತ. 221ಬಿಲಿಯನ್ ಡಾಲರ್ (ರೂಪಾಯಿ ಲೆಕ್ಕದಲ್ಲಿ18,22,366 ಕೋಟಿ) ಸಂಪತ್ತಿನ ಒಡೆಯ!

 

 

 

 

andolana

Recent Posts

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್‌ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್‌…

25 mins ago

ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್‌ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…

59 mins ago

ಹೊಸ ವರ್ಷಾಚರಣೆ: ಮೈಸೂರಿಗೆ ಲಗ್ಗೆಯಿಟ್ಟ ಪ್ರವಾಸಿಗರು

ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…

1 hour ago

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ

ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್‌ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್‌…

2 hours ago

ಪೈರಸಿ ವಿರುದ್ಧ ನಟ ಜಗ್ಗೇಶ್‌ ಸಮರ: ಓರ್ವನ ಬಂಧನ

ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್‌ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್‌ ಪೊಲೀಸ್‌…

3 hours ago

ಹೊಸ ವರ್ಷ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು: ಕಾವೇರಿ ತೀರದಲ್ಲಿ ನಿಷೇಧಾಜ್ಞೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೊಸ ವರ್ಷ ಆಚರಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖವಾಗಿ…

3 hours ago