ಕಾಂಗೋ ಸೈನಿಕನನ್ನು ರ್ವಾಂಡಾ ಸೇನೆ ಗಡಿಯಲ್ಲಿ ಗುಂಡಿಟ್ಟು ಕೊಂದಿರುವ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದಿದ್ದಾರೆ
-ಡಿವಿ ರಾಜಶೇಖರ
ಪೂರ್ವ ಮಧ್ಯ ಆಫ್ರಿಕಾದ ಒಂದು ಸಣ್ಣ ದೇಶ ರ್ವಾಂಡಾ. ಜನಸಂಖ್ಯೆ ಸುಮಾರು ಒಂದುವರೆ ಕೋಟಿ. ಇವರಲ್ಲಿ ಹುಟು ಜನಾಂಗಕ್ಕೆ ಸೇರಿದವರು ಶೇ 90. ಟುಟ್ಸಿ ಎಂಬ ಇನ್ನೊಂದು ಜನಾಂಗ ಶೇ 9 ರಷ್ಟಿದೆ. ದೇಶ ಸ್ವಾತಂತ್ರ್ಯ ಗಳಿಸಿದ ದಿನದಿಂದಲೂ ಟುಟ್ಸಿಗಳದ್ದೇ ಕಾರುಬಾರು. ಹುಟುಗಳು ಮೂಲನಿವಾಸಿಗಳು. ಟುಟ್ಸಿಗಳು ಸುಡಾನ್‍ನಿಂದ 14ನೇ ಶತಮಾನದಲ್ಲಿ ವಲಸೆಬಂದವರು. ಟುಟ್ಸಿಗಳು ತಮ್ಮಜೊತೆಯಲ್ಲಿ ಆಧುನಿಕ ಬೇಸಾಯ ಪದ್ಧತಿಯನ್ನು ತಂದು ಇಲ್ಲಿ ಬೆಳೆಸಿದರು, ಶ್ರೀಮಂತರಾದರು. ಅಧಿಕಾರವನ್ನೂ ಕಬಳಿಸಿದರು. ಹುಟುಗಳ ಮೇಲೆ ದಬ್ಬಾಳಿಕೆ ನಡೆಸುತ್ತ ಬಂದರು. ಹೀಗಾಗಿಯೇ ಹಲವು ಶತಮಾನ ಕಾಲದಿಂದಲೂ ರ್ವಾಂಡಾ ಸಂಘರ್ಷದ ಕಣವಾಗಿ ಪರಿವರ್ತಿತವಾಗಿದೆ.
ನರಮೇಧಗಿಳಿಂದಾಗಿ ಕುಖ್ಯಾತಿ ಗಳಸಿರುವ ರ್ವಾಂಡಾ ಮತ್ತು ಡಿಆರ್ ಕಾಂಗೋ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ) ದೇಶಗಳ ನಡುವೆ ಮತ್ತೆ ಯುದ್ಧ ಸಿಡಿಯುವ ಸಾಧ್ಯತೆ ಆಫ್ರಿಕಾದಲ್ಲಿ ತಲ್ಲಣ ಉಂಟುಮಾಡಿದೆ. ಕಾಂಗೋ ಸೈನಿಕನೊಬ್ಬನನ್ನು ರ್ವಾಂಡಾ ಸೇನೆ ಗಡಿಯಲ್ಲಿ ಗುಂಡಿಟ್ಟು ಕೊಂದಿರುವ ಹಿನ್ನೆಲೆಯಲ್ಲಿ ಕಾಂಗೋ ಜನರು ರೊಚ್ಚಿಗೆದ್ದಿದ್ದಾರೆ. ಸರ್ಕಾರ ಗಡಿಯನ್ನು ಮುಚ್ಚಲು ಆದೇಶ ಹೊರಡಿಸಿದೆ. ಶಾಂತಿ ಒಪ್ಪಂದವೂ ಸೇರಿದಂತೆ ರ್ವಾಂಡಾ ಜೊತೆಗೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಎರಡೂ ದೇಶಗಳ ನಡುವೆ ಸಂಘರ್ಷ ಸಿಡಿಯಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಪೂರ್ವ ಆಫ್ರಿಕಾ ದೇಶಗಳ ಸಂಘಟನೆಗೆ ಸೇರಿದ (ಇಎಎಸ್‍ಎಫ್) ಶಾಂತಿಪಡೆಯನ್ನು ನಿಯೋಜಿಸಬೇಕೆಂದು ಆ ಸಂಘಟನೆಯ ಅಧ್ಯಕ್ಷರೂ ಆಗಿರುವ ಕೀನ್ಯದ ಅಧ್ಯಕ್ಷ ಯುಹುರು ಕೆನ್ಯಾಟ್ಟ ಸಲಹೆ ಮಾಡಿದ್ದಾರೆ. ಮುಖ್ಯವಾಗಿ ಕಾಂಗೋ ದೇಶದ ಪೂರ್ವ ಭಾಗದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು ಅದನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲವಾದ್ದರಿಂದ ಆ ಪ್ರದೇಶಗಳಲ್ಲಿ ಈ ಶಾಂತಿಪಡೆ ಬಂಡಾಯಗಾರರನ್ನು ಹತ್ತಿಕ್ಕಬೇಕಿದೆ ಎಂದು ಅವರು ಹೇಳಿದ್ದಾರೆ. ಬಂಡಾಯಗಾರರು ಮತ್ತು ಕಾಂಗೋ ಸರ್ಕಾರದ ಜೊತೆ ಸಂಧಾನ ನಡೆಸಲೂ ಪ್ರೇರೇಪಿಸ ಬೇಕಿದೆ. ಸಂಘಟನೆಯ ಸದಸ್ಯ ದೇಶಗಳು ಒಪ್ಪಿದರೆ ಮಾತ್ರ ಈ ನಿಯೋಜನೆ ಜಾರಿಗೆ ಬರಲಿದೆ. ಕಾಂಗೋ ಈ ಸಲಹೆಯನ್ನು ಸ್ವಾಗತಿಸಿದೆ. ಆದರೆ ಉದ್ದೇಶಿತ ಶಾಂತಿಪಡೆಯಲ್ಲಿ ರ್ವಾಂಡಾ ಸೈನಿಕರು ಇರಬಾರದು ಎಂಬ ಷರತ್ತು ಹಾಕಿದೆ. 90ರ ದಶಕದಲ್ಲಿ ರ್ವಾಂಡಾದಲ್ಲಿ ನಡೆದ ನರಮೇಧದಲ್ಲಿ ಲಕ್ಷಾಂತರ ಜನರು ಸತ್ತ ಮತ್ತು ಅಷ್ಟೇ ಸಂಖ್ಯೆಯಲ್ಲಿ ಜನರು ಕಾಂಗೋಗೆ ವಲಸೆ ಬಂದು ಸಶಸ್ತ್ರಗುಂಪುಗಳನ್ನು ಕಟ್ಟಿ ಹಿಂಸೆಗೆ ಕಾರಣವಾದ ಹಿನ್ನೆಲೆಯಲ್ಲಿ ಈ ಎಲ್ಲ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಪೂರ್ವ ಆಫ್ರಿಕಾ ದೇಶಗಳ ಸಂಘಟನೆ ಮುಂದಾಗಿದೆ.
ಪೂರ್ವ ಮಧ್ಯ ಆಫ್ರಿಕಾದ ಒಂದು ಸಣ್ಣ ದೇಶ ರ್ವಾಂಡಾ. ಜನಸಂಖ್ಯೆ ಸುಮಾರು ಒಂದುವರೆ ಕೋಟಿ. ಇವರಲ್ಲಿ ಹುಟು ಜನಾಂಗಕ್ಕೆ ಸೇರಿದವರು ಶೇ 90. ಟುಟ್ಸಿ ಎಂಬ ಇನ್ನೊಂದು ಜನಾಂಗ ಶೇ 9 ರಷ್ಟಿದೆ. ದೇಶ ಸ್ವಾತಂತ್ರ್ಯ ಗಳಿಸಿದ ದಿನದಿಂದಲೂ ಟುಟ್ಸಿಗಳದ್ದೇ ಕಾರುಬಾರು. ಹುಟುಗಳು ಮೂಲನಿವಾಸಿಗಳು. ಟುಟ್ಸಿಗಳು ಸುಡಾನ್‍ನಿಂದ 14ನೇ ಶತಮಾನದಲ್ಲಿ ವಲಸೆಬಂದವರು. ಟುಟ್ಸಿಗಳು ತಮ್ಮಜೊತೆಯಲ್ಲಿ ಆಧುನಿಕ ಬೇಸಾಯ ಪದ್ಧತಿಯನ್ನು ತಂದು ಇಲ್ಲಿ ಬೆಳೆಸಿದರು, ಶ್ರೀಮಂತರಾದರು. ಅಧಿಕಾರವನ್ನೂ ಕಬಳಿಸಿದರು. ಹುಟುಗಳ ಮೇಲೆ ದಬ್ಬಾಳಿಕೆ ನಡೆಸುತ್ತ ಬಂದರು. ಹೀಗಾಗಿಯೇ ಹಲವು ಶತಮಾನ ಕಾಲದಿಂದಲೂ ರ್ವಾಂಡಾ ಸಂಘರ್ಷದ ಕಣವಾಗಿ ಪರಿವರ್ತಿತವಾಗಿದೆ. ಟುಟ್ಸಿಗಳು ಪ್ರಬಲ ದೇಶಗಳ ನಾಯಕರ ಒತ್ತಡಕ್ಕೆ ಮಣಿದು ಅಧಿಕಾರ ಬಿಟ್ಟುಕೊಡುತ್ತ ಬಂದಿದ್ದಾರೆ. ಹಾಗೆಯೇ ಅಧಿಕಾರ ಗಳಿಸುತ್ತ ಬಂದಿದ್ದಾರೆ. ಹುಟು ಜನರು ಬಹುಸಂಖ್ಯಾತರಾದರೂ ಅಧಿಕಾರ ಪಡೆಯುವ ತಂತ್ರಗಾರಿಕೆ ತಿಳಿಯದು. ಆದರೂ ಹುಟು ಜನರು ಫ್ರಾನ್ಸ್ ಮತ್ತು ಬೆಲ್ಜಿಯಂ ನೆರವಿನಿಂದ ಅಧಿಕಾರದ ಗದ್ದುಗೆಗೇರಿದರು. ಇದನ್ನು ಟುಟ್ಸಿಗಳು ಸಹಿಸಲಿಲ್ಲ. ದೇಶದಲ್ಲಿನ ಜನಾಂಗ ಕಲಹಕ್ಕೆ ತೆರೆ ಎಳೆಯಲೆಂದೇ ಮಾತುಕತೆಗಾಗಿ ಬರೂಂಡಿ ಅಧ್ಯಕ್ಷ ಜೊತೆಗೂಡಿ ತಾಂಜಾನಿಯಾಕ್ಕೆ ತೆರಳಿ ದೇಶಕ್ಕೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಟುಟ್ಸಿಗಳು ರಾಕೆಟ್ ದಾಳಿಯ ಮೂಲಕ ಇಬ್ಬರನ್ನೂ ಹತ್ಯೆ ಮಾಡಿದರು. ಈ ಹಿನ್ನೆಲೆಯಲ್ಲಿ ಜನಾಂಗ ಕಲಹ ಮತ್ತೆ 1994ರಲ್ಲಿ ಸಿಡಿಯಿತು. ಈ ನರಮೇಧದಲ್ಲಿ ಸತ್ತವರು ಟುಟ್ಸಿಗಳು. ಸುಮಾರು 8 ಲಕ್ಷ ಜನರನ್ನು ಕೊಲ್ಲಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ನರಮೇಧದ ಸಂದರ್ಭದಲ್ಲಿ ಕನಿಷ್ಠ ಎಂಟು ಲಕ್ಷ ಜನರು ವಲಸೆಹೋಗಿದ್ದಾರೆ.
ಬಹುಪಾಲು ಜನರು ನೆರೆಯ ಡಿಆರ್. ಕಾಂಗೋಗೆ ಹೋಗಿ ಪೂರ್ವದಲ್ಲಿ ನೆಲೆಮಾಡಿಕೊಂಡಿದ್ದಾರೆ. ಕಾಂಗೋಗೆ ಇದೇ ದೊಡ್ಡ ತಲೆನೋವಾಗಿರುವುದು. ವಲಸೆ ಹೋದವರ ಪೈಕಿ ಹಲವರು ಒಂದು ಗುಂಪು ಕಟ್ಟಿಕೊಂಡಿದ್ದಾರೆ. ಇದರ ಹೆಸರು ಎಮ್ 23 (ಮಾರ್ಚ್ 23). ಈ ಬಂಡಾಯಗಾರರು ತಮ್ಮ ನಿಯಂತ್ರಣದ ಪ್ರದೇಶಗಳನ್ನು ವಿಸ್ತರಿಸುತ್ತ ಬಂದಿದ್ದಾರೆ. ಎಂ 23 ಬಂಡಾಯಗಾರರು ನಡೆಸುತ್ತಿರುವ ಹಿಂಸಾಚಾರದ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಈ ಬಂಡಾಯಗಾರರಿಗೆ ರ್ವಾಂಡಾ ಸರ್ಕಾರದ ಬೆಂಬಲ ಇದೆ ಎಂದು ಅವರು ಆರೋಪಿಸುತ್ತಿದ್ದಾರೆ. ಏನೇ ಆದರೂ ಒಂದು ಇಂಚು ಜಾಗವನ್ನೂ ಟುಟ್ಸಿ ಬಂಡಾಯಗಾರರಿಗೆ ಬಿಟ್ಟುಕೊಡುವುದಿಲ್ಲ ಎಂದು ಕಾಂಗೋ ಅಧ್ಯಕ್ಷ ಫೆಲಿಕ್ಸ್ ಶಿಷೆಕೆಡಿ ಘೋಷಣೆ ಮಾಡಿದ್ದಾರೆ. ಆದರೆ ಎಂ23 ಬಂಡಾಯಗಾರರಿಗೆ ತನ್ನ ಬೆಂಬಲ ಇದೆ ಎನ್ನುವುದನ್ನು ರ್ವಾಂಡಾದ ಪಾಲ್ ಕಗಾಮೆ ಸರ್ಕಾರ ಅಲ್ಲಗಳೆದಿದೆ. ಇದೆಲ್ಲಾ ಕಾಂಗೋ ಪ್ರದೇಶಗಳನ್ನು ಕಬಳಿಸುವ ಹುನ್ನಾರ ಎಂದು ಕಾಂಗೋ ನಾಯಕರು ಹೇಳುತ್ತಿದ್ದಾರೆ. ಕಾಂಗೋ ಸೇನೆ ಮತ್ತು ಎಂ 23 ಬಂಡಾಯಗಾರರ ನಡುವೆ ದೇಶದ ಪೂರ್ವ ಭಾಗದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಜನರು ಸತ್ತಿದ್ದು 72 ಸಾವಿರ ಜನರು ನೆರೆಯ ಉಗಾಂಡಾಕ್ಕೆ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ನಿಗಾ ಏಜನ್ಸಿ ವರದಿ ಮಾಡಿದೆ. ಕಿವು ಪ್ರಾಂತ್ಯದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಪರಿಣಾಮವಾಗಿ ಈಗಾಗಲೇ ಕಾಂಗೋದಲ್ಲಿ ಕನಿಷ್ಠ ಆರು ಲಕ್ಷ ನಿರಾಶ್ರಿತರಿದ್ದಾರೆ. ಇದಲ್ಲದೆ ಕಾಂಗೋ ಮತ್ತು ಉಗಾಂಡಾ ಗಡಿಯಲ್ಲಿ ಎಡಿಎಫ್ ( ಅಲ್ಲೈಡ್ ಡೆಮಾಕ್ರಟಿಕ್ ಫೋರ್ಸಸ್) ಸಕ್ರಿಯವಾಗಿದ್ದು ಎರಡೂ ದೇಶಗಳಲ್ಲಿ ಹಿಂಸಾಚಾರ ನಡೆಸುತ್ತಿದೆ. ಈ ಹಿಂಸಾಚಾರದಲ್ಲಿ ನೂರಾರು ಜನರು ಸತ್ತಿದ್ದಾರೆ. ಎಡಿಎಫ್ ಮೂಲಭೂತವಾಗಿ ಇಸ್ಲಾಮಿಕ್ ಸಂಘಟನೆಯಾಗಿದ್ದು ಐಸ್‍ಐಎಸ್ ಸಂಘಟನೆಯೊಂದಿಗೆ ಸಂಬಂಧ ಪಡೆದಿದೆ ಎಂದು ಅಮೆರಿಕ ಹೇಳುತ್ತಿದೆ. ಈ ಸಂಘಟನೆಯನ್ನು ಹತ್ತಿಕ್ಕಲು ಉಗಾಂಡಾ ತನ್ನ ಎರಡು ಸಾವಿರ ಸೈನಿಕರನ್ನು ಗಡಿಯಲ್ಲಿ ತೊಡಗಿಸಿದೆ. ಡಿಆರ್ ಕಾಂಗೋದಲ್ಲಿ ಕನಿಷ್ಠ ನೂರು ಬಂಡಾಯ ಗುಂಪುಗಳಿದ್ದು ಹಿಂಸಾಚಾರ ಎಡೆಬಿಡದೆ ನಡೆಯುತ್ತ ಬಂದಿದೆ. ಆಫ್ರಿಕಾದ ಬಹು ಮುಖ್ಯ ಮತ್ತು ಹೆಚ್ಚು ಜನಸಂಖ್ಯೆ ದೇಶವಾದ ಕಾಂಗೋದ ಹಿಂಸಾಚಾರ ಸತತವಾಗಿ ನೆರೆಯ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ.
1994ರಲ್ಲಿ ರ್ವಾಂಡಾದಲ್ಲಿ ನಡೆದ ನರಮೇಧದ ಪರಿಣಾಮ ಲಕ್ಷಾಂತರ ಟುಟ್ಸಿಗಳು ಕಾಂಗೋಗೆ ವಲಸೆ ಬಂದರು ಇದರ ಪರಿಣಾಮವಾಗಿ ಕಾಂಗೋದಲ್ಲಿಯೂ ಅಂಥದ್ದೇ ಹತ್ಯಾಕಾಂಡ ನಡೆಯಿತು. ನಂತರ 1998ರಲ್ಲಿ ಕಾಂಗೋ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಸಾವಿರಾರು ಜನರು ಸತ್ತರು. ವಿಶ್ವಸಂಸ್ಥೆ ಮಾಹಿತಿ ಪ್ರಕಾರ 1998- 2017 ರ ನಡುವಿನ ಅವಧಿಯಲ್ಲಿ ವಿವಿಧ ಹತ್ಯಾಕಾಂಡಗಳಲ್ಲಿ 54 ಲಕ್ಷ ಜನರು ಸತ್ತಿದ್ದಾರೆ. ವಿಶ್ವಸಂಸ್ಥೆಯ ಅತಿಹಚ್ಚು ಶಾಂತಿಪಡೆಗಳು ಇರುವುದು ಈ ದೇಶದಲ್ಲಿಯೇ. ಸುಮಾರು 21 ಸಾವಿರ ಶಾಂತಿಪಡೆಯ ಸೈನಿಕರು ದೇಶದ ವಿವಿಧ ಭಾಗಗಳಲ್ಲಿ ಶಾಂತಿ ಸ್ಥಾಪನೆ ಯತ್ನದಲ್ಲಿ ತೊಡಗಿದ್ದಾರೆ. ಕಾಂಗೋ ಮೂಲತಃ ಬಡ ದೇಶ. ಆದರೆ ದೇಶದಲ್ಲಿ ಅಪಾರವಾದ ನೈಸರ್ಗಿಕ ಸಂಪನ್ಮೂಲವಿದೆ. ಆದರೆ ರಾಜಕೀಯ ಸ್ಥಿರತೆ ಇಲ್ಲ. ದೇಶದಲ್ಲಿ ನೆಲೆ ಮಾಡಿಕೊಂಡಿರುವ ನೂರಾರು ಗೆರಿಲ್ಲ ಗುಂಪುಗಳದ್ದೇ ಕಾರುಬಾರು. ಈ ಗೆರಿಲ್ಲಾ ಗುಂಪುಗಳನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ ಕಾಂಗೋದಲ್ಲಿ ಯಾವುದೇ ರೀತಿಯ ಹಿಂಸಾಚಾರ ವಿಶ್ವದ ಗಮನಸೆಳೆಯುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…