ಅಂಕಣಗಳು

ಒಪ್ಪಂದದ ಕೆಲಸ ನೌಕರಿಯಾದೀತೆ?

ನೌಕರಿ ಎಂದ ಕೂಡಲೇ ಅದಕ್ಕೊಂದು ಸಂಬಳದ ಸ್ಕೇಲು, ಸೇವಾ ಭದ್ರತೆ, ಭವಿಷ್ಯ ನಿಧಿ (ProvidentFund), ನಿವೃತ್ತಿ ವೇತನ, ಇತರ ಕಾಯ್ದೆಬದ್ಧ ಸೌಲಭ್ಯಗಳು, ವಾರ್ಷಿಕ ಸಂಬಳ ಹೆಚ್ಚಳ, ಕೆಲಸದಲ್ಲಿ ಉನ್ನತೀಕರಣ (ಬಡ್ತಿ) ವ್ಯವಸ್ಥೆ, ವರ್ಗಾವಣೆ ಸಾಧ್ಯತೆ, ಕೆಲಸ ಬಿಡುವ ಅಥವಾ ಕೆಲಸದಿಂದ ತೆಗೆಯುವ ನಿಯಮಗಳು ಮುಂತಾದ ಪ್ರಕ್ರಿಯೆಗಳು ಅನಿವಾರ್ಯ. ಇದಕ್ಕಾಗಿ ಕಾಯ್ದೆಗಳು ಮತ್ತು ನೀತಿ ನಿಯಮಗಳು ಇರುತ್ತವೆ. ಅವುಗಳಂತೆ ಎಲ್ಲವೂ ನಡೆಯಬೇಕು. ನೇಮಕಾತಿ ಮಾಡಿಕೊಳ್ಳುವಾಗಲೇ ನೌಕರ ಮತ್ತು ನೌಕರಿ ಕೊಡುವವರಿಗೆ ಇವೆಲ್ಲವುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕಾಗುತ್ತದೆ. ಇವುಗಳಲ್ಲೇನಾದರೂ ವ್ಯತ್ಯಾಸಗಳಾದರೆ ನೌಕರ ಮತ್ತು ನೌಕರಿದಾತ ಇಬ್ಬರೂ ನ್ಯಾಯಾಲಯಕ್ಕೆ ಹೋಗಿ ತಮ್ಮ ಹಕ್ಕುಗಳನ್ನು ಚಲಾಯಿಸುವ ಅವಕಾಶವಿರುತ್ತದೆ.

ಇಷ್ಟೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಇತ್ತೀಚಿನ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ೨೦೨೩-೨೪ರ ಪ್ರಕಾರ ಸಂಘಟಿತ ಉತ್ಪಾದಕ ಉದ್ದಿಮೆಗಳಲ್ಲಿ ಒಪ್ಪಂದದ ಮೇಲೆ ನೇಮಕಗೊಂಡ ಕೆಲಸಗಾರರ (Contract Workers) ಪ್ರಮಾಣವನ್ನು ಶೇ.೪೨ ಇತ್ತೆಂಬುದು ತಿಳಿದು ಬಂದಿದೆ. ಈ ಪ್ರಮಾಣವನ್ನು ೧೯೯೭-೯೮ರಿಂದಲೇ ಗಮನಿಸಿದರೆ ಅತಿ ಹೆಚ್ಚು ಎಂದು ತಿಳಿದು ಬಂದಿದೆ. ಅಂದು ಈ ಪ್ರಮಾಣವು ಶೇ.೧೬ ಇತ್ತು. ಇನ್ನೂ ಗಂಭೀರ ವಿಷಯವೆಂದರೆ ಇಂಥ ಕಾಂಟ್ರ್ಯಾಕ್ಟ್ ವರ್ಕರ್ಸ್ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ವಾರ್ಷಿಕ ಶೇ.೦೮ರಷ್ಟು ಹೆಚ್ಚಾಗುತ್ತ ಹೋದದ್ದು. ಇತರ ವಲಯಗಳಲ್ಲಿ ಮತ್ತು ಬೇರೆ ಬೇರೆ ಉದ್ದಿಮೆಗಳಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇನ್ನು ಪ್ರಾದೇಶಿಕವಾಗಿ ಪರಿಗಣಿಸಿದರೆ ಬಿಹಾರದಲ್ಲಿ ಶೇ. ೬೮.೬ ಕಾಂಟ್ರ್ಯಾಕ್ಟ್ ಲೇಬರ್‌ಗಳಿದ್ದರೆ ಕೇರಳದಲ್ಲಿ ಅತೀ ಕಡಿಮೆ ಅಂದರೆ ಶೇ.೨೩.೮ ಇದ್ದದ್ದು ವರದಿಯಾಗಿದೆ. ಅಸಂಘಟಿತ ವಲಯಗಳಲ್ಲಿ ( Informal Sector) ಇಂಥ ನೌಕರರ ಸಂಖ್ಯೆ ಸ್ವಾಭಾವಿಕವಾಗಿಯೇ ಅತಿ ಹೆಚ್ಚಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಂಟ್ರ್ಯಾಕ್ಟ್ ವರ್ಕರ್ಸ್‌ಗಳಿದ್ದಾರೆ.

ಕಾಂಟ್ರ್ಯಾಕ್ಟ್ ಕೆಲಸಗಾರರು ಅಥವಾ ಒಪ್ಪಂದದ ಕಾರ್ಮಿಕರು ಎಂದರೆ ನೌಕರರು ಮತ್ತು ಕೆಲಸದಾತರ ನಡುವಿನ ಒಪ್ಪಂದದಂತೆ ( Agreement) ನೇಮಕವಾದವರು ಎಂದರ್ಥ. ಇಂಥ ನೇಮಕಗಳಲ್ಲಿ ಆರಂಭದಲ್ಲಿ ಹೇಳಿದ ಎಲ್ಲ ಸೌಲಭ್ಯಗಳು ಸಿಗಲಿಕ್ಕಿಲ್ಲ. ಕೆಲವು ಸಿಕ್ಕರೂ ಕಡಿಮೆ ಪ್ರಮಾಣದಲ್ಲಿ ಇರಬಹುದು. ನೌಕರರು ಯಾವಾಗಲೂ ಕೆಲಸಗಾರರ ಮರ್ಜಿಯಲ್ಲಿಯೇ ಇರಬೇಕಾಗುತ್ತದೆ. ಅಲ್ಲದೆ ಇವರನ್ನು ಗುತ್ತಿಗೆ ಕೆಲಸಗಾರರು ಎಂದೂ ಕರೆಯಲಾಗುತ್ತದೆ.

ಅಲ್ಲದೇ ಇತ್ತೀಚೆಗೆ ಕೆಲಸಗಾರರನ್ನು ಗುತ್ತಿಗೆ ಒಪ್ಪಂದದಂತೆ ಒದಗಿಸುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಇಲ್ಲಿ ಕಾರ್ಮಿಕ ಮತ್ತು ಉದ್ಯೋಗದಾತರ ನಡುವೆ ಮೂರನೇ ಪಾರ್ಟಿ ಇರುತ್ತದೆ. ಕೆಲಸದಾತ ಮತ್ತು ಗುತ್ತಿಗೆದಾರರ ನಡುವೆ ಒಪ್ಪಂದವಾಗಿರುತ್ತದೆ. ಕೆಲಸಗಾರ ಮತ್ತು ಕೆಲಸದಾತರ ನಡುವೆ ನೇರ ಸಂಬಂಧ (ಹಣಕಾಸಿನ) ಇರುವುದಿಲ್ಲ. ಗುತ್ತಿಗೆದಾರನೇ ಗುತ್ತಿಗೆ ಕಾರ್ಮಿಕರಿಗೆ ಸಂಬಳ, ಸಾರಿಗೆ ಎಲ್ಲವನ್ನೂ ಕೊಡುವನು. ಒಂದು ಅರ್ಥದಲ್ಲಿ ಇಂಥ ಕಾರ್ಮಿಕರು ಗುತ್ತಿಗೆದಾರನ ನೌಕರರು.

ಹೀಗಾಗಿ ಇಂಥ ಕಾರ್ಮಿಕರು ಅನಿವಾರ್ಯವಾಗಿ ಗುತ್ತಿಗೆದಾರ ಮತ್ತು ಕೆಲಸ ಮಾಡಿಸಿಕೊಳ್ಳುವವ ಇವರ ನಡುವೆ ಅತಂತ್ರ ಸ್ಥಿತಿಯಲ್ಲಿರುತ್ತಾರೆ. ಉದ್ಯೋಗದ ಅವಶ್ಯ ತೀವ್ರವಾಗಿರುವ ಅಸಹಾಯಕ ಕಾರ್ಮಿಕರು ಇಂಥ ಗುತ್ತಿಗೆ ಜಾಲಕ್ಕೆ ಅನಿವಾರ್ಯವಾಗಿ ಸಿಲುಕಿಕೊಳ್ಳಬೇಕಾಗುತ್ತದೆ. ಒಮ್ಮೆ ಸಿಕ್ಕಿಕೊಂಡ ಮೇಲೆ ಹೊರಗೆ ಬರುವುದು ಕಷ್ಟದ ಕೆಲಸ. ನಮ್ಮಲ್ಲಿರುವ ಕಠಿಣ ಕಾರ್ಮಿಕ ರಕ್ಷಣಾ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಕೆಲವು ಧೂರ್ತ ಕೆಲಸದಾತರು ಈ ಗುತ್ತಿಗೆ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಕಾರ್ಮಿಕ ಗುತ್ತಿಗೆದಾರ ಸಂಸ್ಥೆಗಳೂ ಹುಟ್ಟಿಕೊಂಡಿವೆ.

ಇದನ್ನು ಓದಿ: ಜಡತೆ ಎಂಬ ಸೈಲೆಂಟ್ ಕಿಲ್ಲರ್

ಇಂಥ ಕಾರ್ಮಿಕ ಶೋಷಣೆಯ ಕೆಟ್ಟ ವ್ಯವಹಾರಗಳನ್ನೆಲ್ಲ ನಿಲ್ಲಿಸಬೇಕಾದರೆ ಮೊದಲು ಕಾಯ್ದೆಬದ್ಧ ಎಲ್ಲ ಸೌಲಭ್ಯಗಳನ್ನೂ ಒದಗಿಸಬಲ್ಲ ಉದ್ಯೋಗಾವಕಾಶಗಳು ನಮ್ಮ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಾಗಬೇಕು. ಅವುಗಳೆಲ್ಲ ಅರ್ಹ, ಅವಶ್ಯವಿರುವ ಎಲ್ಲರಿಗೂ ತೊಂದರೆ ಇಲ್ಲದೆ ಸಿಗುವಂತಾಗಬೇಕು. ನಮ್ಮ ವ್ಯವಸ್ಥೆಯಲ್ಲಿಯ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ತೊಲಗಬೇಕು. ಕಾರ್ಮಿಕ ಶೋಷಣೆಯ ಈ ಕಾರ್ಮಿಕ ಗುತ್ತಿಗೆಯ ಪದ್ಧತಿಯನ್ನು ನಿಷೇಧಿಸಬೇಕು. ಕಟ್ಟುನಿಟ್ಟಾಗಿಮ ಪಾಲನೆಯಾಗಬೇಕು. ಇನ್ನಷ್ಟು ಬಿಗಿಯಾದ ಕಾರ್ಮಿಕ ರಕ್ಷಣೆಯ ಕಾರ್ಮಿಕ ಕಾಯ್ದೆಗಳು (Labour Codes) ಅಂಗೀಕಾರವಾಗಿ ಜಾರಿಗೊಳಿಸಲ್ಪಡಬೇಕು. ಸರ್ಕಾರದಲ್ಲಿ ಇಚ್ಛಾಶಕ್ತಿ ಬೇಕು.

ಮಾನವ ಸಂಪನ್ಮೂಲ ಸಮರ್ಪಕವಾಗಿ ಉಪಯೋಗವಾಗಬೇಕು:  ಉದ್ಯೋಗಾವಕಾಶಗಳ ಗುಣಮಟ್ಟ (Quality) ಇಲ್ಲಿ ಮುಖ್ಯವಾಗುತ್ತದೆ. ಮಾನವ ಸಂಪನ್ಮೂಲದ ಸಾಮರ್ಥ್ಯಗಳು ಮತ್ತು ಸೃಜನಶೀಲತೆಗೆ ಪೂರ್ಣ ಅವಕಾಶವಿರಬೇಕು. ಅದಕ್ಕಾಗಿ ಉತ್ತೇಜನಕಾರಿ ಪ್ರತಿ-ಲ ಮತ್ತು ಉದ್ಯೋಗ ಭದ್ರತೆ ಹೆಚ್ಚು ಮಹತ್ವ ಪಡೆಯುತ್ತವೆ. ಉದ್ಯೋಗದ ನಿರಂತರತೆ ಯೊಡನೆ ಇಳಿವಯಸ್ಸಿನಲ್ಲಿಯ ಜೀವನ ಭದ್ರತೆಯು ನೌಕರರ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಸಂತೃಪ ಸುಖಿ ನೌಕರರು ಕೆಲಸದಾತರ ಅಮೂಲ್ಯ ಆಸ್ತಿಯಾಗಿರುತ್ತಾರೆ. ಅವರ ಉತ್ಪಾದಕತೆ ಮತ್ತು ಸೃಜನಶೀಲತೆ ಹೆಚ್ಚಾಗುವುದರಿಂದ (Creativity and Innovation Enhancement) ಕೆಲಸದಾತ ಸಂಸ್ಥೆಯ ಆದಾಯ ಹೆಚ್ಚಾಗುವುದಲ್ಲದೇ ವೆಚ್ಚಗಳಲ್ಲಿ ಗಣನೀಯ ಕಡಿತವನ್ನು ಕಾಣಬಹುದು. ಇದು ವೇಗದ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ಉದ್ಯೋಗದಾತರು ನೌಕರರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕಡಿತ ಮಾಡಿ ಅಥವಾ ಕೊಡದೇ ಉಳಿಸಿಕೊಳ್ಳುವುದರಿಂದ ಖರ್ಚು ಕಡಿಮೆಯಾಗಿ ತಮಗೆ ಲಾಭವಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು.

ಇತ್ತೀಚೆಗೆ ಕಾಂಟ್ರ್ಯಾಕ್ಟ್ ಲೇಬರ್ ವ್ಯವಸ್ಥೆ ತಾತ್ಕಾಲಿಕ ನೌಕರ ರೂಪದಲ್ಲಿ ಸರ್ಕಾರಿ ಇಲಾಖೆಗಳು, ಸೇವಾ ವಲಯಗಳು ( ಸರ್ಕಾರಿ ಮತ್ತು ಖಾಸಗಿ) ಮತ್ತು ಇತರೆ ವಲಯಗಳಲ್ಲಿ ನುಸುಳಿಕೊಂಡಿದೆ. ಯುವ ಪೀಳಿಗೆ ಅನಿವಾರ್ಯವಾಗಿ ಇಂಥ ಕೆಲಸಕ್ಕೆ ಸೇರಿಕೊಳ್ಳಬೇಕಾಗಿದೆ. ತಮ್ಮ ಕಣ್ಣೆದುರೇ ತಮ್ಮ ಹಿರಿಯ ನೌಕರರು ತಮಗಿಂತ ಐದಾರು ಪಟ್ಟು ಹೆಚ್ಚು ಸಂಬಳ, ಸೇವಾ ಭದ್ರತೆ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಕಾಣುವ ಇವರಿಂದ ಕೆಲಸದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ನಿರೀಕ್ಷಿಸಲಾದೀತೆ? ಅಷ್ಟರ ಮಟ್ಟಿಗೆ ಮಾನವ ಸಂಪನ್ಮೂಲ ಉತ್ಪಾದಕತೆ ಕಡಿಮೆಯಾಗಲಿಲ್ಲವೆ? ಕಂಪೆನಿಯ ಮತ್ತು ತನ್ಮೂಲಕ ದೇಶದ ಒಟ್ಟಾದಾಯದ ಮೇಲೆ ಹೊಡೆತ ಬೀಳಲಿಲ್ಲವೆ? ಒಂದು ಮಾತು

ಆರ್ಥಿಕ ಸಂಪನ್ಮೂಲಗಳಾದ ನೈಸರ್ಗಿಕ ಸಂಪತ್ತು (Land) ಬಂಡವಾಳ (Capital -Produced Means of Production) ಮತ್ತು ಮಾನವ ಸಂಪನ್ಮೂಲ (ಶ್ರಮ ಮತ್ತು ಸಂಘಟನೆ ರೂಪದಲ್ಲಿ) ಇವುಗಳನ್ನು ಕುರಿತು ಮಾನವ ಸಂಪನ್ಮೂಲ ಮಾತ್ರ ಹೊಸ ಚಿಂತನೆಗಳನ್ನು ಮಾಡಬಲ್ಲದು. ಈಗ ಕೃತಕ ಬುದ್ಧಿಮತ್ತೆ ಬಂದಿರುವುದೂ (Artificial IntelIigence) ಮಾನವ ಸಂಪನ್ಮೂಲದಿಂದ.

” ಕಾಂಟ್ರ್ಯಾಕ್ಟ್ ಕೆಲಸಗಾರರು ಅಥವಾ ಒಪ್ಪಂದದ ಕಾರ್ಮಿಕರು ಎಂದರೆ ನೌಕರರು ಮತ್ತು ಕೆಲಸದಾತರ ನಡುವಿನ ಒಪ್ಪಂದದಂತೆ (Agreement) ನೇಮಕವಾದವರು ಎಂದರ್ಥ. ಇಂಥ ನೇಮಕಗಳಲ್ಲಿ ಆರಂಭದಲ್ಲಿ ಹೇಳಿದ ಎಲ್ಲ ಸೌಲಭ್ಯಗಳು ಸಿಗಲಿಕ್ಕಿಲ್ಲ. ಕೆಲವು ಸಿಕ್ಕರೂ ಕಡಿಮೆ ಪ್ರಮಾಣದಲ್ಲಿ ಇರಬಹುದು.”

-ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ಲೈಕ್‌,ಫಾಲೋವರ್ಸ್‌ ಕ್ರೇಜ್‌ಗೆ ಬೈಕ್‌ ವೀಲಿಂಗ್‌ : ಓರ್ವ ಅಪ್ರಾಪ್ತ ಬಂಧನ

ಹುಣಸೂರು : ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ 17 ವರ್ಷದ ಅಪ್ರಾಪ್ತ ಯುವಕನನ್ನು…

36 seconds ago

ಇಂದು ರಾಷ್ಟ್ರೀಯ ಮತದಾರರ ದಿನ : ನನ್ನ ಭಾರತ, ನನ್ನ ಮತ.. ಏನಿದರ ವಿಶೇಷತೆ?

ಹೊಸದಿಲ್ಲಿ : ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ವ್ಯವಸ್ಥೆಯ ಜೀವಾಳವೇ ಮತದಾರ. ಪ್ರತಿ ವರ್ಷ ಜನವರಿ 25…

43 mins ago

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

5 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

5 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

5 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

5 hours ago