ಬಿಜೆಪಿಯ ಧರ್ಮಾಧಾರಿತ ಕ್ರೋಢೀಕರಣ ಕಾಂಗ್ರೆಸ್‌ನ ಜಾತಿ ರಾಜಕಾರಣ

ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಒಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು! 

ಯಾವಾಗ ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತೋ? ಆಗ ತೊಡಕು ಅನುಭವಿಸುವ ಸ್ಥಿತಿಗೆ ತಲುಪಿದ್ದು ಜೆಡಿಎಸ್. ಯಾಕೆಂದರೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮೂರು ಮಂದಿಯನ್ನು, ಕಾಂಗ್ರೆಸ್ ಇಬ್ಬರನ್ನು ಕಣಕ್ಕಿಳಿಸಿದ್ದರಿಂದ ತನ್ನ ಅಭ್ಯರ್ಥಿಗೆ ತೊಡಕು ಎಂಬುದು ಅದಕ್ಕೆ ಮನದಟ್ಟಾಯಿತು.

ಇದೇ ಕಾರಣಕ್ಕಾಗಿ ಜೆಡಿಎಸ್ ವರಿಷ್ಟರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ: ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಕೇಳಿದರಾದರೂ ಸೋನಿಯಾಗಾಂಧಿ ಈ ವಿಷಯದಲ್ಲಿ ಅಸಹಾಯಕರಾಗಿದ್ದರು.

ರಾಜ್ಯದಲ್ಲಿ ಹಿಂದೂ ಮತ ಬ್ಯಾಂಕಿಗೆ ಬಿಜೆಪಿ, ಬಿಜೆಪಿಯೆತರ ಮತ ಬ್ಯಾಂಕಿಗೆ ಕಾಂಗ್ರೆಸ್ ಲಗ್ಗೆ ಹಾಕಿರುವ ರೀತಿ ಇಂಟರೆಸ್ಟಿಂಗ್ ಆಗಿದೆ.
ಅಂದ ಹಾಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವವರೆಗೆ ರಾಜ್ಯ ಬಿಜೆಪಿಗೆ ಧರ್ಮಾಧಾರಿತ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಏನೂ ಇರಲಿಲ್ಲ.

ಬಿಜೆಪಿಯ ಧೋರಣೆ ಮೂಲತ: ಹಿಂದೂ ಮತ ಬ್ಯಾಂಕ್ ಅನ್ನು ಬಲಿಷ್ಟಗೊಳಿಸುವುದೇ ಆದರೂ, ಅದು ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲಿ ಯಶಸ್ವಿ ಸೂತ್ರವಲ್ಲ. ದಕ್ಷಿಣ ಭಾರತದ ರಾಜಕಾರಣವನ್ನು ಗಮನಿಸಿದರೆ ಸಾಕು, ಈ ವಿಷಯ ಸ್ಪಷ್ಟವಾಗುತ್ತದೆ. ಇದು ಗೊತ್ತಿದ್ದುದರಿಂದಲೇ ಜಾತಿ ಆಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಯಡಿಯೂರಪ್ಪ ಅವರ ನಡೆಯನ್ನು ಬಿಜೆಪಿ ಹೈಕಮಾಂಡ್ ಅನಿವಾರ್ಯವಾಗಿ ಒಪ್ಪಿಕೊಂಡಿತ್ತು.

ಆದರೆ ಯಾವಾಗ ಅವರನ್ನು ಪದಚ್ಯುತಗೊಳಿಸಲಾಯಿತೋ? ಇದಾದ ನಂತರ ರಾಜ್ಯ ಬಿಜೆಪಿಗೆ ಜಾತಿ ಆಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸಿಕೊಳ್ಳುವ ಕೆಲಸ ಕಷ್ಟವಾಗುತ್ತಾ ಹೋಗುತ್ತಿದೆ.

ಅದರಲ್ಲೂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಟಿಕೆಟ್ ಕೊಡಲು ವರಿಷ್ಟರು ನಿರಾಕರಿಸಿದ ನಂತರವಂತೂ ಇದು ಮತ್ತಷ್ಟು ಕಷ್ಟವಾಗಲಿದೆ ಎಂಬುದು ರಾಜಕೀಯ ವಲಯಗಳ ವಿಶ್ಲೇಷಣೆ. ಹೀಗಾಗಿ ಇನ್ನು ಬಿಜೆಪಿ ವರಿಷ್ಟರು ಕರ್ನಾಟಕದ ನೆಲೆಯಲ್ಲಿ ಧರ್ಮಾಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವುದು ಅನಿವಾರ್ಯ. ಈಗಿನ ಎಲ್ಲ ಬೆಳವಣಿಗೆಗಳು ಅದನ್ನೇ ಪುಷ್ಟೀಕರಿಸುತ್ತಿವೆ.

ಪಠ್ಯಪುಸ್ತಕ ವಿವಾದದ ವಿಷಯವೂ ಇದರಲ್ಲಿ ಒಂದು. ಹಿಜಾಬ್,ಹಲಾಲ್ ಕಟ್, ವ್ಯಾಪಾರ ಧರ್ಮದ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳು ರಾಜ್ಯ ಬಿಜೆಪಿಯನ್ನುಇದೇ ನೆಲೆಯಲ್ಲಿ ಮುಂದುವರಿಸುತ್ತಿರುವುದು ನಿಜ.

ಪರಿಣಾಮ? ಬಿಜೆಪಿಯ ಈ ಹೆಜ್ಜೆ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಿ ಪರಿಣಮಿಸುತ್ತಿದೆ. ಅಂದ ಹಾಗೆ ತನಗಿರುವ ಬಲದಿಂದ ಸಧ್ಯದ ಸ್ಥಿತಿಯಲ್ಲಿ ಅದು ವಿಧಾನಪರಿಷತ್ತು, ರಾಜ್ಯಸಭೆ ಚುನಾವಣೆಗಳಲ್ಲಿ ದೊಡ್ಡ ಯಶಸ್ಸು ಪಡೆಯುವುದು ಸಾಧ್ಯ ಆಗಿರಬಹುದು.

ಆದರೆ ಜನತಾ ನ್ಯಾಯಾಲಯಕ್ಕೆ ಹೋದಾಗ ಈಗಿನ ಸಂಖ್ಯಾಬಲ ಏನೇನೂ ಕೆಲಸ ಮಾಡುವುದಿಲ್ಲ. ಬದಲಿಗೆ ಅದರ ಮತಬ್ಯಾಂಕ್ ಶಕ್ತಿಯೇ ಅದರ ಯಶಸ್ಸನ್ನು ನಿರ್ಧರಿಸುತ್ತದೆ.

ಈ ಲೆಕ್ಕಾಚಾರದ ದೃಷ್ಟಿಯಿಂದ ಪ್ರತಿಪಕ್ಷ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆಡಿದ ರೀತಿಯೇ ಅದರ ಮುಂದಿನ ದಾರಿ ಏನು ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಅಂದ ಹಾಗೆ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದ್ದೇ ಆಗಿದ್ದರೆ, ಅದರ ಯಶಸ್ಸು ಜೆಡಿಎಸ್ ಗೆ ಹೋಗುತ್ತಿತ್ತು.

ಗಮನಿಸಬೇಕಾದ ಸಂಗತಿ ಎಂದರೆ ಜೆಡಿಎಸ್ ಪಕ್ಷ ಒಂದು ಕಡೆ ಬಿಜೆಪಿ ಜತೆ ಹೊಂದಾಣಿಕೆಯ ಭಾವವನ್ನೂ ವ್ಯಕ್ತಪಡಿಸುತ್ತದೆ. ಮತ್ತೊಂದು ಕಡೆ ತಮ್ಮದು ಸೆಕ್ಯೂರ್ಲ ನೀತಿ ಎನ್ನುತ್ತದೆ.

ಏನೇ ಆದರೂ ಒಟ್ಟಿನಲ್ಲಿ ಪರಿಸ್ಥಿತಿಯನ್ನು ತನಗೆ ಅನುಕೂಲವಾಗುವಂತೆ ತೂಗಿಸಿಕೊಂಡು ಹೋಗುವುದು ಅದರ ಲೆಕ್ಕಾಚಾರ. ಇದೇ ರೀತಿ ಈ ಸಲ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವಾಗ ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುರ್ಮಾ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸಹಮತ ಪಡೆಯಿತು.

ಅಂದ ಹಾಗೆ ಭವಿಷ್ಯದಲ್ಲಿ ಮೈತ್ರಿಕೂಟ ಸರ್ಕಾರ ರಚಿಸುವುದು ಅನಿವಾರ್ಯವಾದರೆ ಜೆಡಿಎಸ್ ಜತೆ ಕೈಗೂಡಿಸಬೇಕು ಎಂಬ ವಿಷಯದಲ್ಲಿ ಡಿಕೆಶಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಬ್ಬರಿಗೂ ಸಹಮತವಿದೆ.

ಅದೇ ರೀತಿ ಜೆಡಿಎಸ್ ವತಿಯಿಂದ ಕಣಕ್ಕಿಳಿದ ಕುಪೇಂದ್ರ ರೆಡ್ಡಿ ಅವರು ಕೂಡಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು. ಹೀಗಾಗಿ ಕುಪೇಂದ್ರ ರೆಡ್ಡಿ ಅವರ ಸ್ಪರ್ಧೆಗೆ ಖರ್ಗೆ ಸಹಮತ ಸಿಗುವುದು ಸಹಜವೇ.

ಆದರೆ ಯಾವಾಗ ಇಂತಹ ಎಲ್ಲ ಅಂಶಗಳನ್ನು ಸಿದ್ಧರಾಮಯ್ಯ ಗಮನಿಸಿದರೋ? ಆಗ ಪಕ್ಷದ ವರಿಷ್ಟರ ಮೇಲೆ ಒತ್ತಡ ಹೇರಿ: ರಾಜ್ಯಸಭೆ ಚುನಾವಣೆಯಲ್ಲಿ ನಾವು ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಬಹುದು. ಆದರೆ ಎರಡನೇ ಸ್ಥಾನ ಗೆಲ್ಲಲಾಗದಿದ್ದರೂ ಜೆಡಿಎಸ್ ಅಭ್ಯರ್ಥಿ ಗೆಲ್ಲದಂತೆ ನೋಡಿಕೊಳ್ಳಬೇಕು ಎಂದು ಪಟ್ಟು ಹಿಡಿದರು.

ಯಾರೇನೇ ಹೇಳಲಿ, ಇವತ್ತು ಸಿದ್ಧರಾಮಯ್ಯ ಅವರ ಹೆಜ್ಜೆಗೆ ನಕಾರ ಸೂಚಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ .ಹೀಗಾಗಿ ಅದು ಸಿದ್ಧರಾಮಯ್ಯ ಹೇಳಿದ್ದಕ್ಕೆ ಸಹಮತ ವ್ಯಕ್ತಪಡಿಸಿತು. ಮನ್ಸೂರ್ ಅಲಿ ಖಾನ್ ಅವರು ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಹೀಗೆ.

ಯಾವಾಗ ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತೋ? ಆಗ ತೊಡಕು ಅನುಭವಿಸುವ ಸ್ಥಿತಿಗೆ ತಲುಪಿದ್ದು ಜೆಡಿಎಸ್. ಯಾಕೆಂದರೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮೂರು ಮಂದಿಯನ್ನು, ಕಾಂಗ್ರೆಸ್ ಇಬ್ಬರನ್ನು ಕಣಕ್ಕಿಳಿಸಿದ್ದರಿಂದ ತನ್ನ ಅಭ್ಯರ್ಥಿಗೆ ತೊಡಕು ಎಂಬುದು ಅದಕ್ಕೆ ಮನದಟ್ಟಾಯಿತು.

ಇದೇ ಕಾರಣಕ್ಕಾಗಿ ಜೆಡಿಎಸ್ ವರಿಷ್ಟರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ: ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಕೇಳಿದರಾದರೂ ಸೋನಿಯಾಗಾಂಧಿ ಈ ವಿಷಯದಲ್ಲಿ ಅಸಹಾಯಕರಾಗಿದ್ದರು.

ಈ ಅಂಶವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ಅವರನ್ನು ಎಷ್ಟು ನೆಚ್ಚಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಅಂದ ಹಾಗೆ ಫಲಿತಾಂಶದ ಸ್ವರೂಪ ನೋಡಿದರೆ ಜೆಡಿಎಸ್ ಗೆ ಅಡ್ಡಗಾಲು ಹಾಕುವ ಅವರ ಲೆಕ್ಕಾಚಾರ ಬಿಜೆಪಿ ವಿರೋಧಿ ಮತಗಳನ್ನು ಕಾಂಗ್ರೆಸ್ ಕಡೆ ಸೆಳೆದುಕೊಳ್ಳುವ ನೇರ ಯತ್ನ ಅನ್ನುವುದು ಸ್ಪಷ್ಟ.

ಇವತ್ತು ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಒಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು. ಸಿ.ಎಂ.ಇಬ್ರಾಹಿಂ ಅವರಂತಹ ನಾಯಕನನ್ನು ಕೈ ಪಾಳೆಯದಿಂದ ಎಳೆದ ಅದರ ಯತ್ನ ಕೂಡಾ ಇದೇ ನೆಲೆಯದ್ದು ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಅವರು ಹೊರಟಿದ್ದಾರೆ. ಕಳೆದ ಹಲವು ಕಾಲದಿಂದ ಬಿಜೆಪಿ ವಿರೋಧಿ ಮತಗಳನ್ನು ಪಡೆಯುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಎದುರಾಳಿ.

ಇಂತಹ ಎದುರಾಳಿ ದುರ್ಬಲವಾದರೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಲಾಭ ಎಂಬುದು ಕೂಡಾ ಸಿದ್ಧರಾಮಯ್ಯ ಅವರಿಗೆ ಗೊತ್ತು. ಈ ದೃಷ್ಟಿಯಿಂದ ಅವರು ಉರುಳಿಸಿದ ದಾಳ ರಾಜ್ಯ ರಾಜಕೀಯದಲ್ಲಿ ಸಹಜವಾಗಿಯೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೀಗೆ ಒಂದು ಕಡೆಯಿಂದ ಜೆಡಿಎಸ್ ಅನ್ನು ದುರ್ಬಲಗೊಳಿಸುವ ಮತ್ತೊಂದು ಕಡೆ ಧರ್ಮಾಧಾರಿತ ಮತಗಳನ್ನು ಕ್ರೋಢೀಕರಿಸಲು ಹೊರಟಿಸುವ ಬಿಜೆಪಿಗೆ ಜಾತಿ ಆಧಾರಿತ ರಾಜಕಾರಣದ ಮೂಲಕ ಉತ್ತರ ಕೊಡುವುದು, ಮುಂದಿನ ಚುನಾವಣೆಯಲ್ಲಿ ಗೆದ್ದು ಕೈ ಪಾಳೆಯ ಅಧಿಕಾರ ಹಿಡಿಯುವಂತೆ ಮಾಡುವುದು ಅವರ ಲೆಕ್ಕಾಚಾರ.

ಯಾವ ದೃಷ್ಟಿಯಿಂದ ನೋಡಿದರೂ ಇದು ಇಂಟರೆಸ್ಟಿಂಗ್ ಅಲ್ಲವೇ?

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

32 mins ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

1 hour ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

1 hour ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

2 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

2 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

2 hours ago