ಭಾರತದಲ್ಲಿನ ಪಶ್ಚಿಮ ಘಟ್ಟಗಳು ೧,೬೦,೦೦೦ ಚದರ ಕಿಲೋ ಮೀಟರ್ ಪ್ರದೇಶದಲ್ಲಿ ವಿಸ್ತಾರಗೊಂಡಿವೆ. ಇವುಗಳು ಬೆಟ್ಟ ಗುಡ್ಡಗಳಿಂದ ದಟ್ಟವಾದ ಅರಣ್ಯ, ಶೋಲಾ ಕಾಡುಗಳು, ಆಳವಾಗಿ ಹರಿ ಯುತ್ತಿರುವ ನೀರಿನ ಹೊಳೆಗಳು ಮಳೆಯಾಶ್ರಿತ ಕಾಡುಗಳಿಂದ ಅನೇಕ ಸಸ್ಯ ಮರಗಳಿಗೆ ಹಾಗೂ ಎಲ್ಲಾ ಬಗೆಯ ಪ್ರಾಣಿಗಳಿಗೆ ಆಶ್ರಯದಾತವಾಗಿವೆ. ಭಾರತದ ಪಶ್ಚಿಮ ಘಟ್ಟಗಳು ವಿಶ್ವದಲ್ಲಿಯೇ ಪ್ರಧಾನ ಕಾಡು ಘಟ್ಟಗಳಾಗಿದ್ದು, ಈ ಮೊದಲು ೧೮ನೇ ಸ್ಥಾನದಲ್ಲಿದ್ದು, ಪ್ರಸ್ತುತ ೨೫ನೇ ಸ್ಥಾನದಲ್ಲಿದ್ದು, ಬಹಳ ಬಿಸಿಯಾಗಿರುವ ಸ್ಥಳವೆಂದು ಪರಿಗಣಿಸಲಾಗಿದೆ.
ಇಂತಹ ಮಹತ್ತರ ಪಶ್ಚಿಮ ಘಟ್ಟಗಳು ಇತ್ತೀಚೆಗೆ ತೀವ್ರವಾಗಿ ಕ್ಷೀಣಿಸುತ್ತಿದ್ದು, ಪರಿಸರದಲ್ಲಿ ಏರುಪೇರು ಕಂಡಿದೆ. ಭೂ ಜೀವಿಗಳ ವೈವಿಧ್ಯತೆಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾಡಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳು ಸಮುದ್ರತೀರದಿಂದ ಅತಿ ಎತ್ತರದ ಬೆಟ್ಟಗಳಿಂದ ಹಿಡಿದು ಕಡಲತೀರ ಪ್ರದೇಶದವರೆಗೂ ವಿಸ್ತಾರಗೊಂಡಿವೆ. ಆದರೆ ಭೂಜೀವಿಗಳ ವೈವಿಧ್ಯತೆ ಕಾಡುಗಳ ನಾಶದಿಂದ ಮಣ್ಣಿನ ಸವಕಳಿಯಿಂದ ಭೂಮಿಯಲ್ಲಿಯೇ ಜೀವಿಸುವಂತಹ ಉಪಕಾರಿ ಅಕಶೇರುಕಗಳು ಕೊಚ್ಚಿ ಹೋಗಿ ಪಶ್ಚಿಮ ಘಟ್ಟಗಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.
ಮಣ್ಣು ಎಲ್ಲಾ ಸಸ್ಯ ಮರಗಳಿಗೆ ಹಾಗೂ ಪ್ರಾಣಿಗಳಿಗೆ ಶಾಶ್ವತವಾದ ಆವಾಸ ಸ್ಥಾನವಾಗಿದ್ದು, ಮಣ್ಣಿನ ಆರೋಗ್ಯ, ಭೂ ಜೀವಿಗಳ ವೈವಿದ್ಯತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಪ್ರಸ್ತುತ ಪಶ್ಚಿಮ ಘಟ್ಟಗಳಲ್ಲಿ ವಿವಿಧ ಎತ್ತರದ ಪ್ರದೇಶಗಳಲ್ಲಿ ಮತ್ತು ಅವುಗಳ ಆವಾಸಗಳಲ್ಲಿ ವಿಸ್ತಾರಗೊಂಡಿರುವ ಭೂ ಜೀವಿಗಳ ವೈವಿಧ್ಯತೆ ಮತ್ತು ಅವುಗಳ ಪರಿಸರ ಸಂಬಂಧದ ಬಗ್ಗೆ ಅಧ್ಯಯನ ನಡೆಸಲಾಯಿತು. ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ೪೮ ರ ಅಕ್ಕಪಕ್ಕದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿವರೆಗೆ ಸಮುದ್ರ ತೀರದಿಂದ ೪ ಎತ್ತರದ ಸ್ಥಳಗಳಲ್ಲಿ ೪ ಆವಾಸಗಳಿರುವ ಸ್ಥಳಗಳನ್ನು ಅಧ್ಯಯನಕ್ಕೆ ಆರಿಸಲಾಯಿತು. ಇವುಗಳೆಂದರೆ ೯೪೦ ಮೀ. (ಸಕಲೇಶಪುರ), ೭೦೦ ಮೀ. (ವ್ಯೂ ಪಾಯಿಂಟ್), ೩೩೦ ಮೀ. (ಕೆಂಪು ಹೊ ಅಥವಾ ಹೊಂಗಾರಹಳ್ಳ ಮತ್ತು ೧೭೦ ಮೀ.(ನೆಲ್ಯಾಡಿ) ಎತ್ತರದ ಪ್ರದೇಶಗಳಾಗಿವೆ.
ಈ ಎತ್ತರಗಳಲ್ಲಿ ೪ ಆವಾಸಗಳನ್ನು ಮೂಲ ಕಾಡು, ಹೊಸದಾಗಿ ಬೆಳೆಸಿರುವ ಕಾಡು.ಕಾಡನ್ನು ನಾಶಮಾಡಿರುವ ಜಾಗ ಮತ್ತು ಹುಲ್ಲುಗಾವಲಿರುವ ಸ್ಥಳಗಳಲ್ಲಿ ಮಣ್ಣಿನ ಮಾದರಿಗಳನ್ನು ತಿಂಗಳಿಗೊಂದು ಸಾರಿ ತೆಗೆದು ಪರೀಕ್ಷಿಸಿ ಭೂಜೀವಿಗಳ ಗುಂಪನ್ನು ಮಣ್ಣಿನಿಂದ ಬೇರ್ಪಡಿಸಿ, ವಿಶ್ವೇಷಿಸಿ, ವಿಂಗಡಿಸಿ ಪರಿಸರದ ಸಂಬಂಧವನ್ನು ಕಲ್ಪಿಸಲಾಯಿತು. ಈ ಅಧ್ಯಯನವನ್ನು ಸುಮಾರು ೪ ವರ್ಷಗಳ ಕಾಲ ಪಶ್ಚಿಮ ಘಟ್ಟಗಳಲ್ಲಿಯೇ ನಡೆಸಲಾಯಿತು. ಪಶ್ಚಿಮ ಘಟ್ಟಗಳಲ್ಲಿನ ಭೂಜೀವಿಗಳ ವೈವಿಧ್ಯತೆಯನ್ನು ಶರೀರ ಗಾತ್ರದ ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಲಾಗಿದೆ.
ಸೂಕ್ಷ್ಮಾಣು ಭೂಜೀವಿಗಳಲ್ಲಿ (೨೦-೨೦೦ ಮೈಕ್ರಾನ್) ಏಕಾಣು ಜೀವಿಗಳು ಬ್ಯಾರಿಯಾ ಆಕ್ಕಿನೋಮೈಸಿಟಿಸ್, ಶಿಲೀಂದ್ರಗಳು ಮುಂತಾದವು ಸೇರಿವೆ ಮಧ್ಯಮ ಗಾತ್ರದ ಭೂಜೀವಿಗಳಲ್ಲಿ (೨೦೦ಮೈಕ್ರಾನ್-೧೦ ಮಿ.ಮೀ.) ಪ್ರಟೂರ, ಡೈಪೂರ ಜಿಗಿಬಾಲ, ಒರಿಬ್ಯಾಟೆಡ್ ನುಸಿಗಳು, ಪೌರೋಪೋಡ, ಸಿಂಪಲ್ಲಾ, ಸೊಸಿ (೧೦೨ ೧೦ ಸೆಂ. ಮೀ.) ಎರೆಹುಳಗಳು ಒನಕೆ ಮಂಡಿಗಳು, ಒದಿಗಳು, ಬಸವನಹುಳು ಮತ್ತು ಗೊಂಡೆಹುಳುಗಳು, ಚಿಮ್ಮಂಡಗಳು, ಗೆದ್ದಲು, ಇರುವೆ, ನೆಲದುಂಬಿಗಳು, ಸಗಣಿ ಜೀರುಂಡೆಗಳು ಮುಂತಾದವು ಸೇರಿವೆ.
ಹೆಚ್ಚಿನ ಸೂಕ್ಷ್ಮಾಣು ಭೂಜೀವಿಗಳು ಸಾವಯವ ವಸ್ತುಗಳ ಮೇಲೆ ಜೀವಿಸಿ ಬೆಳೆದು ಅಭಿವೃದ್ಧಿ ಹೊಂದುತ್ತಾ ಮತ್ತು ಶಿಲೀಂದ್ರ ಕಣಗಳು, ಸಸ್ಯಗಳ ಬೇರುಗಳಲ್ಲಿ ಸಹ ಜೀವಿಗಳಂತೆ ಕೊಳೆತ ಸಸ್ಯಗಳ ಬೆಳವಣಿಗೆಗೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಒದಗಿಸುತ್ತವೆ. ಮಧ್ಯಮಗಾತ್ರದ ಭೂಜೀವಿಗಳು ಕಾಡಿನಲ್ಲಿ ಒಣಗಿ ಬೀಳುವಂತಹ ಎಲೆಗಳು ಮರದ ತೊಗಟೆಗಳು ಹಾಗೂ ಇತರೆ ಸಾವಯವ ಪದಾರ್ಥಗಳನ್ನು ತಿಂದು ಮಣ್ಣಿನಲ್ಲಿ ಸೇರಿಸಿ ಕೊಳೆಸಲು ಸಹಕಾರಿಯಾಗಿದೆ. ಮಳೆಯ ನೀರನ್ನು ಮಣ್ಣು ಹಿಡಿದಿಟ್ಟುಕೊಳ್ಳಲು ಬೇರುಗಳಲ್ಲಿ ಗಾಳಿಯಾಡಲು ಮತ್ತು ಪೌಷ್ಟಿಕಾಂಶಗಳನ್ನು ಬೇರುಗಳಿಗೆ ಒದಗಿಸಲು ಸಹಕಾರಿಯಾಗಿವೆ. ಮಹತ್ವದ ಗಾತ್ರದ ಭೂ ಜೀವಿಗಳು ಸಾವಯವ ಪದಾರ್ಥಗಳನ್ನು ತಿನ್ನುತ್ತಾ ಹಿಕ್ಕೆಗಳನ್ನು ಒಣ ಎಲೆಗಳನ್ನು ಮಣ್ಣಿನಲ್ಲಿ ಬೆರೆಸುತ್ತಾ ಭೂಮಿಯನ್ನು ಕೊರೆದು ಆಳದಿಂದ ಮಣ್ಣನ್ನು ಮೇಲಕ್ಕೆ ತಂದು ಒಣತರಗೆಲೆಗಳು ಕೊಳತು ಭೌತಿಕ ಮತ್ತು ರಾಸಾಯನಿಕ ಗುಣ ಲಕ್ಷಣಗಳ ಮಟ್ಟವನ್ನು ಹೆಚ್ಚಿಸುತ್ತಾ ಫಲವತ್ತತೆಯಿಂದ ಸಸ್ಯಗಳ ಬೆಳವಣಿಗೆಗೆ ಮಣ್ಣಿನಲ್ಲಿ ಗಾಳಿಯಾಡಲು ಮತ್ತು ನೀರನ್ನು ಹೀರಿಕೊಂಡು ಮತ್ತು ಪೌಷ್ಟಿಕಾಂಶಗಳು ಒದಗುವಂತೆ ಸಹಕಾರಿಯಾಗಿವೆ.
ಒಟ್ಟಾರೆ ಎಲ್ಲಾ ಅಕಶೇರುಕ ಭೂಜೀವಿಗಳು, ಸಾವಯವ ವಸ್ತುಗಳನ್ನು ಕೊಳೆಸುವುದರಿಂದ ಮಣ್ಣಿನಲ್ಲಿ ಬೆರೆತು ಗೊಬ್ಬರವಾಗಿ ಪೌಷ್ಟಿಕಾಂಶಗಳ ಚಕ್ರದಲ್ಲಿ ಸೇರಿ ಸಸ್ಯಗಳ ಉತ್ತಮ ಬೆಳವಣಿಗೆಯವರೆಗೂ ಸಹಕಾರಿಯಾಗಿವೆ. ಇದರಿಂದ ಅತ್ಯುತ್ತಮವಾಗಿ ಗೊಬ್ಬರ ಪರಿವರ್ತನೆ ಯಾಗುತ್ತದೆ. ಭೂಜೀವಿಗಳು ಮಣ್ಣನ್ನು ಆಳದಿಂದ ತಂದು ಮಣ್ಣಿನ ಪೊರೆಯನ್ನು ಸಾವಯವ ವಸ್ತುಗಳ ಮೇಲೆ ಕಟ್ಟುವುದರಿಂದ ಫಲವತ್ತತೆಯಾಗುತ್ತದೆ. ಕೆಲವು ಭೂಜೀವಿಗಳು ಮಣ್ಣಿನಲ್ಲಿ ಹರಿದಾಡಿ ರಂಧ್ರ ಗಳನ್ನು ಮಾಡುವುದರಿಂದ ಬೆಳೆಗಳಿಗೆ ಬೇಕಾದ ಗಾಳಿ ಮತ್ತು ತೇವಾಂಶಗಳು ಹೆಚ್ಚುವುದಲ್ಲದ ಸಾವಯವ ವಸ್ತುಗಳು ಮಣ್ಣಿಗೆ ಸರಿ ಇವುಗಳಲ್ಲಿ ಹೆಚ್ಚಿನ ಉಪಯುಕ್ತ ಅಕಶೇರುಕಗಳು ಭೂಮಿಯ ಮೇಲ್ಭಾಗದ ಮಣ್ಣಿನಲ್ಲಿ ಸಾವಯವ ವಸ್ತುಗಳ ಆಶ್ರಯದಲ್ಲಿ ಜೀವಿಸುವುದರಿಂದ ಕಾಡಿನಲ್ಲಿ ಸತತವಾಗಿ ಮರಗಳನ್ನು ಕಡಿಯುವುದರಿಂದ, ಬಿಸಿಲಿನ ಝಳಕ್ಕೆ ಸಿಕ್ಕಿ ನಂತರ ಮಣ್ಣಿನಲ್ಲಿ ಮೇಲ್ಪದರ ಸಾವಯವ ವಸ್ತುಗಳ ಸಮೇತ ಮಳೆ ನೀರಿನಿಂದ ಕೊಚ್ಚಿಹೋಗುವುದರಿಂದ ಭೂಜೀವಿಗಳ ಅನೇಕ ಪ್ರಭೇದಗಳು ಹಾಗೂ ಗುಂಪುಗಳು ನಾಶವಾಗಿರುತ್ತವೆ. ಭೂಜೀವಿಗಳ ವೈವಿಧ್ಯತೆ ಪಶ್ಚಿಮ ಘಟ್ಟಗಳ ಪರಿಸರದ ಬುನಾದಿ ಎಂಬುದನ್ನು ದೃಢೀಕರಿಸಲು ಈ ಅಧ್ಯಯನ ಸಹಕಾರಿಯಾಗುತ್ತದೆ.
ಈ ಅಧ್ಯಯನದ ಫಲಿತಾಂಶಗಳನ್ನು ಭೂಜೀವಿಗಳ ವೈವಿಧ್ಯತೆಯ ಆಧಾರದ ಮೇಲೆ ಪರಿಸರಕ್ಕೆ ಇವುಗಳಿಂದಾಗುವ ಉಪಯುಕ್ತತೆ ಹಾಗೂ ಸಂಬಂಧಗಳನ್ನುಈ ವಿಜ್ಞಾನ ಆಧಾರಿತ ಮಂಡಣೆಯಲ್ಲಿ ಚರ್ಚಿಸಲಾಗುತ್ತದೆ.ಭೂ ಜೀವಿಗಳ ಸಂಖ್ಯೆ ಮತ್ತು ವಿಸ್ತಾರವನ್ನು ಆವಾಸಗಳಲ್ಲಿ ಪರಿಶೀಲಿಸಿದಾಗ ಮೂಲ ಕಾಡು ಮತ್ತು ಹೊಸದಾಗಿ ಬೆಳೆಸುತ್ತಿರುವ ಕಾಡುಗಳ ಆವಾಸಗಳಲ್ಲಿ ಕಾಡನ್ನು ನಾಶ ಮಾಡಿರುವ ಮತ್ತು ಹುಲ್ಲುಗಾವಲಿನ ಆವಾಸಗಳಿಗಿಂತ ಅಕಶೇರುಕ ಭೂ ಜೀವಿಗಳು ಹೆಚ್ಚಾಗಿರುವುದು ಹಾಗೂ ೯೪೦ ಮೀ. ೭೦೦ ಮೀ. ಮತ್ತು ೩೩೦ ಮೀ. ಎತ್ತರದ ಘಟ್ಟಗಳಲ್ಲಿ ಅಕಶೇರುಕ ಭೂ ಜೀವಿಗಳ ಸಂಖ್ಯೆ ೧೭೦ ಮೀ. ಎತ್ತರದ ಘಟ್ಟಕ್ಕೆ ಹೋಲಿಸಿದಾಗ ಹೆಚ್ಚಾಗಿರುತ್ತವೆಂದು ಅಧ್ಯಯನ ಮೂಲಕ ಕಂಡು ಬಂದಿರುತ್ತದೆ.
ಪಶ್ಚಿಮ ಘಟ್ಟಗಳ ಕೊಡುಗೆ ಭೂ ಗ್ರಹಕ್ಕೆ ಮೂರು ವಿಧವಾಗಿದೆ.:
೧) ಅದೊಂದು ಅಪರೂಪದ ಜೀವ ಖಜಾನೆ ಅದನ್ನಿನ್ನೂ ನಾವು ಪೂರ್ಣವಾಗಿ ನೋಡಿಯೇ ಇಲ್ಲ
೨) ಏಳು ರಾಜ್ಯಗಳಿಗೆ ಅದೊಂದು ಜಲಖಜಾನೆ
೩) ಅದು ಇಡೀ ದಕ್ಷಿಣ ಭಾರತದ ಹವಾ ಗುಣವನ್ನು ಪ್ರಭಾವಿಸುತ್ತದೆ, ನಿರ್ಧರಿಸುತ್ತದೆ.ಬರುತ್ತಿರುವ ಭೂ ಜ್ವರದ ಸನ್ನಿವೇಶದಲ್ಲಿ ಅದರ ಪಾತ್ರ ಇನ್ನಷ್ಟು ಮಹತ್ವದಾಗುತ್ತದೆ ಹಾಗಾಗಿ ಈ ರಕ್ಷಾ ಕವಚವನ್ನು ನಾವು ರಕ್ಷಿಸಿಕೊಳ್ಳಬೇಕು
(ಲೇಖಕರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಡೀನ್ )
” ಪಶ್ಚಿಮ ಘಟ್ಟಗಳು ಇತ್ತೀಚೆಗೆ ತೀವ್ರವಾಗಿ ಕ್ಷೀಣಿಸುತ್ತಿದ್ದು, ಪರಿಸರದಲ್ಲಿ ಏರುಪೇರು ಕಂಡಿದೆ. ಭೂ ಜೀವಿಗಳ ವೈವಿಧ್ಯತೆಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾಡಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ.”
-ಡಾ.ಡಿ.ರಾಜಗೋಪಾಲ್
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…