ಅಂಕಣಗಳು

ಹಿರಿ ಜೀವಗಳಿಗೆ ನೆಮ್ಮದಿ ತಾಣ ಬಾಪೂಜಿ ಆನಂದ ಆಶ್ರಮ

By Pavithra Raju 

ಹಚ್ಚ ಹಸಿರ ರಾಶಿಯ ವಿಶಾಲ ಪ್ರಾಂಗಣದ ನಡುವೆ ಪ್ರಶಾಂತತೆಯ ಪ್ರತೀಕವಾದಂತಿರುವ ಬಾಪುಜಿ ಆನಂದ ಆಶ್ರಮದೊಳಗೆ ಬದುಕಿನ ಏಳು ಬೀಳುಗಳನ್ನ ಕಂಡ ಅದೇಷ್ಟೋ ಹಿರಿಯ ಜೀವಗಳು ನೆಮ್ಮದಿಯನ್ನು ಕಂಡುಕೊಂಡಿವೆ. ಮೈಸೂರಿನ ಗೋಕುಲಂ ಮೂರನೇ ಹಂತದಲ್ಲಿರುವ ಬಾಪುಜಿ ಆನಂದ ಆಶ್ರಮದಲ್ಲಿ ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡು ಹಾಯಾಗಿರುವ ಈ ಹಿರಿಯ ಜೀವಗಳು ನಿಜಕ್ಕೂ ಪುಟ್ಟ ಮಕ್ಕಳಂತೆ ಹಾಡುತ್ತಾ,ಕುಣಿಯುತ್ತಾ ಸಂಭ್ರಮಿಸುತ್ತಿದ್ದಾರೆ. ನಾನೋಮ್ಮೆ ಬಾಪುಜಿ ಆನಂದ ಆಶ್ರಮಕ್ಕೆ ಭೇಟಿ ನೀಡಿದಾಗ ರಾಧೆ ರಾಧೆ ಗೋವಿಂದ ರಾಧೆ, ಓಂಕಾರೇಶ್ವರ ವಿನಾಯಕ ಅಂತಾ ಹಾಡುತ್ತಾ ಕುಳಿತಿದ್ದ ಈ ಮುಗ್ಧ ಮನಸ್ಸುಗಳನ್ನ ಕಂಡು ಯಾವುದೋ ಶಾಲೆಗೆ ಭೇಟಿ ನೀಡಿದಂತೆ ಭಾಸವಾಯಿತು.

ಈ ಹಾಡು ಮುಗಿದ ಬಳಿಕ ನನ್ನೊಟ್ಟಿಗೆ ಮಾತಿಗೆ ಸಿಕ್ಕವರು 90 ವರ್ಷದ ಹಿರಿಯಜ್ಜ ಶಿಸ್ತಿನ ಸಿಪಾಯಿ ಮಹೇಂದ್ರ. ಇವರ ಎನರ್ಜಿಗೆ ಒಂದು ಸಲಾಮ್‌ ಹೇಳಲೇ ಬೇಕು. ಇಂಗ್ಲೀಷಿನಲ್ಲಿಯೇ ಫಟ ಫಟ ಅಂತಾ ಹರಳು ಹುರಿದ ಹಾಗೆ ಮಾತು ಆರಂಭಿಸಿದ ಇವರು, ಐ ಆಮ್‌ ಸ್ಟೇಟ್‌ ವಾಲಿಬಾಲ್‌ ಪ್ಲೇಯರ್‌, ಟೂ ಹಂಡ್ರೆಡ್‌ ಮೀಟರ್‌ ರನ್ನರ್‌ ಅಂಡ್‌ ಸಿಂಗರ್ ಅಂತ ತಮ್ಮ ಬಗೆಗಿನ ಪರಿಚಯ ಮಾಡಿಕೊಂಡ್ರು. ಈ ಇಳಿವಯಸ್ಸಿನಲ್ಲಿ ಅಜ್ಜನ ಈ ಪರಿಯ ಉತ್ಸಾಹ 18ರ ಯುವಕರನ್ನು ನಾಚಿಸುವಂತಿತ್ತು.‌ ಅಂದಹಾಗೆ ಅಜ್ಜನ ಉತ್ಸಾಹದ ಗುಟ್ಟು ಯೋಗ. ಪ್ರತಿದಿನ ಬೆಳಗ್ಗೆ ಮೂರಕ್ಕೆ ತಮ್ಮ ದಿನವನ್ನು ಆರಂಭಿಸುವ ಇವರು ಎದ್ದೊಡನೆ ಯೋಗ ಮಾಡಲು ಕುಳಿತು ಬಿಡುತ್ತಾರೆ. ನಂತರ ತಮ್ಮ, ಎಂದಿನ ದಿನಚರಿ ಆರಂಭಿಸುವ ಇವರು ಬಿಡುವಿನ ವೇಳೆಯಲ್ಲಿ ಹಾಡು ಹಾಡುವ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ. ಹೀಗೆ ತಮ್ಮ ದಿನಚರಿಯನ್ನು ತೆರೆದಿಡುತ್ತಾ ಹಾಡಲು ಆರಂಭಿಸಿದ ಇವರು ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ ತ್ವಯಾ ಹಿಂದೂಭೂಮೇ ಸುಖಂ ವರ್ಧಿತೋಹಂ ಅಂತಾ ತಮ್ಮ ನೆಚ್ಚಿನ ಹಾಡನ್ನು ಹಾಡಿದರು.

ಈ ಆಶ್ರಮದಲ್ಲಿ ವಾಸಿಸುತ್ತಿರುವ ಬಹುತೇಕರು ತಮ್ಮ ಸಂಗಾತಿಯನ್ನು ಕಳೆದುಕೊಂಡ ಬಳಿಕ ಇಲ್ಲಿ ಬಂದು ನೆಲೆಯಾದವರು. ಈ ಪೈಕಿ ನಮ್ಮೋಟ್ಟಿಗೆ ಮಾತನಾಡಿದ ಹಿನಕಲ್‌ ಜಯಮ್ಮನವರು, ನಾನು ಮೂಲತಃ ಆಂದ್ರಪ್ರದೇಶದವಳು,ನನ್ನ ಪತಿಯೊಟ್ಟಿಗೆ ಮೈಸೂರಿಗೆ ಬಂದು ನೆಲೆಸಿದ್ದೆ. ಅವರು ಕಾಲವಾದ ಬಳಿಕ ಈ ಆಶ್ರಮಕ್ಕೆ ಬಂದು ಸೇರಿಕೊಂಡೆ. ಇಲ್ಲಿನ ವಾತಾವರಣ ಬಹಳಾ ಚೆನ್ನಾಗಿದೆ. ಇಲ್ಲಿಗೆ ಬಂದಮೇಲೆ ನೆಮ್ಮದಿ ಕಂಡುಕೊಂಡೆ. ನಿಜವಾದ ಸಂಬಂಧಗಳನ್ನು ಕಂಡುಕೊಂಡೆ ಎಂದು ತಮ್ಮ ಬಗೆಗಿನ ಮಾಹಿತಿ ಹಂಚಿಕೊಂಡರು. ಕಳೆದ ಹನ್ನೊಂದು ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡ ಬಳಿಕ ಇಲ್ಲಿಗೆ ಬಂದು ನೆಲೆಸಿದ ರವೀಂದ್ರ ರಾವ್‌ ಅವರು, ಆಶ್ರಮದಲ್ಲಿನ ತಮ್ಮ ಜೀವನ ಶೈಲಿಯ ಕುರಿತು ಸಂತಸ ವ್ಯಕ್ತಪಡಿಸಿದರು.

ಇಲ್ಲಿಗೆ ಬಂದ ಮೇಲೆ ಸಿಕ್ಕಿರುವ ನೆಮ್ಮದಿ ಹೊರಗಡೆ ಸಿಗಲು ಸಾಧ್ಯವಿಲ್ಲ. ಇದು ನಮ್ಮ ಪಾಲಿನ ದೇವಾಲಯ. ಸಂಸ್ಥೆಯು ಇಲ್ಲಿರುವ ಎಲ್ಲರನ್ನೂ ಮಕ್ಕಳಂತೆ ಪೋಷಿಸುತ್ತಿದೆ ಎಂದು ಆಶ್ರಮದ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.

ಬಾಪುಜಿ ಆನಂದ ಆಶ್ರಮದಲ್ಲಿನ ಹಿರಿಯ ಜೀವಗಳ ಉಸ್ತುವಾರಿ ವಹಿಸಿರುವ ಸಂಸ್ಥೆಯ ಮ್ಯಾನೆಜರ್‌ ನಂದ ಪ್ರಸಾದ್‌ ಅವರ ತಾಯಿ ಹೃದಯಕ್ಕೆ ಇಲ್ಲಿರುವ 58 ಹಿರಿಯ ಜೀವಗಳು ಅಕ್ಷರ ಸಹ ಮಕ್ಕಳಾಗಿಬಿಟ್ಟಿವೆ. ಅವರ ಈ ಪ್ರೀತಿಯೇ ಇವರ ನೆಮ್ಮದಿಯ ಬದುಕಿಗೆ ಕಾರಣ ಎಂಬುದು ಆ ಮುಗ್ಧ ಮನಸ್ಸುಗಳ ಮಾತಿನಲ್ಲಿ ಎದ್ದು ಕಾಣುತ್ತದೆ.

ಅಂದಹಾಗೆ 1995 ರಲ್ಲಿ ಕಾರವಾರ ಮೂಲದ ಡಾ. ಆನಂದಿ ಬಾಯಿ ಪ್ರಸಾದ್‌ ಅವರು ಮೈಸೂರಿನಲ್ಲಿ ಬಾಪೂಜಿ ಆನಂದ ಆಶ್ರಮವನ್ನು ಪ್ರಾರಂಭಿಸಿದರು.

ಆಗ ಎಂಟು ಜನರಿಗಾಗಿ ಆರಂಭವಾದ ಈ ಸಂಸ್ಥೆ ಪ್ರಸ್ತುತ 58 ಜನರಿಗೆ ಉಚಿತವಾಗಿ ಊಟ ವಸತಿಯೊಂದಿ ಮೂಲಭೂತ ಸೌಕರ್ಯ ನೀಡುವ ಮೂಲಕ ಬದುಕಿನ ಏಳು ಬೀಳುಗಳನ್ನೆಲ್ಲಾ ಕಂಡು ನಿರಾಶರಾಗಿ, ನೀರಾಶ್ರಿತರಾಗಿರುವ ಹಿರಿಯ ಜೀವಗಳನ್ನು ಪೋಷಿಸಿ ಸಂತೈಸುತ್ತಿದೆ.

ಹೀಗೆ ಆಶ್ರಯ ಕಳೆದುಕೊಂಡವರ ಆಶ್ರಯ ತಾಣವಾಗಿರುವಾ ಈ ಸಂಸ್ಥೆಗೆ ಸರ್ಕಾರದ ವತಿಯಿಂದ ಯಾವುದೇ ದೇಣಿಗೆ ಬರುತ್ತಿಲ್ಲ. ಬದಲಿಗೆ ದಾನಿಗಳು ನೀಡುವ ದೇಣಿಗೆಯಿಂದ ಬಾಪೂಜಿ ಆನಂದ ಆಶ್ರಮದ ಸಂಸ್ಥಾಪಕರ ಕುಟುಂಬಸ್ಥರಿಂದ ಮುನ್ನಡೆಯುತ್ತಿದೆ.

 

andolana

Recent Posts

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

56 mins ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

1 hour ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

1 hour ago

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…

1 hour ago

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

10 hours ago